ಕಾವ್ಯ ಸಂಗಾತಿ
ನಾನೊಬ್ಬ ಧೀರ
ಅಬ್ಳಿ,ಹೆಗಡೆ
ಇಂದೇಕೋ…
ಆಹ್ಲಾದಕರ
ಪ್ರಶಾಂತ,ಸುಂದರ
ಬೆಳಗೂ
ನೋವಿನಾಗರ.
ತಂಪಿನೊಳಗೂ ಬಿಸಿ,
ಕಲ್ಲ ಕಟೆಯುವ ಶಬ್ಧ-
ಹಕ್ಕಿಗಳಿಂಚರ.
ಮೋಡಗಳ
ಮರೆಯಿಂದ
ಹೊರಬರಲಾರದೇ
ತಿಣುಕಾಡುವ
ನೇಸರ.
ಹೊರಬಂದರೆ
ಹಗಲು ಪ್ರಖರ.
ಬೆಳಕಲ್ಲಿ ನಾ..
ಕಳೆದಿರುವ ನನ್ನ
ಹುಡುಕಾಟ
ಹುಡುಗಾಟವಲ್ಲ,
ಗೊತ್ತಿದೆ ನನಗೆ,
ಹೊತ್ತಿಲ್ಲ ಹೆಚ್ಚು.
ಸಂಜೆ ಮುಗಿದು
ಕತ್ತಲು ಕತ್ತ ಅಮುಕಿ
ಸಾಯಿಸುವವರೆಗೂ
ಶ್ರಮ ಅನಿವಾರ್ಯ
ನಿರಂತರ,
ಆದರೂ ನನಗಿಲ್ಲ
ಬೇಸರ,
ಯಾಕೆಂದರೆ...
ನಾನೊಬ್ಬ ಹುಟ್ಟಾ--
ಹೋರಾಟಗಾರ.
ವೀರ ಸ್ವರ್ಗಕ್ಕಾಗಿ
ಕಾತರಿಸುತ್ತಿರುವ
ನಾನೊಬ್ಬ ಧೀರ....!!!
--------------------------
ಸರಳ ಸಹಜ ಸುಂದರ ಹಾಗು ಗಂಭೀರ ಕಾಳಜಿಯ ಕವನವಿದು.ಸನ್ಮಿತ್ರ ಅಬ್ಳಿ ಹೆಗಡೆ ಅಭಿನಂದನಾರ್ಹರು.
ಡಾ.ಶ್ರೀಪಾದ ಶೆಟ್ಟಿ