ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ

ಪುಸ್ತಕ ಸಂಗಾತಿ

ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ

ಹಂಪಿ ವಿಶ್ವ ವಿದ್ಯಾಲಯದ. ಹಿರಿಯ ಪ್ರಾಧ್ಯಾಪಕರು ಕನ್ನಡದ ಹಿರಿಯ ವಿದ್ವಾಂಸರು ಡಾ.ವೀರೇಶ ಬಡಿಗೇರ ಸದಾ ಕಾವ್ಯ ಸಂಶೋಧನೆ ಹಸ್ತಪ್ರತಿಗಳ ಗುಂಗು ತಲೆಯೊಳಗಿಟ್ಟುಕೊಂಡೇ ನಾಡಸುತ್ತುವ ಏಕತಾರಿ ಅವರು.ಕಲೆ ,ಕಲಾವಿದ ಹೀಗೆ ಹಲವು ಹತ್ತು ಹೊಸ ಯೋಜನೆಗಳೊಡನೆ ಅವರು ನಮ್ಮತ್ತ ಬರುತ್ತಾರೆ.ಈಗ ನನ್ನ ಕೈಲಿರುವ ಪುಸಗತಕ ಅಂಥದೇ ಒಂದು ಹೊಸ ಪ್ರಯೋಗ.

ಕನ್ನಡದ ತತ್ವಪದ ಇತಿಹಾಸದ ಒಂದು ಸದಾ ನುಡಿಯುವ ಗಂಟೆ ನಾದ ದಂತೆ ಇರುವ  ನೆಲಮೂಲದ ದೇಶಿ ಸಂತ ತಿಂಥಿಣಿಯ ಮೌನೇಶ್ವರರು. ಜನಮಾನಸದಲ್ಲಿ ತಿಂತಿಣಿ ಮೋನಪ್ಪಯ್ಯಎಂದೇ ಹೆಸರಾದ ಈ ಸಂತ ಹದಿನೇಳನೆಯ ಶತಮಾನದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆ ಸಾರಿದವರು. ಜೀವನವೇ ಅವರ ಸಮಕಾಲೀನ ಅನೇಕ ಸಂತರಂತೆ ನಿಗೂಢ ವಿಸ್ಮಯ.ನಮಗಿಂದು ಕೇವಲ ನಮಗಿಂತ ನೂರೇ ವರ್ಷ ಹಿಂದಿದಗದ ಹುಬ್ಬಳ್ಳಿ ಸಿದ್ದಾರೂಢರ ಬಗ್ಗೆ ,ನವಲಗುಂದ ನಾಗಲಿಂಗ ಯತಿಗಳ ಬಗ್ಗೆ ಸಮಗಾರ ಬೀಮವ್ವನ ಬಗ್ಗೆ ..ಬರೆಯೊದಕ್ಕೆ ಬಹಳ ಸಂಗತಿಗಳೇ ಗೊತ್ತಿಲ್ಲ.ಅವರನ್ನು ಕುರಿತು ನಮ್ಮ ಸಾಹಿತ್ಯಲೋಕ ತೋರಿದ ಅವಜ್ಞೆಯೂ  ಕುರಿತುನಾವೀಗ ವಿಷಾದಪಡುವ ಸ್ಥಿತಿಯಲಗಲಿಯೂ ಇಲ್ಲ

 ತಿಂಥಿಣಿಮೌನೇಶ್ವರರು ಹಿಂದೂಮುಸ್ಲಿಮ್ ಸಾಮರಸ್ಯ ಸಾರಿದ ಸಂತ .ಇವರು ಹದಿನಾರನೆಯ ಶತಮಾನದ ಬಸೊತ್ತರ ಕಾಲದ ವಚನಕಾರ ಹಂಪೆಯ ಎಮ್ಮೆ ಬಸವನನ್ನುಸ್ಮರಿಸಿದ್ದಾನೆ ಎಂದು ವಿದ್ವಾಂಸರು ಹೇಳುತ್ತಾರೆ.ಇದೇ ಮೊದಲಾದ ದಾಖಲೆಗಳ ಆಧಾರದ ಮೇಲೆ ಇವರ ಕಾಲವನ್ನು ಹದಿನಾರು-ಹದಿನೇಳನೆಯ ಶತಮಾನ ಎಂದು ಊಹಿಸುತ್ತಾರೆ.ಮೂಲತಃ ಸುರಪುರ ತಾಲೂಕಿನ ಗೋನಾಳದವರು ವಿಶ್ವಕರ್ಮ ಸಮಾಜಕ್ಕೆ ಸೇರಿದ ವರಾದ ಇವರ ತಂದೆ ಶೇಷಪ್ಪ( ಹಾವಪ್ಪ) ತಾಯಿ ಶೇಷಕ್ಕ(ಹಾವಕ್ಕ) ಮಕ್ಕಳಿಲ್ಲದ ತಂದೆ ತಸಯಿಗಳಿಗೆ ಶಿವನೇ ಮಗುವಿನ ರೂಪದಲ್ಲಿ ಜನಿಸಿ ಬಂದರೆಂದು ಕಥೆಗಳು ಹೇಳುತ್ತವೆ.ವಯಕ್ತಿಕ ವಿವರಗಳು ಅಷ್ಟಾಗಿ ದೊರೆಯುವದಿಲ್ಲ.ವಚನಗಳಲ್ಲಿ ಗುಂಡಿ ಬಸವಯ್ಯನೆಂಬವರು ತಮ್ಮ ಗುರುಗಳು ಎಂದು ಹೇಳಿಕೊಂಡಿದ್ದಾರೆ  ಸಂಸಾರದ ಕಡೆ ಅಷ್ಟಾಗಿ ಲಕ್ಷ್ಯ ಕೊಡದ ಈ ಮಹಾನುಭಾವರು ನಾಡಿನುದ್ದಕ್ಕೂ ಪ್ರವಾಸ ಮಾಡಿದರು. ಲಕ್ಷ್ಮೇಶ್ವರ,ಉಳವಿ,ಕಲ್ಯಾಣ,ವಿಜಯಪುರ,ಸುರಪುರ ಮೊದಲಾದೆಡೆ ಅವರ ಸ್ಮಾರಕಗಳಿವೆ.ಅಂತಿಮವಾಗಿ ತಿಂಥಿಣಿಯಲ್ಲಿ ತಮ್ಮಕಡೆಯ ದಿನಗಳನ್ನು ಕಳೆದು ಅಲ್ಕಿಯೇ ಐಕ್ಯರಾದರು. ಇಂದು ಮೌನೇಶ್ವರ ಕ್ಷೇತ್ರವೆಂದು ಹೆಸರಾದ ತಿಂಥಿಣಿಯಲ್ಲಿ ಅವರ ಉಭಯ ಧರ್ಮಗಳಿಂದ ಪೂಜಿಸಲ್ಪಡುತ್ತಿದ್ದಾರೆ.

ಅವರು ಬದುಕಿದ ಕಾಲಮಯತ್ತು ಪ್ರದೇಶ ಉರ್ದು ಮತ್ತು ಕನ್ನಡಗಳೆರಡೂ ಪ್ರಬಲವಾಗಿ ಚಲಾವಣೆಯಲ್ಲಿದ್ದ ಕಾಲ.ಮುಸ್ಲಿಂ ಸುಲ್ತಾನರ ಆಡಳಿತ ಮತ್ತು ಹೋರಾಟಗಳು ನಿರಂತರ ನಡೆದೆ ಇದ್ದವು ಇವರ ಸಾಹಿತ್ಯದಲ್ಲಿ ಅಪಾರ ಉರ್ದು ಪ್ರಭಾವ ತೋರುತ್ತದೆ.

ಬರೀ ಧಾರ್ಮಿಕ ಸಂತರಾಗಿ ಹೆಸರಾಗದೇ ಸ್ವತಃ ಕವಿಯಾಗಿ ಶತಕ,ಕಾಲಜ್ಞಾನ,ದಂಡಕ, ಸುವ್ವಿ ಹಾಡು,ಆರತಿ ಹಾಡು,ಬಜನಾ ಪದ ಮತ್ತುವಚನ ಮೊದಲಾದ ಸಾಹಿತ್ಯ ಪ್ರಕಾರಗಳಲ್ಕಿ ಅವರು ಸಾಹಿತ್ಯ ರಚಿಸಿದ್ದಾರೆ.

ತಿಂತಿಣಿ ಮೌನೇಶರರ ಸಾಹಿತ್ಯದಲ್ಲಿ ಉರ್ದು ಪ್ರಭಾವ ಅಧಿಕವಾಗಿದೆ.ವಿಶಗವಕರ್ಮದವರಾದ  ಅವರು ವೀರಶೈವ  ತತ್ವ ವಿಚಾರಗಳಿಂದ ಪ್ರಭಾವಿತರಾದವರು. ಒಂದು ವಚನದಲ್ಲಿ ತಾನು – ಅಕ್ಕನಾಗಮನ ಮಗ ಚನ್ನಬಸವಣ್ಣನವರ ಅವತಾರ ಎಞಮದು ಹೇಳಿಕೊಳ್ಳುವದಾಗಿ ತಿಳಿದು ಬಂದಿದೆ ವಚನ ಹೀಗಿದೆ-

ಅಕ್ಕನಾಗಲೆಯ ಮಗ, ಚಿಕ್ಕ ಚೆನ್ನಬಸವಣ್ಣ

ಅಕ್ಕಸಾಲೆಯರ ಒಡಲೊಳಗೆ ಜನಿಸಿನಿಂತು

ಲೆಕ್ಕ ಲೆಕ್ಕ ಕ್ಕೆ ಝಡತಿಯ ಕೇಳಲೇಕೋ

ತಕ್ಕಡಿ ತ್ರಾಸು ಪಿಡಿದು ನಿಂತಾತ

ಎಂಬ ವಿವರಗಳಿವೆ. ಪಂಚ ವಿಶ್ವಕರ್ಮರಲ್ಲಿ ತಕ್ಕಡಿ ತ್ರಾಸು ಹಿಡಿಯುವವರು ಅಕ್ಕಸಾಲಿಗರು,ತಾನು ಅವರ ಮಗ ಎಂದು ಹೇಳಿಕೊಳ್ಳುತ್ತಾರೆ. ಅವರ ಔಚನಗಳಲ್ಲಿ ಸೇರಿರುವ ಉರ್ದು  ಪ್ರಭಾವ ಮತ್ತು ದಾರ್ಮಿಕ ಸಾಮರಸ್ಯಕ್ಕೆ ಅವರನ್ನು ಸ್ತುತಿಸುವ ಜನ ಹೇಳುವ ಈ ವಚನ ಹೀಗಿದೆ

ಓಂ ಏಕಲಾಖ್ ಐಂಶೀ ಹಜಾರ್ವ

ಪಾಞಮಚೋಪೀರ್ ಪೈಗಂನರ ಮೌನದೀನ

ಜಿತಾಪೀರ ಪೈಗಂಬರ ಮೌನದೀನ

ಕಾಶಿಪತಿ ಗಾಧರ ಹರಹರ ಮಹಾದೇವ

ಎಂದು ಸಾರಿದವರು ಮೌನೇಶ್ವರರು. ಶಿವ ಮತ್ತು ಪೈಗಂಬರ ಬೇರೆ ಬೇರೆ ಯಲ್ಲ ಎನ್ನು ಅರ್ಥ ಆ ವಚನದಲ್ಲಿದೆ.ಅವರು ಲೋಕದ ಅಜ್ಞಾನವನ್ನು ಕಳೆಯಲು ಬಂದ ಮಹಾಮಹಿಮರು .ತಮ್ಮದು ” ಇಚ್ಚೆಯಿಚ್ಚೆಗೆ ಮಾಡುವ ಹುಚ್ಚರ ಮಾತಲ್ಲ,  ನಿಶ್ಚಿಂತ ದಿಂದ ನಿಜದ ಪರಬ್ರಹ್ಮದಚ್ಚ  ವರಿಕಲ್ಲು ಪಿಡಕೊಂಡ ಬಂದಿನಿ” ಎಂದು ತಮ್ಮದು ಬಿಕ ದಾರಿಯಲ್ಲ,ನಿಜದ ದಾರಿ ಎಂದು ಸಾರುತ್ತಾರೆ.

ವಚನಕಾರರಾಗಿಮೌನೇಶ್ವರರು

ವಚನ ಸಾಹಿತ್ಯದ ಎರಡನೆಯ ಕಾಲಘಟ್ಟವಾದ ಹದಿನಾರು ಹದಿನೇಳನೆಯ ಶತಮಾನದಲ್ಲಿ ಬರುವ ವಚನಕಾರರಲ್ಲಿ ಮೌನೇಶ್ವರ ವಚನಗಳೂ ಅಧಿಕವಿವೆ.ಬಸವಣ್ಣ ಅಂಕಿತದಿಂದ ಅವರು ೮೦೦ ವಚನಗಳನ್ನು ಬರೆದಿದ್ದಾರೆ ಎನ್ನುವ ಡಾ.ವೀರೇಶ ಬಡಿಗೇರ ಅವರು ಇವರ ವಚನಗಞಲನ್ನು ಶಿವ ಶರಣರ ಸಮಗ್ರ ವಚನ ಸಂಪುಟಗಳಲ್ಲಿ ಸೇರಿಲ್ಲ ಎನ್ನುತ್ತಾರೆ.ಅವರ ಮಾತುಗಳನ್ನೇ ಗಮನಿಸಬಹುದು.

