ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಸಿಗೆ ವಿಶೇಷ

ಬೆಂಶ್ರೀ ರವೀಂದ್ರ.

ಆದಿಯ ಬೇಸಿಗೆ ದಿನಚರಿ

1,607 Indian Kid Running Stock Photos, Pictures & Royalty-Free Images -  iStock

ಆಹಾ.. ಓಹೋ ಬೇಸಿಗೆ
ಬೇಗನೆ ಬಿಟ್ಟೇಳಿ ಹಾಸಿಗೆ

ಗೆಳೆಯರು ಆಗಲೇ ಮೈದಾನಕ್ಕೆ ಹಾಲ್ಕುಡಿದೋಡುವೆ ಆಡಲಿಕ್ಕೆ

ಗೋಲಿ ಬುಗುರಿ ಲಗೋರಿ ನಿಮ್ಕಾಲದ್ದು ಕ್ರಿಕೆಟ್ಟು ಫುಟ್ಬಾಲ್ ಟೆನ್ನಿಸ್ಸು ನಮ್ಕಾಲದ್ದು

ಬೇಗನೆ ಹೋದ್ರೆ ಬ್ಯಾಟಿಂಗು
ಲೇಟಾದ್ರೆ ಗ್ಯಾರೆಂಟಿ ಫೀಲ್ಡಿಂಗು

ನಾಳೆ ಮ್ಯಾಚಿಗೆ ನಾನೇ ಸ್ಪಿನ್ನರು
ನನ್ನ ಬಾಲಿಗೆ ಹೋಡಿಯೋರಿಲ್ಲ ಸಿಕ್ಸರು

ತಿಂಡಿಗೆ ಬರುವ ಹನ್ನೊಂದಕ್ಕೆ
ತಿರುಗಿ ಹೋಗುವೆ ಹನ್ನೆರಡಕ್ಕೆ

ಟ್ವಿಂಕಲ್ಲು ಮನೆಯಲ್ಲಿ ವಿಡಿಯೊ ಗೇಮು ಅಂಕಲ್ಲು ತರಿಸ್ತಾರೆ ಪಿಜ್ಜಾ ಐಸ್ ಕ್ರೀಮು

ಬಂದ್ರೆಬಂದೆ ಸಾಯಂಕಾಲ ಮನೆಗೆ
ಹೋಗ್ಬೇಕು ‘ಟಿಟ್ವೆಂಟಿ’ ನೋಡೊದಕ್ಕೆ

ಅಮ್ಮಾ ರಾತ್ರಿಗೆ ಬಿಸಿಪೂರಿ ಚಿತ್ರಾನ್ನ ಮಾಡು ಮಾವಿನಗೊಜ್ಜು ಬಾಳೆರಸಾಯನ ಶ್ರೀಖಂಡು

ಆಹಾ….. ಓಹೋ…….ಬೇಸಿಗೆ
ಮುಂದಿನವಾರ ಊಟಿ ಪ್ರವಾಸಕ್ಕೆ

ಆದಿಗ್ಯಾಕೆ ರಜವು ಬಂತೋ
ತಾಪತ್ರಯ ನನಗೆ ತಂತೋ.


About The Author

1 thought on “”

  1. ನಾಗರಾಜ್ ರಾವ್ ಎಂ ಕೆ

    ಮಕ್ಕಳ ಬೇಸಿಗೆ ರಜಾ ದಿನಚರಿ ಚೆನ್ನಾಗಿ ಮೂಡಿಬಂದಿದೆ. ಸ್ವಲ್ಪ ದೊಡ್ಡವರಾದರೆ ಮೊಬೈಲ್ನಲ್ಲಿ ಪಬ್ಜಿ ಗೇಮ್ಟ
    ಆಟಗಲೂ ದಿನಚರಿಗೆ ಸೇರಿಕೊಳ್ಳುತ್ತವೆ. ಆದಿ ಒಳ್ಳೆ ಹುಡುಗ.

Leave a Reply

You cannot copy content of this page

Scroll to Top