ಕೈ ಹಿಡಿದು

ಕಾವ್ಯಸಂಗಾತಿ

ಕೈ ಹಿಡಿದು

ಪ್ರೊ ರಾಜನಂದಾ ಘಾರ್ಗಿ

ಸೊಲುತಿವೆ ಕಾಲುಗಳು
ದಣಿಯುತಿದೆ ಮನ
ಕರಗುತಿವೆ ಕನಸುಗಳು
ಹೆಪ್ಪುಗಟ್ಟಿದ ಭಾವಗಳು
ಹಿಡಿದ ಅವಕಾಶಗಳು
ಜಾರುತಿವೆ ಮರಳಿನಂತೆ
ಕೈಬೆರಳಿನ ಸಂದಿಯಿಂದ
ಕಣ್ಣೆದುರೇ ನೆಲ ಸೇರುತಿವೆ
ಕಾಯುತಿರುವೆ ತಪ್ತ ಇಳೆಯಂತೆ
ಭರವಸೆಯ ಮಳೆ ಹನಿಗಾಗಿ
ಮುದುಡಿದ ಮನವನು
ಅರಳಿಸುವ ಪ್ರೇರಣೆಗಾಗಿ
ಬಾಳಿನ ದಿಗಂತದಲ್ಲಿ
ಉದಯಿಸುವ ರವಿಗಾಗಿ
ಕೈ ಹಿಡಿದು ನಡೆಸುವ
ಒಲವ ಚುಕ್ಕಾಣಿಗಾಗಿ


2 thoughts on “ಕೈ ಹಿಡಿದು

  1. ಸರಳವಾಗಿ ಮನಮುಟ್ಟುವಂತೆ ಓದುಗನನ್ನ ಆವರಿಸುವ ತಮ್ಮ ಕವಿತೆ ನಿಜಕ್ಕೂ ಅದ್ಭುತವಾಗಿದೆ.

    ಮೇಲ್ನೋಟಕ್ಕೆ ಕವಿತೆ ಸರಳ ಸಹಜವಾಗಿ ಅನಿಸಿದರೂ ಓದುತ್ತಾ ಮನದಲ್ಲಿ ಬೆರೆತು ರಕ್ತಗತವಾಗಿ ಒಂದು ಕ್ಷಣದಲ್ಲೇ ಆಪ್ತವಾಗಿಬಿಡುತ್ತೆ.

    – ವಿಜಯ ಅಮೃತರಾಜ್ ವಕೀಲರು.
    99458 73626

Leave a Reply

Back To Top