ಬದುಕು ಬದಲಾಯಿಸುವ

ಕಾವ್ಯ ಸಂಗಾತಿ

ಬದುಕು ಬದಲಾಯಿಸುವ

ಉತ್ತಮ. ಎ.ದೊಡ್ಮನಿ

ಕನಸುಗಳು ಮಾರಾಟಿಕಿವೆ

ಬದುಕು ಬದಲಾಯಿಸುವ
ಕನಸು ತುಂಬಿಕೊಂಡು
ಮಾರಾಟಕೆ ಹೊರಟಿರುವನು
ಇಲ್ಲಿ ಮೀಸಲಾತಿ ಹಂಗಿಲ್ಲವೆಂದು
ಬುಟ್ಟೆ ತುಂಬಾ ನೂರಾರು ಹೋಸ
ಆಶೆಗಳು ಹೊತ್ತು ಮಾರಲು

ಅವರವರ ಯೋಗ್ಯತೆಗೆ ತಕ್ಕಂತ್ತೆ
ತಗೆದು ಕೋಳ್ಳಬಹುದು ಇದ್ದವರು
ಇಲ್ಲದವರು ಗುಡಿಸಲು ಎದುರಿರುವ
ಚರಂಡಿ ಎದುರೇ ನಿಂತ್ತಿ ನೋಡಬಹುದು

ಆದರೇ ಅವರಿಗೂ ಒಂದು ಶರತಿದೆ
ನೀವು ಕನಸು ಕಾಣಂಗಿಲ್ಲವೆಂದು
ಬುಟ್ಟೆ ಮೇಲೆ ದಪ್ಪಕ್ಷರಗಳಿಂದ ಕಣ್ಣಿಗೆ
ಕಾಣುವಂತ್ತೆ ಕೆಂಪು ಮಸಿಯಿಂದ ಕೆತ್ತಲಾಗಿದೆ
ಚರಂಡಿ ವಾಸನೆ ಖಬುರಿಲ್ಲದೆ
ನಮಗೂ ಏನಾದರೂ ಸಿಗಬಹುದೆಂದು
ನಿಂತ್ತಿರುವರು ಬರೆದಿದ್ದು ಒದಲಾಗದೆ

ಆಶೆಗಳೇನು ದೊಡ್ಡುವಿಲ್ಲ ಮನಿ ಜೋತಿ ಅಕ್ಷರ,
ರಸ್ತೆ ಪಕ್ಕ ನಲ್ಲಿ, ನಿರೋಗಲು ಹಾದಿ,
ದುಡಿಯಲು ಕೆಲಸ, ತಕ್ಕಂತ್ತೆ ಸಂಬಳ ಇಷ್ಟೂ
ಸಾಕು ಬದುಕಲು ನಿಮ್ಮಷ್ಟು ಬೆಕ್ಕಿಲ್ಲವೆಂದು
ಹೇಳೋದು ಕಣ್ಣಲ್ಲಿ ಎದ್ದು ಕಾಣುತ್ತಿದೆ
ಆದರೆ ಗಂಟಲಿನ ಧನಿ ಬಿತ್ತಿ ಹೋಗಿದೆ

ಮಾರುವನು ಮಾತ್ರ ಜೋರಾಗಿ ಚಿರುತ್ತಾ
ಕನಸುಗಳು ಮಾರಾಟಕಿವೆಂದು ಕೂಗುತ್ತಿದ್ದಾನೆ
ಸತ್ತ ಆಶೆಗಳು ಹುಟ್ಟಿಸಿ ಮತ್ತೆ ಕೊಲ್ಲುತ್ತಿದ್ದಾನೆ
ಇದೆಲ್ಲ ಚರಂಡಿ ಜನರಿಗೆ ದಿನಾಲು
ಮಾಮೂಲಿಯಾಗಿದೆ ಕನಸುಗಳ ಜೊತೆ ಬದುಕುವದು


One thought on “ಬದುಕು ಬದಲಾಯಿಸುವ

Leave a Reply

Back To Top