ಯುಗಾದಿ

ಯುಗಾದಿ

ಭಾರತಿ ಕೇದಾರಿ ನಲವಡೆ

Ugadi - Wikipedia

ಸನಾತನ ಸಂಸ್ಕೃತಿಯ ನಾವಿನ್ಯತೆಯ ನವವರ್ಷದ ಆದಿ
ಸಂಭ್ರಮದವೃಷ್ಟಿ ಹಸಿರ ಚಿತ್ತಾರದಿ ಮಿಂದು ಮನವ ತಣಿಸಿದೆ ಯುಗಾದಿ
ಹೊಸತನ ನೆನಪಿಸಿದೆ ಕನಸ ಕಟ್ಟುವ ಅವಿರತದ ನವರಂಗದ ಹಾದಿ
ಮನಮನದ ಬೆಸುಗೆಗೆ ಪ್ರೀತಿ ನಂಬಿಕೆಗಳ ಸಂಜೀವಿನಿಯೇ ಬುನಾದಿ//

ಸಿಹಿಕಹಿಯ ಸಮರಸದ ಬಲವಿರೆ ಜೀವನಕೆ ತಾಳ್ಮೆಇರೆ ಧನ್ಯ
ಸುಖದುಃಖದ ಪಯಣದಿ ಯಾವತ್ತೂ ಮಾನವೀಯತೆಯೇ ಮಾನ್ಯ
ಬೇವು-ಬೆಲ್ಲದ ಸಮಪಾಕವಿರದೇ ಎಂದಿಗೂ ಬದುಕದು ಶೂನ್ಯ
ಪ್ರತಿಕ್ಷಣವ ವೃಥಾವ್ಯಯಿಸದೇ ಸತ್ಕಾರ್ಯದಿ ಸಾಧನೆಗೆ ಮುನ್ನುಗ್ಗು ಗಣ್ಯ//

ಕೋಮುದಳ್ಳುರಿಯಲಿ ಹೊತ್ತುರಿಯುತಿದೆ ಜಗವಿಂದು
ಮಾಡದ ಪಾಪಕೆ ಬಲಿಯಾಗಿವೆ ಮುಗ್ಧಜೀವಗಳಿಂದು
ಆತ್ಮೀಯತೆಯ ಕೊಲೆಮಾಡಿ ಕ್ರೌರ್ಯದ ರುದ್ರ ನರ್ತನ ಎಂದೂ
ನವವರುಷದ ಶುಭದೊಸಗೆ ಸಾರಿದೆ ಶಾಂತಿಯನಿಂದು//

ಹೊಸ ಚಿಗುರ ಅಪ್ಪುವ ಹಳೆಬೇರಿನ ಬಂಧ
ಸಾಗಲಿ ವಿಶ್ವಪಥದೆಡೆಗೆ ಯುಗಾದಿಯ ಅನುಬಂಧ
ಸೌಹಾರ್ದತೆಯ ಸಿಹಿ ಸುಗ್ಗಿಗೆ ಬೆಸುಗೆಯ ಸಂಬಂಧ
ಉಸಿರಿರುವವರೆಗೂ ಹಸಿರಾಗುವ ಹೊಸತನದ ಸಮರಸದ ಈ ಬಂಧ//


2 thoughts on “ಯುಗಾದಿ

  1. ತುಂಬಾ ಅರ್ಥಗರ್ಭಿತ ಸಮಯೋಚಿತ ಕವನ ಅಭಿನಂದನೆಗಳು

  2. ಯುಗಾದಿಯ ಶುಭಾಶಯಗಳು… ಕವಿತೆಯಂತೆ ಯುಗಾದಿ ಎಲ್ಲರ ಮನಬೆಳಗಲಿ…

Leave a Reply

Back To Top