ಪುಸ್ತಕ ಸಂಗಾತಿ

ಅಂಬೇಡ್ಕರ್ (ಭಾಗ-11)

“ಭಾರತೀಯ ರಿಜರ್ವ ಬ್ಯಾಂಕ್ ಸ್ಥಾಪನೆಗೆ

ಅಂಬೇಡ್ಕರ ಸಾಕ್ಷಿ”

   ಭಾರತದಲ್ಲಿನ ಹಣಕಾಸು ವ್ಯವಸ್ಥೆಯ ಪರಿಶೀಲನೆಗಾಗಿ ಮತ್ತು ಹಣ ಚಲಾವಣೆಗೆ ಸಂಬಂದಿಸಿದಂತೆ ಸುಧಾರಣೋಪಾಯಗಳನ್ನುಸೂಚಿಸಲು ಬ್ರಿಟಿಷ ಸರ್ಕಾರವು 1924-25 ರಲ್ಲಿ “ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಆ್ಯಂಡ್ ಫೈನಾನ್ಸ” ಎಂಬ ಆಯೋಗವನ್ನು ರಚಿಸುವುದು. ಹಿಲ್ಟನ್ ಯಂಗ್ ರವರು ಆಯೋಗದ ಅಧ್ಯಕ್ಷರಾಗಿದ್ದರಿಂದ ಅದು ಹಿಲ್ಟನ್ ಯಂಗ್ ಆಯೋಗವೆಂದು ಪ್ರಸಿದ್ದಿ ಪಡೆಯುತ್ತದೆ. ಹಿಲ್ಟನ್ ಯಂಗ್ ಆಯೋಗವು ಭಾರತಕ್ಕೆ ಬಂದು ಬ್ಯಾಂಕಿಂಗ್ ಸುಧಾರಣೆಗಾಗಿ ಸಾರ್ವಜನಿಕರಿಂದ ಸಲಹೆ ಸೂಚನೆ ನೀಡಲು ಕೆಲವು ಪ್ರಶ್ನೆಗಳನ್ನು ಬಹಿರಂಗವಾಗಿ ಪ್ರಚೂರಪಡಿಸಿ ಸಾಕ್ಷಿ ನುಡಿಯಲು ಮನವಿಪತ್ರ ಹೊರಡಿಸುವುದು.

ಮನವಿಪತ್ರದಲ್ಲಿ ಭಾರತದ ಹಣಪದ್ಧತಿ ಮತ್ತು ಹಣಕಾಸಿನ ಆಡಳಿತದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಸಮಯ ಕೂಡಿಬಂದಿದೆಯೇ? ರೂಪಾಯಿ ಮೌಲ್ಯದಲ್ಲಿ ಸ್ಥಿರೀಕರಣ ಏರಿಳಿತದಿಂದ ವಾಣಿಜ್ಯ ಉದ್ದಿಮೆ ಮತ್ತು ಒಕ್ಕಲು ತನಗಳ ಮೇಲೆ ಯಾವ ಪರಿನಾಮಗಳಾಗುವವು? ಆಯ್ಕೆ ಮಾಡಿದ ವಿನಿಮಯ ದರ ಕಾಯ್ದುಕೊಂಡು ಹೋಗಲು ಯಾವ ಕ್ರಮಗಳು ಅವಶ್ಯಕವಾಗಿವೆ? ಸುವರ್ಣನಾಣ್ಯ ಕಾಯ್ದಿಟ್ಟ ನಿಧಿಯ ರಚನೆ ಹೇಗಿರಬೇಕು? ಕಾಗದದ ಹಣವನ್ನು ಚಲಾವಣೆಗೆ ತರಲು ಯಾವ ಕ್ರಮಗಳನ್ನು ಅನುಸರಿಸಬೇಕು? ಅದರ ಅಧಿಕಾರವನ್ನು  ಯಾರಿಗೆ ವಹಿಸಿ ವಹಿಸಿಕೊಡಬೇಕು? ಇಂಪರಿಯಲ್ ಬ್ಯಾಂಕುಗಳ ಕಾರ್ಯನಿರ್ವಹಣೆ ಹೇಗಿರಬೇಕು? ಹೀಗೆ ಅನೇಕ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ಉತ್ತರಿಸಲು ಕೇಳಿಕೊಳ್ಳಲಾಗಿರುತ್ತದೆ.

