ಮಕ್ಕಳ ಸಂಗಾತಿ
ಶಿಶು ಗೀತೆ
ಡಾ. ತಯಬಅಲಿ.ಅ. ಹೊಂಬಳ
ನಾಯಿ ಮರಿ ನಾಯಿ ಮರಿ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ಹಾಲು ಕುಡಿದು
ಕಾಲು ಹಿಡಿಯುವ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ಆಟದಲಿ ಓಟದಲಿ
ನನ್ನನ್ನು ಮಿರಿಸುವ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ಮಕ್ಕಳನ್ನು ಕಂಡರೆ
ಮುದ್ದಾಡುವ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ನಾಲಿಗೆ ತೆಗೆದು
ನೆಲ ಸಾರುವ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ಕಳ್ಳರ ಮಾಮ
ನಿಷ್ಠೆಗೆ ಸಾರ್ವಭೌಮ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ಸಾಯುವವರೆಗೆ
ಸ್ವಾಮಿನಿಷ್ಠೆ
ನೀ ಕಂಡರೆ ಮಾಲಿಕನಿಗೆ ಇಷ್ಟೆ
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ನಿನ್ನೆ ಪಾಠ ನೋಟದಲಿ ಊಟ
ಕಲಿಯಬೇಕು ನಾವು
ಕೊಯಿಂ.. ಕೊಯಿಂ..
ಎನ್ನುವ ನಾಯಿ ಮರಿ
ನನ್ನೆ ಮುದ್ದು ಮರಿ.
Super sir
Superb sir (Heena)