ತೊಂಬತ್ತರ ಹೊಸ್ತಿಲಲ್ಲಿ ಕವಿ ಜಿನದತ್ತ ದೇಸಾಯರು:

ಕವಿ ಜಿನದತ್ತ ದೇಸಾಯರ ಜನ್ಮದಿನದ ಸವಿನೆನಪಿಗೆ ಈ ಲೇಖನ

ತೊಂಬತ್ತರ ಹೊಸ್ತಿಲಲ್ಲಿ ಕವಿ ಜಿನದತ್ತ ದೇಸಾಯರು:

     ನಾಡಿನ ಹಿರಿಯ ಚೇತನರಾದ ಜಿನದತ್ತ ದೇಸಾಯರು ನಾಡಿನ ಸಾರಸ್ವತ ಲೋಕದ ದಿಗ್ಗಜರು ಅವರಿಗೀಗ ೯೦ರ  ವಯಸ್ಸು. ಇನ್ನೇನು ಅವರು ತೊಂಬತ್ತೊAದರಲ್ಲಿ ಅವರು ಕಾಲಿಡುತ್ತಿದ್ದಾರೆ. ಕನ್ನಡದ ನ್ಯಾಯಾಧೀಶ ಕವಿ ಎಂದು ಅವರನ್ನು ಕನ್ನಡ ಕಾವ್ಯ ಲೋಕ ಗುರುತಿಸಿದೆ. ನ್ಯಾಯಾಂಗ ಇಲಾಖೆಯಿಂದ ಬಂದ ಹಲವಾರು ಜನ ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿದ್ದರೂ ಅವರಲ್ಲಿ ಕವಿಯಾಗಿ ಹೆಸರಾದವರು ಜಿನದತ್ತ ದೇಸಾಯರು ಒಬ್ಬರೇ ಎನ್ನುವದು ಅವರ ಅಗ್ಗಳಿಕೆ. ಅವರು ಕವಿಯಾಗಿ, ಚುಟುಕು ಕವಿಯಾಗಿ, ಕಡೆಗೋಲು ಮೊದಲಾದ ಪ್ರಬಂಧ ಸಂಕಲನಗಳಲ್ಲಿ ಸಾರ್ಥಕ ಗದ್ಯ ಬರಹಗಾರರಾಗಿ ಪ್ರಸಿದ್ಧವರಾದವರು. ಇದೆಲ್ಲಕ್ಕೂ ಮೀರಿದ ಕನ್ನಡ ಕಟ್ಟಾಳುವಾಗಿ ಬೆಳಗಾವಿಯಲ್ಲಿ ನೆಲಸಿ ಯಾವಾಗ ಯಾವಾಗ ಕನ್ನಡಕ್ಕೆ ಕುತ್ತು ಬರುವದೋ ಅಗ ಕನ್ನಡಕ್ಕಾಗಿ ದನಿಯೆತ್ತಿದ ಹಿರಿಯರು. ಅವರಿರುವದೇ ನಮ್ಮ ಭಾಗ್ಯ.

       ಜ್ಞಾನಪೀಠ ಪ್ರಶಸ್ತಿ ವಿÀಜೇತ ಕವಿ ವಿ.ಕೃ ಗೋಕಾಕ ಅವರಿಂದ ಮೊದಲ ಕಾವ್ಯ ಸಂಕಲನಕ್ಕೆ ಮುನ್ನುಡಿ ಬರೆಸಿಕೊಂಡವರು ಅವರು. ನಂತರ ಧಾರವಾಡದಲ್ಲಿ ಅವರ ಕಾವ್ಯ ಪ್ರತಿಭೆ ಅರಳಿತು. ಅದು ಬಂದು ಬೆಳಗಾವಿಯಲ್ಲಿ ನೆಲೆ ನಿಂತಿತು. ೧೯೫೪ ರಲ್ಲಿ ಬಂದ ಅವರ ಮೊದಲ ಸಂಕಲನ ನೀಲಾಂಜನ ದಿಂದ ಹಿಡಿದು ಅವರ ನಿರಂತರವಾಗಿ ಸಾವಿರಾರು ಕವಿತೆ , ಚುಟುಕು ಕವಿತೆ ಬರೆದರು. ಹೀಗೆ ಕವಿತೆ, ಚುಟುಕು ಕವಿತೆ ಎರಡರಲ್ಲೂ ಏಕಪ್ರಕಾರವಾಗಿ ಶ್ರೇಷ್ಠತೆ ಮೆರೆದ ಇನ್ನೊಬ್ಬರು ಕನ್ನಡದಲ್ಲಿ ಸಿಗುವದು ವಿರಳ ಎಂಬುದನ್ನೂ ಇಂದು ಸಾಹಿತ್ಯ ಲೋಕ ಗುರುತಿಸಿದ್ದಾಗಿದೆ.

