ಮಾಜಾನ್ ಮಸ್ಕಿ-ಕವಿತೆ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ-ಕವಿತೆ

1.
ಅವರವರ ಯೋಗ್ಯತೆಗೆ ಅನುಗುಣವಾಗಿ ಅವರವರ ವಿಚಾರಧಾರೆಗಳು, ವರ್ತನೆಗಳು…
ಜಾನ್!!
ಅವರನ್ನು ಬದಲಾಯಿಸುವ ಪ್ರಯತ್ನಕ್ಕಿಂತ ನಮ್ಮ ನಿರ್ಧಾರಗಳಿಗೆ ನಾವು ದೃಢವಾಗಿ ನಿಲ್ಲುವುದನ್ನು ಕಲಿಯಬೇಕು.
2.
ಒಂದು ದಿನದ ಬದುಕು ಎಂದು ಹೂವು ಅರಳುವುದನ್ನು ಬಿಡುವುದೇ?
ತನ್ನಲ್ಲಿಯ ಅಲೆಗಳನ್ನು ಸಮುದ್ರ ಎಂದಾದರೂ ಬಚ್ಚಿಡುವುದೇ
ಜಾನ್!!
ಮುನಿಸಿದೆ ಎಂದು ಎಂದಾದರೂ ನಿಜ ಪ್ರೀತಿ ಬಿಡುಗಡೆಗೊಳ್ಳುವುದೇ….

3.

ಬೆಳಕನ್ನು ಹುಡಿಕಿಕೊಂಡು ಬಂದ ಜೀವಕ್ಕೆ ಬೆಳಕನ್ನು ನೀಡಬೇಕು:
ಜಾನ್!!
ಕತ್ತಲಿನ ಬಾಳಿಗೆ ಕಗ್ಗತ್ತಲು ನೀಡಬಾರದು.

4.

ನೋವುಗಳನ್ನು ಉಂಡ ಜೀವ ವಿಷವನ್ನು ದಕ್ಕಿಸಿಕೊಂಡಿರುತ್ತೆ
ಜಾನ್!!
ಎಷ್ಟು ವಿಷ ಕೊಟ್ಟರೇನು ಮರಣಿಸುವುದೇ??


ಮಾಜಾನ್ ಮಸ್ಕಿ

Leave a Reply

Back To Top