ಗಝಲ್
ಈರಪ್ಪ ಬಿಜಲಿ ಕೊಪ್ಪಳ


ಮಲಗಿದವನ ಎದೆಯ ಬಾಗಿಲು ತಟ್ಟುತಿರುವೆ ನೀ ಯಾರೆ
ಮಲ್ಲಿಗೆ ಕಂಪು ಸೂಸಿ ಹೊಸ್ತಿಲ ಮೆಟ್ಟುತಿರುವೆ ನೀ ಯಾರೇ ||
ಕೆಸರಿನಲಿ ಅರಳಿದ ತಾವರೆಯ ಸಹೋದರಿಯಾ ನೀನು
ನಸು ನಾಚುತ ನನ್ನೊಳಗೆ ಪ್ರೀತಿ ಪೈರು ಹಚ್ಚುತಿರುವೆ ನೀ ಯಾರೇ ||
ಹೂಬನದಿ ಚಿಗುರಿದ ಕೆಂಗುಲಾಬಿಯಂತೆ ಕಾಣಿಸುವೆಯಲ್ಲ
ಹೃದಯದಿ ಒಲುಮೆಯ ಚಿಲುಮೆ ಚಿಮ್ಮುತಿರುವೆ ನೀ ಯಾರೇ ||
ಪೊದರಲಿ ಕೊನರಿದ ಕೆಂಪು ದಾಸವಾಳದಂತೆ ಸೆಳೆಯತಿಹೆಯಲ್ಲ
ಸುಗಂಧದ ಅಮಲಲಿ ತೇಲಿಸುತ ಬೀಗುತಿರುವೆ ನೀ ಯಾರೇ ||
ಸಂಜೆಗೆ ಸಿಗುವ ಸಂಪಿಗೆ ಕುಲದವಳಿಗೆ ಬಿಜಲಿ ದಾಸನಾದನಲ್ಲ
ಮುಂಜಾವಿನ ಕನಸಿಗೆ ಬೆರಗಾಗಿ ಬೆಚ್ಚುತಿರುವೆ ನೀ ಯಾರೇ ||
ಹೃತ್ಪೂರ್ವಕವಾದ ಧನ್ಯವಾದಗಳು ಸರ್