ಕಾವ್ಯ ಸಂಗಾತಿ
ಗಜಲ್
ಅರುಣಾನರೇಂದ್ರ
ಜೀವಕ್ಕೆ ಜೀವ ಕೊಡುವವನೆ ಎಲ್ಲಿರುವಿ
ಉಸಿರಿಗೆ ಉಸಿರು ತುಂಬುವವನೆ ಎಲ್ಲಿರುವಿ
ನಾ ಬದುಕಿರುವಾಗಲೇ ಸಮಾಧಿಗೆ ಕಲ್ಲು ಖರೀದಿಸಿದ್ದಾರೆ
ಎದೆಯ ಬಡಿತದ ಲೆಕ್ಕ ಇಡುವವನೆ ಎಲ್ಲಿರುವಿ
ನಾ ಸತ್ತಮೇಲೆ ಖುಷಿಪಡುವವರ ಪಟ್ಟಿ ತಯಾರಾಗಿದೆ
ಸಾವಿನ ಮನೆಗೆ ಕಂಬನಿ ಮಿಡಿದು ಕಳಿಸುವವನೆ ಎಲ್ಲಿರುವಿ
ಮನುಷ್ಯರು ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ ಏನು ಮಾಡಲಿ
ಹೃದಯಗಳ ಜೊತೆಗೆ ಮಾತಾಡುವವನೆ ಎಲ್ಲಿರುವಿ
ಸತ್ತ ಮೇಲೆ ಸ್ವರ್ಗ ಸಿಗಬೇಕೆಂದು ಅರುಣಾ ಬಯಸುವುದಿಲ್ಲ
ನರಕದ ನೋವು ಬಳಿ ಬಾರದಂತೆ ತಡೆಯುವವನೆ ಎಲ್ಲಿರುವಿ
ವ್ಹಾ….
ಪ್ರತಿ ಸಾಲು ರಕ್ತ , ಕಂಬನಿ ಹನಿಯುತ್ತಿದೆ ಗಜಲ್ ನ ಪ್ರತಿ ಅಕ್ಷರ ಅಕ್ಷರಗಳು….
ಉಳಿದೆಲ್ಲಾ ಸಂಬಂಧಗಳು ಹೆಸರಿಗೆ ಮಾತ್ರ ಗೋಸುಂಬೆ ಬಣ್ಣವನ್ನು ನಂಬಲು ಸಾಧ್ಯವೇ? ಆದರೆ ನಮ್ಮ ಕೈ ಹಿಡಿದವನು ಜೊತೆಗಿದ್ದರೇ ಎಲ್ಲವನ್ನೂ ಎದುರಿಸಿ ನಿಲ್ಲಬಹುದು.ತುಂಬಾ ಚೆನ್ನಾಗಿದೆ ಮೇಡಂ ತಮ್ಮ ಗಜಲ್.
ಕಾಡಿತು.ಮೇಡಂ..ಬದುಕಿರುವಾಗಲೆ ಸಮಾಧಿಗೆ ಕಲ್ಲು ಖರೀದಿಸಿದ್ದಾರೆ….