ಕಾವ್ಯಸಂಗಾತಿ
ಹನಿಗವನಗಳು
ಮಾಜಾನ್ ಮಸ್ಕಿ

ಸೋತೇ
ಮಲ್ಲೇ ನೀ ಎನ್ನ ಮನದ ನಲ್ಲೇ
ಮುನಿಸು ಏತಕೆ ನಾ ಬರುವೆ ನಿಲ್ಲೇ
ನಾಜೂಕಿನ ನಿನ್ನ ಮೈ ಮಾಟಕ್ಕೇ
ನಿಂತೆ ನಾ ಅಲ್ಲೇ
ನಿನ್ನ ಪ್ರೀತಿಯ ಸುಗಂಧಕ್ಕೆ
ನಾ ಸೋತಿರುವೆ ನೀ ಬಲ್ಲೇ
——–
ಜೋಕೆ
ಬಂಗಾರದಂತಹ ಸೌಂದರ್ಯಕ್ಕೆ
ಬೇರೆ ಒಡವೆ ಬೇಕೆ….
ವರ್ಣನೆಗೆ ಬೀಗಬೇಡ ಜೋಕೆ….
ಜೇಬು ಖಾಲಿಯಾಗದೆ ಇರಲೆಂಬ ರಕ್ಷಣೆ —
ತಿಳಿಯೇ…
——
ಬಿಕ್ಕಿತು
ಸುಂದರತೆಯಲ್ಲಿ ಮೆರೆಯಿತು
ಮೆರೆಯಿತು ಮಲ್ಲಿಗೆ ಸೋಗಿನಲ್ಲಿ
ಸೋಗಿನಲ್ಲಿ ಕೊಟ್ಟ ಮಾತು ತಪ್ಪಿತು
ಮಾತು ತಪ್ಪಿದ ಮಲ್ಲಿಗೆಯ ಮೇಲೆ ಮುನಿಸು
ಮುನಿದು ಸಂಪಿಗೆಯು ಕಂಪು ಹೆಚ್ಚಿಸಿತು
ಕಂಪು ಹೆಚ್ಚಿಸಿ ಎಲ್ಲಾರ ಮನ ಸೂರೆಗೊಳಿಸಿತು
ಮನ ಸೂರೆಗೊಳಿಸಿತು ತನ್ನಲ್ಲಿ ತಾ ಬಿಕ್ಕಿತು
ಸಣ್ಣ ಸಣ್ಣ ಹನಿಗಳಲ್ಲಿ ದೊಡ್ಡ ದೊಡ್ಡ ಕಚಗುಳಿ, ಖುಷಿ …