ವಾಸಂತಿ

ಅನುವಾದಿತ ಕವಿತೆ

ವಾಸಂತಿ

ಮೂಲ: ಮರಾಠಿ
ಶ್ರೀ ವಿ.ಎಲ್.ಜೋಶಿ

ಅನುವಾದ
ಶ್ರೀಮತಿ ಸುಲಭಾ ಜೋಶಿ ಹಾವನೂರ.

ವಸಂತ ಋತುವಿನ
ವಾಸಂತಿ ನೀ ಇಲ್ಲವೇಕೆ
ಮೊದಲಿನಂತೆ
ಸುಧಾoಶು ಶೀತಲ
ಅಮೃತದ ಧಾರೆಯು
ಸೊರಗಿ ಕೊರಗಿ
ಕಾಣದೆ ಹೊತ!!

ಹಿಮಧವಲಾಂಗಿ
ಚಪಲ ಕುರಂಗಿ
ಕಣ್ಣಮಿಂಚಿನ ಚಂಚತೆಯು, ಶೂನ್ಯತೆಗೆ
ಏಕೆ ನಮಿಸೇದ!!

ಮುಗ್ಧ ಮನೋಹರೇ
ಮದನ ಚಾಪಾಧರೆ
ನೇತ್ರದಿ ಚಿಮ್ಮವ
ಕಟಾಕ್ಷ ಶರವು
ನಿಷಪ್ರಭ ಏಕೆ ಆಗೆದ!!

ರಸಿಕ ಶೋಭನೆ
ಸುಹಾಸ್ಯವದನೆ
ಮೋಹಕ ಹಾಸ್ಯದ
ವದನವು ನಿನ್ನದು
ದುರ್ಲಭವೆಕೆ ಆಗೆದ!!
ಕುಂಜರಗಾಮಿನಿ
ವಾಗ್ವಿಲಾಸಿನಿ
ಪ್ರೀತಿಯ ನಿನ್ನ ಕೋಕಿಲ
ಕೂಜನ ಮೌನವ
ಏಕೆ ಧರಿಸೆದ!!
ವಿನಯಶಾಲಿನಿ
ಅಂತರ್ವಾಹಿನಿ
ವಸಂತ ಸರಿದು
ಶರದ ಜನಿಸಿದನು
ಕಾಲಚಕ್ರದಾ ಜೊತೆಗೆ
ನಡೆಯದೆ ಉಪಾಯ
ಬೇರೆ ಎಲ್ಲಿದೆಯ!!


Leave a Reply

Back To Top