ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು

ಪುಸ್ತಕ ಸಂಗಾತಿ ವಿಮಲಾರುಣ ಪಡ್ಡoಬೈಲು  ಬಿ. ಆರ್. ಲಕ್ಷ್ಮಣರಾವ್ “ಎಂಥಾ ಮೋಜಿನ ಕುದುರಿ!” ಕೃತಿ: *ಎಂಥಾ ಮೋಜಿನ ಕುದುರಿ!* ಕಿರು ಕಾದಂಬರಿಲೇಖಕರು; ಬಿ. ಆರ್. ಲಕ್ಷ್ಮಣರಾವ್ಬೆಲೆ: 60 ರೂದೂರವಾಣಿ:9845693614 *ರಸಗವಳ  ಎಂಥಾ ಮೋಜಿನ ಕುದುರಿ!*                  ಪ್ರೇಮಕವಿ ಎಂದೇ ಚಿರಪರಿಚಿತರಾದ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಅವರ ಸಾಹಿತ್ಯ ಸೃಜನಶೀಲತೆ ಸದಾ ಭಾವಲೋಕವನ್ನು ಆಳವಾಗಿ ತಟ್ಟುವ ಶಕ್ತಿಯನ್ನು ಹೊಂದಿದೆ. ಅವರ ಕವಿತೆಗಳು ಹಾಗೂ ಭಾವಗೀತೆಗಳು ಓದುಗರ ಮನಸ್ಸಿನಲ್ಲಿ ಪ್ರೀತಿಯ ಸೂಕ್ಷ್ಮತೆಯನ್ನು ಮೂಡಿಸುವಂತೆ, ಅವರ ಕಿರು ಕಾದಂಬರಿ “ಎಂಥಾ ಮೋಜಿನ ಕುದುರಿ” ಕೂಡ ಕಲ್ಪನೆ, ರಸಿಕತೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆಯ ಮೂಲಕ ವಿಭಿನ್ನ ಅನುಭವವನ್ನು ನೀಡುತ್ತದೆ.ಶೀರ್ಷಿಕೆ ಸೂಚಿಸುವಂತೆ ” ಎಂಥಾ ಮೋಜಿನ ಕುದುರಿ!” ಹಲವು ದಿಕ್ಕುಗಳಲ್ಲಿ ತನ್ನ ಪಯಣವನ್ನು ವಿಸ್ತರಿಸುತ್ತದೆ.ಈ ಕಾದಂಬರಿಯ ಕಾಲಯಂತ್ರದ  ಕೇಂದ್ರಬಿಂದು ‘ಮನಸ್ಸು’ ಆಗಿದೆ. ಆ ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸುತ್ತಾ, ಅನೇಕ ಅವಘಡಗಳನ್ನು ಎದುರಿಸುವ ಮೂಲಕ ಕಾಲಯಂತ್ರದ ಅನುಭವ ಮತ್ತು ಸಂಕಷ್ಟಕರ ಪರಿಸ್ಥಿತಿಗಳನ್ನು ಲೇಖಕರು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಭೌತಶಾಸ್ತ್ರಜ್ಞ ಪ್ರೊಫೆಸರ್ ನರಸಿಂಗರಾಯರ ಕಾಲಯಂತ್ರ ಎಂಬ ಕಲ್ಪನೆಯೇ ಕಾದಂಬರಿಯ ಪ್ರಮುಖ ಆಧಾರ. ಈ ಕಾಲಯಂತ್ರ ಕೇವಲ ವೈಜ್ಞಾನಿಕ ಉಪಕರಣವಷ್ಟೇ ಅಲ್ಲದೆ, ಕಥಾನಾಯಕನ ಅಂತರಂಗದ ಮನೋಯಾನಕ್ಕೆ ದಾರಿ ಮಾಡಿಕೊಡುತ್ತದೆ. ಕಾದಂಬರಿಯ ಪ್ರತಿಯೊಂದು ತಿರುವು ಓದುಗರಲ್ಲಿ ‘ಮುಂದೇನು?’ ಎಂಬ ಕುತೂಹಲವನ್ನು ಜೀವಂತವಾಗಿಡುತ್ತದೆ.               ಸುಂದರ ಮೈಮಾಟದ ಲಲನೆಯರನ್ನು ಕಂಡಾಗ ಚಂಚಲಗೊಳ್ಳುವ ಮನಸ್ಸು, ಪ್ರೀತಿಸಿದ ಹುಡುಗಿ ‘ಮಿನಿ’ಯ ನೆನಪು ಬಂದಾಗ ಅವಳ ಪ್ರೀತಿಗೆ ತನ್ನನ್ನು ತಾನೇ ನಿಯಂತ್ರಿಸುವ ಕಥಾನಾಯಕನ ಯತ್ನ, ಮಾನವ ಮನಸ್ಸಿನ ಸಹಜ ದ್ವಂದ್ವವನ್ನು ಸುಂದರವಾಗಿ ಅನಾವರಣಗೊಳಿಸುತ್ತದೆ. ಕಾಮಕ್ಕಿಂತ ಪ್ರೀತಿಗೆ ಹೆಚ್ಚಿನ ಗೌರವ ನೀಡುವ ಕಥಾನಾಯಕನ ಶೀಲ, ಕೃತಿಗೆ ನೈತಿಕ ಘನತೆಯನ್ನು ನೀಡುತ್ತದೆ.ಕಾದಂಬರಿಯಲ್ಲಿನ ಪ್ರತಿಯೊಂದು ಘಟನೆಯಲ್ಲಿ ಹೆಣ್ಣಿನ ಭಾವೋದ್ರೇಕದ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಹಳ್ಳಿಯಿಂದ ಪಟ್ಟಣದವರೆಗೆ, ಅಲ್ಲಿಂದ ಪುರಾಣದ ಸುರ -ಅಸುರರ ಆಸ್ಥಾನಗಳವರೆಗೆ ಕಥೆ ಸಾಗಿದರೂ, ಎಲ್ಲೆಡೆಯೂ ಹೆಣ್ಣಿನ ಮನಸ್ಸಿನ ಹರೆಯದ ಭಾವನೆಗಳು ಹಾಗು ಅವಳ ಮನಸ್ಸಿನ ಹಳಹಳಿಕೆ, ಕಾಮ ದಹನಕೆ ಸೂಕ್ತ ವ್ಯಕ್ತಿಯ ತಡಕಾಟದಲ್ಲಿ  ಸಾಗುತ್ತಾ  ಕಥಾ ನಾಯಕನೇ ಬಲಿಪಶುವಾಗುವುದು. ರೋಮಾಂಚನ ನೀಡುವ ಈ ರಸಮಯ ಕ್ಷಣಗಳು  ಖುಷಿ ಕೊಟ್ಟರು, ಕ್ಷಣದಲ್ಲಿ ಜಾಗೃತನಾಗುತ್ತ ಮೂಲ ಸ್ಥಿತಿಗೆ ಮರಳುವುದು  ಹೀಗೆಯೇ ಕಾದಂಬರಿಯ  ಉದ್ದಕ್ಕೂ  ನಾಯಕನ ಸೂತ್ರದಾರಿಕೆಯಲ್ಲಿ ಕಥೆ ಸಾಗುತ್ತದೆ.  ಈ ಕೃತಿ ಕೇವಲ ಕಾಲಯಾನ ಕಥೆಯಾಗದೆ, ಮಾನವ ಮನಸ್ಸಿನ ಅಧ್ಯಯನವಾಗುತ್ತದೆ.       