ಡಾ. ಅಂಬೇಡ್ಕರರು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ನಿರ್ದಿಷ್ಟ ಸಲಹೆ ಸೂಚನೆಯಗಳನ್ನು ಲಿಖಿತವಾಗಿ ಹಿಲ್ಟನ್-ಯಂಗ್ ಆಯೋಗಕ್ಕೆ ಸಲ್ಲಿಸುತ್ತಾರೆ. ಆಯೋಗದ ಅಧ್ಯಕ್ಷರು ಅಂಬೇಡ್ಕರರನ್ನು ಭಾರತದ ಬ್ಯಾಂಕಿಂಗ ವ್ಯವಸ್ಥೆ ಕುರಿತು ವಿಚಾರಿಸಲು ಕರೆಯುತ್ತಾರೆ. 1925 ಡಿಸೆಂಬರ್ 15 ರಂದು ಅಂಬೇಡ್ಕರರು ಖುದ್ದಾಗಿ ಹಿಲ್ಟನ್-ಯಂಗ್ ಆಯೋಗದ ಮುಂದೆ ಹಾಜರಾಗಿ ಭಾರತದ ಹಣ ವ್ಯವಸ್ಥೆ ಮತ್ತು ಹಣಕಾಸಿನ ಆಡಳಿತದ ಕಾರ್ಯಶೈಲಿ ಹೇಗಿರಬೇಕೆಂಬುದರ ಕುರಿತು ಸಾಕ್ಷಿ ನುಡಿಯುತ್ತಾರೆ ಆಯೋಗದಿಂದ ಅವರಿಗೆ ಸುದೀರ್ಘವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಶುದ್ಧ ಸುವರ್ಣ ಪ್ರಮಿತಿ, ಬಂಗಾರದ ಹಣ ಚಲಾವಣೆ ವ್ಯವಸ್ಥೆ, ಬೇರೆ ಬೇರೆ ದೇಶಗಳಲ್ಲಿನ ಹಣ ಚಲಾವಣೆ ವ್ಯವಸ್ಥೆ, ಚಿನ್ನದ ಗಣಿಗಳ ಉತ್ಸಾವನೆ ಕುರಿತು, ಹಣದುಬ್ಬರ ತಡೆಯುವ ಕ್ರಮ, ಕಾಗದದ ಹಣ ವ್ಯವಸ್ಥೆ, ಅಧಿಕಾರಿಗಳ ಹೊಣೆಗಾರಿಕೆ, ಕಾಯ್ದಿಟ್ಟ ಸುವರ್ಣ ನಿಧಿಯ ಬಳಕೆ, ಆಂತರಿಕ ಹಣವನ್ನು ಬಂಗಾರವನ್ನು ವಿದೇಶಿ ಹಣದ ರೂಪದಲ್ಲಿ ಪರಿವರ್ತಿಸುವ ಹೊಣೆ, ದೇಶದ ಹಣದ ವಿನಿಮಯ ದರ, ಆಂತರಿಕ ಬೆಲೆಗಳು, ಆಂತರಿಕ ವ್ಯಾಪಾರದೊಂದಿಗೆ ವಿದೇಶಿ ವ್ಯಾಪಾರ, ದೇಶದೊಳಗೆ ಮಾರಾಟವಾಗುವ ವಸ್ತುಗಳ ಬೆಲೆಗಳಿಗೂ ಹಾಗೂ ವಿದೇಶಿ ವ್ಯಾಪಾರದಲ್ಲಿ ಸೇರುವ ವಸ್ತುಗಳ ಬೆಲೆಗಳಿಗೂ ಇರುವ ಸಂಭಂದ, ಆಂತರಿಕ ಹಣದ ಗಾತ್ರ, ಕಾಯ್ದಿಟ್ಟ ನಿಧಿ, ಹಣದ ಮೌಲ್ಯ, ಬಂಗಾರದ ಬಳಕೆ ಹೆಚ್ಚಳ, ಹಣದ ಕುಗ್ಗುವಿಕೆ, ಇಳಿಯುತ್ತಿರುವ ಬೆಲೆಗಳ ನಿಯಂತ್ರಣ, ರೂಪಾಯಿಯ ಅನುಪಾತದಲ್ಲಿ ಏರಿಕೆ ಮತ್ತು ಇಳಿತಗಳ ಕುರಿತು ಹಲವಾರು ವಿಷಯಗಳನ್ನು ಚರ್ಚಿಸಲಾಗುತ್ತದೆ. ಡಾ. ಅಂಬೇಡ್ಕರರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾ ಪರಿಹಾರ ಸೂಚಿಸುತ್ತಾರೆ. ಅವರೆ ಬರೆದಿದ್ದ ರೂಪಾಯಿ ಸಮಸ್ಯೆ ಪುಸ್ತಕವು ಭಾರತದ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಹೇಳುವ ಒಂದು ಮಹತ್ಮದ ಮಾರ್ಗದರ್ಶಕ ಗ್ರಂಥವಾಗಿದ್ದು ಅದರ ಉಪಯೋಗ ತೆಗೆದುಕೊಳ್ಳಲು ತಿಳಿಸುತ್ತಾರೆ. ಆಯೋಗದ ಅದ್ಯಕ್ಷರು ಅಂಬೇಡ್ಕರರಿಗೆ ಡಾಕ್ಟರರೇ ನೀವು ಸಂಪೂರ್ಣ ಸಹಾಯ ನೀಡಿದ್ದಿರಿ ಅದಕ್ಕಾಗಿ ಬಹಳ ಕೃತಜ್ಞರಾಗಿದ್ದೇವೆ ಎಂದು ನುಡಿಯುತ್ತಾರೆ.