      ನೀಲಾಂಜನ ( ೧೯೫೪) ಮಧುಶಾಲಿನಿ( ೧೯೬೦), ಮತ್ತೆ ಬಂದುಇದ್ದೇನೆ( ೧೯೯೪), ಮಾಗಿ ೨೦೦೪) , ಒಳಗಿನ ಮಳೆ( ೨೦೦೭), ಬೊಗಸೆಯಲ್ಲಿ ಬೆಳಕು(೨೦೦೭), ಹೆಜ್ಜೆಸಾಲು (೨೦೦೭), ಸಮಗ್ರಕಾವ್ಯ (೨೦೦೮), ಅಮೋಘ( ೨೦೧೩), ಹೆಜ್ಜೆ ಸಾಲು (೨೦೦೭) ಜಗದಗಲ ಮುಗಿಲಗಲ (೨೦೧೦) ಗರುಡನ ರೆಕ್ಕೆಯ ಚುಟುಕು ಹಕ್ಕಿ (೨೦೧೩), ಗಾಂಧೀ ನಗರ ( ೨೦೧೩), ಅಲ್ಲದೇ ಅವರ ಸಾವಿರಕ್ಕೂ ಮೀರಿದ ಚುಟುಕುಗಳನ್ನು ಒಂದೆಡೆ ಮೀರಿಸಿ ಸಂಪಾದಿಸಿದ ಸಹಸ್ರ ಚಂದ್ರ ( ಸಮಗ್ರ ಚುಟುಕು ಕಾವ್ಯ – ೨೦೧೩ ) ಹೀಗೆ ೧೯೫೪ ರಿಂದ ೨೦೧೫ ರವರೆಗೆ ಸುಮಾರು ಆರೇಳು ದಶಕಗಳ ಕಾಲ ನಿರಂತರವಾಗಿ ಕನ್ನಡ ಕÀವ್ಯದಲ್ಲಿ ಅವರು ಬರೆಯುತ್ತ ಬಂದವರು. ಹಾಗೆ ನೋಡಿದರೆ ಮೇಲಿನ ಪಟ್ಟಿಯನ್ನು ಗಮನಿಸಿದಾಗ ೨೦೦೭ ಕಾಲ ಅವರ ಕಾವ್ಯ ಬದುಕಿನ ಸುಗ್ಗಿ ಕಾಲ ಎನ್ನಬಹುದು.

     ಅವರೇ ಹೇಳಿಕೊಂಡ ಸಾಲುಗಳ ಮೂಲಕ ಅವರ ಕವಿತೆಯನ್ನು ಗುರುತಿಸುವದಾದರೆ

                                ಸಾಗಿದ್ದು

                                ಮಾಗಿದ್ದು

                                ಏಳು ದಶಕದ ಹಾದಿ

ಎಂದು ಅವರು ಕರೆದುಕೊಳ್ಳುತ್ತಾರೆ. ಬಹಳ ವಿಶಿಷ್ಟಾದ ಸಂದರ್ಭವೆAದರೆ ಕನ್ನಡದಲ್ಲಿ ಏಳೂ ದಶಕಗಳ ಅವಧಿಯಲ್ಲಿ ನಾಲ್ಕಾರು ಸಾಹಿತ್ಯ ಪಂಥಗಳ ಬಂದು ಹೋದವು. ಎಲ್ಲ ಪಂಥಗಳ ಒಳ್ಳೆಯ ಅಂಶಗಳನ್ನು ಬಳಸಿಕೊಂಡ ಕವಿ ಯಾವೊಂದೂ ಪಂಥಕ್ಕೂ ಸೀಮಿತರಾಗಲಿಲ್ಲ. ಸದಾ ಮಾನವೀಯತೆಯತ್ತ ತುಡಿತ  ಇವರ ಕಾವ್ಯದ ಜೀವಧ್ವನಿ ಎನ್ನಬಹುದು. ಅದಕ್ಕೆ ಪಂಥ ಸಿದ್ಧಾಂತಗಳ ಅಗತ್ಯವಿಲ್ಲ ಎಂದು ಅವರು ನಂಬಿದ್ದರು. 