ಕಾಲತಂತ್ರವೆಲ್ಲಾ ಕಲ್ಪನೆಯೇ ಎಂಬ ಅರಿವು ಇದ್ದರೂ, ಕಥಾನಾಯಕನಲ್ಲಿ ಮೂಡುವ ತೃಪ್ತಭಾವ ಗಮನಾರ್ಹ. ಭ್ರಮಾಲೋಕದಲ್ಲಿ ವಿಹರಿಸಿದ ಹನ್ನೆರಡು ತಾಸುಗಳು ಹಲವಾರು ದಿನಗಳಂತೆ ಅನುಭವವಾಗುವುದು ಕಾಲದ ಅನಿಶ್ಚಿತತೆಯ ಭಾವವನ್ನು ಮೂಡಿಸುತ್ತದೆ. ಕಾಲ್ಪನಿಕ ವೈಜ್ಞಾನಿಕ ತಂತ್ರ ವಾಸ್ತವ ಬದುಕಿನಲ್ಲಿ ಅಸ್ತಿತ್ವಕ್ಕೆ ಬಂದರೆ ಜೀವನ ಹೇಗಿರಬಹುದು? ಎಂಬ ಪ್ರಶ್ನೆಯನ್ನು ಕಾದಂಬರಿ ಓದುಗರ ಮುಂದಿಡುತ್ತದೆ. ಹಾಗು ಓದುಗನಿಗೂ ಆ ಕ್ಷಣಗಳು ರೋಮಾಂಚನಗೊಳಿಸುತ್ತದೆ.ಈ ಕಿರು ಕಾದಂಬರಿ ಸರಳವಾದರೂ ಅರ್ಥಪೂರ್ಣವಾದ ಭಾಷಾಶೈಲಿ, ಕಾದಂಬರಿಯನ್ನು ಒಂದೇ ಉಸಿರಲ್ಲಿ ಓದಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.ಒಟ್ಟಿನಲ್ಲಿ “ಎಂಥಾ ಮೋಜಿನ ಕುದುರಿ!”  ಕಿರು ಕಾದಂಬರಿಯು ಭ್ರಮಾ ಲೋಕಕ್ಕೆ  ಸೆಳೆದೊಯ್ದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಾ ಮನ   ಮುದಗೊಳಿಸುವ ಕೃತಿ. ಚಂಚಲ ಮನಸ್ಸನ್ನು ಹತ್ತೋಟಿ ಇಡುವುದರಲ್ಲಿಯು  ಕಥಾನಾಯಕ ಗೆದ್ದಿದ್ದಾನೆ.  ಕಾಲ್ಪನಿಕವಾದ ಈ ಕಾದಂಬರಿ  ಓದುಗರ ಮನಸ್ಸಿನಲ್ಲಿ ಬೆಚ್ಚನೆಯ ತಾಪವನ್ನುಂಟುಮಾಡಿ,   ನಂತರ ತಂಪಾಗಿ ನೆಲೆಸುವ ಕೃತಿ.  ತಮಗೆ ಅಭಿನಂದನೆಗಳು ಸರ್ ವಿಮಲಾರುಣ ಪಡ್ಡoಬೈಲು

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಭಗವಂತ ನೀ ಹಿಂಗ್ಯಾಕೋ?”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಭಗವಂತ ನೀ ಹಿಂಗ್ಯಾಕೋ?” ದೊಡ್ಡ ಮಂದಿ ತಲ್ಯಾಗೆಲ್ಲ ಸಣ್ಣತನ ತುಂಬಿದಿ.ಸಣ್ಣ ಮಂದಿಗ್ಯಾಕ ಬೇಕಾದಷ್ಟ ದೊಡ್ಡತನ ಇಟ್ಟಿ.ಆದ್ರ ಅವರನ್ನ ಬಡವರನ್ನಾಗಿಮಾಡಿ ಬಿಟ್ಟಿ.ಯಾಕೋ ನೀ ಹಿಂಗ್ಯಾಕೋಭಗವಂತ ಯಾಕೋ ನೀ ಹಿಂಗ್ಯಾಕೋ?ಕೊಡೊ ಮನಸ್ಸಿದ್ದವಗ ಏನೂ ಇಲ್ಲದಂಗ ಬದಕಾಕ ಹಚ್ಚಿದಿಹಂಚುವ ಗುಣ ಇಲ್ಲದವನಸಿರಿವಂತನಾಗಿಸಿದಿಯಾಕೋ ನೀ ಹಿಂಗ್ಯಾಕೋಭಗವಂತ ಯಾಕೋ ನೀ ಹಿಂಗ್ಯಾಕೋ?ಹಸಿದ ಹೊಟ್ಟಿಗಿ ಅನ್ನ ಇಲ್ಲದಂಗ(ಸಿಗದಂಗ) ಮಾಡಿದಿಎಲ್ಲ ತಿನ್ನಾಕ ಇದ್ದವಗ ಮೈ ತುಂಬನೂರೆಂಟ ರೋಗ ಇರಿಸಿದಿಕಷ್ಟದೊಳಗಿದ್ದವ್ರಿಗೆ ಇನ್ನಷ್ಟ ಕಷ್ಟ ಕೊಟ್ಟ ಪರೀಕ್ಷೆ  ಮಾಡತಿದಿಹರಾಮಿ ಮಂದಿನೆಲ್ಲ ಹೊರಗತಿರಗಾಕ ಬಿಟ್ಟಿದಿಯಾಕೋ ನೀ ಹಿಂಗ್ಯಾಕೋ?ಹೇ ಭಗವಂತ ಯಾಕೋ ನೀ ಹಿಂಗ್ಯಾಕೋ?ಕೊಲ್ಲವ್ರಿಗಿಂತ ಕಾಯಾವ ಲೇಸಂತನಾ ನಿನ್ನ ನಂಬಿದ್ನಿನೀನ ಕೊಂದರ ನಾ ಯಾರನ್ನ ನಂಬಲಿನೀನ ಹೇಳಾಕೋನೀ ಹಿಂಗ್ಯಾಕೋ?ಹೇಳೊ ಭಗವಂತ ಯಾಕೋ,ನೀ ಹಿಂಗ್ಯಾಕೋ?ನೀ ಹಿಂಗ ಅಂದ್ರ ಹಿಂಗನೀ ಹಂಗ ಅಂದ್ರ ಹಂಗನಾ ಬೇಡೂದೊಂದ ಇರಸಬ್ಯಾಡಪ್ಪನನ್ನ ಯಾರದೂ ಹಂಗನ್ಯಾಗ.ಈ ಕಾಯ ಈ ಉಸಿರ ಕಡಿತನಕಿರಲಿ ನಿನ್ನ ಕೈಯ್ಯಾಗ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಭಗವಂತ ನೀ ಹಿಂಗ್ಯಾಕೋ?” Read Post »

ಅನುವಾದ, ಕಥಾಗುಚ್ಛ

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ “ವೈರುಧ್ಯಗಳು” ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್ ಸಮಯ ರಾತ್ರಿ ಹತ್ತೂವರೆ. ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಆನಂದರಾಯರಿಗೆ ಇದು ಗಾಢ ನಿದ್ರೆಯ ಸಮಯ. ಶಿಸ್ತಿನ ಸಿಪಾಯಿಯಂತಿದ್ದ ಅವರಿಗೆ ಹತ್ತು ಗಂಟೆಯಾದರೆ ಸಾಕು, ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಆದರೆ ಅಂದು ರಾತ್ರಿ ಫೋನಿನ ಕರ್ಕಶ ಶಬ್ದ ಅವರ ನಿಶ್ಯಬ್ದ ಲೋಕವನ್ನು ಸೀಳಿತು. ನಿದ್ರೆಗಣ್ಣಿನಲ್ಲೇ ಫೋನು ಎತ್ತಿದ ರಾಯರು, ಮಂಪರಿನ ಧ್ವನಿಯಲ್ಲೇ “ಹಲೋ” ಎಂದರು. ಅತ್ತ ಕಡೆಯಿಂದ ಸಹೋದ್ಯೋಗಿ ನಾಗರಾಜು ಮಾತಾಡುತ್ತಿದ್ದರು. “ಏನಪ್ಪಾ ಆನಂದ್.. ಮನೆಯಲ್ಲೇ ‘ಅಂಗಡಿ’ (ಬಾರ್) ತೆರೆದಿದ್ದೀಯಾ ಅನ್ಸುತ್ತೆ? ಆ ಧ್ವನಿ ಕೇಳಿದರೆ ಹಾಗೇ ಅನ್ನಿಸುತ್ತಿದೆಯಲ್ಲಪ್ಪಾ!” ಎಂದು ವ್ಯಂಗ್ಯವಾಗಿ ನಕ್ಕರು. ರಾಯರಿಗೆ ಆಘಾತವಾಯಿತು. ಅದು ಕುಡಿತದ ಅಮಲಲ್ಲ, ನಿದ್ರೆಯ ಮಂಪರು ಎಂದು ನಾಗರಾಜುಗೆ ಅನಿಸಲೇ ಇಲ್ಲ. ಬೇಸರದಿಂದಲೇ ಫೋನು ಇಟ್ಟರು. ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕರೆ. ಈ ಬಾರಿ ವಿಶ್ವನಾಥ್ ಎಂಬ ಇನ್ನೊಬ್ಬ ಸಹೋದ್ಯೋಗಿ. ಅದೇ ನಿದ್ರೆಯ ಧ್ವನಿಯನ್ನು ಕೇಳಿದ ವಿಶ್ವನಾಥ್ ತಕ್ಷಣ ಗಾಬರಿಗೊಂಡು, “ಆನಂದ್, ಯಾಕೋ ಧ್ವನಿ ಸರಿ ಇಲ್ಲ. ಹಲ್ಲು ನೋವೇನಾದರೂ ಇದೆಯೇ? ಸುಮ್ಮನೆ ನರಳಬೇಡ, ನಾಳೆನೇ ಒಬ್ಬ ಒಳ್ಳೆ ದಂತವೈದ್ಯರನ್ನು ಹೋಗಿ ನೋಡು” ಎಂದು ಪ್ರೀತಿಯಿಂದ ಸಲಹೆ ನೀಡಿದರು. ಮರುದಿನ ಬೆಳಗ್ಗೆ ಪೆಟ್ರೋಲ್ ಬಂಕ್ ಹತ್ತಿರ ಆನಂದರಾಯರ ಜೀವನದ ಎರಡನೇ ಪಾಠ ಕಾದಿತ್ತು. ಬಂಕ್‌ನ ಉದ್ದನೆಯ ಸಾಲಿನಲ್ಲಿ ನಿಂತಿದ್ದಾಗ, ಒಬ್ಬ ಯುವಕ ಓಡುತ್ತಾ ಬಂದು ಅವರ ಪಾದಗಳಿಗೆ ನಮಸ್ಕರಿಸಿದ. ಆತ ಅವಿನಾಶ್. ವರ್ಷಗಳ ಹಿಂದೆ ತೆಲುಗು ಮಾಧ್ಯಮದಿಂದ ಬಂದು ಇಂಗ್ಲಿಷ್ ಮಾತಾಡಲು ಒದ್ದಾಡುತ್ತಿದ್ದ ಆ ಹುಡುಗನಿಗೆ ರಾಯರು ಮಾರ್ಗದರ್ಶನ ನೀಡಿದ್ದರು. ಇಂದು ಆತ ಐಐಟಿ ಪದವೀಧರನಾಗಿ ಉನ್ನತ ಸ್ಥಾನದಲ್ಲಿದ್ದಾನೆ. ಕೃತಜ್ಞತೆಯಿಂದ ಹೂಗುಚ್ಛ ನೀಡಿ, “ನಾಳೆ ಮನೆಗೆ ಬಂದು ಅಮ್ಮನವರ ಆಶೀರ್ವಾದ ಪಡೆಯುತ್ತೇನೆ” ಎಂದು ವಿನಯದಿಂದ ಹೊರಟುಹೋದ. ರಾಯರು ಗಾಡಿ ಸ್ಟಾರ್ಟ್ ಮಾಡುವಷ್ಟರಲ್ಲಿ ಮತ್ತೊಬ್ಬ ಹಳೆಯ ಶಿಷ್ಯ ತರುಣ್ ಎದುರಾದ. ಕೈಯಲ್ಲೊಂದು ಸಿಗರೇಟು, ಕಣ್ಣಿಗೆ ಕಪ್ಪು ಕನ್ನಡಕ—ಪಕ್ಕಾ ಇಂದಿನ ‘ಜುಲಾಯಿ’ ಯುವಕನಂತೆ ಕಾಣುತ್ತಿದ್ದ. ಅಂದು ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿದ್ದು ಕಿಡಿಗೇಡಿತನ ಮಾಡುತ್ತಾ ಫೇಲ್ ಆಗುತ್ತಿದ್ದವನು ಈತ. “ಅಂಕಲ್, ಜಂಕ್ಷನ್ ವರೆಗೆ ಲಿಫ್ಟ್ ಕೊಡ್ತೀರಾ?” ಎಂದು ತರುಣ್ ಕೇಳಿದಾಗ, ರಾಯರ ಮುಖದಲ್ಲಿ ಅಸಹ್ಯ ಮೂಡಿತು. ಏನೂ ಕೇಳದವರಂತೆ ಅವರು ಗಾಡಿ ಓಡಿಸಿ ಮುಂದೆ ಹೋದರು. ಮನೆಗೆ ಹಿಂದಿರುಗುವಾಗ ರಾಯರ ಮನಸ್ಸಿನಲ್ಲಿ ದ್ವಂದ್ವಗಳ ಸಂತೆ. ಒಂದೇ ಧ್ವನಿಯನ್ನು ಕೇಳಿದ ಇಬ್ಬರು ಸಹೋದ್ಯೋಗಿಗಳು ಬೇರೆ ಬೇರೆಯಾಗಿ ಹೇಗೆ ಅರ್ಥೈಸಿಕೊಂಡರು? ಒಬ್ಬನೇ ಗುರುವಿನ ಹತ್ತಿರ ಓದಿದ ಇಬ್ಬರು ಶಿಷ್ಯರು ಇಷ್ಟು ವ್ಯತಿರಿಕ್ತವಾಗಿ ಹೇಗೆ ಬೆಳೆದರು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಒಂದು ಕೃಷ್ಣ ಮಂದಿರದ ಹತ್ತಿರ. ಅಲ್ಲಿ ಘಂಟಸಾಲ ಅವರ ಕಂಠಸಿರಿಯಲ್ಲಿ ಭಗವದ್ಗೀತೆಯ ಶ್ಲೋಕಗಳು ಕೇಳಿಬರುತ್ತಿದ್ದವು. ‘ಶ್ರದ್ಧಾತ್ರಯ ವಿಭಾಗ’ ಯೋಗದ ಆ ಶ್ಲೋಕಗಳು ರಾಯರ ಸಂಶಯಗಳಿಗೆ ಕನ್ನಡಿ ಹಿಡಿದವು. ಮನುಷ್ಯರು ನೋಡಲು ಒಂದೇ ರೀತಿ ಇದ್ದರೂ, ಅವರ ಆಹಾರ ಮತ್ತು ಅಭ್ಯಾಸಗಳಿಂದ ರೂಪುಗೊಳ್ಳುವ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಅವರ ವರ್ತನೆಯನ್ನು ನಿರ್ಧರಿಸುತ್ತವೆ ಎಂಬ ಸತ್ಯ ಅವರಿಗೆ ಹೊಳೆಯಿತು. “ಮೆಣಸಿನ ಗಿಡಕ್ಕೆ ಎಷ್ಟು ಸಿಹಿ ನೀರು ಹಾಕಿದರೂ ಅದು ಖಾರವಾದ ಮೆಣಸಿನಕಾಯಿಯನ್ನೇ ನೀಡುತ್ತದೆ. ಮಾವು ಮತ್ತು ಸಪೋಟ ಗಿಡಗಳು ಯಾವಾಗಲೂ ಸಿಹಿಯಾದ ಹಣ್ಣುಗಳನ್ನೇ ಕೊಡುತ್ತವೆ.” ಆನಂದರಾಯರಿಗೆ ಜ್ಞಾನೋದಯವಾಯಿತು. ಒಬ್ಬ ಗುರುವಾಗಿ ಅವರು ಎಲ್ಲರಿಗೂ ಒಂದೇ ರೀತಿಯ ಪಾಠ ಮಾಡಿದ್ದರು, ಆದರೆ ವಿದ್ಯಾರ್ಥಿಗಳು ಅವರವರ ಸ್ವಭಾವಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರು. ಸಂಶಯಗಳೆಲ್ಲಾ ಮಂಜಿನಂತೆ ಕರಗಿದವು. ಅವರು ಕೇವಲ ಇಂಗ್ಲಿಷ್ ಮೇಷ್ಟ್ರಾಗಿ ಅಲ್ಲ, ಜೀವನದ ದೊಡ್ಡ ಪಾಠವನ್ನು ಕಲಿತ ವಿದ್ಯಾರ್ಥಿಯಾಗಿ ಸಂತೋಷದಿಂದ ಮನೆಗೆ ಹೆಜ್ಜೆ ಇಟ್ಟರು. ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್ Read Post »

ಕಾವ್ಯಯಾನ

ಎನ್.ಜಯಚಂದ್ರನ್‌ ಅವರಕವಿತೆ”ಆರ್ಥನಾದ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ “ಆರ್ಥನಾದ” ದಟ್ಟ ಕಾನನದ ಮಡಿಲಲ್ಲಿ ಹುಟ್ಟಿದ ಕಾಳಿ ನದಿ,ಹಾರ್ನಬಿಲ್‌ ಪಕ್ಷಿಗಳ ಹಾಡಿಗೆ ತೂಗಿದ ನದಿ,ಮರಗಳ ನೆರಳಲ್ಲಿ ಹರಿದ ಕನಸು,ಹಸಿರು ಕಾಡಿನ ತತ್ವಉಸಿರೇ ಅವಳು. ಆದರೆ ಇಂದು ಯಂತ್ರಗಳ ಗರ್ಜನೆ.,ನಿಶ್ಶಬ್ದ ಕಾಡಿನ ನೋವಿನ ಘೋಷಣೆ.ಅಭಿವೃದ್ಧಿಯ ಹೆಸರಿನ ಕಲ್ಲಿನ ಗೋಡೆ,ನದಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಬೇಡಿ ?ಕಾಳಿ ಕಣಿವೆಯ ಮಡಿಲಲ್ಲಿ ಮೌನ, ಪ್ರಕೃತಿಯ ಹೃದಯದಲ್ಲಿ ಕಾಣದ ಗಾಯ.ಮೀನುಗಳ ಕನಸುಗಳು ಕಣ್ಣೀರಾದವು,ಪಕ್ಷಿಗಳ ಗಾನವೂ ಮೌನವಾದವು.ಈ ಸುಂದರ ಕಾಳಿಯ ಕಣ್ಣೀರ ಕಥೆ,ಕೇಳುವವರಿಲ್ಲದ ಪ್ರಕೃತಿಯ ವ್ಯಥೆ ಎನ್. ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.9740635196

ಎನ್.ಜಯಚಂದ್ರನ್‌ ಅವರಕವಿತೆ”ಆರ್ಥನಾದ” Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಭಾವಗೀತೆ

ಕಾವ್ಯ ಸಂಗಾತಿ ಲೀಲಾಕುಮಾರಿ ತೊಡಿಕಾನ ಭಾವಗೀತೆ ಬರೆಯಲಾಗದ ಕವಿತೆಯೊಂದುಮನದ ಒಳಗಡೆ ಕುಳಿತಿದೆಪುಟಿಯೋ ನೆನಪು ಯಾಕೊ ಇಂದುಮೌನ ಕದವ ಬಡಿದಿದೆ ಪುಟ್ಟ ಪುಟ್ಟ ಹೆಜ್ಜೆ ಗುರುತುಹೃದಯ ನೆಲದೊಳು ಉಳಿದಿದೆಬಾಲ್ಯದಾಟ  ನಗುವಿನೂಟಅಣಕವಾಡಿ ನಗುತ್ತಿದೆ ಭಾವವಿರದ ಟೊಳ್ಳು ಪದಗಳಗಂಟಲೇಕೋ ಉಗುಳಿದೆನಗುವೇ ಬಿರಿಯದ ತುಟಿಗಳಿಂದುಮೌನ ಬಯಸಿ ಬಿದಿದಿದೆ ನೋವಿನಲೆಗಳ ಹೊಡೆತಕ್ಕೀಗಮನದ ದಡಗಳು ಕೊರೆದಿವೆಒಡಲಿನಾಳದ ಬೆಂಕಿ‌ಜ್ವಾಲೆಗೆನವಿರು ಭಾವ ಸತ್ತಿದೆ ಜೊತೆಲಿ ಬೆರೆತು ಮನೆಯ ಕಟ್ಟಿದಮುಗ್ಧ ಪ್ರೀತಿ ಎಲ್ಲಿದೆ?ಮನದ ನಡುವಣ ಗೋಡೆ ಮಾತ್ರಎತ್ತರೆತ್ತರಕ್ಕೇರಿದೆ!! ಲೀಲಾಕುಮಾರಿ ತೊಡಿಕಾನ

ಲೀಲಾಕುಮಾರಿ ತೊಡಿಕಾನ ಅವರ ಭಾವಗೀತೆ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-10 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾಚೇತನ ಸವಿತಾ ದೇಶಮುಖ ಭಾಗ- 10ಜಯದೇವಿ ತಾಯಿಯವರ ಜೀವನ ವೃತ್ತಾಂತ ಜಯದೇವಿತಾಯಿಯವರು *೧೯೩೪ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷರಾಗಿ …….ಸ್ತ್ರೀ ಜಾಗೃತಿ ,ಮಹಿಳೆಯರ ಪ್ರಗತಿಯ ಕುರಿತು ಮಾತನಾಡುತ್ತ …….“ಮಹಿಳೆಯರು ಮನೆ ಕೆಲಸದಲ್ಲಿ ಜೇಡರ ಹುಳುವಿನಂತೆ ಬಂಧಿಸಿಕೊಂಡಿದ್ದಾಳೆ….