 ದೆಹಲಿಯಲ್ಲಿ 1925 ನವೆಂಬರ್ 23 ರಂದು ಮೊದಲ ಸಭೆ ನಡೆಸಿದ ಹಿಲ್ಟನ್-ಯಂಗ್ ಆಯೋಗವು ಮುಂಬಯಿ, ಕಲಕತ್ತಾಗಳಲ್ಲಿ ಒಟ್ಟು ಐವತ್ತು ಸಭೆ ನಡೆಸಿ 46 ಸಾಕ್ಷಿಗಳನ್ನು ಪಡೆಯುತ್ತದೆ. ನಂತರ ಲಂಡನನಲ್ಲಿ 1 ನೇ ಮಾರ್ಚ 126 ರಿಂದ 12 ನೇ 1926 ರ ವರೆಗೆ ಐವತ್ತು ಸಭೆಗಳನ್ನು ನಡೆಸುತ್ತಾರೆ. 17 ಸಾಕ್ಷಿಗಳನ್ನು ಪಡೆಯುತ್ತಾರೆ, ಸುದೀರರ್ಘ ಅಧ್ಯಯನ ಕೈಗೊಂಡು ವರದಿ ತಯಾರಿಸಿದ ಆಯೋಗವು ಜನಪ್ರೀಯವಾಗಿ ರಾಯಲ್ ಕಮಿಶನ್ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯುತ್ತದೆ. ಹಿಲ್ಟನ್-ಯಂಗ್ ಆಯೋಗವು ತನ್ನ ವರದಿಯನ್ನು ಸರಕಾರಕ್ಕೆ ಒಂದನೇ ಜುಲೈ 1926 ರಂದು ಸಲ್ಲಿಸುತ್ತದೆ, ಬ್ರಿಟಿಷ ಸರಕಾರವು  ಅಸೆಂಬ್ಲಿಯಲ್ಲಿ ವರದಿಯನನ್ನು ಮಂಡಿಸಿ 1934ರಲ್ಲಿ ರಿಸರ್ವ ಬ್ಯಾಂಕ ಆಫ್ ಇಂಡಿಯಾ ಕಾಯ್ದೆಯನ್ನು ಜಾರಿಗೆ ತರುತ್ತದೆ. ಈ ಕಾಯ್ದೆಯನ್ವಯ ಭಾರತೀಯ ರಿಸರ್ವ ಬ್ಯಾಂಕ ಅಂದರೆ ಭಾರತದ ಕೇಂದ್ರೀಯ ಬ್ಯಾಂಕನ್ನು 1 ನೇ ಎಪ್ರಿಲ್ 1935 ರಂದು ಕೊಲ್ಕತ್ತದಲ್ಲಿ ಸ್ಥಾಪಿಸಲಾಯಿತು, ಓಸ್ಬರ್ನ್ ಸ್ಮಿತ್ ಮೊದಲ ಗವರ್ನರ ರಾಗುತ್ತಾರೆ. 1937 ರಲ್ಲಿ ಶಾಶ್ವತವಾಗಿ ಮುಂಬಿಯಿಗೆ ಸ್ಥಲಾಂತರಗೊಳಿಸಲಾಗುತ್ತದೆ. ಸ್ವಾತಂತ್ರ್ಯನಂತರ ಜನೆವೆರಿ 1, 1949 ರಂದು ರಾಷ್ಟ್ರೀಕೃತಗೊಂಡು ಸರ್ಕಾರಿ ಸ್ವಾಮ್ಯದ ಕೇಂದ್ರ ಬ್ಯಾಂಕ ಆಗಿ ಕಾರ್ಯನಿರ್ವಹಿಸುತ್ತದೆ. ಮೊದಲಿಗೆ ಸಿಂಹ ಮತ್ತು ಪಾಮ್ ಟ್ರಿ ಚಿಹ್ನೆಯನ್ನು ಹೊಂದಿದ್ದ ಆರ್.ಬಿ.ಆಯ್, ನಂತರ ರಾಷ್ಟ್ರ ಪ್ರಾಣಿ ಹುಲಿಯನ್ನು ಸಿಂಹದ ಚಿಹ್ನೆಯ ಬದಲಾಗಿ ಆಯ್ಕೆ ಮಾಡಿಕೊಂಡಿರುತ್ತದೆ.