     ಕನ್ನಡದಲ್ಲಿ ಸದಾ ಬೆಳಕನ್ನು ಹಾರೈಸಿz,À ಅರಸಿದ, ತಮ್ಮ ಕಾವ್ಯದಲ್ಲಿ ಮತ್ತೆ ಮತ್ತೆ ಅದನ್ನು ತಂದ ಕವಿಗಳಲ್ಲಿ ಜಿನದತ್ತ ದೇಸಾಯಿಯವರೂ  ಒಬ್ಬರು. ತಾನು ಮತ್ತೆ ಮತ್ತೆ ಏಕೆ ಬೆಳಕಿನ ರೂಪಕಗಳನ್ನು ತರುತ್ತೇನೆ? ಎಂಬ ಪ್ರಶ್ನೆಗೆ ಅವರೇ ‘ಬೊಗಸೆಯಲ್ಲಿ ಬೆಳಕು’ ಸಂಕಲನದ ಕವಿಯ ಮಾತಿನಲ್ಲಿ ಉತ್ತರಿಸುತ್ತಾರೆ.  ಅವರಿಗೆ “ ಸಾಮಾಜಿಕ ಬದುಕಿನಲ್ಲಿ ಅನೇಕ ವಿಧದಲ್ಲಿ ತುಂಬುತ್ತಿರುವ ಕತ್ತಲೆ- ಕುರುಡತನಗಳ ಪರಿಸರದಲ್ಲಿ ಹೃದಯವಂತಿಕೆಯ ಬೆಳಕನ್ನು ಕಂಡುಕೊಳ್ಳುವ, ಬದುಕಿನ ಸಾರ್ಥಕತೆಗೆ ಹರಿಸುವ ನನ್ನ ಬಾಳಿನ ಕ್ರಿಯಾ ರೂಪಗಳು ಇಲ್ಲಿ ಕಾಣಿಸಿಕೊಂಡಿದ್ದು ಅವು ಕೇವಲ  ಕನಸುಗಾರಿಕೆಯ ತುಣುಕುಗಳಾಗಿರದೇ ವಾಸ್ತವದ ಮಿಣುಕುಗಳೆಂಬುದು ನನ್ನ ಭಾವನೆ” ಎನ್ನುತ್ತಾರೆ. ಅವರ ಮೊದಲ ಕವಿತಾ ಸಂಕಲನದ ಹೆಸರೂ ‘ನೀಲಾಂಜನ’ ಚುಟುಕು ಸಂಕಲನದ ಹೆಸರು ‘ಬೊಗಸೆಯಲ್ಲಿ ಬೆಳಕು’. ಸಾಂಗತ್ಯವನ್ನು ಕುರಿತು ಅವರು ಧ್ಯನಿಸುವದು ಹೀಗೆ- “ ನನ್ನ ಮೊದಲಿನ ಕವನ ಸಂಕಲನದ ಹೆಸರೆ ‘ನೀಲಾಂಜನ’ .ಬೆಳಕಿನ ಕುಡಿಯನ್ನು ಕೈಯಲ್ಲಿ ಹಿಡಿದುಕೊಂಡೇ ನಾನು ಕಾವ್ಯ ಪ್ರವೇಶ ಮಡಿದೆ. ಇಗ ನನ್ನ ಆರನೆಯ ಕವನ ಸಂಗ್ರಹ ‘ಬೊಗಸೆಯಲ್ಲಿ ಬೆಳಕು’ ಹೊರ ಬರುತ್ತಿದೆ. ಬೊಗಸೆಯ ತುಂಬ ಬೆಳಕು , ಬೊಗಸೆ ತುಂಬ ನಕ್ಷತ್ರಗಳೆಂದರೆ ಸರಿಯೇನೋ! ಬದುಕಿನ, ಬೆಳಕಿನ ಅನಂತ ಸಾಗರದಲ್ಲಿ ತುಂಬಿಕೊAಡಷ್ಟು ಬೊಗಸೆ ನನ್ನ ಪಾಲಿನದು .ನನಗೆ ದಕ್ಕಿದ್ದು , ನನ್ನ ಅನೇಕ ಕವನಗಳಲ್ಲಿ ಬೆಳಕು ಹತ್ತಾರು ಬಗೆಯಲ್ಲಿ ಚಿತ್ತಾರ ಬಿಡಿಸಿದೆ”. ಎಂದಿರುವದು  ಅವರ ಕಾವ್ಯವನ್ನು ಅರ್ಥ ಮಡಿಕೊಳ್ಳಲು ನಮಗೆ ದಾರಿಯನ್ನು ತೋರುತ್ತದೆ. ಕವಿ ಜಿನದತ್ತರಿಗೆ ಸಾಮಾಜಿಕ ಸಂದರ್ಭದಲ್ಲಿ ಕತ್ತಲೆ, ಕುರುಡತನ ತುಂಬುವವರ ವಿರುದ್ಧ ಆಕ್ರೋಶವಿದೆ.  ಬೆಳಕಿನ ಪಕ್ಷಪಾತಿಯಾದ ಕವಿ