ಓದು ಬರಹಗಳಿಗೆ ಸಮಯ ಉಳಿಸಿಕೊಳ್ಳದೆ ದುಡಿಯುತ್ತಿರುತಾಳೆ ….,ಅವಳಿಗೆ ದುಡಿಮೆ ಆರ್ಥಿಕ ಆದಾಯವಿಲ್ಲದ ಕಾರಣ ಅವಳು ಪರಾವಲಂಬನೆ ಆಗಿ ಬದುಕುತ್ತಿದ್ದಾಳೆ ಕೀಳರಮಿಯ ಭಾವನೆಯಲ್ಲಿ ಬಳಲುತ್ತಿದ್ದಾಳೆ…..!!!! ಇಂಥ ಅವಹೇಳನಕರ ಭಾವನೆಗಳು ಅಜ್ಞಾನದಿಂದ ಉಂಟಾದದ್ದು…. ಈ ತಾರತಮ್ಯದ ಅಜ್ಞಾನವನ್ನು ಅತ್ಯಅಮೂಲ್ಯವಾದಂಥ ವಚನ ಸಾಹಿತ್ಯದ ಅಭ್ಯಾಸದಿಂದ ವಚನಗಳ ಸತತ ಮನನ ಗೊಳಿಸಿಕೊಳ್ಳುವುದರಿಂದ ದಾಸ್ಯತ್ವಭಾವನೆಗಳಿಂದ ದೂರಗೊಳ್ಳಬಹುದಾಗಿದೆ… !!! ಮಹಿಳೆಯರು ಶಿಕ್ಷಣ ಪಡೆದು ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಂಡು ಸ್ವಾವಲಂಬನ ಬದುಕು ಸಾಗಿಸುವ ಮೂಲಕ ದಾಶ್ಯತ್ವದ ನೆಲೆಗಳ ಮಧ್ಯದಲ್ಲಿ ತನ್ನದೇ ಆದ ಬದುಕನ್ನು ಸ್ಥಾಪಿಸಬೇಕು . ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡುವುದೇ ನಮ್ಮ ಸಭೆಗಳ ಉದ್ದೇಶವಾಗಿರಬೇಕು ಅಂತ ಹೇಳಿದರು .ಮಹಿಳೆಯರು ತಮ್ಮ ಗೌರವವನ್ನು …. ಕೇವಲ ಆಚರಣೆಗಳಿಗೆ ಸೀಮಿತ ಗೊಳಿಸಿಕೊಳ್ಳಬಾರದು ಸದಾ ತಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು” ಜಯದೇವಿ ತಾಯಿಯವರು ಬಯಸುತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಂದಿನ ಸಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಪುರುಷ ಸಮಾಜದ ಸಮವಾಗಿ ಸಭೆ ಸಮಾರಂಭಗಳನ್ನು ಪಾಲ್ಗೊಳ್ಳುವುದೇ ವಿರಳವಾಗಿತ್ತು .ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಮನೆ ಕೆಲಸ ಮಾಡುವುದಿಲ್ಲ ಎಂದು ಅವಳನ್ನು ಹಿಂದಿಟ್ಟಿದ್ದರು. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಸಾಮಾಜಿಕ ರಂಗದಿಂದ ಹಿಂದೆಸರಿಸುವ ಎಲ್ಲ ಗೊಡ್ಡು ಆಚರಣೆಗಳನ್ನು ಮೌಢ್ಯತೆಗಳನ್ನು ಹೇರಿ ಮಹಿಳೆಯರು ಭಯ ಬೀಳುವಂತೆ ಮಾಡುತ್ತಿದ್ದ ಕಾಲ ಅದಾಗಿತ್ತು.. ಶೈಕ್ಷಣಿಕವಾಗಿ ಎಷ್ಟೇ ಸಮಾನತೆಯನ್ನು ಒದಗಿಸಿತ್ತೇವೆ ಅಂತ ಬ್ರಿಟಿಷರು ಹೇಳುತ್ತಿದ್ದರು ಆಗಿನ ಕಾಲದಲ್ಲಿ ಹೆಣ್ಣು ಮಗಳು ನಾಲ್ಕು ಗೋಡೆಯ ಮಧ್ಯೆ ಅವಳ ಜೀವನವನ್ನು ನಡೆಸಬೇಕು ಕುಟುಂಬವನ್ನು ನಿಭಾಯಿಸಿಕೊಂಡು ಮಕ್ಕಳನ್ನು ಹೆತ್ತು ಬೆಳೆಸಬೇಕು ಅನ್ನುವ ಕಾಲ ಅದಾಗಿತ್ತು…. ಅಂತಹದರಲ್ಲಿ ತಾಯಿಯವರು ಹೆಣ್ಣು ಮಕ್ಕಳು ಜೇಡರ ಹುಳದಂತೆ ಬಲೆಯಲ್ಲಿ ಸಿಕ್ಕಿ ಬಿಳದೆ ಅದನ್ನು ಬಿಡಿಸಿ ಹೊರಗೆ ಬರಬೇಕು ಸಾಹಿತ್ಯವನ್ನು ಓದಬೇಕು.ಬರವಣಿಗೆ ಮಾಡಬೇಕು ತನ್ನ ಸರ್ವತೋ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ,ತನ್ನದೇ ಆದ ಜೀವನವನ್ನು ನಿರ್ಮಿಸಬೇಕು ಅನ್ನುವ ದೀರೋದ್ಯಾತ ಕರೆಯನ್ನು ಜಯದೇವಿತಾಯಿಯವರು ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು.‌…ಆಗಿನ ದಿನಗಳಲ್ಲಿ,!!! ಅವರು ತಮ್ಮ ಭಾಷಣಗಳಲ್ಲಿ ಹೆಣ್ಣು ಮಕ್ಕಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸುವದಷ್ಟೇ ಅಲ್ಲದೆಸ್ವಂತ ಸೊಲ್ಲಾಪುರದಲ್ಲಿ ವೃದ್ಧಾಶ್ರಮ ಅನಾಥ ಆಶ್ರಮಗಳನ್ನು ಕೇವಲ ಹೆಣ್ಣು ಮಕ್ಕಳಿಗಾಗಿ ತೆರೆದರು. ಅವರಿಗೆ ಪೂಜೆ ಭಜನೆ ಅನೇಕ ಸಮಾಜಪರ ಚಟುವಟಿಗಳಿಗಾಗಿ ಅನುಕೂಲಗಳನ್ನು ಮಾಡಿಕೊಟ್ಟರು. ವೃದ್ಧರು… ಅನಾಥ ಹೆಣ್ಣು ಮಕ್ಕಳ ಮನಸ್ಸಿನ ನೆಮ್ಮದಿಗಾಗಿ ವಚನ ಸ್ಪರ್ಧೆಗಳನ್ನು ಅನೇಕ ವಿವಿಧ ರೀತಿಯ ಚಟುವಟಿಕೆಗಳನ್ನು ಏರ್ಪಡಿಸುತಿದ್ದರು. ೧೯೩೫ರಲ್ಲಿ ಶಿಕ್ಷಣಕ್ಕಾಗಿ ಹರಡೇಕರ್ ಮಂಜಪ್ಪನವರು ” ಅಕ್ಕಮಹಾದೇವಿ ಜಯಂತಿ* ಬಸವ ಜಯಂತಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾರಾರಂಭಿಸಿದರು ಅಕ್ಕನ ಬೆಳಗನ್ನು ಅಲ್ಲಲ್ಲಿ ಸ್ಥಾಪಿಸಿದ್ದರು. ಮಹಿಳೆಯರ ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿ ಅನ್ನುವ ಉದ್ದೇಶಕ್ಕಾಗಿ ಹರಡೇಕರ್ ಮಂಜಪ್ಪನವರ ಕನ್ನಡ ಪತ್ರಿಕೆಯನ್ನು ವೀರಶೈವ ಮಹಿಳಾ ಜ್ಞಾನ ಮಂದಿರಕ್ಕೆ ತರಿಸುತ್ತಿದ್ದರು. ಹೀಗಾಗಿ ತಾಯಿಯವರು ಕನ್ನಡಕ್ಕೆ ಚಿರಪಚಿತರಾಗಿದ್ದರು . ಹಾಗೆ ಹರಡೆಕರ ಮಂಜಪ್ಪನವರೊಂದಿಗೆ ಸ್ವಾತಂತ್ರದ ಹೋರಾಟ ಸ್ತ್ರೀ ವಿಮೋಚನೆಯ ಬಗ್ಗೆ ಅನೇಕ ಸಲ ಭೇಟಿ ಮಾಡಿದ್ದರು. ಜಯದೇವಿ ತಾಯಿಯವರು ಸ್ವಾತಂತ್ರ ಹೋರಾಟ ಹಾಗೂ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕಾಗಿ ಆಯೋಜಿಸಲಾಗುವ ಎಲ್ಲ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು .*೨೪-೪-೧೯೩೯ *ರಂದು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷ ಯಾದರು. ಸಭೆಯಲ್ಲಿ ಮಾತನಾಡುತ್ತಾ…*ಎಲ್ಲ ಸ್ತ್ರೀ ಪುರುಷರು ಸಮಾನರು…… ಸ್ತ್ರೀಯು ಪತಿಯ ಅರ್ಧಾಂಗಿಣಿಯಾಗಿ ಮನೆ ಕೆಲಸವನ್ನೆಲ್ಲ ಮಾಡುವಂತೆ ಪತಿಯು ಸಹ ಅವಳಷ್ಟೇ ಜವಾಬ್ದಾರಿ ಹೊಂದಿರುತ್ತಾರೆ ಇಬ್ಬರು ಸರಿ ಹಂಚಿಕೊಂಡು ಕುಟುಂಬವನ್ನು ನಡೆಸಿಕೊಂಡು ಹೋದರೆ ಸ್ವರ್ಗವನ್ನೇ ಧರೆಗೆ ಇಳಿಸಬಹುದು.. ನಮ್ಮಹಿಂದಿನ ಸಂಸ್ಕೃತಿಯನ್ನು ಮರೆಯದೇ ಸಮಾನತೆ ಯೊಂದಿಗೆ ನಡೆಯಬೇಕು‌. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಶಿಕ್ಷಣದ ಅನುಕೂಲ ಸಾಕಷ್ಟು ಒದಗಿ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಾರಿದರು. *೧೯೪೦ರಲ್ಲಿ * ಜಯದೇವಿ ತಾಯಿಯವರು ಸ್ವಂತ ಜಗವನ್ನು ಖರೀದಿಸಿ* ಜಯದೇವಿ ಕನ್ಯಾ ಶಾಲೆ*ಅಥವಾ *ಕನ್ನಡ ಕನ್ಯಾ ಶಾಲೆ *ಎಂದು ಆ ಶಾಲೆಗೆ ಮರು ನಾಮಕರಣ ಮಾಡಿದರು .ಮುಂದೆ ಮರಾಠಿ ಅಭಿಮಾನಿಗಳು ಕೆಲವರು ಈ ಶಾಲೆಯಲ್ಲಿ ಮರಾಠಿ ಕಲಿಸಲು ಇಚ್ಚಿಸಿದರು. ಕನ್ನಡ ಶಾಲೆ ತೆಗೆದು ಮರಾಠಿ ಆರಂಭಿಸುವುದಾದರೆ ನನ್ನ ಹೆಸರನ್ನು ತೆಗೆದು ಸಿದ್ದರಾಮನ ಹೆಸರು ಶಾಲೆಗೆ ಬರಲಿ ಎಂದು ಹೇಳುವ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುತ್ತಾರೆ. ಅಂತಯೇ ಅವರು ಕನ್ನಡದ ಮಾತೆ ಅಂತ ಕರೆಯಲಾಯಿತು. *೧೯೪೦ ರಲ್ಲಿ *ಆಂಧ್ರದ ಸದಾಶಿವಪೇಠದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮಕ್ಕೆ ಹೋಗಿ ಬಸವ ಶರಣರು ಶರಣೀಯರಲ್ಲಿ ಇದ್ದ ಸಮಾನತೆಯ ಬಗ್ಗೆ ಭಾಷಣ ಮಾಡಿದರು . *೧೯೪೧ರಲ್ಲಿ *ಉದುಗೀರದಲ್ಲಿ ನಡೆದ ಅಕ್ಕನ ಹುಣ್ಣಿಮೆಯ ಕಾರ್ಯಕ್ರಮಕ್ಕೆ ಹೋಗಿ ಮೂರು ದಿನ ಅಲ್ಲಿಯೇ ಉಳಿದು ಅಧ್ಯಕ್ಷತೆ ವಹಿಸಿ ಸ್ತ್ರೀ ಜಾಗೃತಿ, ಕಾರ್ಯಕ್ರಮ ಹಮ್ಮಿಕೊಂಡರು .ಅದೇ ಸಮಯದಲ್ಲಿ *ಪ್ರಭುರಾವ್ ಕಂಬಳಿ ಬಾಬಾ *ಅವರ ಪರಿಚಯ ಆಯಿತು. ಶರಣ ಸಂಸ್ಕೃತಿ ಮತ್ತು ಸಮಾಜಪರ ಕಾರ್ಯಗಳಲ್ಲಿ ಸಹಕಾರ ನೀಡುವವರಾಗಿದ್ದರು ಕಂಬಳಿಬಾಬಾರು. ೧೯೪೧ ರಲ್ಲಿ ಹೈದ್ರಾಬಾದಿನಲ್ಲಿ ನಡೆದ ನಾಲ್ಕನೇ *ವೀರಶೈವ ಮಹಾಸಭೆಯ ಪ್ರಾಂತೀಯ ಸಮ್ಮೇಳನದ *ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದ್ದರು. *ಹೆಣ್ಣು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ ಯೌವನದಲ್ಲಿ ಗಂಡನ ಆಶ್ರಯದಲ್ಲಿ ವಯಸ್ಸಾದ ನಂತರ ಮಗನ ಆಶ್ರಯದಲ್ಲಿ ಕಳೆಯುತ್ತಾಳೆ. ತಂದೆ ಇಲ್ಲದವರ ,ಮದುವೆಯಾದರು ಮಕ್ಕಳಿಲ್ಲದ ಮಹಿಳೆಯರ ಸಮಸ್ಯೆಗೆ ಪರಿಹಾರವೇನು??!ಹೆಣ್ಣಿಗೆ ಸೌರಕ್ಷಣೆ ಕೊಡುವುದು ಸಮಾಜದ ಹೊಣೆಯಲ್ಲವೇ….??!!!