ಕಾವ್ಯ ಸಂಗಾತಿ
ನಾಮದೇವ ಕಾಗದಗಾರ-ಹನಿಗವಿತೆಗಳು
1.
ಮೌನದಲಿ
ಆರಿದ ದೀಪ
ಹೊಂಬಿಸಿಲಾಗಿ
ಬಾನಿನಲ್ಲಿ ಹಾರಾಡಿತು
ಬಣ್ಣಗಳ ಗರಿಬಿಚ್ಚಿ…
2.
ಕೆಲ ಕಂಗಳು
ನಿನ್ನನ್ನೇ ನೋಡುತ್ತಿವೆ
ಪ್ರೀತಿಯ ಸೆಲೆಯೊಳಗೆ
ಸಿಕ್ಕು!
ಆದರೆ
ಆ ಕಂಗಳಲ್ಲಿ
ತುಂಬಿವೆ
ನಿನ್ನ ಅಂಗಾಗದ
ರಸವ..
3.
ಮೌಡ್ಯಗಳು
ಸುತ್ತು ಹಾಕಿವೆ
ಅಬಲೆಯ ಸುತ್ತ
ಕಾಮದಾಹದ
ರಣಹದ್ದುಗಳಾಗಿ..
4.
ನಿನ್ನ ಕಾಮನೆಗಳ
ಬೆಂಕಿ, ಬಿಸಿ, ಹೃದಯ
ನಾನೇ ಎಂದು ಹೇಳಿದ್ದೇ,
ದುಷ್ಟ ಆಲೋಚನೆಗಳ
ಬಿತ್ತುತ್ತಾ ಮರೆತುಬಿಟ್ಟೆ…
5.
ನಿನ್ನ ಎದೆಯಾಳದಲ್ಲಿ
ಗುಡ್ಡ,ಬೆಟ್ಟ, ಮಣ್ಣು ಕಲ್ಲುಗಳಿಲ್ಲ…
ಪ್ರೀತಿಯೆಂಬ ಬೆಳೆ
ಬೆಳೆಯಲು ಹೇಗೆ ಸಾಧ್ಯ..?
ವಸಂತ ಬರುವ ತನಗ ಕೊನರು
ಚಿಗುರದು..!
6.
ಕರುಳಿನ ಕುಡಿಗಳೆಲ್ಲಾ
ಕಾಮುಕರ ಕಬಂಧ
ಬಾಹುಗಳಲ್ಲಿ
ಕಮರಿ ಹೋಗಿವೆ,
ಅರಳುವ ಮೊದಲೇ….
ಬಹಳ ಸೊಗಸಾಗಿದೆ.