                ಕತ್ತಲಿಂದೇನಾಗಬೇಕಿದೆ ನನಿಗೆ

                ಇದ್ದ ಬೆಳಕನ್ನು ಇದ್ದಷ್ಟು ದಿನ

                ಕಣ್ಣಿನ ಹಣತೆ ಹಿಡಿಯುವಷ್ಟೂ ತುಂಬಿಕೋ

ಎAದು ನಮ್ಮ ಗಮನ ಬೆಳಕಿನತ್ತ ಇರಲಿ ಎನ್ನುತ್ತಾರೆ. ಜಗತ್ತಿನಲ್ಲಿ ಕತ್ತಲೆ ಹಚ್ಚುವವರ ನಡುವೆ ಬೆಳಕು ತುಂಬುವ ಇಂತಹ ಕವಿ ಮನಸ್ಸುಗಳೇ ಬೇಕಲ್ಲವೇ?

       ”ಜಿನದತ್ತ ದೇಸಾಯರು ಮಾನವ ಕೇಂದ್ರಿತ ನೆಲೆಯಲ್ಲಿ ಕಾವ್ಯಶೋಧ ನಡೆಸುತ್ತಿದ್ದಾರೆ. ಸಮಚಿತ್ತ, ಸಮದೃಷ್ಟಿ, ಸಮಶೃತಿಯ ಕಾವ್ಯವನ್ನು ಕೊಟ್ಟವರು ಜಿನದತ್ತ ದೇಸಾಯಿ. ನ್ಯಾಯಾಧೀಶರ ವ್ಯಕ್ತಿತ್ವದಲ್ಲಿ ಕಾಣುವ ಸಮತೋಲನ ದೃಷ್ಟಿ ಅವರ ಕಾವ್ಯದಲ್ಲೂ ಪ್ರತಿಧ್ವನಿಸಿದೆ. “ ಎನ್ನುವ ಡಾ.ಜಿ.ಎಂ.ಹೆಗಡೆಯವರ ಸಾಲುಗಳನ್ನು ಇಲ್ಲಿ ನೆನೆÀಯಬಹುದು. ಸದಾ ಬೆಳಗುವದನ್ನು ಅವರು ನಂಬಿದ್ದರು ಎಷ್ಟೇ ಸಣ್ಣದಿದ್ದರೂ ಹಣತೆ ಬೆಳಗುವ ಕಾರ್ಯ ಮಾಡುವದಲ್ಲ. ಅದು ಅವರಿಗೆ ತುಂಬ ಇಷ್ಟದ ರೂಪಕ.

                ಹಣತೆ ಸಣ್ಣದೇ?

                ಅದರ ಕೆಲಸ ಸಣ್ಣದೇ?

                ಹಗಲಿನಲ್ಲಿ ಸೂರ್ಯ ಮಾಡುವ ಕೆಲಸ

                ಇರುಳಿನಲ್ಲಿ  ಹಣತೆ ಮಡುವ ಕೆಲಸ

                ಒಂದೇ ಅಲ್ಲವೇ?

ಇದು ಅವರ ಪ್ರಾಮಾಣಿಕ ಪ್ರಶ್ನೆ. ಹಣತೆ ಕಿರಿಯದಾದರೇನು ಅದು ನೀಡುವ ಬೆಳಕಿಗೆ ಹಿರಿಕಿರಿದು ಎಂದಿಲ್ಲ. ಹಾಗೆಯೇ ನಾವೆಲ್ಲ ಎಷ್ಟೇ ಚಿಕ್ಕದಾದರೂ ನಮ್ಮಿಂದಾದ ಬೆಳಕು ಹಚ್ಚುವ ಕಾರ್ಯ ಮಾಡಬೆಕು. “ಹಚ್ಚೂದಾದ್ರ ದೀಪಾ ಹಚ್ಚು ..” ಎನ್ನುವ ಅವರ ಇನ್ನೊಂದು ಚುಟುಕು ಪ್ರಸಿದ್ಧವೇ ಅಗಿದೆ. ಅವರ ‘ಬೆಳಕೆಷ್ಟು ಬೇಕು’ ಎಂಬ  ಕವಿತೆಯಲ್ಲಿ-

