ಅನುವಾದಿತ ಕವಿತೆ

ಅನುವಾದಿತ ಕವಿತೆ

ದೇವರು ಕಾಣಿಸಿಬಿಟ್ಟ


ತೆಲುಗು ಮೂಲ: ಡಾ|| ರಾಧಶ್ರೀ


ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್

ಪ್ರೈವೇಟ್ ಗಾಡಿಯಲ್ಲಿ ಹೋದರೆ ಐವತ್ತು ಟೋಲ್ ಗೇಟ್ ಗಳು
ಅಡ್ಡವಾಗಿ ನಿಂತು ‘ತೋಲು’ ಸುಲಿತಿದ್ದರೆ ಭರಿಸಲಾಗದೆ
ಮನೆಯಿಂದ ಬಸ್ಟಾಂಡಿಗೆ ಆಟೋದಲ್ಲಿ ಹೊರಟರೆ
ಮೂರು ಚಕ್ರಗಳಿಗಿಂತ ವೇಗವಾಗಿ ತಿರುಗುವ ನಾಲ್ಕನೇ ಚಕ್ರ ವಾದ
ಮೀಟರ್ ಮೇಲೆ ಮೂರರಷ್ಟು ಹೆಚ್ಚಾಗಿ ಕೊಡಬೇಕಂದರೆ ದೇವರು ಕಾಣಿಸಿದ!
‘ಹಬ್ಬದ ಸ್ಪೆಷಲ್’ ಹೆಸರಿನಲ್ಲಿ ‘ಡಬಲ್’ ಹಣ ವಸೂಲಿ
ಮಾಡುವ ಬಸ್ಸುಗಳನ್ನ ನೋಡುತ್ತಲೇ ದೇವರು ಕಾಣಿಸಿದ!!
‘ಕೆಳಗಿನಿಂದ ಮೇಲಕ್ಕೆ’ ವಾಹನ ಎಷ್ಟು ಹೊತ್ತಿಗೂ ಬರದೇ
ನಡಯಲಾರದೆ ನಡಯಲಾರದೆ ಮೇಲಕ್ಕೆ ತಲುಪುವ ಸಮಯದಲ್ಲೇ ದೇವರು ಕಾಣಿಸಿದ!
ಹಣ ಎಗಸ್ಟ್ರಾ ಕೊಡುತ್ತೀಯಾ? ಗಾಯ ಮಾಡ್ಬೇಕಾ? ಅನ್ನುತ್ತಾ
ಕ್ಷುರಕ ಕತ್ತಿ ಚೊಪುಮಾಡುವಾಗ ದೇವರು ಕಾಣಿಸಿದ!!
ಅಕೃತ್ಯಗಳನ್ನು ಜೋಡಿಸಿ ಕಾಲಕೃತ್ಯ ಗಳಿಗೆ, ಬಿಸೀ ನೀರಿಗೆ
ಕಾಸು ಕೊಡಬೇಕಾಗಿ ಬಂದಿರುವಾಗ ದೇವರು ಕಾಣಿಸಿದ!
‘ಕಾಯಿ, ಕಡ್ಡಿ, ಕರ್ಪೂರ’ ಎಂದು ದೌರ್ಬಲ್ಯದ ಮೇಲೆ
ಅಂಗಡಿ ಯವನು ಬಾರಿಸುತ್ತಾ ಜೇಬು ಲೂಟಿ ಮಾಡುತಿದ್ದರೆ…
ಜೀವನಪರ್ಯಂತ ಹಗಲು ರಾತ್ರಿ ದುಡಿಯದರೂ ಕೊಳ್ಳಲಾರದ
“ಉದಯಾಸ್ತಮಾನ ಸೇವೆ” ರೇಟು ಒಂದುವರೆ ಕೋಟಿ ದಾಟಿದರೆ
ದೇವರು ಕಾಣಿಸಿದಲ್ಲವೇ ಹಠಾತ್ ಆಘಾತವನ್ನೂ ನೀಡಿದ!!
‘ಉಚಿತ ದರ್ಶನ’ ಅನುಚಿತ ವೆಂದು ಸರ್ವದರ್ಶನಕ್ಕೂ
ಬೆಲೆ ನಿಗದಿಸಿರುವ ಕ್ಯೂನಲ್ಲಿ ತಳ್ಳುತ್ತಿದ್ದರೆ, ಎಳೆ ಮಕ್ಕಳೊಂದಿಗೆ,
ರೋಗಗ್ರಸ್ತ ಹೆಂಡತಿಯೊಂದಿಗೆ ನಿಂತಾಗ
ಕ್ಯೂನಲ್ಲೇ ದೇವರು ಕಾಣಿಸಿಬಿಟ್ಟ!
ದೇವರ ದರ್ಶನಕ್ಕೆ ‘ಕೋವಿಡ್ ಸರ್ಟಿಫಿಕೇಟ್’ ಕೇಳುತ್ತಿದ್ದರೆ
ದೇವರು ಕಾಣಿಸಿ ಮೌನವಾಗಿದ್ದ!!
‘ಪೂಜೆ ದರಗಳ ವಿವರಗಳು’ ಬೋರ್ಡ್ ಅನ್ನು ನೋಡಿ ನಾನು
ದಿಗ್ಭ್ರಮೆಗೊಂಡಾಗ ದೇವರು ಕಾಣಿಸಿ ಬೆರಗಿ ನಿಂದ ಬಾಯಿಬಿಟ್ಟ!
‘ಮುಂದಕ್ಕೆ’, ‘ಮುಂದಕ್ಕೆ’ ಎಂದು ಒಬ್ಬನು ತಳ್ಳುತ್ತಿದ್ದರೆ
‘ನಡೆಯಿರಿ’, ‘ನಡೆಯಿರಿ’ ಎಂದು ಇನ್ನೊಬ್ಬನು ಎಳೆಯುತ್ತಿದ್ದರೆ
ಎಲ್ಲರ ನಡುವೆ ನಲುಗಿ ಹೋದ ಸಂದರ್ಭದಲ್ಲಿ ದೇವರು ಕಾಣಿಸಿದ…
ದೇವರು ಕಾಣಿಸಿದ… ಅಚ್ಚು ನನ್ನ ಹಾಗೆ ಹೆದರುತ್ತಾ…
ಮಿನುಗುವ ದೀಪದ ಕತ್ತಲೆಯಲ್ಲಿ ಸುಕ್ಕುಗಟ್ಟಿ…
ಕುಗ್ಗಿಸಿ, ಹತಾಶನಾಗಿ, ಕಪ್ಪಗಾಗಿ, ಕಪ್ಪಗಾಗಿ
ನಿಂತಕಾಲುಗಳೊಂದಿಗೆ, ನಿಕ್ಕುತ್ತಾ ನೀಲುಗುತ್ತಾ
ಅಲಂಕಾರ ಹೆಚ್ಚಾಗಿ ಗುರುತು ಹಿಡಿಯಲಾಗದೇ ಕಾಣಿಸಿದ!!
‘ಕಾಣಿಕೆಗಳು ಹುಂಡಿಯಲ್ಲಿ ಹಾಕಬೇಕು’ ಎಂಬುವ ಆಡಳಿತ ಮಂಡಳಿಯ,
‘ಇಲ್ಲ ಅದನ್ನು ನಮ್ಮ ತಟ್ಟೆಗೆ ಹಾಕಿಕೊಳ್ಳಬೇಕು’ ಎಂಬುವ ಅರ್ಚಕರ,
ಭಕ್ತರಿಗೆ “ಶಟಗೋಪ”ವನ್ನು ನೀಡುವ ನಿಪುಣರಾದ ದೈವ ಪ್ರತಿನಿಧಿಗಳ
ಮಧ್ಯ ನಡೆಯುವ ಪ್ರಚ್ಛನ್ನ ಯುದ್ಧದಲ್ಲಿ ಸಿಕ್ಕಿ ಅಳುತಿದ್ದ ದೇವರು ಕಾಣಿಸಿದ!
‘ಚೀಲ’ಗಳ ಕ್ಯೂಯಿಂದ ‘ಪ್ರಸಾದ’ಗಳ ಕ್ಯೂಗೆ ನಡೆಯುವ ಹೊತ್ತಿಗೆ ದೇವರು ಕಾಣಿಸಿದ!!
‘ರಸೀದಿ ಪುಸ್ತಕ’ ಹಿಡಿದು ರೌಡಿಗಳಾಗಿ ಕುಳಿತು ದೇಣಿಗೆಗಳಗಾಗಿ ಗದರಿಸುವವರಿಂದ
ಬಿಡಿಸುಕೊಂಡು ಬರುವ ಹೊತ್ತಿಗೆ ದೇವರು ಕಾಣಿಸಿದ!
‘ಹಬ್ಬದ ಪರ್ವದಿನ ಭಗವಂತನ ಸೇವೆಯಲ್ಲಿ… ಗಾಂಧೀ ಬ್ರಾಂದೀ ಷಾಪ್, ದುರ್ಗಾ ಮಟನ್ ಮಾರ್ಕೆಟ್ ಪಕ್ಕದಲ್ಲಿ’ ಎಂಬುವ ಜಾಹೀರಾತನ್ನು ನೋಡಿ ಓಡುತ್ತಾ ಓಡುತ್ತಾ ಯಿರುವ ದೇವರು ಕಾಣಿಸಿದ!!


Leave a Reply

Back To Top