ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಗಾಂಧಿವಾದಿಮತ್ತುಸಮಾಜಸೇವಕಿ
ಶೋಭನಾರಾನಡೆ (1924)
ಶೋಭನಾ ರಾನಡೆಯವರು ಸಮಾಜಸೇವಕಿ ಮತ್ತು ಗಾಂಧಿವಾದಿಯಾಗಿದ್ದಾರೆ. ಇವರು ನಿರ್ಗತಿಕ ಮಹಿಳೆಯರಿಗಾಗಿ ಮಕ್ಕಳ ಕುರಿತಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ.
ಶೋಭನಾ ರಾನಡೆಯವರು 1924 ರಲ್ಲಿ ಪೂನಾದಲ್ಲಿ ಜನಿಸಿದರು. ಇವರು ತಮ್ಮ 18ನೇ ವಯಸ್ಸಿನಲ್ಲಿ ಆಗಾಖಾನ್ ಅರಮನೆಯಲ್ಲಿ ಗಾಂಧಿಜಿಯವರನ್ನು ಭೇಟಿಯಾದರು. ಗಾಂಧಿಜಿಯವರ ಪ್ರಭಾವವು ಇವರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿತು. ಅಂದಿನಿಂದ ಗಾಂಧೀಜಿಯವರ ತತ್ವ ಆದರ್ಶಗಳನ್ನು ಅನುಸರಿಸಲು ಪ್ರಾರಂಭಿಸಿದರು. ಇವರು ನಿರ್ಗತಿಕ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಶೋಭನಾ ಅವರ ಸಾಮಾಜಿಕ ಕಾರ್ಯಗಳು 1955 ರಲ್ಲಿ ಅಸ್ಸಾಂನ ಉತ್ತರ ಲಖಿಂಪುರದಲ್ಲಿ ವಿನೋಭಬಾವೆಯವರೊಂದಿಗೆ ಕೆಲಸ ಮಾಡುವ ಸದಾವಕಾಶ ದೊರೆಯಿತು. ಇವರು ಮೈತ್ರೇಯಿ ಆಶ್ರಮ ಮತ್ತು ಶಿಶುನಿಕೇತನ ಸ್ಥಾಪಿಸಲು ವಿನೋಭಭಾವೆಯವರಿಗೆ ಸಹಾಯವನ್ನು ಮಾಡಿದರು. ಇವರು ಮೊದಲ ಮಕ್ಕಳ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಿದರು. ಆದಿಮ್ ಜಾಲೆ ಸೇವಾ ಸಂಘವನ್ನು ಫ್ರಾರಂಭಿಸಿ ಅಲ್ಲಿಯ ಮಹಿಳೆಯರಿಗೆ ಅಧಿಕಾರಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಂಡರು. ಮಹಿಳೆಯರಿಗೆ ಚರಕದಿಂದ ನೈಯುವ ತರಬೇತಿಯನ್ನು ಮತ್ತು ಅದರ ಮಹತ್ವ ಕುರಿತು ಅರಿವು ಮೂಡಿಸಿದರು.
1979 ರಲ್ಲಿ ಪುಣೆಗೆ ಮರಳಿದ ನಂತರ ಆಗಖಾನಾ ಪ್ಯಾಲೇಸ್‍ನಲ್ಲಿ ಗಾಂಧಿ ನ್ಯಾಷನಲ್ ಮೆಮೋರಿಯಲ್ ಸೊಸೈಟಿಗೆ ಮಹಿಳೆಯರ ತರಬೇತಿಗಾಗಿ ಸಹಾಯ ಮಾಡಿದರು. 1998ರಲ್ಲಿ ರಾನಡೆಯವರು ಗಾಂಧಿ ನ್ಯಾಷನಲ್ ಮೆಮೊರಿಯಲ್ ಸೊಸೈಟಿಯ ಆಶ್ರಯದಲ್ಲಿ ಕಸ್ತೂರ್ ಬಾ ಮಹಿಳಾ ಖಾದಿ ಗ್ರಾಮೋದ್ಯೋಗ ವಿದ್ಯಾಲಯವನ್ನು ನಿರ್ಗತಿಕ ಮಹಿಳೆಯರಿಗಾಗಿ 20 ಗ್ರಾಮಗಳ ವಹಿವಾಟು ಮತ್ತು ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು.
ಶೋಭನಾ ಅವರು ಮಕ್ಕಳಿಗಾಗಿ ಮಹಾರಾಷ್ಟ್ರದಲ್ಲಿ ‘ಬಾಲಗ್ರಾಮ್ ಮಹಾರಾಷ್ಟ್ರ’ವನ್ನು ಸ್ಥಾಪಿಸಿ, ಅದರ ಅಡಿಯಲ್ಲಿ 1600 ನಿರ್ಗತಿಕ ಮಕ್ಕಳಿಗೆ ಮನೆ ಒದಗಿಸಿರುವರು. ಪುಣೆಯ ಶಿವಾಜಿ ನಗರದಲ್ಲಿ ಇರುವ ಹರ್ಮನ್ ಜೀಮಿನಿಯರ್ ಸೋಶಿಯಲ್ ಸೆಂಟರ್‍ಗೆ ಶೋಭಾರವರು ಹಣಕಾಸಿನ ನೆರವನ್ನು ನೀಡುತ್ತಿರುವರು. ಆ ಹಣದಿಂದ ಮಕ್ಕಳ ಪುನರ್ವವಸತಿ ಮತ್ತು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ 112 ಹುಡುಗರು ಮತ್ತು 138 ಹೆಣ್ಣು ಹುಡುಗಿಯರು ಆಶ್ರಯವನ್ನು ಪಡೆದಿದ್ದಾರೆ.
