ಡಾ ಶಶಿಕಾಂತ ಪಟ್ಟಣ ಕವಿತೆ- ಮೌನ ಮುರಿದು

ಕಾವ್ಯಸಂಗಾತಿ

ಮೌನ ಮುರಿದು

ಡಾ ಶಶಿಕಾಂತ ಪಟ್ಟಣ

ಮೌನ ಮುರಿದು
ಮನ ಬಿಚ್ವಿ
ಮಾತನಾಡಿದೆ ನೀನು
ಸಂತಸ ನೆಮ್ಮದಿ
ರೆಕ್ಕೆ ಬಿಚ್ಚಿ ಹಾರಿದ
ಭಾವ ಪಕ್ಷಿ ನಾನು

ಸುಂದರ ನಗೆಗೆ
ಮೋಡ ಜಡೆ ಬಿಚ್ಚಿ
ಮಳೆ ಸುರಿಯಿತು
ಚಿಗುರಿತು ನವ ವಸಂತ
ಹಸಿರು ಹುಲ್ಲಿನ ಮೇಲೆ
ಅರಳಿತು ಮಲ್ಲಿಗೆ

ತಪ್ಪು ನನ್ನದೊ ನಿನ್ನದೊ?
ಸಲ್ಲದ ಗ್ರಹಿಕೆ ಕಲ್ಪನೆ
ಗೋಡೆ ಎದ್ದಿತ್ತು ಮಧ್ಯೆ
ಕಾಣಲಾರಾದೇವು ನಮ್ಮನ್ನು
ನಾವಿಬ್ಬರು ಕೊರಗಿದೆವು
ತೆಗೆದೆವು ಇಂದು ಬೇಡಿ ಸಂಕೋಲೆ

ಸರೆಯಿತು ಕಾರ್ಮೊಡ
ಚೆಲುವ ಚೆಲ್ಲುವ ಸೂರ್ಯ
ಬೆಚ್ಚನೆ ಗೂಡಲ್ಲಿ ಒಲವ ರಾಗ
ಹಗಲು ಇರುಳಿನ ಆಟ
ನಡೆದ ದಾರಿ ಜೀವ ಮಾಟ
ಬೆಸೆದವು ಹೃದಯಗಳ ಕೂಟ


3 thoughts on “ಡಾ ಶಶಿಕಾಂತ ಪಟ್ಟಣ ಕವಿತೆ- ಮೌನ ಮುರಿದು

Leave a Reply

Back To Top