” ಕನ್ನಡ ಸಾಹಿತ್ಯ ಅಧ್ಯಯನ ಮತ್ತುಪ್ರಕಟಣ ರಾಜಕಾರಣದಲ್ಕಿ ಮೌನೇಶ್ವರ ಮತ್ತು ಅವರ ವಚನಗಳು ಉಪೇಕ್ಷೆಗೆ ಒಳಗಾಗಿವೆ.೮೦೦ರಷ್ಟು ವಚನಗಳನ್ನು ರಚಿಸಿದ್ದರೂ ,ಶಿಚಶರಣರ ಸಮಗ್ರ ವಚನ ಸಂಪುಟಗಳಲ್ಕಿಯೂ ಸೇರದ,ತತ್ವಪದಕಾರರ ಸಮಗ್ರ ಸಂಪುಟಗಳಲ್ಕಿಯೂ ದಾಖಲಾಗದ ನತದ್ಋಷ್ಟ ವಚನಕಾರ ಮೌನೇಶ್ವರರು” 

( ಡಾ .ವಿರೇಶ ಬಡಿಗೇರ – ಮೌನೇಶ್ವರರ ವಚನ ವಿಚಾರ ಸಂಪಾದಕೀಯ ಪು- VII) ಎನ್ನುವ ಮಾತುಗಳಿಗೆ ಅರ್ಥವಿದೆಯನ್ನಿಸುತ್ತದೆ. ಅವರ ವಚನಗಳು ಆ ಸಮಗ್ರ ಸಂಪುಟಗಳಲ್ಲಿ ಏಕೆ ಸೇರಲಿಲ್ಲವೋ ತಿಳಿಯದು.

ಮೌನೇಶ್ವರರ ವಚನ ವಿಚಾರ:

ಇದು ಡಾ. ವಿರೇಶ ಬಡಿಗೇರ ಅವರು ಸಂಪಾದಿಸಿದ ಕೃತಿ.ಕನ್ನಡ ಸಂಸ್ಕೃತಿಯ ಸಂಶೋಧನೆ ಮತ್ತು ಸಾಹಿತ್ಯ ಚರ್ಚೆಯಲ್ಲಿ ಈಗ ಬಹು ದೊಡ್ಡ ಹೆಸರು ಡಾ.ವೀರೇಶ ಅವರದು.ಅಷ್ಟಾಗಿ ಅದ್ಯಯನಕ್ಕೆ ಒಳಗಾಗದ ಒಳಗಾಗಿರುವ ವಿಶ್ವಕರ್ಮ, ಪಾಂಚಾಳ ಸಂಸ್ಕೃತಿಯ ಕುರಿತು ಅವರು ಮಾಡಿರುವ , ಮಾಡುತ್ತಿರುವ ಅಧ್ಯಯನಗಳಿಗೆ ಬಹು ಮಹತ್ವದ ಸ್ಥಾನವಿದೆ. ಇಲ್ಲಿ ಅವರು ಮೌನೇಶ್ವರರ ೧೦೫ ವಚನಗಳನ್ನು ಸ್ವತಃ ತಾವೇ ಅಲ್ಲದೇ ಡಾ .ವಿರೇಶ ಅವರೇ ಚರ್ಚಿಸಿದ ಹತ್ತು ವಚನಗಳು  ಅಲ್ಲದೇ, ಡಾ.ವಿರೂಪಾಕ್ಷ ಬಡಿಗೇರ,,ಟಿಕೆ ಗಂಗಾಧರ ಪತ್ತಾರ ಡಾ.ಹಂದ್ರಾಳ ಗವಿಸಿದ್ದಪ್ಪ, ಡಾ.ಗಾಯತ್ರಿ.ಟಿ ಮೊದಲಾದವರಿಂದ ಮತ್ತು ಕೆಲ ಹೊಸ ಯುವ ಸಂಶೋಧಕರಿಂದ ಮೂರೋ ನಾಲ್ಕೋ ವಚನಗಳನ್ನು ಅದ್ಯಯನ ಮಾಡಿಸಿ ಅವುಗಳ ಕುರಿತು ಒಂದೊಂದು ಪುಟವೋ ಅರ್ಧ ಪುಟದಷ್ಟೋ ವಿಶ್ಲೇಷಣೆಯನ್ನು ಬರೆಸಿದ್ದಾರೆ.ಸ್ವತಃ ತಾವೇ ಹತ್ತಾರು ವಚನಗಳ ವಿವರಣೆ ನೀಡಿದ್ದಾರೆ.

 ಮೌನೇಶ್ವರರ ವಚನಗಳಲ್ಕಿ ವಿಶ್ವಕರ್ಮರಾದಿಯಾಗಿ ಪಂಚಾಳರ ಬಗ್ಗೆ ಮತ್ತೆ‌ ಮತ್ತೆ ಉಲ್ಲೇಖಗಳು ಬರುತ್ತವೆ. ಚನ್ನಬಸವಣ್ಣನ ಅವತಾರವೇ ತಾವೆಂದು ಸಾರುವ ಅವರು

ಅಕ್ಕಸಾಲಿಯ ಮಗ ಚಿಕ್ಕ ಚನ್ನಬಸವಣ್ಣ

ಅರ್ಕಸಾಲೆರ ಒಡಲೊಳಗೆ,ಜನಿಸಿ ನಿಂತು ,ಮರ್ತ್ಯದ

ಲೆಕ್ಕ ಲೆಕ್ಕಕ್ಕೆ ಜಡತಿಯ ಕೇಳಬೇಕೆಂದು ಮರ್ತ್ಯಕ್ಕೆ

ತಕ್ಜಡಿ ತ್ರಾಸು ಹಿಡಿದುಕೊಂಡು ನಿಂತಾತನ ಕೂಡ

ಠಕ್ಕಿನ‌ ಕೆಲಸವು‌ ನಡೆಯದು…

ಎನ್ನುತ್ತಾರೆ. ಇಲ್ಲಿ‌ ಮಹತ್ವದ ಅಂಶವೆಂದರೆ ಈಚಿನ ವಚನಕಾರನಾದರೂ ಮೌನೇಶ್ವರರು ತಮ್ಮಕಾಯಕ ಕುರಿತು ತಕ್ಕಡಿ ತ್ರಾಸು( ಬಂಗಾರ ತೂಗಲು ಬಳಸುವ ಚಿಕ್ಕತಕ್ಕಡಿ) ಪತ್ತಾರ ಕಾಯಕದವರು ಹಿಡಿದಿರುವದನ್ನು, ಜೊತೆಗೆ ಸಮಾಜದಲ್ಲಿ ಲೆಕ್ಕಾಚಾರಕ್ಕೆ ಹೆಸರಾದವರು ಎಂಬುದನ್ನು ಮತ್ತು ಅವರ ಮುಂದೆ ಮೋಸ ವಂಚನೆ ನಡೆಯುವದಿಲ್ಲ ಎಂಬುದನ್ನು ಸಾರುತ್ತಾರೆ. ಅಕ್ಕಸಾಲೆಯರೇ‌ಎಲ್ಲದಕ್ಕೂಮೂಲ ಎಂಬ ಅಭಿಮಾನ ವಚನಕಾರನಿಗೆ ಅಂತೆಯೆ ” ದಿಕ್ಕಿನ ದೇವರೆಲ್ಲಾ ಸುತ್ತಿಗೆಯ ಮಕ್ಕಳು” ಎನ್ನುತ್ತಾರೆ.ಒಂದು ರೀತಿಯಲ್ಕಿ ಅದು ಸತ್ಯವೂ ಇದೆ ಪೂಜಿಸುವೆಲ್ಲ‌ಲೋಹದ ಮೂರ್ತಿಗಳೂ ತಯಾರಾಗುವದು ಅವರ ಕೈಯಲ್ಲಿಯೇ ಅಲ್ಲವೇ?  ಇನ್ನೊಂದು ಅರ್ಥ ದಲ್ಲಿ ಎಲ್ಲದರ ಸೃಷ್ಟಿಕರ್ತ ವಿಶ್ವಕರ್ಮರು ಎಂಬ ನಂಬಿಕೆ ಯೂ ಅಲ್ಲಿದೆ. ಆ ದೇವರು ಈ ದೇವರು ಎಂದು ಕಚ್ಚಾಡುವವರಿಗೆ ಮೌನೇಶ್ವರರ ಈ ವಚನ ಎಚ್ಚರಿಕೆಯ ಘಂಟೆಯಾಗಿದೆ.

ಹಲವು ಮೂರ್ತಿಯ ಮಾಡಿದ

ಉಳಿಯೊಂದೇ,ಕೊಡತಿಯೊಂದೇ

ಶಿಲೆಯಲ್ಲ ಒಂದೇ ಶಿಲ್ಪಿ ಒಂದೇ

ಕೆಲದಾಡಬೇಡಿ ಶರಣರಿರಾ,ಬಸವಣ್ಣ

ಎನ್ಬುವಲ್ಲಿ ದೇವರ ಹೆಸರಿನಲ್ಕಿ ಬಡಿದಾಡಬೇಡಿರಿ ( ಕೆಲದಾಡು= ಜಗಳವಾಡು) ಬೇರೆ ಬೇರೆ ಹೆಸರಿನಿಂದ ನೀವು ಪೂಜಿಸುವ ದೇವರೆಲ್ಲ ತಯಾರಾದದ್ದು ನಮ್ಮ ಉಳಿ,ಕೊಡತಿ ಇವುಗಳಿಂದ ಎಂದು ಹೇಳುವಲ್ಲಿ ದೇವನೊಬ್ಬ ಎಂಬ ಚಿಂತನೆಯ ಜೊತೆಗೆ ದೇವರು ಧರ್ಮದ ಹೆಸರಿನಲ್ಕಿ ಕಚ್ಷಾಡುವವರಿಗೆ ಎಚ್ಚರಿಕೆಯೂ ಇದೆ.ಈ ದೇವರನ್ನೆಲ್ಲ ನಿರ್ಮಿಸಿದವರೂ ನಾವೇ ಎಂಬ ಸೂಕ್ಷ್ಮ ಅಗ್ಗಳಿಕೆಯೂ ಇದೆ.

 ಪ್ರತಿಯೊಬ್ಬ ಶರಣರೂ ತಮ್ಮ ಜನಾಂಗಕ್ಕೆ ಸೇರಿದವರೇ ಎಂದು ಅಭಿಮಾನದಿಂದ ಹೇಳಿ ಕೊಳ್ಳುವದರ ಜೊತೆಗೆ ಒಳಿತಾದುದೆಲ್ಲ ತಮ್ಮಲ್ಕಿಯೇ ಘಟಿಸಿದೆ ಎಂದು ಹೇಳುವ ಅಭಿಮಾನ ಮೂಲವಾಗಿ ಕೆಲವು ವಚನಗಳಲ್ಲಿ ಅಲ್ಲಮಪ್ರಭು ಬಸವಣ್ಙವರು ಎಲ್ಲರೂ ತಮ್ಮವರು ಎಂದು ಹೇಳುವ ಪ್ರಯತ್ನ‌ ಮಾಡುತ್ತಾರೆ. ಅಲ್ಲಮಪ್ರಭುವೂ ಅಕ್ಕಸಾಲಿಗನೆನುವ ಮೌನೇಶ್ವರರು

ಅಕ್ಕಸಾಲೆಯು ತಾನಾದ ಅಲ್ಲಮಪ್ರಭುದೇವ

ಇಕ್ಕಳವ ಪಿಡಿದು,ಕೈಯಲಿ ಸುತಗತಿಗೆ ಹಿಡಿದು

ಸೊಕ್ಕಿದವರ ಹಲ್ಲು ಮುರಿಯುತ ಬಂದಾನೆ ,ಬಸವಣ್ಣ

ಎನ್ನುವಲ್ಲಿ ಅಲ್ಕಮಪ್ರಭುದೇವರು ಶರಣರಿಗೆ ಗುರುಸ್ವರೂಪದವರಾಗಿದ್ದು ತಪ್ಪಿದವರನ್ನು ಸ್ವಲ್ಪ ಉಗ್ರವಾಗಿಯೇ  ಶಿಕ್ಷಿಸುತ್ತಿದ್ದ ಬಗ್ಗೆ ಸೂಚನೆ ನೀಡುತ್ತಾರೆ. ಪಾಂಚಾಳರು ( ಬಡಿಗ, ಕಮ್ಮಾರ ಶಿಲ್ಪಕಾರ, ಕಂಚುಗಾರ, ಪತ್ತಾರ) ಈ ಐದೂ ಜನಾಂಗಗಳ ಬಗೆಗೆ  ಮೌನೇಶ್ವರರ ವಚನಗಳಲ್ಲಿ ಅದರಲ್ಲಿನ ಒಂದು ಗುಂಪಾದ ಬಡಿಗ ಕಮ್ಮಾರರ ಬಗ್ಗೆ  ಸಾಕಷ್ಟು ವಿವರಗಳಿವೆ

ಬಡಿಗ ಕಮ್ಮಾರರು ಪೊಡವಿಗಧಿ‌ಕರ್ತರು

ಬಡಿದು, ಬತ್ತೀಸ ,ಆಯುದವ ಮಾಡಿ

ಸರ್ವರಿಗೆ ಕೊಡುವರಯ್ಯ ಬಸವಣ್ಣನ್ನುವ ವಚನಬಡಿಗ‌ಕಮ್ಮಾರರ ಮಹತ್ವ ಸಾರುತ್ತದೆ

      ‌ಶರಣರು ತಾವು ಜನಿಸಿದ ಕುಲ ಕೀಳು ಎಂದು ಯಾವಾಗಲೂ ಭಾವಿಸುವದಿಲ್ಲ.ಅಷ್ಟಲ್ಲದೆ ತಮ್ಮ‌ಕಸಬು ಕಾಯಕಗಳನ್ನು ಬಣ್ಣಿಸುತ್ತ ನಾವೂ ಯಾರಿಗೇನು ಕಡಿಮೆಯಿಲ್ಲ ಎಂದು ಸಾರುತ್ತಾರೆ.ಇದು ಜಾತಿ ಪ್ರಜ್ಞೆಯಲ್ಲ.ಆದರೆ ಆ ಹುಟ್ಟಿದ ತಾಣ ಬಗೆಗಿರುವ ಅಭಿಮಾನ. ಇಂತಹ ಹನ್ನೆರಡನೆಯ ಶತಮಾನದ ನೂರಾರು ವಚನಗಳನ್ನು ಉದಾಹರಿ ಸಬಹುದು. ಹಾಗೆಯೇ ಮೌನೇಶ್ವರರು ತಾವು ಜನಿಸಿದ ವಿಶ್ವಕರ್ಮ ರ ಬಗೆಗೆ  ಇದೇ ಬಗೆಯ ಭಾವವನ್ನು ಹೊಂದಿದ್ದಾರೆ.ತಮ್ಮನ್ನು  ಹೀನ  ಎಂದು ಕಾಣುವವರ ಕುರಿತು ಅವರು ರಚಿಸಿದ ಈ ವಚನ ತಕ್ಕ ಉತ್ತರ ವಾಗಿದೆ.

ಇಕ್ಕುಳವೆ‌ ಕುಲದೈವ  ಸುತ್ತಿಗೆಯೆ ಮನಿದೈವ

ಬೊಕ್ಕಸಗೋಲ ಗಜದಂಡ ನೆತ್ತೀಲಿ ತೆತ್ತೀಸ

ಕೋಟೆ ದೇಅಧಿದೇರ್ಕಳ

ನಿರ್ಮಿಸಿದ ಮೇಲೆ ಕೆಟ್ಟ ಕುಲ ಎನಬಹುದೆ ,ಇದು

ಅಲ್ಲಮನ ಕುಲವು ,ಬಸವಣ್ಣ

ತಮ್ಮ‌ಕುಲದ ಮಹತಿ ಹೇಳುತ್ತಲೇ ಅದು ಅಲ್ಲಮನ ಕುಲ ಎನ್ನಿವದು ಮಹತ್ವದ್ದಾಗಿದೆ.

ಜಗತ್ತಿನಲ್ಲಿ ನಾನು ಶ್ರೇಷ್ಠ ನೀನು ಶ್ರೇಷ್ಠ ಎನ್ನುವವರಿಗೆ ಮೌನೇಶ್ವರರು ನೀಡುವ ಪೆಟ್ಟು ಇದು- ಆ ದಾರ,ಈ ದಾರ,ಶಿವದಾರ,ಉಡದಾರ ಇವೆಲ್ಲದಕ್ಕೂ ಆ ಸೃಷ್ಟಿಕರ್ತ ವಿಶ್ವಕರ್ಮ ಆಧಾರ” (ಪು-೩೧} ಎನ್ನುವ ವಚನದ ಸಾಲು ಯಾರೂ ವಿಶ್ವಕರ್ಮನಿಗಂತ ಮೇಲಿನವರಿಲ್ಲ ಎನ್ನುತ್ತದೆ.ಕಂಬಾರರದು ಪಂಚಾಳರಲ್ಲಿ ಒಂದು ವರ್ಗ.ಅವರು ಕಬ್ಬಣವನ್ನು ಕಾಸಿ ರೈತರಿಗೆ ಉಪಯುಕ್ತವಾದ ವಸ್ತುಗಳನ್ನು ಮಾಡಿಕೊಡುವವರು. ಅವರ‌ಕಾಯಕದ ಆಧಾರ ಕುಲುಮಿ.ಒಂದುರೀತಿಯಲ್ಲಿ ಜಗವೂ ಕುಲುಮೆಯೆ.ಇದನ್ಬೆ ಬಸವಣ್ಣನವರು ಕಸಾಲೆ ಎನ್ನುತ್ತಾರೆ.ಆ ಕಂಬಾರರ ಕುರಿತು ಮೌನೇಶ್ವರರು ಹೇಳುವ ವಚನ ಹೀಗಿದೆ.

ಕುಲುಮೆ  ಹುಟ್ಟದ ಮುನ್ನ  ಕುಲ ಛಲವೆಲ್ಲೈತಿ

ಹಲವು ಉದ್ಯೋಗ ಆಯುಧದ ಪರಿತ್ಯಾಗ, ಲೋಕದ ಕಿಲುಮೆ ಕೀಟಕದ ಪುಳಿಗಳಿರಾ ನಿಮ್ಮ ಹಲವು

ಶಾಸ್ರ್ತ್ರಗಳ ಬಿಡಬೇಕು

ಎನ್ನುವಲ್ಲಿ ಕಂಬಾರರ ಮಹತ್ವ ವಿವರಿಸಿದ್ದರೂ ವಿಶಾಲಾರ್ಥದಲ್ಲಿ ಜಾತಿ ಡಂಭವನ್ನು ವಚನಕಾರ ತಿರಸ್ಕರಿದ್ದಾನೆ.ಜೊತೆಗೆ ದುಡಿಮೆ ಸಂಸ್ಕೃತಿಯನ್ನು ಬಬಲಿಸುತ್ತಾನೆ.ಅಂತೆಯೆ ಮುಂದುವರೆದು ” ಕುಲ ಹದಿನೆಂಟಕ್ಕೆ ಕುಲುಮಿಯೆ ಶಿಕ್ಷಾ ಗುರುವು ” ಇಂತಹ ವಚನಗಳು ದುಡಿಯುವ ವರ್ಗಕ್ಕೆ ಅಭಿಮಾನ ಮೂಡಿಸುತ್ತವೆ. ಪಂಚಾಳರ ಕುಲದೇವತೆ ಕಾಳಮ್ಮ.ಆಕೆ ನೋಡಲು‌ ಕಪ್ಪು.ದಕ್ಷಬ್ರಹ್ಮನ ಯಜ್ಞದಲ್ಕಿ ಉರಿದು ಸುಟ್ಟಾದ ಪಾರ್ವತಿಯ ರೂಪವೇ ಕಪ್ಪಾಗಿ ಕಾಳಮ್ಮನಾದದ್ದು ಎಂದು ಪುರಾಣಗಳು ವಿವರಿಸುತ್ತವೆ.ಶೈವರು ಪಾರ್ವತಿಯನ್ನು ಪೂಜಿಸಿದರೆ, ವಿಶ್ವಕರ್ಮರು ಕಾಳಿಯ ಆರಾಧಕರು.ಹೀಗಾಗಿ ಕಾಳಮ್ಮನ ನ್ನು

ಕಾಳಮ್ಮನೆಂಬಾಕಿ ಏಳೆಳು ಲೋಕದ ಕೀರ್ತಿ

ಕೀಳು ಮಾದಿಗರ ಕಾಳಿಕೆಯೊಳು ಅಡಗಿಹಳು ಸಕಲ

ಕಳೆಯಲ್ಲ ಆಕೆ ಒಡಲೊಳಗೆ, ಬಸವಣ್ಣ

ಎಂದು ಸಕಲರನ್ನು ಕಾಯುವ ಶಕ್ತಿ ದೇವತೆಯ ಚಿತ್ರನೀಡುತ್ತಾರೆ

ದೈವವನ್ನು ನಂಬಿದವರು ಶರಣರು.ಅವರ ದಾರಿಯಲ್ಲಿಯೇ ಸಾಗಿರುವ ಮೌನೇಶ್ವರರು ಜಗತ್ತು ನಡೆದಿರುವದು ಶಿವನ ಕೃಪೆಯಿಂದ  ಎಂದು ದೃಡವಾಗಿ ನಂಬಿದವರು.ಮೇಘರಾಜನಿಲ್ಲದೆ ಹೊಲಗಳು ಸಾಗವು,ಲೋಹಾರನಿಲ್ಲದೆ ಹರಿಗೋಲು ಸಾಗವು ಹಾಗೆಯೇ ದೇವನೆಂಬ ಶಕ್ತಿಯಿಂದಲೇ ಈ ಜಗತ್ತು ನಡೆದಿಸೆ ಎನ್ನು ಅವರು

ಹಡೆವುದು,ಮುಡಿವುದು,ಕೊಡುವದು ಪಡೆವುದು

ಮೃಡರೂಪನಲ್ಲದಿನ್ನಾರು? ತ್ರಿಭುವನದೊಳು

ಕೊಡುವವರಿಲ್ಲ ಬಸವಣ್ಣ

ಸರ್ವಜ್ಞನ ವಚನಗಳನ್ನು ಹೋಲುವ ಈ ವಚನ ತುಂಬ ಸಾಂದ್ರವಾಗಿ ಶಿವನ ಕುರಿತು ಹೇಳಿದೆ.ಇಳೆ ನಿಮ್ಮ‌ದಾನ,ಬೆಳೆ ನಿಮ್ಮ ದಾನ..ಮೊದಲಾಗಿ ಹನ್ನೆರಡನೆಯ ಶತಮಾನದ ಶರಣರು ಸಾರುವಂತೆ ಎಲ್ಲವೂ ಆ ಶಿವನದೇ ಎನ್ನುವ ಭಾವ ಈ ವಚನದಲ್ಲೂ ಇದೆ. ಜನಪದರಂತೆ  ” ಸೊಮ್ಮು ಶಿವನದು‌ ಕಾಣೋ” ಎಂದು ನಂಬುತ್ತಾರೆ,

 ಮೌನೇಶ್ವರರು ನಿಸ್ಸಂಶಯವಾಗಿ ಹನ್ನೆರಡನೆ ಶತಮಾನದ ಶರಣರ ವಿಚಾರಗಳಿಂದ ಪ್ರಭಾವಿತರಾದವರು.ಅವರ ವಚನಗಳಲ್ಕಿ ಅಲ್ಲಲ್ಲಿ ವಚನಕಾರರು ಸಾರಿದ ಸಿದ್ದಾಂತಗಳ ಪ್ರಸ್ತಾಪವಿದೆ.ಜೊತೆಗೆ ಹಲವಾರು ಶರಣರನ್ನು ಗೌರವದಿಂದ ನೆನೆಯುತ್ತಾರೆ.ಅವರ ಅಂಕಿತವೇ ಬಸವಣ್ಣನೆಂದಿದೆ.ಚನ್ನಬಸವಣ್ಣ,ಅಲ್ಲಮಪ್ರಭು,ಕಕ್ಕಯ್ಯ ಮೊದಲಾದ ಶರಣರ ಸ್ತಿತಿ ಕಾಣಿಸುತ್ತದೆ.ನುಲಿಯ ಚಂದಯ್ಯನವರನ್ನು 

ಚಂದಕ್ಕೆ ಲಿಂಗವನು ಮಂದೆಲ್ಲ ಕಟ್ಟಿದರು ನಮ್ಮ

ಚಂದಯ್ಯನಂತೆ ದೃಡವಿಲ್ಲ,ಲೋಕದ

ಅಂಧಕರು ಧರಿಸಿದ ಫಲವೇನು ?

ಎಂದು ಪ್ರಶ್ನಿಸುವಲ್ಲಿ ಶರಣರ ವಿಚಾರ ಅನುಸರಿಸದೆ ನಾವು ಲಿಂಗ ಧರಿಸಿದರೆ ಕುರುಡರಾಗುತ್ತೇವೆ ಎನ್ನುವ  ಚುಚ್ಚುವಿಕೆಯೂ ಇದೆ,ಶರಣರ ದಾರಿಯ ಕುರಿತು ಗೌರವವೂ ಇದೆ.

