ಖಾಲಿಕೈ ಫಕೀರ

ಕವಿತೆ

ಖಾಲಿಕೈ ಫಕೀರ.

ಅಬ್ಳಿ,ಹೆಗಡೆ

Kandinsky on the Spiritual Element in Art and the Three Responsibilities of  Artists – Brain Pickings

ನನಗರಿವಿಲ್ಲದೇ…..
ಕಾಣದಲೋಕದ ಕದ ತಟ್ಟಿದೆ
ಬೆಳಕ ಬಾಗಿಲು ತೆರೆಯಲೇ ಇಲ್ಲ.
ಕತ್ತಲ ಕೂಪ ಕಳೆಯಲೇ ಇಲ್ಲ.
ಬದುಕಲ್ಲಿ ಕಂಡಸಂಖ್ಯ ಕನಸುಗಳಿಗೆಲ್ಲ
ಒಂದು ಅನಿರೀಕ್ಷಿತ ಹ್ರದಯ ಸ್ಪರ್ಶಿ
ವಿದಾಯ ಘೋಷಿಸಿ,
ಒಮ್ಮೆಯಾದರೂ ಆತ್ಮೀಯರ
ಕಣ್ಣಂಚ ಒದ್ದೆಯಾಗಿಸಿ
ಆಟ ನಿಲ್ಲಿಸಬೇಕೆಂದರೆ ಅದೂ
ಸಫಲವಾಗಲಿಲ್ಲ.
ಕೊನೇ ಬಿಂದುವಿನಲ್ಲಾದರೂ
ಸಾರ್ಥಕ ಬದುಕಿನ ಸಣ್ಣ ತ್ರಪ್ತಿ
ಯೊಂದಿಗಾದರೂ ವಿರಮಿಸ
ಬೇಕೆಂದರೆ ಅದೂ ಕೈಗೂಡಲಿಲ್ಲ.

ಸಧ್ಯ ನಾ ಮೊದಲಿನಂತೇ..
ಭಾವದ ಭಿಕಾ಼ಪಾತ್ರೆ ಹಿಡಿದು
ಅಲೆದಾಡುವ ಏಕಾಂಗಿ,
ಪ್ರಾರಬ್ಧಕ್ಕೆ ಪಕ್ಕಾದ ಖಾಲಿಕೈ
ಫಕೀರ ಅಷ್ಟೆ….!!!!

************************

One thought on “ಖಾಲಿಕೈ ಫಕೀರ

  1. ಭಾವದ ಭಿಕ್ಷಾ ಪಾತ್ರೆ ಹಿಡಿದು ಅಲೆದಾಡುವ ಏಕಾಂಗಿ ಎಂಬ ಕವಿಯ ಕವನದ ಕೊನೆಯ ಸಾಲು ನಿಜವಾಗಿಯೂ ನನ್ನ ಮನಕ್ಕೆ ಅಪಾರ ವಾಗಿ ಮುಟ್ಟಿತು. ಸರಳ ಆದರೆ ಅಷ್ಟೇ ಅರ್ಥಪೂರ್ಣ ಭಾಷೆಯ ಅಬ್ಬಳಿಯವರ ಬರವಣಿಗೆಯ ಶೈಲಿ.ಓದುಗನ ಮನ ಸಹಜವಾಗಿ ತಟ್ಟುತ್ತದೆ. ಅವರಿಗೆ ಅಭಿನಂದನೆಗಳು.

Leave a Reply

Back To Top