ಕಾವ್ಯ ಸಂಗಾತಿ
ಬಿ.ಶ್ರೀನಿವಾಸ
ದೀಪದ ಹಬ್ಬದಲಿ ಕಂಡದ್ದು
ದೀಪ ಹಚ್ಚಿದೆ
ಪಸರಿಸಿದ ಬೆಳಕಿಗೆ
ಥಳ ಥಳ ಹೊಳೆವ ಬಜಾರುಗಳು
ಸುಖದ ಗೀರುಗಳ ಮನುಷ್ಯರು
ಕಾಲು ಮುರಿದುಕೊಂಡು ಬಿದ್ದ ಲಕುಮಿ
ಎಲ್ಲ ಕಂಡವು
ಮೊನ್ನೆ ಬಿದ್ದ ಮಳೆಗೆ ಮುರಿದುಬಿದ್ದ ಗೋಡೆ
ಕೈಕಾಲು ಮುರಿದು ಮೂಲೆ ಸೇರಿದವರ ಮುಖದ
ದುಃಖದ ಗೀರುಗಳು
ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಿದವು
ಕ್ಯಾರವಾನ್
ನಟ್ಟ ನಡುರಸ್ತೆಯಲ್ಲೇ
ನಿಂತುಬಿಟ್ಟಿದೆ
ನೀವು ಹತ್ತಿ ಇಳಿದ ಕ್ಯಾರವಾನ್
ಮುಂದೆ ಎಳೆಯಲು
ಅವರು ಬಿಡುತ್ತಿಲ್ಲ
ಗೆಳೆಯರು
ಎಳೆಯುತ್ತಲೇ ಇದ್ದಾರೆ
ಕನಿಷ್ಟ
ಹಿಂದೆ ಚಲಿಸೀತೆಂಬ ಭಯದಿ
ಚಕ್ರಗಳಡಿಯಲ್ಲಿ
ನಾನು
ಮಲಗಿದ್ದೇನೆ.
ತುಂಬಾ ತನ್ನಾಗಿದೆ