ಮೌನೇಶ್ವರರ ಲೋಕದೃಷ್ಟಿ ಅತಿ  ಮುಖ್ಯವಾ ದುದು.ಅವರು  ಆಲೋಚಿಸದ ವಿಷಯಗಳೇ ಇಲ್ಲ .ಜಗತ್ತಿನಲ್ಲಿ ತಂದೆ ತಾಯಿಗಳು‌ ಮಕ್ಕಳನ್ನು ಹಡೆದರೆ ಮುಗಿಯಲಿಲ್ಲ.ಅವರು ಯೋಗ್ಯರಾಗಿ ಬಾಳುವಂತೆ ಸಂಸ್ಕಾರ ಕೊಡುವದೂ ಅಗತ್ಯ.ಅದು ಅವರ ಜವಾಬ್ದಾರಿ‌ ಕೂಡಾ.ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ‌ ಕುರಿತು  ಮೌನೇಶ್ವರರು

ಮೂರು ವರ್ಷಕೆ ಮುದ್ದು, ಆರುವರ್ಷಕೆ ಆಚಾರ

ಏಳನೆಯ ವರ್ಷಕ್ಜೆ ಪ್ರೌಢನ ಮಾಡದಿದ್ದರೆ

ತಂದೆ ತಾಯಿಗಳು ಹಗೆಗಳು…

ಎನ್ನುವ ವಚನದಲ್ಲಿ ಸ್ಪಷ್ಟವಾಗಿ ಮಕ್ಕಳನ್ನು ಪೋಷಿಸಬೇಕಾದ ರೀತಿ ಹೇಳಿದ್ದಾರೆ,ಮಕ್ಕಳನ್ನು ಮುದ್ದು ಮಾಡಲು ಒಂದು ವಯಸ್ಸಿದೆ.ಆಮೇಲೆ ಅವರಿಗೆ ಸುತ್ತಲಿನ ಜಗತ್ತಿನ ರೀತಿನೀತಿ ಆಚಾರಗಳನ್ನು ಹೇಳಿಕೊಡಬೇಕು. ಅಗತ್ಯ ಬಿದ್ದಾಗ ಝಂಕಿಸಿ ಹೇಳದ ತಂದೆತಾಯಿಗಳು ಮುಂದೆ ಮಕ್ಕಳಿಗೆ ಹಗೆಗಳಾಗಿ ಕಾಣಿಸುತ್ತಾರೆ .ಎನ್ನುವ‌ಮಾತುಗಳು ಇಂದಿನ‌ಕಾಲದ ನಮಗೂ‌ ಮಾರ್ಗದರ್ಶಕವೇ ಆಗಿವೆ.

ಮೌನೇಶ್ವರರೂ ಶಿವನನ್ನು ಮರೆತವರಲ್ಲ ,ಶರಣರ ಹಾಗೆ, ಶಿವನಕೃಪೆಯಿಲ್ಲದೆ ಲೋಕ ನಡೆಯದು ಎನ್ನುವದು ಅವರು ನಂಬಿದ ಸಿದ್ಧಾಂತ ಅಂತೆಯೇ

ಅಂಕುಶವಿಲ್ಲದೆ ಆನೆ ನಡೆಯದು

ಶಂಕರನಿಲ್ಲದೆ ಸಂಸಾರ ನಡೆಯದು ಲೋಕದ

ಮಂಕುಗಳಿಗೇಕೆ  ತಿಳಿಯದು ,ಬಸವಣ್ಣ

 ತುಂಬ ಸರಳವಾದ ಸಾಲುಗಳಲ್ಲಿ ದೈವವಿಲ್ಲದೆ ಏನೂ ಇಲ್ಲ ಎಂಬ ಆಸ್ತಿಕ ಸಿದ್ದಾಂತವನ್ನು ಸಾರುತ್ತಾರೆ.ಹಾಗೆಂದು ಅವರು ಸುತ್ತಲಿನ‌ಲೋಕ ಮರೆತವತಲ್ಲ,ಇಲ್ಲಿ‌ ನಡೆಯುವ ಅನ್ಯಾಯವನ್ನು ಅವರು ಖಂಡಿಸುತ್ತಾರೆ.ಅವರು ಬದುಕಿದ್ದ ಕಾಲವೂ ಮುಸ್ಲಿಮ್ ಹಿಂದೂ ರಾಜರುಗಳು ತಮ್ಮ  ರಾಜ್ಯ ಉಳಿಸಿಕೊಳ್ಳುವದಕ್ಕಾಗಿ  ಹೋರಾಟದಲ್ಕಿ ಮುಳುಗಿದ್ದ ಕಾಲವಾಗಿತ್ತು ಸಾಮಾನ್ಯರ ಪಾಡು ಕೇಳುವವರಿ ರಲಿಲ್ಲ.ಕುಮಾರವ್ಯಾಸ ಹೇಳಿದಂತೆ ಬಡವರ ಬಿನ್ನಪವ ನಿನ್ನಾರು ಕೇಳುವರು? ಎನ್ನುವ ಹಾಗೆ ಸ್ಥಿತಿ ಇದ್ದಿತು. ಆಳುವವರು ಜನರನ್ನು ಮರೆತಿದ್ದರು ಸಾತ್ವಿಕ  ಕೋಪದಿಂದ ಅಂತಹ ಆಳುವವರನ್ನು  ತರಾಟೆಗೆ ಗುರಿ‌ಮಾಡುವ ಅವರು

ಆಡು ಕಾಯುವವನ‌ ಬುದ್ದಿ  ಅರಸುಗಳಿಗಿದ್ದರೆ

ರೂಢಿಗಳೆಲ್ಲ ಕೆಡುವವೆ,ಇವರು

ಕೋಡಗಕಿಂತ ಕನಿಕಷ್ಟ ಬಸವಣ್ಣ

ನಾಡಕಾಯುವವನಿಗೆ  ಜನರ ಮೇಲೆ ಪ್ರೀತಿ ಇಲ್ಲದೆ ಹೋದಾಗ ನಾಡು ಅರಾಜಕೀಯವಾಗುತ್ತದೆ ಇದನ್ನೇ ಮೌನೇಶ್ವರರು

ಅರ್ಜಿ ಕೇಳುವರಿಲ್ಲ,ಮರ್ಜಿ ಮಾನಗಳಿಲ್ಲ

ದರ್ಜನರಿಗೆ ದೌಲತ್ತು,ಲೋಕದ ಪ್ರಜೆ

ನಿರ್ಜರರಯ್ಯ ಬಸವಣ್ಣ

ಎಂದು ಜನತೆ ಅನಾಥವಾಗಿರುವ ಸ್ಥಿತಿಯನ್ನು ಬಿಚ್ಚಿಡುತ್ತಾರೆ.ಸಾಮಾನ್ಯರ ಬದುಕು ಬೆಲೆಯೇರಿಕೆಯ ಜೂಜಾಟದಲ್ಲಿ ಸಿಲುಕಿ ನರಕವಾಗುತ್ತದೆ ಎಂಬುದನ್ನು ಅಂದೇ ಸಾರಿದ್ದಾರೆ.ಕವಿ ಋಷಿಯಾಗಿರುವದರಿಂದ ಅವರ ಮಾತಿಗೆ ಸತ್ಯದರ್ಶನದ ಗುಣವೂ ಇರುತ್ತದೆ.ಮುಂದೊಂದು ದಿನ

ಬಾಜಾರ ಬಂದೀತು,ಓಜು ಉಂಡ್ಯಾದೀತು

ಸೂಜಿ  ಒಂದು ಹೊನ್ನಿಗೆ ಮಾರೀತು,ಲೋಕದ

ಸೋಜಿಗವ ನೋಡು ಬಸವಣ್ಣ

ಎಂದು ಸಾರುತ್ತಾರೆ.ಇಂದು ಆಧುನಿಕತೆಯ ಹೆಸರಿನಲ್ಲಿ ಎಲ್ಲವೂ ಮಾರಾಟದ ವಸ್ತುವಾಗಿದೆ.ಸೂಜಿಯಂತ ಚಿಕ್ಕ ವಸ್ತು ಸಹ ಒಂದು ಹೊನ್ನಿಗೆ ಬರಲೆ ಬಾಳುತ್ತದೆ ಎನ್ನುವ ಮಾತಿನ ಹಿಂದೆ ಎಲ್ಲವೂ ಬೆಲೆಯ ಏರಿಕೆಗೊಳಗಾಗಿ ಮನುಷ್ಯನ ಜೀವ ಅಗ್ಗವಾಗುತ್ತದೆ ಎಂಬ ಚಿಂತೆಯಿದೆ. ಲೋಕದಲ್ಲಿ ಯಶಸ್ವಿಯಾಗಲು ಜ್ಞಾನದ ಗಳಿಕೆಯೊಂದೇ ಮಾರ್ಗ ಎನ್ನುವದನ್ನು ಸಂಕೇತಗಳ‌ ಮೂಲಕ ಸಾರುತ್ತಾರೆ.ಜ್ಞಾನಿಗಳನ್ನು ವೃದ್ಧರು ಎನ್ನುವ ಮೌನೇಶ್ವರರು

ಮುಪ್ಪಿನವರು ಬದುಕ್ಯಾರು,ಪ್ರಾಯದವರು ಅಳಿದಾರು

ನಡುಪ್ರಾಯದವರು ಮಡಿದಾರು ಮರ್ತ್ಯದೊಳಗ

ಮುದುಕರಿಗೆ ಉಳಿವು ,ಬಸವಣ್ಣ

ಎನ್ಬುತ್ತಾರೆ.ಜ್ಞಾನವನ್ನು ಗಳಿಸಿ ಜ್ಞಾನಿಗಳಾದವರಿಗೆ ಮಾತ್ರ ಈ ಜಗತ್ತು.ನಾವು ಏನನ್ನು ಗಳಿಸದೆ ಹಾಗೆ ಹರೆಯದವರಾಗಿಯೇ ಉಳಿದರೆ ಬದುಕುವದೇ ಕಷ್ಟ ಎನ್ನುವದನ್ನು ಸಾಂಕೇತಿಕವಾಗಿ ವಚನ ತಿಳಿಸಿದೆ. ಕಾಲಜ್ಞಾನಿಗಳೂ ಆಗಿದ್ದ ಮೌನೇಶ್ವರರು ಮುಂದಿನ ನೂರಾರು ವರ್ಷಗಳ ಚರಿತ್ರೆಯ ಚಿತ್ರಣವನ್ನು ನೀಡಿದ್ದಾರೆ.

ಸಂಪಾದನೆಯ ಕುರಿತು:

ವಿದ್ವಾಂಸರಾದ ಡಾ‌.ವೀರೇಶ ಬಡಿಗೇರ ಅವರು ತಳ ಸಮುದಾಯಗಳ ಅಸ್ಮಿತೆಯನ್ನು‌ಕಟದಟಿಕೊಡುವ ಕಾರ್ಯ ಮಾಡುತ್ತಿರುವ ಕೆಲವೇ ವಿದಗವಾಂಸರಲ್ಲಿ ಒಬ್ಬರು‌.ಮೌನೇಶ್ವರರ ಕುರಿತು ಅವರು‌ಮಾಡಿದ ಕೆಲಸ ಅಗಾಧವಾದುದುಮಾದರೆ ಅವರ ಎಲ್ಲ ಎಂಟು‌ನೂರುವಚನಗಳಲ್ಲಿ ಆಯ್ದ ,ಜನಮುಖಿ‌ಮತ್ತು ಸಂಸ್ಕೃತಿ  ಚಿಂತನಗಳಂತಿರುವ ೧೫೦ ವಚನಗಳ ಆಯ್ಕೆಯಲ್ಲಿ‌ ಜಾಣ್ಮೆ‌ ಮೆರೆದಿದ್ದಾರೆ. ಯುವ ವಿದ್ವಾಂಸರು‌ ಬರೆದ ಲೇಖನಗಳನ್ನು ಸ್ವತಃ ತಾವು ನೋಡಿ ಅಗತ್ಯ ಬಿದ್ದೆಡೆ ತಮ್ಮ ಆಲೋಚನೆಗಳನ್ನು ಸೇರಿಸಿ ಕೃತಿ ಸಂಪನ್ನಗೊಳಿಸಿದ್ದಾರೆ.” ಕನ್ನಡದ ಹೊಸ ತಲೆಮಾರಿಗೆ ಮೌನೇಶ್ವರರ ವಚನಗಳನ್ನು‌ನಿಲುಕಿಸುವ ಕೆಲಸದಲ್ಲಿ ” ಯಶಸ್ವಿಯಾಗಿದ್ದಾರೆ.ವ್ಯಾಪಕ ಓದು ಆಗಬೇಕಿದೆಯಷ್ಟೇ.

ನಮ್ಮ ಇತಿಹಾಸವನ್ನು ಅಧ್ಯಯನ‌ ಮಾಡುವ ಒಂದು ಚಿಕ್ಕ ಕಿಟಕಿಯನ್ನು  ಒದಗಿಸಿರುವ ವಿದ್ವಾಂಸರಾದ ಡಾ. ವೀರೇಶ ಬಡಿಗೇರ ಅವರ ನ್ನು ಅಭಿನಂದಿಸುತ್ತಾ ಮೌನೇಶ್ವರರ ವಚನಗಳಿಗೆ ಒಲಿದ ಎಲ್ಲ ವಿದ್ವಾಂಸರನ್ನು  ನೆನೆದು ಈ ಕೆಲ‌ಮಾತು ಮುಗಿಸುತ್ತೇನೆ.

.ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ

ಹಂಪಿ ವಿಶ್ವ ವಿದ್ಯಾಲಯದ. ಹಿರಿಯ ಪ್ರಾಧ್ಯಾಪಕರು ಕನ್ನಡದ ಹಿರಿಯ ವಿದ್ವಾಂಸರು ಡಾ.ವೀರೇಶ ಬಡಿಗೇರ ಸದಾ ಕಾವ್ಯ ಸಂಶೋಧನೆ ಹಸ್ತಪ್ರತಿಗಳ ಗುಂಗು ತಲೆಯೊಳಗಿಟ್ಟುಕೊಂಡೇ ನಾಡಸುತ್ತುವ ಏಕತಾರಿ ಅವರು.ಕಲೆ ,ಕಲಾವಿದ ಹೀಗೆ ಹಲವು ಹತ್ತು ಹೊಸ ಯೋಜನೆಗಳೊಡನೆ ಅವರು ನಮ್ಮತ್ತ ಬರುತ್ತಾರೆ.ಈಗ ನನ್ನ ಕೈಲಿರುವ ಪುಸ್ತಕ ಅಂಥದೇ ಒಂದು ಹೊಸ ಪ್ರಯೋಗ.

ಕನ್ನಡದ ತತ್ವಪದ ಇತಿಹಾಸದ ಒಂದು ಸದಾ ನುಡಿಯುವ ಗಂಟೆ ನಾದ ದಂತೆ ಇರುವ  ನೆಲಮೂಲದ ದೇಶಿ ಸಂತ ತಿಂಥಿಣಿಯ ಮೌನೇಶ್ವರರು. ಜನಮಾನಸದಲ್ಲಿ ತಿಂತಿಣಿ ಮೋನಪ್ಪಯ್ಯಎಂದೇ ಹೆಸರಾದ ಈ ಸಂತ ಹದಿನೇಳನೆಯ ಶತಮಾನದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆ ಸಾರಿದವರು. ಜೀವನವೇ ಅವರ ಸಮಕಾಲೀನ ಅನೇಕ ಸಂತರಂತೆ ನಿಗೂಢ ವಿಸ್ಮಯ.ನಮಗಿಂದು ಕೇವಲ ನಮಗಿಂತ ನೂರೇ ವರ್ಷ ಹಿಂದಿದಗದ ಹುಬ್ಬಳ್ಳಿ ಸಿದ್ದಾರೂಢರ ಬಗ್ಗೆ ,ನವಲಗುಂದ ನಾಗಲಿಂಗ ಯತಿಗಳ ಬಗ್ಗೆ ಸಮಗಾರ ಬೀಮವ್ವನ ಬಗ್ಗೆ ..ಬರೆಯೊದಕ್ಕೆ ಬಹಳ ಸಂಗತಿಗಳೇ ಗೊತ್ತಿಲ್ಲ.ಅವರನ್ನು ಕುರಿತು ನಮ್ಮ ಸಾಹಿತ್ಯ ಲೋಕ ತೋರಿದ ಅವಜ್ಞೆಯೂ  ಕುರಿತು ನಾವೀಗ ವಿಷಾದಪಡುವ ಸ್ಥಿತಿಯಲ್ಲಿಯೂ ಇಲ್ಲ

 ತಿಂಥಿಣಿಮೌನೇಶ್ವರರು ಹಿಂದೂಮುಸ್ಲಿಮ್ ಸಾಮರಸ್ಯ ಸಾರಿದ ಸಂತ .ಇವರು ಹದಿನಾರನೆಯ ಶತಮಾನದ ಬಸೊತ್ತರ ಕಾಲದ ವಚನಕಾರ ಹಂಪೆಯ ಎಮ್ಮೆ ಬಸವನನ್ನು ಸ್ಮರಿಸಿದ್ದಾನೆ ಎಂದು ವಿದ್ವಾಂಸರು ಹೇಳುತ್ತಾರೆ.ಇದೇ ಮೊದಲಾದ ದಾಖಲೆಗಳ ಆಧಾರದ ಮೇಲೆ ಇವರ ಕಾಲವನ್ನು ಹದಿನಾರು-ಹದಿನೇಳನೆಯ ಶತಮಾನ ಎಂದು ಊಹಿಸುತ್ತಾರೆ.ಮೂಲತಃ ಸುರಪುರ ತಾಲೂಕಿನ ಗೋನಾಳದವರು ವಿಶ್ವಕರ್ಮ ಸಮಾಜಕ್ಕೆ ಸೇರಿದ ವರಾದ ಇವರ ತಂದೆ ಶೇಷಪ್ಪ( ಹಾವಪ್ಪ) ತಾಯಿ ಶೇಷಕ್ಕ(ಹಾವಕ್ಕ) ಮಕ್ಕಳಿಲ್ಲದ ತಂದೆ ತಸಯಿಗಳಿಗೆ ಶಿವನೇ ಮಗುವಿನ ರೂಪದಲ್ಲಿ ಜನಿಸಿ ಬಂದರೆಂದು ಕಥೆಗಳು ಹೇಳುತ್ತವೆ.ವಯಕ್ತಿಕ ವಿವರಗಳು ಅಷ್ಟಾಗಿ ದೊರೆಯುವದಿಲ್ಲ.ವಚನಗಳಲ್ಲಿ ಗುಂಡಿ ಬಸವಯ್ಯನೆಂಬವರು ತಮ್ಮ ಗುರುಗಳು ಎಂದು ಹೇಳಿಕೊಂಡಿದ್ದಾರೆ  ಸಂಸಾರದ ಕಡೆ ಅಷ್ಟಾಗಿ ಲಕ್ಷ್ಯ ಕೊಡದ ಈ ಮಹಾನುಭಾವರು ನಾಡಿನುದ್ದಕ್ಕೂ ಪ್ರವಾಸ ಮಾಡಿದರು. ಲಕ್ಷ್ಮೇಶ್ವರ,ಉಳವಿ,ಕಲ್ಯಾಣ,ವಿಜಯಪುರ,ಸುರಪುರ ಮೊದಲಾದೆಡೆ ಅವರ ಸ್ಮಾರಕಗಳಿವೆ.ಅಂತಿಮವಾಗಿ ತಿಂಥಿಣಿಯಲ್ಲಿ ತಮ್ಮಕಡೆಯ ದಿನಗಳನ್ನು ಕಳೆದು ಅಲ್ಕಿಯೇ ಐಕ್ಯರಾದರು. ಇಂದು ಮೌನೇಶ್ವರ ಕ್ಷೇತ್ರವೆಂದು ಹೆಸರಾದ ತಿಂಥಿಣಿಯಲ್ಲಿ ಅವರ ಉಭಯ ಧರ್ಮಗಳಿಂದ ಪೂಜಿಸಲ್ಪಡುತ್ತಿದ್ದಾರೆ.

ಅವರು ಬದುಕಿದ ಕಾಲ ಮತ್ತು ಪ್ರದೇಶ ಉರ್ದು ಮತ್ತು ಕನ್ನಡಗಳೆರಡೂ ಪ್ರಬಲವಾಗಿ ಚಲಾವಣೆಯಲ್ಲಿದ್ದ ಕಾಲ.ಮುಸ್ಲಿಂ ಸುಲ್ತಾನರ ಆಡಳಿತ ಮತ್ತು ಹೋರಾಟಗಳು ನಿರಂತರ ನಡೆದೆ ಇದ್ದವು ಇವರ ಸಾಹಿತ್ಯದಲ್ಲಿ ಅಪಾರ ಉರ್ದು ಪ್ರಭಾವ ತೋರುತ್ತದೆ.

ಬರೀ ಧಾರ್ಮಿಕ ಸಂತರಾಗಿ ಹೆಸರಾಗದೇ ಸ್ವತಃ ಕವಿಯಾಗಿ ಶತಕ,ಕಾಲಜ್ಞಾನ,ದಂಡಕ, ಸುವ್ವಿ ಹಾಡು,ಆರತಿ ಹಾಡು,ಬಜನಾ ಪದ ಮತ್ತುವಚನ ಮೊದಲಾದ ಸಾಹಿತ್ಯ ಪ್ರಕಾರಗಳಲ್ಕಿ ಅವರು ಸಾಹಿತ್ಯ ರಚಿಸಿದ್ದಾರೆ.

ತಿಂತಿಣಿ ಮೌನೇಶರರ ಸಾಹಿತ್ಯದಲ್ಲಿ ಉರ್ದು ಪ್ರಭಾವ ಅಧಿಕವಾಗಿದೆ.ವಿಶಗವಕರ್ಮದವರಾದ  ಅವರು ವೀರಶೈವ  ತತ್ವ ವಿಚಾರಗಳಿಂದ ಪ್ರಭಾವಿತರಾದವರು. ಒಂದು ವಚನದಲ್ಲಿ ತಾನು – ಅಕ್ಕನಾಗಮನ ಮಗ ಚನ್ನಬಸವಣ್ಣನವರ ಅವತಾರ ಎಞಮದು ಹೇಳಿಕೊಳ್ಳುವದಾಗಿ ತಿಳಿದು ಬಂದಿದೆ ವಚನ ಹೀಗಿದೆ-

ಅಕ್ಕನಾಗಲೆಯ ಮಗ, ಚಿಕ್ಕ ಚೆನ್ನಬಸವಣ್ಣ

ಅಕ್ಕಸಾಲೆಯರ ಒಡಲೊಳಗೆ ಜನಿಸಿನಿಂತು

ಲೆಕ್ಕ ಲೆಕ್ಕ ಕ್ಕೆ ಝಡತಿಯ ಕೇಳಲೇಕೋ

ತಕ್ಕಡಿ ತ್ರಾಸು ಪಿಡಿದು ನಿಂತಾತ

ಎಂಬ ವಿವರಗಳಿವೆ. ಪಂಚ ವಿಶ್ವಕರ್ಮರಲ್ಲಿ ತಕ್ಕಡಿ ತ್ರಾಸು ಹಿಡಿಯುವವರು ಅಕ್ಕಸಾಲಿಗರು,ತಾನು ಅವರ ಮಗ ಎಂದು ಹೇಳಿಕೊಳ್ಳುತ್ತಾರೆ. ಅವರ ಔಚನಗಳಲ್ಲಿ ಸೇರಿರುವ ಉರ್ದು  ಪ್ರಭಾವ ಮತ್ತು ದಾರ್ಮಿಕ ಸಾಮರಸ್ಯಕ್ಕೆ ಅವರನ್ನು ಸ್ತುತಿಸುವ ಜನ ಹೇಳುವ ಈ ವಚನ ಹೀಗಿದೆ

ಓಂ ಏಕಲಾಖ್ ಐಂಶೀ ಹಜಾರ್ವ

ಪಾಞಮಚೋಪೀರ್ ಪೈಗಂನರ ಮೌನದೀನ

ಜಿತಾಪೀರ ಪೈಗಂಬರ ಮೌನದೀನ

ಕಾಶಿಪತಿ ಗಾಧರ ಹರಹರ ಮಹಾದೇವ

ಎಂದು ಸಾರಿದವರು ಮೌನೇಶ್ವರರು. ಶಿವ ಮತ್ತು ಪೈಗಂಬರ ಬೇರೆ ಬೇರೆ ಯಲ್ಲ ಎನ್ನು ಅರ್ಥ ಆ ವಚನದಲ್ಲಿದೆ.ಅವರು ಲೋಕದ ಅಜ್ಞಾನವನ್ನು ಕಳೆಯಲು ಬಂದ ಮಹಾಮಹಿಮರು .ತಮ್ಮದು ” ಇಚ್ಚೆಯಿಚ್ಚೆಗೆ ಮಾಡುವ ಹುಚ್ಚರ ಮಾತಲ್ಲ,  ನಿಶ್ಚಿಂತ ದಿಂದ ನಿಜದ ಪರಬ್ರಹ್ಮದಚ್ಚ  ವರಿಕಲ್ಲು ಪಿಡಕೊಂಡ ಬಂದಿನಿ” ಎಂದು ತಮ್ಮದು ಬಿಕ ದಾರಿಯಲ್ಲ,ನಿಜದ ದಾರಿ ಎಂದು ಸಾರುತ್ತಾರೆ.

ವಚನಕಾರರಾಗಿಮೌನೇಶ್ವರರು

ವಚನ ಸಾಹಿತ್ಯದ ಎರಡನೆಯ ಕಾಲಘಟ್ಟವಾದ ಹದಿನಾರು ಹದಿನೇಳನೆಯ ಶತಮಾನದಲ್ಲಿ ಬರುವ ವಚನಕಾರರಲ್ಲಿ ಮೌನೇಶ್ವರ ವಚನಗಳೂ ಅಧಿಕವಿವೆ.ಬಸವಣ್ಣ ಅಂಕಿತದಿಂದ ಅವರು ೮೦೦ ವಚನಗಳನ್ನು ಬರೆದಿದ್ದಾರೆ ಎನ್ನುವ ಡಾ.ವೀರೇಶ ಬಡಿಗೇರ ಅವರು ಇವರ ವಚನಗಞಲನ್ನು ಶಿವ ಶರಣರ ಸಮಗ್ರ ವಚನ ಸಂಪುಟಗಳಲ್ಲಿ ಸೇರಿಲ್ಲ ಎನ್ನುತ್ತಾರೆ.ಅವರ ಮಾತುಗಳನ್ನೇ ಗಮನಿಸಬಹುದು.