 ಬ್ಯಾರಿಸ್ಟರ್ ಡಾ. ಅಂಬೇಡ್ಕರರು ನುಡಿದ ಸಾಕ್ಷಿ ಅವರು ಬರೆದ ಮಹಾ ಪ್ರಬಂದ  ಅಂಬೇಡ್ಕರರು ರೂಪಾಯಿಯ ಸಮಸ್ಯೆ ಅದರ ಹುಟ್ಟು ಮತ್ತು ಪರಿಹಾರ ಇದು ಭಾರತೀಯ ನಾಣ್ಯ ಪದ್ದತಿ ಬ್ಯಾಂಕಿಂಗನ ಇತಿಹಾಸದಲ್ಲಿ ಒಂದು ಮೈಲಿಗಲಾಗಿದ್ದು ಇದರಿಂದ ಭಾರತೀಯ ರಿಸರ್ವ ಬ್ಯಾಂಕ ತನ್ನ ಕಾರ್ಯಶೈಲಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡಿದ್ದು ಡಾ. ಅಂಬೇಡ್ಕರರು ಈ ದೇಶದ ಅರ್ಥಶಾಸ್ತ್ರದ ಪಿತಾಮಹರೆಂಬುವುದನ್ನು ಸಾಬೀತು ಪಡಿಸುತ್ತದೆ.

