ಕಾವ್ಯ ಸಂಗಾತಿ
ಶರಣರು
ಆಶಾ ಯಮಕನಮರಡಿ
ನೂರು ತೊರಗಳಂತೆ ಬಂದರು
ದೂರದೂರಿನಿಂದ ಶರಣರು
ಕಲ್ಯಾಣವೆಂಬ ಕಡಲ ಕೂಡಲು
ಅನುಭಮಂಟಪವ ಸೇರಲು
ನಾಡ ಗಡಿಗಳನು ದಾಟಿ
ದೊರೆತನವ ತೊರೆದು
ತಾನೆ ಶ್ರೇಷ್ಠನೆಂಬುದ ಮರೆತು
ಬೆರೆತರಿಲ್ಲಿ ಮೇಲುಕೀಳಿಲ್ಲದೆ
ದುಡಿಯದೆ ಪಡೆಯಲಿಲ್ಲ
ದಾಸೋಹ ಮಾಡದೆ ಉಣಲಿಲ್ಲ
ಗುರು ಲಿಂಗ ಜಂಗಮಕ್ಕೆ ಅರ್ಪಿಸಿದರು
ತನು ಮನ ವಧನವನೆಲ್ಲ
ಅಂಬಲಿಯನುಂಡ ಅನುಭಾವಿಗಳು
ದುಂಡು ದೌಲತ್ತನು ಕಡೆಗಣಿಸಿ
ಹೊನ್ನಿನೊಳಗೊಂದೊರೆಯ
ಬಯಸದಾ ಭಕ್ತರಿವರು ನಮ್ಮ
ಕಲ್ಯಾಣದ ಶರಣರು
ಚೆನ್ನಾಗಿದೆ ಶರಣ ಕಾವ್ಯ
Congrats!