ಡಾ ದಾನಮ್ಮ ಝಳಕಿ ಕವಿತೆ-ಕನಸಿಲ್ಲದ ಕವನ

ಕಾವ್ಯಸಂಗಾತಿ

ಕನಸಿಲ್ಲದ ಕವನ

ಡಾ ದಾನಮ್ಮ ಝಳಕಿ

ಮೊಳಕೆಯೊಡೆಯಿತು ಬೀಜ
ದಿನಿತ್ಯದ ಕಾಯಕದಲಿ
ಚಿಗುರಿ ಹಸಿರು ಪಸರಿಸಲಿ
ಕಂಪು ಸೂಸುತಾ ತಂಪು ಸುರಿಸಿ

ಅರಳುತಿದೆ ಹೂವು
ಜಗದಲಿ ನಗೆ ಬೀರಿ
ಕಾಡಿಲ್ಲ ಕಟ್ಟಿಲ್ಲ
ಕನಸುಗಳ ಬುತ್ತಿ

ಕಲ್ಪನಾಲೋಕದ ಕನಸುಗಳು
ಕೈಗೆಟುಕುವದನು ನಾ ಅರಿಯೆ
ಬದುಕಲಾರೆ ಕನಸುಗಳಲಿ
ಬಿತ್ತಿ ಬೆಳೆಯುವೆ ವಾಸ್ತವಿಕತೆ

ಶಬ್ದಗಳ ಸಂಭ್ರಮದಲಿ
ಹೃದಯದ ಅಂತರಂಗದಲಿ
ಕನಸಿಲ್ಲದ ಕವನ ಕಟ್ಟುತ್ತಿರುವೆ,
ಭಾವರಸ ಹೊರಸೂಸುತಿರುವೆ


Leave a Reply

Back To Top