ವೃದ್ಧೆಯಾಗಿ ಅನಾಥರಾದವರಿಗೂ ಸಂರಕ್ಷಣೆ ಕೊಡುವುದು ಸಮಾಜದ ಹೊಣೆಅಲ್ಲವೇ??!! ಅನಾಥ ವಿಧವೆ ಅಸಹಾಯಕರ ಬದುಕಿಗೆ ಒಂದು ನೆಲೆಯನ್ನು ಒದಗಿಸಲು ಯಾವ ವ್ಯವಸ್ಥೆಯನ್ನು ಮಾಡಲಿದ್ದೀರಿ” ಎಂದು ಸಮಾಜವನ್ನು ಪ್ರಶ್ನಿಸಿದರು. ೧೯೪೫ ಜಾಗತಿಕ ಮಹಿಳಾ ವರ್ಷವನ್ನು ಸಾರಿತ್ತು.೧೨-೯-೧೯೪೫ರಂದು*ವಿಜಯಪುರದಲ್ಲಿ *ನಡೆದ ಮಹಿಳಾ ಪರಿಷತ್ತಿನ ಉದ್ಘಾಟನೆಯ ಭಾಷಣಕಾರ್ತಿಯಾಗಿ ಬಂದರು. ಹೆಣ್ಣುಮಕ್ಕಳು ಸ್ವಾಭಾವಿಕವಾಗಿ ಭಾವುಕರು ಭಾವನೆಯೇ ಜೀವನವೆಂದು ನಂಬಿಕೊಂಡವರು ಅವರು ಜೀವನದ ವಿವಿಧ ಸನ್ನಿವೇಶಗಳಲ್ಲಿ ಹೊಂದಾಣಿಕೆ ಮನೋಭಾವವುಳ್ಳವರು ತಮಗೆ ಒದಗಿ ಬರುವ ಕಷ್ಟದ ಅನುಭವಗಳನ್ನು ಅಭಿವ್ಯಕ್ತಗೊಳಿಸಲು ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾ …..ಸಮಾಜದ ಮಹಿಳೆಯರ ಅಸಹಾಯಕತೆ ಸ್ಥಾನಮಾನ ಹಾಗೂ ಆಕೆಯ ಭದ್ರತೆಯ ಕುರಿತು ಜನರನ್ನು ಎಚ್ಚರಿಸಿದ್ದರು. ಆಗ ಧಾರವಾಡದಲ್ಲಿ ಕರ್ನಾಟಕ ಸಂಘದ ಆಚರಣೆ ಹಮ್ಮಿಕೊಂಡಾಗ…. ಮುಖ್ಯ ಅತಿಥಿಯಾಗಿ ಜಯದೇವಿ ತಾಯಿಯವರು ಪಾಲ್ಗೊಂಡಿದ್ದರು . “ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವುದರ ಜೊತೆಗೆ ಶೋಷಣೆ ಮಾಡುತ್ತಾ ಬಂದಿರುವುದು ವಾಸ್ತವ್ಯ ಸಂಗತಿ. ಸದಾ ಕಾಲ ಮಹಿಳೆಯರನ್ನು ಹೀನವಾಗಿ ಕಂಡು ಶೋಷಣೆಯ ಬಲಿಪಶು ಮಾಡುತ್ತಾರೆ .ಇಂಥ ಸಂಸ್ಕೃತಿಯ ನೆಲೆಯಲ್ಲಿ ಬೆಳೆದು ಬಂದ ಭಾರತೀಯ ಕುಟುಂಬಗಳು ಸಾಕಷ್ಟಿವೆ .ಬ್ರಿಟಿಷರ ಶಿಕ್ಷಣ ಪ್ರಭಾವದ ಹಿನ್ನೆಲೆಯಲ್ಲಿ ವಿದ್ಯಾವಂತ ಹಾಗೂ ಶ್ರೀಮಂತ ವರ್ಗದ ಕುಟುಂಬದ ಸ್ತ್ರೀ ಪುರುಷರು ಶಿಕ್ಷಣವನ್ನು ಪಡೆದುಕೊಂಡು ಆಧುನಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದವರು.ಉನ್ನತ ಶಿಕ್ಷಣ ಪಡೆದ ಮಹಿಳೆಯರು ಹಲವು ಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಅವರು ನಮ್ಮನಾಡಿನ ಉತ್ತಮವಾದ ಸಾಹಿತ್ಯವನ್ನು ಅನ್ಯ ಭಾಷಿಗರಿಗೆ ತಿಳಿಸಬೇಕು‌. ಸ್ತ್ರೀಯರು ಪುರುಷರಂತೆ ಲೌಕಿಕ ಅಲೌಕಿಕ ಎರಡನ್ನು ಸಾಧಿಸಲು ಸಾಧ್ಯ. ಮಾನವ ಕುಲದ ಮುನ್ನಡೆಗೆ ಕಾರಣರಾಗಲು ಸಾಧ್ಯವೆನ್ನುತಿದ್ದರು. ಅದೇ ರೀತಿ ಪ್ರತಿಯೊಂದು ಹೆಣ್ಣು ಮಗಳು ಮುಂದೆ ಬಂದು ಸಮಾಜಕ್ಕಾಗಿ ಕೊಡುಗೆಯನ್ನು ಕೊಡಬೇಕು ಎಂದು ಕೇಳಿಕೊಂಡರು. ಜಯದೇವಿ ತಾಯಿಯವರು* ಪಂಡರಪುರದ ವಿಶ್ವ ಹಿಂದೂ ಪರಿಷತ್ತಿನಲ್ಲಿ *ಭಾಗವಹಿಸಿದಾಗ ಒಬ್ಬ ಭಾಷಣಗಾರರು “ಘೋರ ಕುಂಬಾರ್ ಗಡಗಿ ಕೊಡಲಿ…. ತುಕಾರಾಂ ಕಾಳು ಕೊಡಲಿ…..” ಎಂದು ಹೇಳುತ್ತಾ ಎಲ್ಲ ಸಂತರನ್ನು ಅವರವರ ಗುಣ ಕಾಯದಿಂದ ನೆನೆಯುತ್ತ ಕೇವಲ ಶ್ರೇಷ್ಠ ಪುರುಷ ಸಂತರದಷ್ಟೇ ನೆನೆದರು. ಆಗ ಜಯದೇವಿ ತಾಯಿಯವರು ತಮ್ಮ ಭಾಷಣದಲ್ಲಿ “ಸಕ್ಕೂಬಾಯಿಯನ್ನು ಕರೆಯಿರಿ ಕಾಳು ಬೀಸಿ ಕೊಡಲಿ….. ರುಕುಮಾಬಾಯಿಯನ್ನು ಕರೆಯಿರಿ ಟೊಂಕದ ಮೇಲೆ ಕೈ ಇಟ್ಟುಕೊಂಡು ಉಪಚಾರಗಳನ್ನು ನೋಡಿಕೊಳ್ಳಲಿ ……ಇಂಥ ಸಂತಿನಿಯರನ್ನು ನೀವು ಮರೆಯೋದೇಕೆ…??!!! ಎಂದು ಪ್ರಶ್ನಿಸಿದರು .ಮಹಿಳೆಯರ ಸಾಧನೆಯನ್ನು ಸ್ಮರಿಸುತ್ತ ಸಮಾಜದ ವ್ಯವಸ್ಥೆಯನ್ನು ತಾವಿದ್ದ ಸ್ಥಳದಲ್ಲಿ ಟೀಕಿಸುತ್ತಿದ್ದರು. ‌ಸಂತಿಣೀಯರ ಸಾಧನೆಯನ್ನು ಗೌಣ್ಯ ಮಾಡಿ ಅವಳನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸುತ್ತಿದ್ದ ವ್ಯವಸ್ಥೆಯನ್ನು ಸಹಿಸುತ್ತಿರಲಿಲ್ಲ …….!! ಹರಸೀದೆ ನಿನದಾಟಿ ನಿನ್ಹಾಡಿ ತಾಯವ್ವಬರದೇನ ಮನತುಂಬಿ ಪಾಡಿ ನಮವ್ವಬರದೇನ ಮನೆ ತುಂಬಿ ನಿನ್ಹೆಸರಲೆಕರೆದೇನ ತಾಯಿ ಪದವೆಂದು…. ಎಂದು