      ವಿಶ್ವ ಪ್ರಸಿದ್ದ ಜ್ಞಾನಿಯಾಗಿದ್ದರೂ ಅಂಬೇಡ್ಕರರು ಬಹಳ ಸರಳ ಜಿವನವನ್ನು ಸಾಗಿಸುತ್ತಿದ್ದರು. ವ್ಯಯಕ್ತಿಕ ಜಿವನ ನೋವಿನಿಂದ ತುಂಬಿತ್ತು. ಹಿರಿಯಮಗ ಯಶವಂತ ಪದೆ ಪದೆ ಅನರೋಗ್ಯಕ್ಕೆ ತುತ್ತಾಗುತ್ತಿರುವುದು ಅಂಬೇಡ್ಕರ್ ಹಾಗೂ ರಮಾಬಾಯಿ ದಂಪತಿಗಳಿಬ್ಬರಿಗೂ ಚಿಂತೆಯನುಂಟು ಮಾಡಿತ್ತು. ರಮಾಬಾಯಿ ಕಷ್ಟನೋವುಗಳನ್ನು ನುಂಗಿ ಎದೆಗುಂದದೆ ಕುಟುಂಬವನ್ನು ಮುಂದುವರೆಸಿಕೊಂಡು ಬರುತ್ತಾರೆ. ರಮೇಶ, ಗಂಗಾದರ ಈ ಇಬ್ಬರು ಗಂಡು ಮಕ್ಕಳಲ್ಲದೆ ಹೆಣ್ಣು ಮಗು ನಂದಾ ಕೂಸುಗಳಿರುವಾಗಲೇ ತೀರಿಕೊಂಡ ನೋವು  ದಂಪತಿಗಳ ಮನಸ್ಸಿನಿಂದ ಇನ್ನು ಮರೆಯಾಗಿರಲಿಲ್ಲ. ರಾಜರತ್ನ ಕೊನೆಯ ಮಗೂ ಜನಿಸಿದ್ದು ಇಬ್ಬರಿಗೂ ಅತೀವ ಸಂತಸ ತಂದು ಕೊಡುತ್ತದೆ. ಆ ಸಂತೋಷ ಬಹಳ ದಿನ ಉಳಿಯುವುದಿಲ್ಲ. ರಾಜರತ್ನನಿಗೆ  ಎರಡು ವರ್ಷ ತುಂಬುವುದರೊಳಗೆ ಅನಾರೋಗ್ಯದಿಂದ ಮಗು ಸಾವನಪ್ಪುತ್ತದೆ. ರಾಜರತ್ನನ ಸಾವು ಅಂಬೇಡ್ಕರರಿಗೆ ಸಹಿಸಲಾಗದ ದುಃಖವನ್ನುಂಟು ಮಾಡಿತ್ತು. ಅಕಾಲಿಕ ಮಗನ ಸಾವಿನಿಂದ ಅಂಭೇಡ್ಕರರು ಚೇತರಿಸಿಕೊಳ್ಳಲಾಗದಷ್ಟು ನೋವು ಅವರಲ್ಲಿ ಆವರಿಸಿಕೊಂಡಿತು. ಮೃತ ಮಗುವನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುವರು, ಮಗನ ಶವವನ್ನು ಬಿಡಲಾರದಷ್ಟು ಹಿಡಿದುಕೊಂಡ ದೃಶ್ಯ ಹೃದಯ ವಿದ್ರಾವಕವಾಗಿತ್ತು. ಅವರು ದುಃಖದಿಂದ ಭಾವವೇಶಕ್ಕೆ ವಳಗಾಗಿದ್ದರು. ಮುದ್ದಾದ ನಾಲ್ಕು ಮಕ್ಕಳನ್ನು ಕಳೆದುಕೊಂಡ ನೋವು ಎಂದಿಗೂ ಮರೆಯಲಾಗದ ನೋವು ಆಗಿ ಅವರನ್ನು ಕಾಡುತಿತ್ತು. ಊಟದಿಂದ ಉಪ್ಪನ್ನು ಬೇರ್ಪಡಿಸಲಾಗದಂತೆ ತಮ್ಮಿಂದ ಬೇರ್ಪಡಿಸಲಾಗದ ಮಕ್ಕಳಾಗಿದ್ದ ಅವರು ಒಬ್ಬೊಬ್ಬರಾಗಿ ಸಾಯುತ್ತಾ ಸಾಗಿದ್ದು ತಮ್ಮ ಬದುಕಿನ ಕ್ಷಣಗಳು ಖಾಲಿ ಖಾಲಿ ಯಾಗಿವೆ ಎಂದು ಅಂಬೇಡ್ಕರರು ಬಾವಿಸಿಕೊಂಡಿದ್ದರು. ಮಗು ರಾಜರತ್ನನ ಮೇಲೆ ಅಂಬೇಡ್ಕರರ ಅಪಾರ ಪ್ರೀತಿ ತುಂಬಿತ್ತು. ಅಂತಹ ಮಗನಿಲ್ಲದ ಅವರ ಬದುಕು ಮುಳ್ಳುಕಂಟಿಗಳಿಂದ ತುಂಬಿದ ತೋಟದಂತಾಗುತ್ತದೆ. ಜ್ಞಾನರತ್ನರಾಗಿದ್ದ ಅಂಬೇಡ್ಕರರು ತಮ್ಮ ಸಂಸಾರದ ನೋವುಗಳನ್ನು ಮರೆತು ದೇಶದ ಬಹುಜನರ ನೋವುಗಳನ್ನು ನಿವಾರಿಸಲು ಸಣ್ಣದ್ದರಾಗುತ್ತಾರೆ. ತಾವು ಕತ್ತಲೆಯಲ್ಲಿದ್ದುಕೊಂಡು ಮಗನ ಸಾವಿನ ನೋವನ್ನು ಮರೆತು ನ್ಯಾಯ ವಂಚಿತ ಜನರ ಜಗತ್ತಿಗೆ ಸೂರ್ಯನಂತೆ ಬೆಳಕಾಗುತ್ತಾರೆ. ಕೋಟಿ ಕೋಟಿ ತುಳಿತಕೊಳಪಟ್ಟ ಬಹುಜನ ರಲ್ಲಿ ರಾಜರತ್ನನನ್ನೇ ಅವರು ಕಾಣುವರು.

                                            (ಮುಂದುವರೆಯುವುದು)   


                                       

      ಸೋಮಲಿಂಗ ಗೆಣ್ಣೂರ.

Leave a Reply

Back To Top