ಪಂಜರದ ಗಿಳಿ

ಕಾವವ್ಯ ಸಂಗಾತಿ

ಪಂಜರದ ಗಿಳಿ

ಹೆಚ್.ಮಂಜುಳಾ

ಅಳುತಿದೆ ನೋಡು ಪಂಜರದಲ್ಲೊಂದು ಗಿಳಿ.ನರಳುತಿಹುದು ಸೆರೆಯಾಳಾಗಿ ಅಲ್ಲಿ; ಬಯಸುತಿಹುದು ಹಾರಾಡಲು ಸ್ವಚ್ಛಂದವಾಗಿ ಅದು ಹೇಳುತಲಿದೆ ಕೇಳು ಹೀಗೆ.-

ಆಕರ್ಷಿಸಬಲ್ಲೆ ನನ್ನ ಹಸಿರು ಬಣ್ಣದಿಂದ, ಮೋಹಗೊಳಿಸಬಲ್ಲೆ ನನ್ನ ಕೆಂಪು ಕೊಕ್ಕಿನಿಂದ; ಚಾಣಾಕ್ಷತನ ತೋರಬಲ್ಲೇ ನನ್ನ ಚಿಂವ್ ಚಿಂವ್ ಮಾತಿನಿಂದ; ಜಗವನ್ನೆಲ್ಲಾ ಸುತ್ತಿ ಬರಬಲ್ಲೆ ನನ್ನೆರಡು ರೆಕ್ಕೆಗಳಿಂದ. -ಆದರೇ….ಉಪಯೋಗವೇನು ಈ ನನ್ನ ಸಾಮರ್ಥ್ಯಗಳಿಂದ?! ನನಗಿರುವುದೊಂದೇ ಪಟ್ಟ ಪಂಜರದ ಸೆರೆವಾಸ..!!

ಓ ಗೆಳತಿ ಅಂತೆಯೇ ನಮ್ಮ ಬಾಳು ಸಮಾಜವೆಂಬ ಪಂಜರದಲ್ಲಿ ಬಂಧಿತ ಗಿಳಿ ಹೆಣ್ಣು, ಅವಳಿಗುಂಟು ಗಿಳಿಯಂತೆಯೇ ಸಾಮರ್ಥ್ಯ, ಬಯಕೆಗಳು…ಆದರೆ
ಫಲವೇನು…‌?!
ಆಸೆ ಅನಿಸಿಕೆಗಳನ್ನು ಅದುಮಿಟ್ಟುಕೊಂಡು ಬದುಕಬೇಕು ಸಾಯುವ ತನಕ ನಾನೂ ನೀನೂ ಅಷ್ಟೇ ಈ ಲೋಕದಲ್ಲಿರುವ ತನಕ.!


One thought on “ಪಂಜರದ ಗಿಳಿ

Leave a Reply

Back To Top