ಶೋಭನಾ ಅವರು ಸ್ಥಾಪಿಸಿರುವ ಮಕ್ಕಳ ಗೃಹಗಳೆಂದರೆ ‘ಬಾಲಿಗ್ರಹ’ ಮತ್ತು ‘ಬಾಲಸದನ್’. ಇವು ಪುಣೆಯ ಸಾಸ್ಟಾಡ್‍ನಲ್ಲಿ ಇದೆ. ಇಲ್ಲಿ 60 ನಿರ್ಗತಿಕ ಹೆಣ್ಣು ಮಕ್ಕಳಿಗೆ ಆಶ್ರಯವನ್ನು ಒದಗಿಸಿದೆ. ಶೋಭನಾರವರು ಗಾಂಧಿ ನ್ಯಾಷನಲ್ ಮೆಮೋರಿಯಲ್ ಸೊಸೈಟಿಯಿಂದ ಗಂಗಾ ಉಳಿಸಿ ಎಂಬ ಚಳುವಳಿಯಲ್ಲಿ ಭಾಗಿಯಾಗಿದ್ದರು. ಸದ್ಯಕ್ಕೆ 96 ವಯಸ್ಸಿನ ಶೋಭಾರವರು ಪುಣೆಯಲ್ಲಿ ವಾಸವಾಗಿದ್ದಾರೆ.
ಇವರು ಕಸ್ತೂರ್ ಬಾ ಗಾಂಧಿ ನ್ಯಾಷನಲ್ ಮೆಮೊರಿಯಲ್ ಟ್ರಸ್ಟ್‍ಗೆ ಟ್ರಸ್ಟೀ ಆಗಿದ್ದಾರೆ ಹಾಗೂ ಗಾಂಧಿ ಸ್ಮಾರಕ ನಿಧಿಗೆ ಟ್ರಸ್ಟಿಯಾಗಿದ್ದಾರೆ. ಗಾಂಧಿ ರಾಷ್ಟ್ರೀಯ ಸ್ಮಾರಕ ಸೊಸೈಟಿಗೆ ಕಾರ್ಯದರ್ಶಿಯಾಗಿ, ಮಹಿಳೆಯರಲ್ಲಿನ ಅನಕ್ಷರತೆಯನ್ನು ನಿರ್ಮೂಲನೆ ಮಾಡವ ಅಖಿಲ ಭಾರತ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ದೆಹಲಿಯ ಎಸ್ ಒ ಎಸ್ ಮಕ್ಕಳ ಗ್ರಾಮಗಳ ಸಂಸ್ಥೆಯ ಮಂಡಳಿ ಸದಸ್ಯರಾಗಿದ್ದಾರೆ. ಅಖಿಲ ಭಾರತ ಮಹಿಳಾ ಸಮಾವೇಶಕ್ಕೆ ಅಧ್ಯಕ್ಷರಾಗಿದ್ದಾರೆ. ಮಹರಾಷ್ಟ್ರದ ಭೂದಾನ್ ಗ್ರಾಮ್ ದಾನ್ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ.
ಶೋಭನಾರವರಿಗೆ ದೊರೆತ ಪ್ರಶಸ್ತಿಗಳು:
1) ಪದ್ಮಭೂಷಣ್ ಪ್ರಶಸ್ತಿ – 2010
2) ಜಮುನಾಲಾಲಾ ಬಜಾಜ್ ಪ್ರಶಸ್ತಿ – 2011
3) ರಿಲಯನ್ಸ್ ಫೌಂಡೇಶನ್-ಸಿಎನ್‍ಐಎನ್ ರಿಯಲ್ ಹಿರೋಸ್ -2012 ರಲ್ಲಿ ಲೈಫ್ ಟೈಮ್ ಆಚೀವ್‍ಮೆಂಟ್ ಅವಾರ್ಡ್
4) ರವೀಂಧ್ರನಾಥ್ ಟ್ಯಾಗೂರ್ ಪ್ರಶಸ್ತಿ
5) ರಾಜೀವ್‍ಗಾಂಧಿ ಮಾನವ್ ಸೇವಾ ಪ್ರಶಸ್ತಿ – 2007
6) ಪ್ರೈಡ್ ಆಫ್ ಪುಣೆ ಪ್ರಶಸ್ತಿ- ಪುಣೆ ವಿಶ್ವವಿದ್ಯಾಲಯದಿಂದ ಪಡೆದರು
7) ಮಕ್ಕಳ ಕಲ್ಯಾಣ ಕಾರ್ಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ
8) ಮಹಾತ್ಮಗಾಂಧಿ ಪ್ರಶಸ್ತಿ
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