” ಕನ್ನಡ ಸಾಹಿತ್ಯ ಅಧ್ಯಯನ ಮತ್ತುಪ್ರಕಟಣ ರಾಜಕಾರಣದಲ್ಕಿ ಮೌನೇಶ್ವರ ಮತ್ತು ಅವರ ವಚನಗಳು ಉಪೇಕ್ಷೆಗೆ ಒಳಗಾಗಿವೆ.೮೦೦ರಷ್ಟು ವಚನಗಳನ್ನು ರಚಿಸಿದ್ದರೂ ,ಶಿಚಶರಣರ ಸಮಗ್ರ ವಚನ ಸಂಪುಟಗಳಲ್ಕಿಯೂ ಸೇರದ,ತತ್ವಪದಕಾರರ ಸಮಗ್ರ ಸಂಪುಟಗಳಲ್ಕಿಯೂ ದಾಖಲಾಗದ ನತದ್ಋಷ್ಟ ವಚನಕಾರ ಮೌನೇಶ್ವರರು” 

( ಡಾ .ವಿರೇಶ ಬಡಿಗೇರ – ಮೌನೇಶ್ವರರ ವಚನ ವಿಚಾರ ಸಂಪಾದಕೀಯ ಪು- VII) ಎನ್ನುವ ಮಾತುಗಳಿಗೆ ಅರ್ಥವಿದೆಯನ್ನಿಸುತ್ತದೆ. ಅವರ ವಚನಗಳು ಆ ಸಮಗ್ರ ಸಂಪುಟಗಳಲ್ಲಿ ಏಕೆ ಸೇರಲಿಲ್ಲವೋ ತಿಳಿಯದು.

ಮೌನೇಶ್ವರರ ವಚನ ವಿಚಾರ:

ಇದು ಡಾ. ವಿರೇಶ ಬಡಿಗೇರ ಅವರು ಸಂಪಾದಿಸಿದ ಕೃತಿ.ಕನ್ನಡ ಸಂಸ್ಕೃತಿಯ ಸಂಶೋಧನೆ ಮತ್ತು ಸಾಹಿತ್ಯ ಚರ್ಚೆಯಲ್ಲಿ ಈಗ ಬಹು ದೊಡ್ಡ ಹೆಸರು ಡಾ.ವೀರೇಶ ಅವರದು.ಅಷ್ಟಾಗಿ ಅದ್ಯಯನಕ್ಕೆ ಒಳಗಾಗದ ಒಳಗಾಗಿರುವ ವಿಶ್ವಕರ್ಮ, ಪಾಂಚಾಳ ಸಂಸ್ಕೃತಿಯ ಕುರಿತು ಅವರು ಮಾಡಿರುವ , ಮಾಡುತ್ತಿರುವ ಅಧ್ಯಯನಗಳಿಗೆ ಬಹು ಮಹತ್ವದ ಸ್ಥಾನವಿದೆ. ಇಲ್ಲಿ ಅವರು ಮೌನೇಶ್ವರರ ೧೦೫ ವಚನಗಳನ್ನು ಸ್ವತಃ ತಾವೇ ಅಲ್ಲದೇ ಡಾ .ವಿರೇಶ ಅವರೇ ಚರ್ಚಿಸಿದ ಹತ್ತು ವಚನಗಳು  ಅಲ್ಲದೇ, ಡಾ.ವಿರೂಪಾಕ್ಷ ಬಡಿಗೇರ,,ಟಿಕೆ ಗಂಗಾಧರ ಪತ್ತಾರ ಡಾ.ಹಂದ್ರಾಳ ಗವಿಸಿದ್ದಪ್ಪ, ಡಾ.ಗಾಯತ್ರಿ.ಟಿ ಮೊದಲಾದವರಿಂದ ಮತ್ತು ಕೆಲ ಹೊಸ ಯುವ ಸಂಶೋಧಕರಿಂದ ಮೂರೋ ನಾಲ್ಕೋ ವಚನಗಳನ್ನು ಅದ್ಯಯನ ಮಾಡಿಸಿ ಅವುಗಳ ಕುರಿತು ಒಂದೊಂದು ಪುಟವೋ ಅರ್ಧ ಪುಟದಷ್ಟೋ ವಿಶ್ಲೇಷಣೆಯನ್ನು ಬರೆಸಿದ್ದಾರೆ.ಸ್ವತಃ ತಾವೇ ಹತ್ತಾರು ವಚನಗಳ ವಿವರಣೆ ನೀಡಿದ್ದಾರೆ.

 ಮೌನೇಶ್ವರರ ವಚನಗಳಲ್ಕಿ ವಿಶ್ವಕರ್ಮರಾದಿಯಾಗಿ ಪಂಚಾಳರ ಬಗ್ಗೆ ಮತ್ತೆ‌ ಮತ್ತೆ ಉಲ್ಲೇಖಗಳು ಬರುತ್ತವೆ. ಚನ್ನಬಸವಣ್ಣನ ಅವತಾರವೇ ತಾವೆಂದು ಸಾರುವ ಅವರು

ಅಕ್ಕಸಾಲಿಯ ಮಗ ಚಿಕ್ಕ ಚನ್ನಬಸವಣ್ಣ

ಅರ್ಕಸಾಲೆರ ಒಡಲೊಳಗೆ,ಜನಿಸಿ ನಿಂತು ,ಮರ್ತ್ಯದ

ಲೆಕ್ಕ ಲೆಕ್ಕಕ್ಕೆ ಜಡತಿಯ ಕೇಳಬೇಕೆಂದು ಮರ್ತ್ಯಕ್ಕೆ

ತಕ್ಜಡಿ ತ್ರಾಸು ಹಿಡಿದುಕೊಂಡು ನಿಂತಾತನ ಕೂಡ

ಠಕ್ಕಿನ‌ ಕೆಲಸವು‌ ನಡೆಯದು…

ಎನ್ನುತ್ತಾರೆ. ಇಲ್ಲಿ‌ ಮಹತ್ವದ ಅಂಶವೆಂದರೆ ಈಚಿನ ವಚನಕಾರನಾದರೂ ಮೌನೇಶ್ವರರು ತಮ್ಮಕಾಯಕ ಕುರಿತು ತಕ್ಕಡಿ ತ್ರಾಸು( ಬಂಗಾರ ತೂಗಲು ಬಳಸುವ ಚಿಕ್ಕತಕ್ಕಡಿ) ಪತ್ತಾರ ಕಾಯಕದವರು ಹಿಡಿದಿರುವದನ್ನು, ಜೊತೆಗೆ ಸಮಾಜದಲ್ಲಿ ಲೆಕ್ಕಾಚಾರಕ್ಕೆ ಹೆಸರಾದವರು ಎಂಬುದನ್ನು ಮತ್ತು ಅವರ ಮುಂದೆ ಮೋಸ ವಂಚನೆ ನಡೆಯುವದಿಲ್ಲ ಎಂಬುದನ್ನು ಸಾರುತ್ತಾರೆ. ಅಕ್ಕಸಾಲೆಯರೇ‌ಎಲ್ಲದಕ್ಕೂಮೂಲ ಎಂಬ ಅಭಿಮಾನ ವಚನಕಾರನಿಗೆ ಅಂತೆಯೆ ” ದಿಕ್ಕಿನ ದೇವರೆಲ್ಲಾ ಸುತ್ತಿಗೆಯ ಮಕ್ಕಳು” ಎನ್ನುತ್ತಾರೆ.ಒಂದು ರೀತಿಯಲ್ಕಿ ಅದು ಸತ್ಯವೂ ಇದೆ ಪೂಜಿಸುವೆಲ್ಲ‌ಲೋಹದ ಮೂರ್ತಿಗಳೂ ತಯಾರಾಗುವದು ಅವರ ಕೈಯಲ್ಲಿಯೇ ಅಲ್ಲವೇ?  ಇನ್ನೊಂದು ಅರ್ಥ ದಲ್ಲಿ ಎಲ್ಲದರ ಸೃಷ್ಟಿಕರ್ತ ವಿಶ್ವಕರ್ಮರು ಎಂಬ ನಂಬಿಕೆ ಯೂ ಅಲ್ಲಿದೆ. ಆ ದೇವರು ಈ ದೇವರು ಎಂದು ಕಚ್ಚಾಡುವವರಿಗೆ ಮೌನೇಶ್ವರರ ಈ ವಚನ ಎಚ್ಚರಿಕೆಯ ಘಂಟೆಯಾಗಿದೆ.

ಹಲವು ಮೂರ್ತಿಯ ಮಾಡಿದ

ಉಳಿಯೊಂದೇ,ಕೊಡತಿಯೊಂದೇ

ಶಿಲೆಯಲ್ಲ ಒಂದೇ ಶಿಲ್ಪಿ ಒಂದೇ

ಕೆಲದಾಡಬೇಡಿ ಶರಣರಿರಾ,ಬಸವಣ್ಣ

ಎನ್ಬುವಲ್ಲಿ ದೇವರ ಹೆಸರಿನಲ್ಕಿ ಬಡಿದಾಡಬೇಡಿರಿ ( ಕೆಲದಾಡು= ಜಗಳವಾಡು) ಬೇರೆ ಬೇರೆ ಹೆಸರಿನಿಂದ ನೀವು ಪೂಜಿಸುವ ದೇವರೆಲ್ಲ ತಯಾರಾದದ್ದು ನಮ್ಮ ಉಳಿ,ಕೊಡತಿ ಇವುಗಳಿಂದ ಎಂದು ಹೇಳುವಲ್ಲಿ ದೇವನೊಬ್ಬ ಎಂಬ ಚಿಂತನೆಯ ಜೊತೆಗೆ ದೇವರು ಧರ್ಮದ ಹೆಸರಿನಲ್ಕಿ ಕಚ್ಷಾಡುವವರಿಗೆ ಎಚ್ಚರಿಕೆಯೂ ಇದೆ.ಈ ದೇವರನ್ನೆಲ್ಲ ನಿರ್ಮಿಸಿದವರೂ ನಾವೇ ಎಂಬ ಸೂಕ್ಷ್ಮ ಅಗ್ಗಳಿಕೆಯೂ ಇದೆ.

 ಪ್ರತಿಯೊಬ್ಬ ಶರಣರೂ ತಮ್ಮ ಜನಾಂಗಕ್ಕೆ ಸೇರಿದವರೇ ಎಂದು ಅಭಿಮಾನದಿಂದ ಹೇಳಿ ಕೊಳ್ಳುವದರ ಜೊತೆಗೆ ಒಳಿತಾದುದೆಲ್ಲ ತಮ್ಮಲ್ಕಿಯೇ ಘಟಿಸಿದೆ ಎಂದು ಹೇಳುವ ಅಭಿಮಾನ ಮೂಲವಾಗಿ ಕೆಲವು ವಚನಗಳಲ್ಲಿ ಅಲ್ಲಮಪ್ರಭು ಬಸವಣ್ಙವರು ಎಲ್ಲರೂ ತಮ್ಮವರು ಎಂದು ಹೇಳುವ ಪ್ರಯತ್ನ‌ ಮಾಡುತ್ತಾರೆ. ಅಲ್ಲಮಪ್ರಭುವೂ ಅಕ್ಕಸಾಲಿಗನೆನುವ ಮೌನೇಶ್ವರರು

ಅಕ್ಕಸಾಲೆಯು ತಾನಾದ ಅಲ್ಲಮಪ್ರಭುದೇವ

ಇಕ್ಕಳವ ಪಿಡಿದು,ಕೈಯಲಿ ಸುತಗತಿಗೆ ಹಿಡಿದು

ಸೊಕ್ಕಿದವರ ಹಲ್ಲು ಮುರಿಯುತ ಬಂದಾನೆ ,ಬಸವಣ್ಣ

ಎನ್ನುವಲ್ಲಿ ಅಲ್ಕಮಪ್ರಭುದೇವರು ಶರಣರಿಗೆ ಗುರುಸ್ವರೂಪದವರಾಗಿದ್ದು ತಪ್ಪಿದವರನ್ನು ಸ್ವಲ್ಪ ಉಗ್ರವಾಗಿಯೇ  ಶಿಕ್ಷಿಸುತ್ತಿದ್ದ ಬಗ್ಗೆ ಸೂಚನೆ ನೀಡುತ್ತಾರೆ. ಪಾಂಚಾಳರು ( ಬಡಿಗ, ಕಮ್ಮಾರ ಶಿಲ್ಪಕಾರ, ಕಂಚುಗಾರ, ಪತ್ತಾರ) ಈ ಐದೂ ಜನಾಂಗಗಳ ಬಗೆಗೆ  ಮೌನೇಶ್ವರರ ವಚನಗಳಲ್ಲಿ ಅದರಲ್ಲಿನ ಒಂದು ಗುಂಪಾದ ಬಡಿಗ ಕಮ್ಮಾರರ ಬಗ್ಗೆ  ಸಾಕಷ್ಟು ವಿವರಗಳಿವೆ

ಬಡಿಗ ಕಮ್ಮಾರರು ಪೊಡವಿಗಧಿ‌ಕರ್ತರು

ಬಡಿದು, ಬತ್ತೀಸ ,ಆಯುದವ ಮಾಡಿ

ಸರ್ವರಿಗೆ ಕೊಡುವರಯ್ಯ ಬಸವಣ್ಣನ್ನುವ ವಚನಬಡಿಗ‌ಕಮ್ಮಾರರ ಮಹತ್ವ ಸಾರುತ್ತದೆ

      ‌ಶರಣರು ತಾವು ಜನಿಸಿದ ಕುಲ ಕೀಳು ಎಂದು ಯಾವಾಗಲೂ ಭಾವಿಸುವದಿಲ್ಲ.ಅಷ್ಟಲ್ಲದೆ ತಮ್ಮ‌ಕಸಬು ಕಾಯಕಗಳನ್ನು ಬಣ್ಣಿಸುತ್ತ ನಾವೂ ಯಾರಿಗೇನು ಕಡಿಮೆಯಿಲ್ಲ ಎಂದು ಸಾರುತ್ತಾರೆ.ಇದು ಜಾತಿ ಪ್ರಜ್ಞೆಯಲ್ಲ.ಆದರೆ ಆ ಹುಟ್ಟಿದ ತಾಣ ಬಗೆಗಿರುವ ಅಭಿಮಾನ. ಇಂತಹ ಹನ್ನೆರಡನೆಯ ಶತಮಾನದ ನೂರಾರು ವಚನಗಳನ್ನು ಉದಾಹರಿ ಸಬಹುದು. ಹಾಗೆಯೇ ಮೌನೇಶ್ವರರು ತಾವು ಜನಿಸಿದ ವಿಶ್ವಕರ್ಮ ರ ಬಗೆಗೆ  ಇದೇ ಬಗೆಯ ಭಾವವನ್ನು ಹೊಂದಿದ್ದಾರೆ.ತಮ್ಮನ್ನು  ಹೀನ  ಎಂದು ಕಾಣುವವರ ಕುರಿತು ಅವರು ರಚಿಸಿದ ಈ ವಚನ ತಕ್ಕ ಉತ್ತರ ವಾಗಿದೆ.

