Month: May 2021

ರೈತಗಜಲ್ ಹಸಿರುಸಿರಿನ ಸಿರಿ ನೀನು ಧರಣಿ ಮೇಲೆ ದಯೆಬಾರದೆ ಮಳೆರಾಯಾಹರಸುವ ಹೆಸರೇ ನೀರು ಸುರಿಯುತ್ತ ಇಳೆಯ ಬೆರೆಯಬಾರದೆ ಮಳೆರಾಯಾ ನೇಗಿಲು ಕಾಯಕವಿಲ್ಲದೆ ಕುಳಿತಿದೆ ಸುಣ್ಣವಿರದ ಗೋಡೆಯನ್ನು ಅಂಟಿಕೊಂಡುರೈತನ ಹೊಲ ಉಳುವ ಜೋಡೆತ್ತನ್ನಾದರೂ ಬದುಕಿಸಬಾರದೆ ಮಳೆರಾಯಾ ಅಟ್ಟ ಬಿಟ್ಟು ಹಸಿದ ಹೊಟ್ಟೆ ಸೇರಿವೆ ಬೀಜಕ್ಕಿಟ್ಟ ಕಾಳೆಂಬುದನ್ನೂ ಮರೆತುಗುಟ್ಟಾಗುಳಿಯದ ಸಾಲಕ್ಕಾದರೂ ಬಡ್ಡಿಯಾಗಬಾರದೆ ಮಳೆರಾಯಾ ಮಣ್ಣ ಮಕ್ಕಳೆಲ್ಲ ನೊಂದು ಬೆಂದು ಕಣ್ಣೀರು ಹಾಕುತ್ತಿಹರುನಿನ್ನಿರುವಿಕೆಯ ಸಣ್ಣ ಸುಳಿವೊಂದು ತೋರಬಾರದೆ ಮಳೆರಾಯಾ ಬವಣೆಗೆಲ್ಲ ಪ್ರೀತಿಯುಣಿಸಿ ಧರೆಯೊಡಲಿಗೆ ವರವಾಗಿ ಬಾಸಕಲಕ್ಕಾಧಾರವೇ ಜಲವೆನ್ನುವ ‘ಸರೋಜ’ಳ ಮನವಿ ಸ್ವೀಕರಿಸಬಾರದೆ […]

ದಾರಾವಾಹಿ ಅಧ್ಯಾಯ: 14 ಶಂಕರನ ರೋಚಕ ಪ್ರಹಸನವನ್ನು ಏಕನಾಥರು ತಮ್ಮ ಕಣ್ಣು ಕಿವಿಗಳೆರಡನ್ನೂ ಒಂದು ಮಾಡಿ ಅರೆಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆ ಅತ್ತ ದೇವಕಿ ಒಳಕೋಣೆಯ ದಾರಂದಕ್ಕೊರಗಿ ಕುತೂಹಲದಿಂದ ಆಲಿಸುತ್ತಿದ್ದಳು. ಆದರೆ ಅವಳನ್ನು ಗಮನಿಸಿದ ಮೇಲೆಯೇ ಶಂಕರನ ಕಥೆಯಲ್ಲಿ ದುಪ್ಪಟ್ಟು ನವರಸಗಳು ತುಂಬಿ ತುಳುಕತೊಡಗಿದವು ಎಂಬುದು ಏಕನಾಥರಿಗೆ ತಿಳಿಯಲಿಲ್ಲ. ಆದ್ದರಿಂದ ಕಥೆ ಕೇಳುವ ಆತುರದಲ್ಲಿದ್ದ ಅವರು, ‘ಮತ್ತೇನಾಯಿತು ಮಾರಾಯಾ…? ಆ ಹಂದಿ ನಿನ್ನ ಪುರಂದರಣ್ಣನ ಕುಂಡೆಗೆ ತಿವಿದೇ ಬಿಟ್ಟಿತಾ ಹೇಗೇ…!’ ಎಂದು ಹಾಸ್ಯ ಮಾಡಿ ನಕ್ಕರು. ಆಗ ಶಂಕರ […]

Back To Top