ಕಾವ್ಯ ಸಂಗಾತಿ
ಗದ್ದಲದ ಸಂತೆ
ರುಕ್ಮಿಣಿ ನಾಗಣ್ಣವರ
ಗೊಂದಲಗಳು
ಗದ್ದಲದ ಸಂತೆ ತೆರೆದಿರಲು
ಮೌನಗೀತೆ ರಾಗ ನುಡಿಸುತ್ತದೆ
ಭಾವಗಳ ಏರು ಇಳಿಕೆಗಳಿಗೆ
ಭವಭಾರ ಹಗಲುಗಳು
ನಿಟ್ಟುಸಿರು ಘನವಾಗುತ್ತ
ಕಳೆದುಹೋಗುತ್ತದೆ ಅಥವಾ
ಕಣ್ಣಹನಿ ಜಾರಿಗೊಡದ
ತಂತ್ರದ ಬೆನ್ನು ಬೀಳುತ್ತದೆ
ಕತ್ತಲಿನ ಬಣ್ಣ ಗಾಢವಾದಂತೆ
ನವೆಬಿಡುವ ನೆನಪಿಗೆ ಯಾವ ಮದ್ದು?
ಬಂಧ-ಸಂಬಂಧ ಹೃದಯದ ಎಲ್ಲದಕೂ
ಖಾಲಿತನವ ಬಳಿದುಕೊಂಡು
ನಿದಿರೆಯ ನಟಿಸುತ್ತದೆ ಹಕ್ಕಿ
ಎಂದಿನಂತಿನ ಬೆಳಗುಗಳಿಗೆ
ಆತ್ಮಕಥೆಗಳ ಕಮ್ಮನೆ ವಾಸನೆ
ಮನಸು ಹೊಕ್ಕಿ ಉಸಿರಿಗಂಟಿಕೊಳ್ಳುತ್ತವೆ ನೆನಪುಗಳು
ಮತ್ತದೇ ವೃತ್ತ….
ಗೊಂದಲಗಳು
ಗದ್ದಲದ ಸಂತೆ!