                ನನಗೆ ಕಂಡರೆ  ಸಾಕು

                ಅದಕ್ಕೇನು ಸೂರ್ಯನೇ ಬರಬೇಕೆಂದಿಲ್ಲ

                ಚAದ್ರನೇ ಹೊಳೆಯಬೇಕೆಂದಿಲ್ಲ

                ಚಿಕ್ಕ ಚಿಕ್ಕ

                ಚಿಕ್ಕೆಗಳ ಸಣ್ಣ ನಂದಾದೀಪಗಳೇ ಸಾಕು

ಎನ್ನುವಲ್ಲಿಯೂ ಹಿರಿದು ಕಿರಿದೆಂಬ ವ್ಯತ್ಯಾಸಕ್ಕಿಂತ ಬೆಳಕು ಬೀರುವ ಕೆಲಸ ಪ್ರಧಾನ ಎನ್ನುವದನ್ನು ಅವರು ಸಾರುತ್ತರೆ. ಬಸವಣ್ಣಣವರ ವಿಚಾರಗಳಿಂದ ತುಂಬ ಪ್ರಭಾವಿತರಾದ ಅವರು ಮೇಲು ಕೀಳುಗಳೆನ್ನದೇ ಎಲ್ಲವನ್ನೂ ಸಮಾನತೆಯ ನೆಲೆಯಲ್ಲಿ ಕಾಣುವದೇ ಇಲ್ಲೊಇ ಎದ್ದು ಕಾಣುತ್ತದೆ.

     ಅವರ ಕವಿತೆ ಸದಾ ಮನುಷ್ಯತ್ವವನ್ನು ಪೋಷಿಸಿದ ಕವಿತೆ ಎನ್ನುವದನ್ನು ನಾವು ಮತ್ತೆ ಮತ್ತೆ ಕಾಣುತ್ತೇವೆ. ತನ್ನ ದೇವರು ಹೇಗೆ ಇದ್ದಾನೆ ಎನ್ನುವ ಒಂದು ಕವಿತೆಯನ್ನು ಅವರು ಬರೆದಿದ್ದಾರೆಅವರು ಕಲ್ಪಿಸಿದ ದೇವರು ಹೇಗೆ ಇದ್ದಾನೆ ಎನ್ನುವದನ್ನು ಕವಿತೆ ಹೀಗೆ ವಿವರಿಸಿದೆ.

                ಬಿದ್ದವರನ್ನೆಬ್ಬಿಸಿ ಮೈಕೈಗೆ ಅಂಟಿದ

                ಮಣ್ಣು ಕೊಡವಿ ನಡೆ ನಾನಿದ್ದೇನೆ

                ಜತೆಗೆ ಎಂದ ನನ್ನ ದೇವರು

ದೇವರು ಬಿದ್ದ ಭಕ್ತನಿಗೆ ಸಮಾಧಾನ ಕೊಡುತ್ತಿದ್ದಾನೆ. ‘ನೀನು ಬಿದ್ದು ಸೋತಿದ್ದಿಯಾ, ನಿನ್ನ ಕೈಗೆ ಮೈಗೆ ಮಣ್ಣು ಅಂಟಿದೆ. ಹೆದರಬೇಡ ಏಳು ನಾನಿದ್ದೇನೆ ಮೈ ಕೊಡಹು, ಮುಂದೆ ನಡೆ, ನಾನು ಬೆಂಬಲಕ್ಕಿರುವೆ’ ಎನ್ನುವ ಸಂಗಾತಿ ತಮ್ಮ ದೇವರು ಎಂದು ಜಿನದತ್ತರು  ವ್ಯಾಖ್ಯಾನಿಸುತ್ತಾರೆ. ಎಲ್ಲೋ ಗರ್ಭಗುಡಿಯಲ್ಲಿ ಕುಳಿತು ಗಂಟೆ ಜಾಗಟೆಗಳ ವೈಭವದಲ್ಲಿ ಮೈಮರೆÀದೇವರು ಅವರ ದೇವರಲ್ಲ. ಆತ

                ಹಸಿದವನ ಬೊಗಸೆಗೆ

                ತಾನುಣ್ಣುವೆರಡು ತುತ್ತು ನೀಡಿ

                ನೀರು ತರಲೇ ಎಂದು ಕೇಳುವ

                ನನ್ನ ಮತ್ತೊಬ್ಬ ದೇವರು

ದುಡಿವವರ, ಹಸಿದವರ ಬೊಗಸೆಗೆ ಎರಡು ತುತ್ತು ಹಕಿ ಮತ್ತೆ ನೀರು ತಂದು ಕುಡಿಯಲಿತ್ತು ಸಂತೈಸುವ ದೈವವನ್ನು ಜಿನದತ್ತರು ಕಾಣುತ್ತಾರೆ. ಮೋಕ್ಷ, ಮುಕ್ತಿ ಬಗೆಯ ಮಾತನಾಡುವ ದೇವರುಗಳು ನನಗೆ ಬೇಕಿಲ್ಲ ಎನ್ನುವ ಕವಿ-

