ಸಿದ್ದಗಂಗೆಯ ಬೆಳಕು

ಶ್ರೀಗಳ ನೆನಪಿಗಾಗಿ

ಸಿದ್ದಗಂಗೆಯ ಬೆಳಕು

ಅನುಸೂಯ ಯತೀಶ್.

Shivakumara Swami, the Siddaganga Mutt chief pontiff every PM from Indira  to Modi courted

ಹಸಿದ ಒಡಲಿಗೆ ತುತ್ತನಿತ್ತು
ಜ್ಞಾನದಾಹಕೆ ವಿದ್ಯೆಯನಿತ್ತು
ದೇಹಿಯೆಂದವಗೆ ಆಸರೆಯನಿತ್ತ
ತ್ರಿವಿಧ ದಾಸೋಹಿ ಮಹಾಪುರುಷರಿವರು

ಮಕ್ಕಳಲ್ಲೆ ದೈವ ಕಾಣುತ
ಪ್ರೀತಿ ಪ್ರೇಮ ಧಾರೆಯೆರೆಯುತ
ಅನಾಥರೆಂಬ ಭಾವ ದೂಡುತ
ಪೊರೆದ ದಿವ್ಯ ಚೇತನಯಿವರು

ನಡೆವ ದಾರಿ ಬೋಧಿಸದೆ
ನಡೆದು ಪಥವ ಸೃಷ್ಟಿಸುತ
ಜಾತಿ ಮತ ಪಂತ ಎಣಿಸದ
ಸರ್ವಜನಾಂಗದ ಕಣ್ಮಣಿಯಿವರು

ತ್ರಿವಿಧ ದಾಸೋಹ ಪಡೆದ ಮಕ್ಕಳಿಂದು
ನಾಡು ನುಡಿಯ ಬೆಳಗುತಿಹರು ಪ್ರಣತಿಯಾಗಿ
ಪ್ರತಿ ಮನೆಯಲು ದೀಪ ಹಚ್ಚುವರು
ಮನೆ ಬೆಳಗಿದ ನೈಜ ದೈವಯಿವರು

ಸೇವೆಯೇ ಸಕಲ ಧರ್ಮಗಳ ಮೂಲವೆನುತ
ಮೃದು ಮಧುರ ಮಾತಿನ ತಪವಗೈಯಿರೆನುತ
ಸಹಜ ಪ್ರೀತಿ ಕಲ್ಲು ಕರಗಿಸುವುದೆನುತ
ಕಟುಕರಲ್ಲೂ ಕರುಣೆ ಪ್ರೀತಿ ಬಿತ್ತಿದ ಕರುಣಾಮಯಿವರು

ಹಸಿದ ಮನಕೆ ಪ್ರಾರ್ಥನೆಯು ಪ್ರಸಾದವೆನುತ
ಆತ್ಮಬಲವೇ ಸಾಕ್ಷಾತ್ಕಾರದ ಮೂಲವೆನುತ
ಶ್ರಮದ ಮೌಲ್ಯ ಎತ್ತಿ ಹಿಡಿಯುತ
ದುಡಿಮೆಯೇ ಜೀವನದ ಪರಮ ಮೌಲ್ಯವೆಂದ ಕಾಯಕ ಯೋಗಿಯಿವರು

ಸಮಾಜದ ಏಳಿಗೆಗಾಗಿ ಜ್ಞಾನದ ಬೀಜ ಬಿತ್ತುತ
ಶಿಕ್ಷಣವನ್ನು ದಾಸೋಹದ ರೀತಿಯಲಿ ಪಸರಿಸುತ
ಜೋಳಿಗೆ ಹಿಡಿದು ಧರ್ಮಸಂಸ್ಥೆ ಕಟ್ಟಿದ
ಲೋಕ ಕಲ್ಯಾಣಕ್ಕಾಗಿ ನಿತ್ಯ ಶ್ರಮಿಸಿದ ಜ್ಯೋತಿಯಿವರು

ಸ್ತ್ರೀಯರು ಸಮಾಜದ ಕಣ್ಣುಗಳೆನುತ
ಹೆಣ್ಣಿನ ಸಂಸ್ಕಾರವೇ ಧರ್ಮತತ್ವವೆನುತ
ಧರ್ಮವು ಗುಡಿ ಗೋಪುರಗಳಲಿಲ್ಲ
ಮನುಷ್ಯನ ಹೃದಯವೇ ಧರ್ಮ ಮಂದಿರವೆಂದ ಜಂಗಮರಿವರು

ಎರಡು ಮನೆಗಳ ಬೆಳಕಿನ ಹಬ್ಬ ವಿವಾಹವೆನುತ
ಅದ್ದೂರಿಗಳಿಲ್ಲದ ಸಮಾರಂಭ ಪ್ರೋತ್ಸಾಹಿಸುತ
ಸೇವೆ ಪ್ರಚಾರದ ಸರಕಲ್ಲ ವೆನುತ
ಎಲೆಮರೆ ಕಾಯಿಯಂತೆ ದುಡಿದ ತ್ಯಾಗಿಯಿವರು

ಸಕಲ ಜೀವಿಗಳಲ್ಲು ಸಿದ್ದೇಶ್ವರರ ಕಾಣುತ
ಭಕ್ತರ ಭಕ್ತಿಯಲ್ಲಿ ಮಿಂದೇಳುತ
ಬಸವ ತತ್ವವ ನಾಡಿನ ತುಂಬೆಲ್ಲ ಪಸರಿಸುತ
ಸೇವೆಗೈದ ಶತಾಯುಷಿ ಸಿದ್ಧಿ ಪುರುಷರಿವರು

ತನುವಿನ ತುಂಬೆಲ್ಲ ವಿಭೂತಿ ದರಿಸುತ
ಇಷ್ಟಲಿಂಗ ಪೂಜೆಯಲಿ ಮೈಮರೆಯುತ
ಗುರು ಲಿಂಗ ಜಂಗಮರನು ಆರಾಧಿಸುತ
ಶಿವನಲ್ಲಿ ಲೀನವಾದ ಶಿವಯೋಗಿಯಿವರು


Leave a Reply

Back To Top