ಗಜಲ್
(‘ಉ’ಕಾರಾಂತ ಸ್ವರ ಗಜಲ್)
ಬಾಗೇಪಲ್ಲಿ
ಕಣ್ಣೋಟ ಬೆರಸಿ ಸುಖಿಸಿದ ಕಾಲ ಸಾಕಷ್ಟು ಕಳೆಯಿತು ಚಾರುಶೀಲೆ
ಪ್ರಸ್ತುತ ಮೌನವೆಂಬ ಉರಿವ ಬೆಂಕಿಯಿಂದ ಸುಡದಿರು ಚಾರುಶೀಲೆ
ವಿವೇಚಿಸಿದ ನಿರ್ಧಾರದ ಮೇಲೆ ಭರವಸೆ ಇಡು ಎನ್ನ ಚಾರುಶೀಲೆ
‘ಹೂಂ’ ಅಥವ ‘ನಾ’ ಏನೊಂದನೂ ಶೀಘ್ರದಿ ಹೇಳಿಬಿಡು ಚಾರುಶೀಲೆ.
ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಬೇಕಾದರೆ ಯೋಚಿಸು ಚಾರುಶೀಲೆ.
‘ಹಾಂ’ ಆದೊಡೆ ತಿಳಿಸಿ ಬೇಗೆನ್ನ ಭಾಗ್ಯಶಾಲಿ ಆಗಿಸು ಚಾರುಶೀಲೆ.
ನಾ ನಿರ್ಭಾಗ್ಯನಾದರೂ ಸರಿಯೇ ನೀ ಸುಲಭದಿ ನಿಶ್ಚಿಂತಳಾಗು ಚಾರುಶೀಲೆ
‘ನಾ’ ಆದರೆ ವಿನಯದಿ ಬೇಡುವೆನ ತುಸು ನಯವಾಗಿ ಅರುಹು ಚಾರುಶೀಲೆ
‘ಕೃಷ್ಣ’ ಸದಾ ಹೇಳುವಂತೆ ಒಲವಿನ ಪರಿಭಾಷೆಯೇ ಬೇರೆಯಂತೆ ಚಾರುಶೀಲೆ
“ಮೌನಂ ಸಮ್ಮತಿ ಲಕ್ಷಣಂ’ಖರೆ ಆದರೆ ನೀ ಮೂಕಳಾಗು ಚಾರುಲತೆ.