                ದೇವರುಗಳೆ ಸಾಕೆನಗೆ

                ಮುಕ್ತಿ ಮೋಕ್ಷ ಇನ್ನೇನನೋ ಕೊಡವ

                ದೇವರುಗಳಿದ್ದರೆ

                ಅವರಿರಲಿ ದೊಡ್ಡವರಿಗೆ,

ಮೋಕ್ಷ ಮುಕ್ತಿಯ ಮಾತನಾಡುವ ದೇವರು ನಮಗೆ ಬೇಡ ಎಂದು ಸ್ಪಷ್ಟ ಸಾರುವ ಕವಿಯ ದೃಷ್ಟಿಕೋನ ಎತ್ತಲಿದೆ ಎಂಬುದರ ಅರಿವು ನಮಗಾಗುತ್ತದೆ. ಇಡೀ ಕನ್ನಡ ಸಾಹಿತ್ಯದಲ್ಲಿ ಸದಾ ಮನುಷ್ಯತ್ವವನ್ನೇ ಹುಡುಕುವದರತ್ತ ಕಣ್ಣು ನೆಟ್ಟ ಕವಿ ಎಂಬುದರ ಸ್ಪಷ್ಟತೆ ನಮಗಾಗುತ್ತದೆ. ಮನುಷ್ಯರ ನೋವಿಗೆ ಮಾತ್ರವಲ್ಲ ಕಮರುವ ಹೂಗಳನ್ನೂ ನೋಡಿ ದು:ಖಿಸುವ ಸೂಕ್ಷö್ಮತೆ ಅವರದು. ಇಂಥಹ ಗುಣ ಇಲ್ಲದ ಕವಿ ಕವಿಯೇ ಅಲ್ಲ. ಸಕಲ ಜೀವರಾಶಿಗಳಲ್ಲಿ ಸಮಾನತೆ ಕಂಡ ಬಸವಣ್ಣನವರ ಹಾದಿ ಕವಿಯದು.

                ಮೊಗ್ಗು ಕಮರಿದರೆ

                ಮಗು ಸತ್ತಂತೆ

                ಸಹಿಸುವೆನೆ ನಾನು,

                ಅತ್ತೇನು ತಾಯಿಯಂತೆ

ಕಮರುವ ಹೂವನ್ನೂ ಕಂಡರೂ ಮಗುವಿನ ಸಾವು ನನೆಪಾಗುತ್ತದೆ ಎಂದರೆ ಅವರೊಳಗಿನ ಮನುಷ್ಯತ್ವದ ಗುಣದ ಔನ್ನತ್ಯವನ್ನು ತೆಕ್ಕೆಯಲ್ಲಿ ಹಿಡಿಯಲಾಗದು.

     ಕವಿ ಜಿನದತ್ತರು ಸದಾ ವಾಸ್ತವತೆಯತ್ತ ಗಮನವಿತ್ತವರು. ಪೂರೈಸಲಾಗದ ಯಾವುದೂ ಉಪಯುಕ್ತ ವಲ್ಲ ಎನ್ನುವದು ಅವರ ಖಚಿತ ಧೋರಣೆಯಾಗಿದೆ. ಜಗತ್ತಿನಲ್ಲಿ ಸಾಕಷ್ಟು ಜನ ಮೌಲ್ಯಗಳ ಬಗೆಗೆ ಮಾತನಾಡುತ್ತಾರೆ. ಪುಂಖಾನುಪುAಖವಾಗಿ ಬರೆಯುತ್ತಾರೆ ಕೂಡ. ಆದರೆÀ ಅವು ಅನುಸರಣೆಯಾಗದಿದ್ದರೆ ಏನರ್ಥ? ಅವರ ‘ಸಹಸ್ರ ಚಂz’À್ರ ಸಮಗ್ರ ಸಂಕಲನದಲ್ಲಿ ಬಂದಿರುವ ಚುಟುಕು –

