ಅನುವಾದಿತ ಕವಿತೆ-ಮಲಯಾಳಂ ಮೂಲ-ಹಗ್ಗ

ಅನುವಾದ ಸಂಗಾತಿ

ಹಗ್ಗ

ಮಲಯಾಳಂ ಮೂಲ: ಸುನಿಲ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.

ಆತ್ಮಹತ್ಯೆ ಮಾಡಿಕೊಂಡ
ಪಾಪ ಜನ್ಮದ ವ್ಯಕ್ತಿಯ
ಕುತ್ತಿಗೆಯಿಂದ ‘ಹಗ್ಗ ‘ವನ್ನು
ಬಿಚ್ಚುವಾಗ…….
ಜೋರಾಗಿ ಕೇಳಿಸುತ್ತದೆ
ನಿರೀಕ್ಷೆಯ ಕೊನೆಯ
ಶ್ವಾಸ…!
ದೇಹದಿಂದ ಹೊರ
ಹೋಗುತ್ತಿರುವುದು…!!

ಬದುಕಿನ ಯಾತ್ರೆಯ
ಶಾಪಿಸಿದ ನಿಮಿಷದಲ್ಲಿ
ಬಾಕಿ ಉಳಿಸಿದ್ದ
‘ಶ್ವಾಸ’ವು ಆಯುಷ್ಯ
ಮುಗಿಯುವ ಮುನ್ನವೇ
ಹಾರಿ ಹೋಗುತ್ತಿರುವುದು
‘ಶವ’ಕ್ಕೂ ಸ್ಪಷ್ಟವಾಗಿ
ತಿಳಿಯುತ್ತಿದೆ…!!!


ಮಲಯಾಳಂ ಮೂಲ: ಸುನಿಲ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.

Leave a Reply

Back To Top