ಓ ಪ್ರೇಮವೇ

ಕಾವ್ಯ ಸಂಗಾತಿ

ಅನುವಾದಿತ ಕವಿತೆ

ಓ ಪ್ರೇಮವೇ

ಮೂಲ: ಶಕೀಲ ಬದಾಯುನಿ


ಕನ್ನಡಕ್ಕೆ : ರುಕ್ಮಿಣಿ ನಾಗಣ್ಣವರ

ಓ ಪ್ರೇಮವೇ ನಿನ್ನ ಫಲಿತಾಂಶ ನೋಡಿ ಅಳು ಬಂತು
ಯಾಕೊ ಗೊತ್ತಿಲ್ಲ ನಿನ್ನ ಹೆಸರು ನೆನೆದು ಅಳು ಬಂತು

ಪ್ರತಿ ಸಂಜೆ ಮುಳುಗುತ್ತಿತ್ತು ಭರವಸೆಗಳೊಂದಿಗೆ
ಇಂದಿನ ಮಾತು ಬೇರೆಯದಿತ್ತು ಸಂಜೆಗೆ
ಅಳು ಬಂತು

ಒಮ್ಮೆ ವಿಧಿಯ ಶೋಕ ಕೆಲವೊಮ್ಮೆ ಲೋಕದ ಆರೋಪ
ಪ್ರೀತಿಯ ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ
ಅಳು ಬಂತು

ಕಣ್ಣು ಹನಿಸುವುದು ನನ್ನೊಂದಿಗೆ ಕೊನೆಯಾಯಿತು
ನಸೀಬಿನ ಈ ಬದಲಾವಣೆ ನೆನೆದು ಅಳು ಬಂತು

ಲೋಕ ಪ್ರೇಮದ ಕುರಿತು ಚರ್ಚಿಸುವ ವೇಳೆ ‘ಶಕೀಲ’
ನನ್ನ ಹೃದಯ ವೈಫಲ್ಯ ನೆನೆದು ನನಗೆ ಅಳು ಬಂತು


Leave a Reply

Back To Top