                ಮೌಲ್ಯಗಳಿವೆ

                ಸಾಕಷ್ಟಿವೆ

                ಒಂದನ್ನಾದರೂ ಅಳವಡಿಸಿಕೊಳ್ಳಿ

                ಅಳವಡಿಸಿಕೊಳ್ಳದ ಮೌಲ್ಯ

ಅವರಲ್ಲಿ ಬರೀ ಸಮಾಜಮುಖಿ ಕವಿತೆಗಳಿವೆ ಅವು ಸದಾ ಕುಟುಕುವ ಕಾರ್ಯ ಮಾಡಿವೆ ಎಂಬ ಒಮ್ಮತದ ತೀರ್ಮಾಣಕ್ಕೆ ಬರುವದೇನೂ ಬೇಡ ಎನ್ನುವ ವಿನಂತಿಯನ್ನು ಕವಿಯೇ ಒಂದು ಚುಟುಕಿನಲ್ಲಿ ಮಾಡಿರು ವದನ್ನು ನಾವು ನೋಡಬಹುದು. ಅವರೂ ಸುಂದರವಾದುದನ್ನು ಕಂಡು ಸಂತೋಷ ಪಟ್ಟಿದ್ದಾರೆ. ಓದುಗರೂ ಸಂತೋಷಪಡಲೆAದು ಓದುಗರಿಗೂ ಹಂಚಿದ್ದಾರೆ. ಯಾರೋ ಒಬ್ಬರು ನಿಮ್ಮ ಚುಟುಕು ಸದ ಚೇಳಿನತೆ ಕುಟುಕುತ್ತವೆ ಎಂದಾಗ ಅವರ ಉತ್ತರ ಇದು-

                “ ನಿಮ್ಮ ಚುಟುಕು ಚೇಳು

                ಕರಿ ಚೇಳು”

                ಓದುಗರೊಬ್ಬರ ಟೀಕೆ

                ಇರಬಹುದು ಕುಟುಕಲು ಕೆಲವು:

                ಬಳಿಗೇ ಇವೆ ಬಣ್ಣ ಬಣ್ಣದ ಚಿಟ್ಟೆ

                ಅವು ನಗುತಿರುವ ಹೂ

ಕವಿಯ ಕೆಸ ಅದರಲ್ಲೂ ಚುಟುಕು ಕವಿಯ ಕೆಲಸ ಸಮಾಜದಲ್ಲಿ ತಪ್ಪಿದವರನ್ನು ಕುಟುಕುವದೇ ! ಹಾಗೆಂದು ಕವಿ ಸೌಂರ‍್ಯಕ್ಕೆ ಕುರುಡಾದವನಲ್ಲ ಅವರಲ್ಲೂ ‘ನಗುತಿರುವ ಹೂ ಇವೆ ನೋಡಿ, ಎನ್ನುತ್ತಾರೆ. ಎಂಥಹ ಚಿಕ್ಕ ಚಿಕ್ಕ ಸಂಗತಿಗಳೂ ಕವಿಯನ್ನು ಮುದಗೊಳಿಸುತ್ತವೆ. ಸಂತೋಷವನ್ನು ಕೊಡಲು ದೊಡ್ಡ ದೊಡ್ಡ ಸಂಗತಿಗಳೇ ಬೇಕೆಂದಿಲ್ಲ. “ಹಾಡುತಿರುವ ಹಕ್ಕಿಗಳು, ಆಡುತಿರುವ ಮಕ್ಕಳು, ಓಡುತಿರುವ ನದಿ, ಕಾಡುತಿರುವ ಕನಸು, ಸಾಕಲ್ಲವೇ ಮುದ ಪಡೆಯಲು?” ಎಂದು ಕವಿ ಒಂದು ಚುಟುಕಿನಲ್ಲಿ ಕವಿ ಪ್ರಶ್ನಿಸುತ್ತಾರೆ. ಬಂಡಾಯ, ಹೋರಾಟ ಇವು ಬೇಕೆನಿಸಿÀದರೂ ಅಂತರAಗದ ಪಿಸು ಮಾತು ಕೇಳುವದು ಅತ್ಯಗತ್ಯ ಎನ್ನುವದು ಕವಿಯ ಆಸೆ. ಇಂದು ಹೋರಾಟದ ಭರದಲ್ಲಿ ಅಂತರAಗದ ಮಾತುಗಳು ಕೇಳದೇ ಇರುವದರ ಬಗೆಗೂ ಅವರು ವಿಷಾದಿಸುತತ್ತಾರೆ.