ಇಕ್ಕುಳವೆ‌ ಕುಲದೈವ  ಸುತ್ತಿಗೆಯೆ ಮನಿದೈವ

ಬೊಕ್ಕಸಗೋಲ ಗಜದಂಡ ನೆತ್ತೀಲಿ ತೆತ್ತೀಸ

ಕೋಟೆ ದೇಅಧಿದೇರ್ಕಳ

ನಿರ್ಮಿಸಿದ ಮೇಲೆ ಕೆಟ್ಟ ಕುಲ ಎನಬಹುದೆ ,ಇದು

ಅಲ್ಲಮನ ಕುಲವು ,ಬಸವಣ್ಣ

ತಮ್ಮ‌ಕುಲದ ಮಹತಿ ಹೇಳುತ್ತಲೇ ಅದು ಅಲ್ಲಮನ ಕುಲ ಎನ್ನಿವದು ಮಹತ್ವದ್ದಾಗಿದೆ.

ಜಗತ್ತಿನಲ್ಲಿ ನಾನು ಶ್ರೇಷ್ಠ ನೀನು ಶ್ರೇಷ್ಠ ಎನ್ನುವವರಿಗೆ ಮೌನೇಶ್ವರರು ನೀಡುವ ಪೆಟ್ಟು ಇದು- ಆ ದಾರ,ಈ ದಾರ,ಶಿವದಾರ,ಉಡದಾರ ಇವೆಲ್ಲದಕ್ಕೂ ಆ ಸೃಷ್ಟಿಕರ್ತ ವಿಶ್ವಕರ್ಮ ಆಧಾರ” (ಪು-೩೧} ಎನ್ನುವ ವಚನದ ಸಾಲು ಯಾರೂ ವಿಶ್ವಕರ್ಮನಿಗಂತ ಮೇಲಿನವರಿಲ್ಲ ಎನ್ನುತ್ತದೆ.ಕಂಬಾರರದು ಪಂಚಾಳರಲ್ಲಿ ಒಂದು ವರ್ಗ.ಅವರು ಕಬ್ಬಣವನ್ನು ಕಾಸಿ ರೈತರಿಗೆ ಉಪಯುಕ್ತವಾದ ವಸ್ತುಗಳನ್ನು ಮಾಡಿಕೊಡುವವರು. ಅವರ‌ಕಾಯಕದ ಆಧಾರ ಕುಲುಮಿ.ಒಂದುರೀತಿಯಲ್ಲಿ ಜಗವೂ ಕುಲುಮೆಯೆ.ಇದನ್ಬೆ ಬಸವಣ್ಣನವರು ಕಸಾಲೆ ಎನ್ನುತ್ತಾರೆ.ಆ ಕಂಬಾರರ ಕುರಿತು ಮೌನೇಶ್ವರರು ಹೇಳುವ ವಚನ ಹೀಗಿದೆ.

ಕುಲುಮೆ  ಹುಟ್ಟದ ಮುನ್ನ  ಕುಲ ಛಲವೆಲ್ಲೈತಿ

ಹಲವು ಉದ್ಯೋಗ ಆಯುಧದ ಪರಿತ್ಯಾಗ, ಲೋಕದ ಕಿಲುಮೆ ಕೀಟಕದ ಪುಳಿಗಳಿರಾ ನಿಮ್ಮ ಹಲವು

ಶಾಸ್ರ್ತ್ರಗಳ ಬಿಡಬೇಕು

ಎನ್ನುವಲ್ಲಿ ಕಂಬಾರರ ಮಹತ್ವ ವಿವರಿಸಿದ್ದರೂ ವಿಶಾಲಾರ್ಥದಲ್ಲಿ ಜಾತಿ ಡಂಭವನ್ನು ವಚನಕಾರ ತಿರಸ್ಕರಿದ್ದಾನೆ.ಜೊತೆಗೆ ದುಡಿಮೆ ಸಂಸ್ಕೃತಿಯನ್ನು ಬಬಲಿಸುತ್ತಾನೆ.ಅಂತೆಯೆ ಮುಂದುವರೆದು ” ಕುಲ ಹದಿನೆಂಟಕ್ಕೆ ಕುಲುಮಿಯೆ ಶಿಕ್ಷಾ ಗುರುವು ” ಇಂತಹ ವಚನಗಳು ದುಡಿಯುವ ವರ್ಗಕ್ಕೆ ಅಭಿಮಾನ ಮೂಡಿಸುತ್ತವೆ. ಪಂಚಾಳರ ಕುಲದೇವತೆ ಕಾಳಮ್ಮ.ಆಕೆ ನೋಡಲು‌ ಕಪ್ಪು.ದಕ್ಷಬ್ರಹ್ಮನ ಯಜ್ಞದಲ್ಕಿ ಉರಿದು ಸುಟ್ಟಾದ ಪಾರ್ವತಿಯ ರೂಪವೇ ಕಪ್ಪಾಗಿ ಕಾಳಮ್ಮನಾದದ್ದು ಎಂದು ಪುರಾಣಗಳು ವಿವರಿಸುತ್ತವೆ.ಶೈವರು ಪಾರ್ವತಿಯನ್ನು ಪೂಜಿಸಿದರೆ, ವಿಶ್ವಕರ್ಮರು ಕಾಳಿಯ ಆರಾಧಕರು.ಹೀಗಾಗಿ ಕಾಳಮ್ಮನ ನ್ನು

ಕಾಳಮ್ಮನೆಂಬಾಕಿ ಏಳೆಳು ಲೋಕದ ಕೀರ್ತಿ

ಕೀಳು ಮಾದಿಗರ ಕಾಳಿಕೆಯೊಳು ಅಡಗಿಹಳು ಸಕಲ

ಕಳೆಯಲ್ಲ ಆಕೆ ಒಡಲೊಳಗೆ, ಬಸವಣ್ಣ

ಎಂದು ಸಕಲರನ್ನು ಕಾಯುವ ಶಕ್ತಿ ದೇವತೆಯ ಚಿತ್ರನೀಡುತ್ತಾರೆ

ದೈವವನ್ನು ನಂಬಿದವರು ಶರಣರು.ಅವರ ದಾರಿಯಲ್ಲಿಯೇ ಸಾಗಿರುವ ಮೌನೇಶ್ವರರು ಜಗತ್ತು ನಡೆದಿರುವದು ಶಿವನ ಕೃಪೆಯಿಂದ  ಎಂದು ದೃಡವಾಗಿ ನಂಬಿದವರು.ಮೇಘರಾಜನಿಲ್ಲದೆ ಹೊಲಗಳು ಸಾಗವು,ಲೋಹಾರನಿಲ್ಲದೆ ಹರಿಗೋಲು ಸಾಗವು ಹಾಗೆಯೇ ದೇವನೆಂಬ ಶಕ್ತಿಯಿಂದಲೇ ಈ ಜಗತ್ತು ನಡೆದಿಸೆ ಎನ್ನು ಅವರು

ಹಡೆವುದು,ಮುಡಿವುದು,ಕೊಡುವದು ಪಡೆವುದು

ಮೃಡರೂಪನಲ್ಲದಿನ್ನಾರು? ತ್ರಿಭುವನದೊಳು

ಕೊಡುವವರಿಲ್ಲ ಬಸವಣ್ಣ

ಸರ್ವಜ್ಞನ ವಚನಗಳನ್ನು ಹೋಲುವ ಈ ವಚನ ತುಂಬ ಸಾಂದ್ರವಾಗಿ ಶಿವನ ಕುರಿತು ಹೇಳಿದೆ.ಇಳೆ ನಿಮ್ಮ‌ದಾನ,ಬೆಳೆ ನಿಮ್ಮ ದಾನ..ಮೊದಲಾಗಿ ಹನ್ನೆರಡನೆಯ ಶತಮಾನದ ಶರಣರು ಸಾರುವಂತೆ ಎಲ್ಲವೂ ಆ ಶಿವನದೇ ಎನ್ನುವ ಭಾವ ಈ ವಚನದಲ್ಲೂ ಇದೆ. ಜನಪದರಂತೆ  ” ಸೊಮ್ಮು ಶಿವನದು‌ ಕಾಣೋ” ಎಂದು ನಂಬುತ್ತಾರೆ,

 ಮೌನೇಶ್ವರರು ನಿಸ್ಸಂಶಯವಾಗಿ ಹನ್ನೆರಡನೆ ಶತಮಾನದ ಶರಣರ ವಿಚಾರಗಳಿಂದ ಪ್ರಭಾವಿತರಾದವರು.ಅವರ ವಚನಗಳಲ್ಕಿ ಅಲ್ಲಲ್ಲಿ ವಚನಕಾರರು ಸಾರಿದ ಸಿದ್ದಾಂತಗಳ ಪ್ರಸ್ತಾಪವಿದೆ.ಜೊತೆಗೆ ಹಲವಾರು ಶರಣರನ್ನು ಗೌರವದಿಂದ ನೆನೆಯುತ್ತಾರೆ.ಅವರ ಅಂಕಿತವೇ ಬಸವಣ್ಣನೆಂದಿದೆ.ಚನ್ನಬಸವಣ್ಣ,ಅಲ್ಲಮಪ್ರಭು,ಕಕ್ಕಯ್ಯ ಮೊದಲಾದ ಶರಣರ ಸ್ತಿತಿ ಕಾಣಿಸುತ್ತದೆ.ನುಲಿಯ ಚಂದಯ್ಯನವರನ್ನು 

ಚಂದಕ್ಕೆ ಲಿಂಗವನು ಮಂದೆಲ್ಲ ಕಟ್ಟಿದರು ನಮ್ಮ

ಚಂದಯ್ಯನಂತೆ ದೃಡವಿಲ್ಲ,ಲೋಕದ

ಅಂಧಕರು ಧರಿಸಿದ ಫಲವೇನು ?

ಎಂದು ಪ್ರಶ್ನಿಸುವಲ್ಲಿ ಶರಣರ ವಿಚಾರ ಅನುಸರಿಸದೆ ನಾವು ಲಿಂಗ ಧರಿಸಿದರೆ ಕುರುಡರಾಗುತ್ತೇವೆ ಎನ್ನುವ  ಚುಚ್ಚುವಿಕೆಯೂ ಇದೆ,ಶರಣರ ದಾರಿಯ ಕುರಿತು ಗೌರವವೂ ಇದೆ.

ಮೌನೇಶ್ವರರ ಲೋಕದೃಷ್ಟಿ ಅತಿ  ಮುಖ್ಯವಾ ದುದು.ಅವರು  ಆಲೋಚಿಸದ ವಿಷಯಗಳೇ ಇಲ್ಲ .ಜಗತ್ತಿನಲ್ಲಿ ತಂದೆ ತಾಯಿಗಳು‌ ಮಕ್ಕಳನ್ನು ಹಡೆದರೆ ಮುಗಿಯಲಿಲ್ಲ.ಅವರು ಯೋಗ್ಯರಾಗಿ ಬಾಳುವಂತೆ ಸಂಸ್ಕಾರ ಕೊಡುವದೂ ಅಗತ್ಯ.ಅದು ಅವರ ಜವಾಬ್ದಾರಿ‌ ಕೂಡಾ.ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ‌ ಕುರಿತು  ಮೌನೇಶ್ವರರು

ಮೂರು ವರ್ಷಕೆ ಮುದ್ದು, ಆರುವರ್ಷಕೆ ಆಚಾರ

ಏಳನೆಯ ವರ್ಷಕ್ಜೆ ಪ್ರೌಢನ ಮಾಡದಿದ್ದರೆ

ತಂದೆ ತಾಯಿಗಳು ಹಗೆಗಳು…

ಎನ್ನುವ ವಚನದಲ್ಲಿ ಸ್ಪಷ್ಟವಾಗಿ ಮಕ್ಕಳನ್ನು ಪೋಷಿಸಬೇಕಾದ ರೀತಿ ಹೇಳಿದ್ದಾರೆ,ಮಕ್ಕಳನ್ನು ಮುದ್ದು ಮಾಡಲು ಒಂದು ವಯಸ್ಸಿದೆ.ಆಮೇಲೆ ಅವರಿಗೆ ಸುತ್ತಲಿನ ಜಗತ್ತಿನ ರೀತಿನೀತಿ ಆಚಾರಗಳನ್ನು ಹೇಳಿಕೊಡಬೇಕು. ಅಗತ್ಯ ಬಿದ್ದಾಗ ಝಂಕಿಸಿ ಹೇಳದ ತಂದೆತಾಯಿಗಳು ಮುಂದೆ ಮಕ್ಕಳಿಗೆ ಹಗೆಗಳಾಗಿ ಕಾಣಿಸುತ್ತಾರೆ .ಎನ್ನುವ‌ಮಾತುಗಳು ಇಂದಿನ‌ಕಾಲದ ನಮಗೂ‌ ಮಾರ್ಗದರ್ಶಕವೇ ಆಗಿವೆ.

