ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಸೆಪ್ಟಿಕ್ ಟ್ಯಾಂಕು ಕ್ಲೀನಿಂಗಿಗಾಗಿ ಸಂಪರ್ಕಿಸಿ

ಬಿ.ಶ್ರೀನಿವಾಸ

Delhi: Government authorities deny responsibility of five workers who died  cleaning a septic tank

ಹೊಟ್ಟೆ ಹಸಿದಿದ್ದರೂ ,
ಹಸಿದವರ ಕಂಡು
ಕಣ್ಣೀರು ಹಾಕಿದ ತಾಯಂದಿರ ಮಕ್ಕಳು ನಾವು .

ಹೊತ್ತು ತಿರುಗಿದೆವು ನಾವು,

ಅನಂತನಾಗರ ಬರ,
ರಂಗಣ್ಣನ ಪಬ್ಲಿಕ್ಕಿನ ಮಾತು
ಬೆಳವಾಡಿಯ ಡೈಲಾಗು
ಕಣ್ಣನ್ ಮಾಮನ ಡೆಲಿವರಿ
ಎಲ್ಲವಕ್ಕೂ ಕಟ್ಟಬೇಕಿದೆ ಕರ!

ಅವರು ದೈತ್ಯರು
ನಾವು ದಲಿತರು!
ಎನ್ನುವುದೂ ಹಳೆಯ ಮಾತು!

ಭಾರತದ ಸೆಪ್ಟಿಕ್ ಟ್ಯಾಂಕು ತುಂಬಿದೆ
ಎನ್ನೋದೂ ಈಗಿನ ಹೊಸ ಮಾತು!

ಮಲ ಹೊರುವ ಪದ್ಧತಿ ನಿಷೇಧಿಸಿದೆ
ಸರಕಾರದ ಜಾಹೀರಾತು,
“ಸೆಪ್ಟಿಕ್ ಟ್ಯಾಂಕು ಕ್ಲೀನಿಂಗಿಗಾಗಿ ಸಂಪರ್ಕಿಸಿ”
ಬೋರ್ಡಿನ ಕೆಳಗೇ ಇದೆ ನಂಬರು!


About The Author

Leave a Reply

You cannot copy content of this page