ಮಕ್ಕಳ ಪದ್ಯ
ಮರಕೋತಿ ಆಟ
ಆದಪ್ಪ ಹೆಂಬಾ ಮಸ್ಕಿ
ಮರಕೋತಿ ಆಡೋಣ ಬರ್ರೋ
ನಾವೆಲ್ಲಾ ಒಂದೇ ಬರ್ರೋ
ಮಂಗ್ಯಾಗಳಂತೆ
ಕೆಂಪು ಕೋತಿಗಳಂತೆ
ಕಪ್ಪು ಮುಸ್ಯಾಗಳಂತೆ ||
ನಾನೇರುವೆ ಆ ಮರಕೆ
ನೀ ಬರುವೆಯಾ ಹಿಡಿಯೋಕೆ
ಸಿಗಲಾರೇ ನಾ
ಏರುವೆ ಎತ್ತರೆತ್ತರಕೆ
ತುಂಬಾ ಎತ್ತರೆತ್ತರಕೆ ||
ಗೆಳೆಯಾ ನಾನೆಂದೂ ಸೋಲಲಾರೆ
ನೀ ನನ್ನ ಗೆಲ್ಲಲಾರೆ
ನಡುನಡುಗುತ ಬೀಳುವೆ ನೀ ಸುಮ್ಮನೆ ನೆಲಕ್ಕೆ
ನೀ ಸುಮ್ಮನೆ ನೆಲಕ್ಕೆ||
ಹೋಯ್……..
ಮರಕೋತಿ ಆಡೋಣ ಬರ್ರೊ……….. ( ಪಲ್ಲವಿ )
ಶರಣಾ, ಬಸ್ಯಾ ಬರತಿರೇನ್ರೋ
ಈ ಸಂಡಿಗೆ ತಿಂತೀರೇನ್ರೋ
ನೀವೇರ್ತೀರಾ ಮರವ ಇಷ್ಟು ಎತ್ತರಕೆ
ನಾನು ಏರಿದ ಎತ್ತರಕೆ ||
ನಮ್ಮಾಟ ಮುಗಿಯತಿಲ್ಲ
ಅಮ್ಮ ಕೂಗಿ ಕರೆದಳಲ್ಲ
ಬನ್ರೋ ಸಾಕು ಎಲ್ರೂ ಕೆಳಗೆ ಕತ್ತಲಾಯಿತು
ನೋಡ್ರಿ ಕತ್ತಲಾಯಿತು||
ಹೋಯ್…..
ಮರಕೋತಿ ಆಡೋಣ ಬರ್ರೋ……
ಜಿಗಿಜಿಗಿಯುತ ಇಳಿದೆವು
ಕೈಕಾಲು ತೊಳೆದವು
ಕೈಕಟ್ಟಿ ಕುಳಿತೆವೆಲ್ರು ಅಮ್ಮನ ಮುಂದೆ
ನಗುತ ಅಮ್ಮನ ಮುಂದೆ ||
ಅಮ್ಮ ಕೊಟ್ಟಳು ಕಟಿರೊಟ್ಟಿ
ಕಾರ್ಪುಡಿ ಜತೆ
ಹುಣಸಿ ಚಟ್ನೀ
ತಿಂದವೆಲ್ಲರು ನಗುನಗುತ ಕತ್ತಲ್ಹೋಯಿತೋ
ನಗೆಯ ದೀಪ ಹತ್ತಿತೋ ||
ಹೋಯ್……
ಮರಕೋತಿ ಆಡೋಣ ಬರ್ರೋ…….. ( ಪಲ್ಲವಿ )
Super
Super
ಸುಪರ್, ನಮ್ಮ ಕಾಲದ ಆಟವೇ ಚಂದ.
ಬಾಲ್ಯದ ಆಟ ಆ ಹುಡುಗಾಟ…
ಬತ್ತದ ಉತ್ಸಾಹದ ಆಟ ಈ ಮಕ್ಕಳಾಟ.