ಮೌನೇಶ್ವರರೂ ಶಿವನನ್ನು ಮರೆತವರಲ್ಲ ,ಶರಣರ ಹಾಗೆ, ಶಿವನಕೃಪೆಯಿಲ್ಲದೆ ಲೋಕ ನಡೆಯದು ಎನ್ನುವದು ಅವರು ನಂಬಿದ ಸಿದ್ಧಾಂತ ಅಂತೆಯೇ

ಅಂಕುಶವಿಲ್ಲದೆ ಆನೆ ನಡೆಯದು

ಶಂಕರನಿಲ್ಲದೆ ಸಂಸಾರ ನಡೆಯದು ಲೋಕದ

ಮಂಕುಗಳಿಗೇಕೆ  ತಿಳಿಯದು ,ಬಸವಣ್ಣ

 ತುಂಬ ಸರಳವಾದ ಸಾಲುಗಳಲ್ಲಿ ದೈವವಿಲ್ಲದೆ ಏನೂ ಇಲ್ಲ ಎಂಬ ಆಸ್ತಿಕ ಸಿದ್ದಾಂತವನ್ನು ಸಾರುತ್ತಾರೆ. ಹಾಗೆಂದು ಅವರು ಸುತ್ತಲಿನ‌ ಲೋಕ ಮರೆತವತಲ್ಲ,ಇಲ್ಲಿ‌ ನಡೆಯುವ ಅನ್ಯಾಯವನ್ನು ಅವರು ಖಂಡಿಸುತ್ತಾರೆ.ಅವರು ಬದುಕಿದ್ದ ಕಾಲವೂ ಮುಸ್ಲಿಮ್ ಹಿಂದೂ ರಾಜರುಗಳು ತಮ್ಮ  ರಾಜ್ಯ ಉಳಿಸಿಕೊಳ್ಳುವದಕ್ಕಾಗಿ  ಹೋರಾಟದಲ್ಕಿ ಮುಳುಗಿದ್ದ ಕಾಲವಾಗಿತ್ತು ಸಾಮಾನ್ಯರ ಪಾಡು ಕೇಳುವವರಿ ರಲಿಲ್ಲ.ಕುಮಾರವ್ಯಾಸ ಹೇಳಿದಂತೆ ಬಡವರ ಬಿನ್ನಪವ ನಿನ್ನಾರು ಕೇಳುವರು? ಎನ್ನುವ ಹಾಗೆ ಸ್ಥಿತಿ ಇದ್ದಿತು. ಆಳುವವರು ಜನರನ್ನು ಮರೆತಿದ್ದರು ಸಾತ್ವಿಕ  ಕೋಪದಿಂದ ಅಂತಹ ಆಳುವವರನ್ನು  ತರಾಟೆಗೆ ಗುರಿ‌ಮಾಡುವ ಅವರು

ಆಡು ಕಾಯುವವನ‌ ಬುದ್ದಿ  ಅರಸುಗಳಿಗಿದ್ದರೆ

ರೂಢಿಗಳೆಲ್ಲ ಕೆಡುವವೆ,ಇವರು

ಕೋಡಗಕಿಂತ ಕನಿಕಷ್ಟ ಬಸವಣ್ಣ

ನಾಡಕಾಯುವವನಿಗೆ  ಜನರ ಮೇಲೆ ಪ್ರೀತಿ ಇಲ್ಲದೆ ಹೋದಾಗ ನಾಡು ಅರಾಜಕೀಯವಾಗುತ್ತದೆ ಇದನ್ನೇ ಮೌನೇಶ್ವರರು

ಅರ್ಜಿ ಕೇಳುವರಿಲ್ಲ,ಮರ್ಜಿ ಮಾನಗಳಿಲ್ಲ

ದರ್ಜನರಿಗೆ ದೌಲತ್ತು,ಲೋಕದ ಪ್ರಜೆ

ನಿರ್ಜರರಯ್ಯ ಬಸವಣ್ಣ

ಎಂದು ಜನತೆ ಅನಾಥವಾಗಿರುವ ಸ್ಥಿತಿಯನ್ನು ಬಿಚ್ಚಿಡುತ್ತಾರೆ.ಸಾಮಾನ್ಯರ ಬದುಕು ಬೆಲೆಯೇರಿಕೆಯ ಜೂಜಾಟದಲ್ಲಿ ಸಿಲುಕಿ ನರಕವಾಗುತ್ತದೆ ಎಂಬುದನ್ನು ಅಂದೇ ಸಾರಿದ್ದಾರೆ.ಕವಿ ಋಷಿಯಾಗಿರುವದರಿಂದ ಅವರ ಮಾತಿಗೆ ಸತ್ಯದರ್ಶನದ ಗುಣವೂ ಇರುತ್ತದೆ.ಮುಂದೊಂದು ದಿನ

ಬಾಜಾರ ಬಂದೀತು,ಓಜು ಉಂಡ್ಯಾದೀತು

ಸೂಜಿ  ಒಂದು ಹೊನ್ನಿಗೆ ಮಾರೀತು,ಲೋಕದ

ಸೋಜಿಗವ ನೋಡು ಬಸವಣ್ಣ

ಎಂದು ಸಾರುತ್ತಾರೆ.ಇಂದು ಆಧುನಿಕತೆಯ ಹೆಸರಿನಲ್ಲಿ ಎಲ್ಲವೂ ಮಾರಾಟದ ವಸ್ತುವಾಗಿದೆ.ಸೂಜಿಯಂತ ಚಿಕ್ಕ ವಸ್ತು ಸಹ ಒಂದು ಹೊನ್ನಿಗೆ ಬರಲೆ ಬಾಳುತ್ತದೆ ಎನ್ನುವ ಮಾತಿನ ಹಿಂದೆ ಎಲ್ಲವೂ ಬೆಲೆಯ ಏರಿಕೆಗೊಳಗಾಗಿ ಮನುಷ್ಯನ ಜೀವ ಅಗ್ಗವಾಗುತ್ತದೆ ಎಂಬ ಚಿಂತೆಯಿದೆ. ಲೋಕದಲ್ಲಿ ಯಶಸ್ವಿಯಾಗಲು ಜ್ಞಾನದ ಗಳಿಕೆಯೊಂದೇ ಮಾರ್ಗ ಎನ್ನುವದನ್ನು ಸಂಕೇತಗಳ‌ ಮೂಲಕ ಸಾರುತ್ತಾರೆ.ಜ್ಞಾನಿಗಳನ್ನು ವೃದ್ಧರು ಎನ್ನುವ ಮೌನೇಶ್ವರರು

ಮುಪ್ಪಿನವರು ಬದುಕ್ಯಾರು,ಪ್ರಾಯದವರು ಅಳಿದಾರು

ನಡುಪ್ರಾಯದವರು ಮಡಿದಾರು ಮರ್ತ್ಯದೊಳಗ

ಮುದುಕರಿಗೆ ಉಳಿವು ,ಬಸವಣ್ಣ

ಎನ್ಬುತ್ತಾರೆ.ಜ್ಞಾನವನ್ನು ಗಳಿಸಿ ಜ್ಞಾನಿಗಳಾದವರಿಗೆ ಮಾತ್ರ ಈ ಜಗತ್ತು.ನಾವು ಏನನ್ನು ಗಳಿಸದೆ ಹಾಗೆ ಹರೆಯದವರಾಗಿಯೇ ಉಳಿದರೆ ಬದುಕುವದೇ ಕಷ್ಟ ಎನ್ನುವದನ್ನು ಸಾಂಕೇತಿಕವಾಗಿ ವಚನ ತಿಳಿಸಿದೆ.ಅವರ ವಚನಗಳು ಸಂಕ್ಷಿಪ್ತವೂ ಜನರಿಗೆ ಅರ್ಥವಾಗುವಂತೆಯೂ ಇವೆ.ಅವರ ವಚನಗಳೆಂದರೆ  “ಗಿಡ್ಡ ಮೆಣಸಿನಕಾಯಿ  ಇದ್ದಂಗ ,ಬಣ್ಣ ಹಸಿರು,ಆದರೆ ಗುಣ ಸ್ವಭಾವದಲ್ಲಿ ಬೆಂಕಿಯಂತ ಖಾರ,ಅವರ ವಚನಗಳು ನೋಡಲು‌ ಮಾತ್ರ ಸರಳ,ಅರ್ಥ ಮಾತ್ರ ಅಸಾಮಾನ್ಯ ಮತ್ತು ತೀಕ್ಷ್ಣ ” ಎನ್ನುವ ಡಾ.ವೀರೇಶ ಬಡಿಗೇರ ಅವರ ಮಾತು ಉಚಿತವಾಗಿದೆ. ಕಾಲಜ್ಞಾನಿಗಳೂ ಆಗಿದ್ದ ಮೌನೇಶ್ವರರು ಮುಂದಿನ ನೂರಾರು ವರ್ಷಗಳ ಚರಿತ್ರೆಯ ಚಿತ್ರಣವನ್ನು ನೀಡಿದ್ದಾರೆ.

ಸಂಪಾದನೆಯ ಕುರಿತು:

ವಿದ್ವಾಂಸರಾದ ಡಾ‌.ವೀರೇಶ ಬಡಿಗೇರ ಅವರು ತಳ ಸಮುದಾಯಗಳ ಅಸ್ಮಿತೆಯನ್ನು‌ ಕಟ್ಟಿಕೊಡುವ ಕಾರ್ಯ ಮಾಡುತ್ತಿರುವ ಕೆಲವೇ ವಿದಗವಾಂಸರಲ್ಲಿ ಒಬ್ಬರು‌.ಮೌನೇಶ್ವರರ ಕುರಿತು ಅವರು‌ಮಾಡಿದ ಕೆಲಸ ಅಗಾಧವಾದುದು. ಅವರ ಎಲ್ಲ ಎಂಟು‌ ನೂರು ವಚನಗಳಲ್ಲಿ ಆಯ್ದ ,ಜನಮುಖಿ‌ ಮತ್ತು ಸಂಸ್ಕೃತಿ  ಚಿಂತನಗಳಂತಿರುವ ೧೫೦ ವಚನಗಳ ಆಯ್ಕೆಯಲ್ಲಿ‌ ಜಾಣ್ಮೆ‌ ಮೆರೆದಿದ್ದಾರೆ. ಯುವ ವಿದ್ವಾಂಸರು‌ ಬರೆದ ಲೇಖನಗಳನ್ನು ಸ್ವತಃ ತಾವು ನೋಡಿ ಅಗತ್ಯ ಬಿದ್ದೆಡೆ ತಮ್ಮ ಆಲೋಚನೆಗಳನ್ನು ಸೇರಿಸಿ ಕೃತಿ ಸಂಪನ್ನಗೊಳಿಸಿದ್ದಾರೆ.” ಕನ್ನಡದ ಹೊಸ ತಲೆಮಾರಿಗೆ ಮೌನೇಶ್ವರರ ವಚನಗಳನ್ನು‌ನಿಲುಕಿಸುವ ಕೆಲಸದಲ್ಲಿ ” ಯಶಸ್ವಿಯಾಗಿದ್ದಾರೆ.ವ್ಯಾಪಕ ಓದು ಆಗಬೇಕಿದೆಯಷ್ಟೇ.

ನಮ್ಮ ಇತಿಹಾಸವನ್ನು ಅಧ್ಯಯನ‌ ಮಾಡುವ ಒಂದು ಚಿಕ್ಕ ಕಿಟಕಿಯನ್ನು  ಒದಗಿಸಿರುವ ವಿದ್ವಾಂಸರಾದ ಡಾ. ವೀರೇಶ ಬಡಿಗೇರ ಅವರ ನ್ನು ಅಭಿನಂದಿಸುತ್ತಾ ಮೌನೇಶ್ವರರ ವಚನಗಳಿಗೆ ಒಲಿದ ಎಲ್ಲ ವಿದ್ವಾಂಸರನ್ನು  ನೆನೆದು ಈ ಕೆಲ‌ಮಾತು ಮುಗಿಸುತ್ತೇನೆ.

******************************************

ಯ‌.ಮಾ.ಯಾಕೊಳ್ಳಿ

Leave a Reply

Back To Top