ಕಾವ್ಯ ಸಂಗಾತಿ
ಅಸಹಾಯಕ
ನನ್ನೊಳಗೆ,,,,,,,
ನಿಮಿಷಕ್ಕೆ ಸಾವಿರ ಸಾವುಗಳು
ಕದ ತಟ್ಟುತ್ತಿದ್ದರೆ……
ಕುಳಿತ ಒಡಕು ನಾವೆಯಲ್ಲಿ
ನೀರು ತುಂಬುತ್ತಿದ್ದರೆ….
ರೆಕ್ಕೆ ಹರಿದ ಬಣ್ಣದ ಚಿಟ್ಟೆ
ಹಾರಲಾಗದೇ ಮಣ್ಣಲ್ಲಿ
ಬಿದ್ದು,ಬದುಕಿನಂಚಿನಲ್ಲಿ
ಒದ್ದಾಡುತ್ತಿದ್ದರೆ….…
ಕಷ್ಟಪಟ್ಟು ಕಟ್ಟಿದ ಗೂಡಲ್ಲಿ
ಪುಟ್ಟ ಹಕ್ಕಿಯೊಂದು,
ತನ್ನ ಅಬ್ಯುದಯಕಾಗಿ ಇಟ್ಟ
ಮೊಟ್ಟೆಯನ್ನು ಹಸಿರ ಹಾವು
ಹೊಂಚಿ,ತಿನ್ನ ಬಂದರೆ…..
ಶಾಂತ ಕಡಲೊಡಲಲ್ಲಿ
ಚಂಡಮಾರುತವೆದ್ದು,
ದಡದ ಭೂಭಾಗವನ್ನೆಲ್ಲಾ
ನುಂಗಿ ನೊಣೆವಂತಾದರೆ…
ಸ್ವಸ್ಛಂಧ ನೀಲಾಕಾಶದಲ್ಲಿ,
ಇದ್ದಕ್ಕಿದ್ದಂತೆ ಕಾರ್ಮೋಡ
ಕವಿದು,ಕುಂಭ ದ್ರೋಣ ಮಳೆ
ಸುರಿದು,ಇಳೆಯ ನಾಶ
ಸನ್ನಿಹಿತವಾದರೆ……..
ನಿಂತ ನೆಲ ಕಂಪಿಸಿ,
ಜ್ವಾಲಾಮುಖಿ ಸ್ಪೋಟಿಸಿ,
ಬೆಂಕಿಯ ಹೊಳೆ ಹರಿದು,
ಸಸ್ಯಶ್ಯಾಮಲೆ ಭೂಮಿ ಸುಟ್ಟು
ಕರಕಲಾಗುವಂತಾದರೆ…..
…..ಶುಷ್ಕಪದಗಳ ಅತಿರಂಜಿತ
ಅಸಹಾಯಕತೆ.
ಗೊತ್ತಿಲ್ಲ,ಹೊತ್ತೂ ಇಲ್ಲ.
ಕೊನೇ ಕ಼ಣ……
ಕೊನೇಪಕ಼ ಒಂದಾದರೂ
ದೇವರು ಬೇಕೆನಿಸುತ್ತದೆ.
ರಾಮ,ಕ್ರಷ್ಣ,ಯೇಸು,ಅಲ್ಲಾ,
ಚೌಡಿ,ಜಟ್ಗ,ನಾಗರು,
ಗಂಡು,ಹೆಣ್ಣು ಯಾವದಾದರೂ.
ನನ್ನೆಲ್ಲ ಕಷ್ಟ ಕಳೆವುದಕ್ಕೆ….
ಅರಿತೂ ಮಾಡಿದ ಎಲ್ಲ
ಅಪರಾಧಗಳ ಕ಼ಮಿಸಿ,
ಕಾಪಿಡುವದಕ್ಕೆ…….!
ಅಸಹಾಯಕತೆಯ-
ಪರಾಕಾಷ್ಟತೆಯಲ್ಲಿ
ಸಹಾಯಕ್ಕೆ……..!
ಅಸಹಾಯಕ ನಾನು.
(ದೇವರಲ್ಲವಲ್ಲ.)
—ಅಬ್ಳಿ,ಹೆಗಡೆ