ಅನುವಾದಿತ ಅಬಾಬಿಗಳು

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

೭)
ಎಷ್ಟೋ ಜೀವನಗಳು ಅಲ್ಲೋಲಕಲ್ಲೋಲ
ಎಷ್ಟೋ ಜನರು ಆತ್ಮಹತ್ಯೆಗಳು
ಯಾರದು ಈ ತಪ್ಪು ಆಲೋಚಿಸಿ
ಹಕೀಮಾ
ಅಜ್ಞಾನ ಪಲ್ಲಕ್ಕಿಯೇರಿತಲ್ಲವೆ!

೮)
ಬಲಿಯಾಗುತ್ತಿದ್ದರೂ ಜೀವಂತ ಶವಗಳು
ಸ್ವಾರ್ಥದಿಂದ ಸುಮ್ಮನಿವೆ ಮೃಗಗಳು
ಮನುಷ್ಯನನ್ನು ಎಲ್ಲಿ ಹುಡುಕಬೇಕು
ಹಕೀಮಾ
ಮನುಷ್ಯನೇ ಇಲ್ಲದಿದ್ದರೆ ಮಾನವತ್ವ ಎಲ್ಲಿರುತ್ತದೆ!

೯)
ಸತ್ಯಗಳು ನಿಧಾನವಾಗಿ ತಿಳಿಯುತ್ತವೆ
ಅಸತ್ಯಗಳು ಆಕಾಶದಲ್ಲಿ ಹಾರುತ್ತವೆ
ವಾಸ್ತವವಾಗಿ ಅನ್ಯಾಯವು ಓಡುತ್ತಿದೆ
ಹಕೀಮಾ
ನ್ಯಾಯವು ಕೋರ್ಟಿನಲ್ಲಿ ಕುಸಿದುಬಿದ್ದಿದೆ!


ಧನಪಾಲ ನಾಗರಾಜಪ್ಪ

One thought on “ಅನುವಾದಿತ ಅಬಾಬಿಗಳು

Leave a Reply

Back To Top