       ತೊಂಬತ್ತರ ಹೊಸ್ತಿಲಲ್ಲಿ ಇರುವ ಕವಿಗೂ ಬೆಳಗಾವಿಗೂ ಬಿಡದ ನಂಟು. ಅವರು ಧಾರವಾಡ ಜಿಲ್ಲೆಯಲ್ಲಿ ಜನಿಸಿ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿ, ಕಾವ್ಯವನ್ನು ಅಲ್ಲಿಯೇ ಕಟ್ಟಲು ಆರಂಭಿಸಿದವರಾದರೂ ಬಂದು ನೆಲೆಸಿದ್ದು ಬೆಳಗಾವಿಗೆ. ಹಿರಿಯ ವಿದ್ವಾಂಸರಾದ ಡಾ.ವಿ.ಎಸ್. ಮಾಳಿಯವರು ಹೇಳುವಂತೆ “ಪಂಪನಿಗೆ ಪ್ರಾಣ ಬನವಾಸಿ, ಜಿನದತ್ತರಿಗೆ ಜೀವ ಬೆಳಗಾವಿ” ಅವರು ಬೆಳಗಾವಿಯನ್ನು ಕುರಿತು

ಬಳೆ ಸದ್ದಾಲಿಸಿದೊಡಂ

ಪೆಣ್ದನಿ ಕೇಳ್ದೊಡಂ

ಸೆರಗಿನ ಗಾಳಿ ತಾಗಿದೊಡಂ

ನೆನೆವುದೆನ್ನ ಮನಂ

ಬೆಳಗಾವಿ ದೇಶಮಂ

ಎನ್ನುತ್ತಾರೆ. ಇವು ಡಾ. ಮಾಳಿಯವರು ಹೇಳುವಂತೆ “ ಕೇವಲ ಅಭಿಮಾನದ ಅನುಕರಣೆಯಲ್ಲ. ಅದು ವೇಣುನಾದದ ಜೀವಧ್ವನಿ” ಯಾಗಿವೆ. ಒಂದು ರೀತಿಯಲ್ಲಿ ಕವಿಯನ್ನು ‘ಬೆಳಗಾವಿಯ ಬೆಳಕು’ ಎಂದರೂ ನಡೆದೀತು. ಎಂದೆAದಿಗೂ ‘ನನ್ನ ಗುರು ಬಸವಣ್ಣ! ನನ್ನ ದೇವರು ಸೂರ್ಯ’ ಎಂದು ಸಾರುತ್ತಾ ಬಾಳಿದ ಕವಿ ಯಾವಾಗಲೂ ಹಾರೈಸಿದ್ದು

ಬೆಳಗಿನ ಕಣ್ಣು ತೆರದಿಟ್ಟು ನಡೆಯೋಣ

ಕರುಳಿನ ಮಾತೆಲ್ಲ ಕಿವಿಗೊಟ್ಟು ಕೇಳೋಣ

ಎಂದು ಸಾರಿದವರು. ಕರುಳಿನ ಮಾತು ಕೇಳಲು ನಮ್ಮನ್ನೆಲ್ಲ ಕರೆದ ಕವಿ ನಮ್ಮ ಹೆಮ್ಮೆಯೂ ಆಗಿದ್ದಾರೆ.

   “ ದೇಸಾಯಿಯವರು ಕನ್ನಡದ ಗರಿಮೆ; ದೇಸಾಯಿಯವರು ಕನ್ನಡದ ಹಿರಿಮೆ. ಹಿರಿಯ ಕವಿ ಕಣವಿಯವರು ಹೇಳುವಂತೆ ಜಿನದತ್ತರಿಗೆ ‘ಬೊಗಸೆಯಲಿ ಬೆಳಕು ಹಿಡಿಯುವ  ತವಕ; ಹೆಜ್ಜೆ ಸಾಲಿನಲಿ ಗೆಜ್ಜೆಕಟ್ಟುವ ಗಮಕ’ , ‘ಕವಿತಾ ಗುಣಾರ್ಣª’Àನ ಸಂತತಿಗೆ ಸೇರಿದ ‘ಕವಿತಾ ಸುಧಾರ್ಣವ’ ಜಿನದತ್ತ  ದೇಸಾಯರು ನೂರು ‘ಮಾಗಿ’ ಕಾಣಲಿ ಅವರ ಚಂದ್ರ ಕನ್ನಡವನ್ನು ಬೆಳಗಲಿ” (ಡಾ. ವಿ.ಎಸ್.ಮಾಳಿ) ಎಂಬ  ವಿದ್ವಾಂಸರ ಮಾತಿನೊಂದಿಗೆ ಹಾರೈಸುತ್ತೇನೆ.  


ಡಾ.ವೈ.ಎಂ.ಯಾಕೊಳ್ಳಿ

Leave a Reply

Back To Top