ಹಾಡುತ್ತಾ ತಾಯಿಯಂದಿರಿಗಾಗಿ ಪದಗಳನು ಬರೆದ ತಾಯಿಯ ಪದಗಳ ಎಂಬ ಕವನ ಸಂಕಲನವು ಪ್ರಚಲಿತವಾಯಿತು . ಹೆಣ್ಣು ಮಕ್ಕಳು ಹುಟ್ಟಿದರೆ ಮನೆಯಲ್ಲಿ ನಡುಗಂಬಗಳು ಸಹ ನಡುಗುತ್ತವೆ ……ಅದೇ ಗಂಡು ಮಕ್ಕಳು ಹುಟ್ಟಿದಾಗ ಗಜಭೀಮ ಹುಟ್ಟಿದನೆಂದು ಬಾಗಿಲಿನ ಚಿಲಕ ಬೋಧಿಗಳೆಲ್ಲ ನಗುತ್ತವೆ……. ಅನ್ನುವುದನ್ನು ತಾಯಿಯವರು ಖಡಾ ಖಂಡಿತವಾಗಿ ವಿರೋಧಿಸುತ್ತಿದ್ದರು. ಹೆಣ್ಣು ಮಕ್ಕಳು ಹುಟ್ಟಿದಾಗ ತಾಯಿ ಅಳಬಾರದು ನೊಂದುಕೊಳ್ಳಬಾರದು ಹೆಣ್ಣು ಜಗದ ಕಣ್ಣು ಎಂದು ತಮ್ಮ ಪದದಲ್ಲಿ ಹೇಳುತ್ತಾರೆ ‌. ಹೆಣ್ಣು ಹುಟ್ಟಿತೆಂದು| ಕಣ್ಣೀರ ಕರಿಬ್ಯಾಡ ಸಣ್ಣಗಾಗಬ್ಯಾಡ ಮನದಾಗ -ತಾಯವ್ವ ಹೆಣ್ಣಿನ ಜಗದ ಕಣ್ಣ!! ಅವರು ಹೋದ ಪ್ರತಿಯೊಂದು ಸಭೆಗಳಲ್ಲಿ“ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡ” ಎಂದು ಶಿವಯೋಗಿ ಸಿದ್ದರಾಮೇಶ್ವರರು ಹೇಳುವ ಮಾತು ಹೇಳಲು ಎಂದು ಮರೆಯುತ್ತಿರಲಿಲ್ಲ. ಶರಣ ಶ್ರೇಷ್ಠರಾದ ಸೊಲ್ಲಾಪುರದ ಶ್ರೀ ಸಿದ್ಧರಾಮರು ನುಡಿದ ಈ ವಚನದಲ್ಲಿ ಎರಡು ಮಾತುಗಳು ಎದ್ದು ಕಾಣುತ್ತವೆ ಹೆಣ್ಣಿನಲ್ಲಿದ್ದ ದೈವತ್ವವನ್ನು ಶರಣರು ಸ್ಪಷ್ಟಪಡಿಸಿದ್ದಾರೆ .ಅವಳ ಸತ್ಯ ಸೇವೆ ಪ್ರೇಮ ತ್ಯಾಗ ಅಹಿಂಸೆಗಳ ಸ್ವರೂಪ ಎಂದು ಸತ್ವ ಸಾಮರ್ಥ್ಯಗಳಿಂದಲೂ ಕ್ರಿಯಾಚಾರದಿಂದ ಕನ್ನಡ ನಾಡಿನಲ್ಲಿ ಪ್ರಸ್ತಾಪಿಸಿದ್ದಾಳೆ ಎಂದು ಈ ಪರಂಪರೆಯು ಜಾಗೃತಗೊಳ್ಳಬೇಕು. ಈ ತೇಜೋಮಯ ಬಲ ಮೈಮನದಲ್ಲೂ ಬೇರೂರಬೇಕು .ಈ ನಮ್ಮ ಶರಣ ಸಂಸ್ಕೃತಿಯು ಎಲ್ಲಡೆಯು ಹರಡಬೇಕೆಂದು ಪ್ರತಿಪಾದಿಸಿದರು. ಹೆಣ್ಣಿನ ಕಳವಳ ಕೇಳಿ ತಾ ಕರಗ್ಯಾನಅಣ್ಣ ಮಾಡ್ಯಾನ ಪಾವನ -ಹೆಣ್ಣಿನಪುಣ್ಯ ಕಟಕೊಂಡ ಬಸವಣ್ಣ !! ಹೆಣ್ಣು ಜೀವಕ ಅಕ್ಕ ಹೊಸಗಣ್ಣ ನೀ ಕೊಟ್ಟಿಎಣ್ಣ್ಯಾಗಿ ಬತ್ತಿಯಾಗಿ ದೀಪಾಗಿ -ದೀಪ್ತಿಯಾಗಿಅಣಿ ಮಾಡಿ ಕೊಟ್ಟೀನಿ ಕಿರು ನುಡಿ!! ಅಂತ ಹೀಗೆ ಅನೇಕ ಪದಗಳನ್ನು ಹೆಣ್ಣಿನ ಬಗ್ಗೆ ಬರೆದರು. ತಾಯಿಯವರು ಈಗಾಗಲೇ ತಮ್ಮ ನಿರ್ಗಳ ವಾಕ್ ವೈಖರಿಯಿಂದ ಮತ್ತು ನಿಷ್ಕಲ್ಮಶ ವ್ಯಕ್ತಿತ್ವದಿಂದ ನಾಡಿನ ಜನಮನದ ಮನೆಮಾತಾದರು. ಅದೇ ರೀತಿ ಸೊಲ್ಲಾಪುರದಲಿ ವಚನ ಸಾಹಿತ್ಯ ಹಾಗೂ ಗಾಂಧಿ ಪ್ರಭಾವದಿಂದ ಸುಶಿಕ್ಷಿತ ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದ ಜಯದೇವಿ ತಾಯಿಯವರು ದಲಿತ ಅಭಿವೃದ್ಧಿ ಮಹಿಳಾ ಸ್ವಾತಂತ್ರ ಸಮಾನತೆ ಸಾಕ್ಷರತೆಗಾಗಿ ಶ್ರಮಿಸಿದರು . ಸವಿತಾ ದೇಶಮುಖ

Read Post »

ಕಾವ್ಯಯಾನ

ಪ್ರಕಾಶ್.ಆರ್ ಅವರ ಕವಿತೆ “ಸಾರ್ಥಕ ಬದುಕು”

ಕಾವ್ಯ ಸಂಗಾತಿ ಪ್ರಕಾಶ್‌ ಆರ್ ಸಾರ್ಥಕ ಬದುಕು ವಿದ್ಯೆಯ ನೆರಳು ಕಾಣದ ಹೆಣ್ಣು ಜೀವವೊಂದುಕರುಳ ಕುಡಿಯ ವಿದ್ಯೆಯಆಶ್ರಯ ಕೊಡಲೆಂದುಕರುಳನೇ ಬತ್ತಿಯಾಗಿಸಿ ಬೆಳಕನೀಡಿದಜೀವಕೆ ನೆರಳಾದರೆ ಬದುಕು ಸಾರ್ಥಕವಲ್ಲವೇ? ಹೆಗಲನೇ ನೊಗವಾಗಿಸಿಬೆನ್ನು ಮೂಳೆಯ ಬಲವಾಗಿಸಿಎತ್ತಾಡಿಸಿ ತುತ್ತನೊದಗಿಸಿದ ತಂದೆಗೆಊರುಗೋಲಾಗಿ ನಿಂತರೆಬದುಕು ಸಾರ್ಥಕವಲ್ಲವೇ? ಕಣ್ಣನು ಮಣ್ಣಿಗಿಡುವ ಮುನ್ನಕಣ್ಣಿಲ್ಲದೆ ಕತ್ತಲಲಿರುವ ಜೀವಕೆಕಣ್ಣಾಗಿ ಬೆಳಕಾದರೆ ಬದುಕು ಸಾರ್ಥಕವಲ್ಲವೇ ಅಂಗವಿಕಲನಾದರೇನುಅಂಗಗಳ ಹಂಗಿನ ಗುಂಗಿಲ್ಲದೆಸಕಲಾಂಗವಿರುವ ಮನವು ವಿಕಲವಾದ ಜನರ ನಡುವೆಛಲದಿಂದ ಬಾಳಿದರೆಬದುಕು ಸಾರ್ಥಕವಲ್ಲವೇ  ಪ್ರಕಾಶ್.ಆರ್ ತುಮಕೂರು ಡಿಸ್ಟ್ರಿಕ್ಟ್ ದಿವ್ಯಂಗ್ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕರು

ಪ್ರಕಾಶ್.ಆರ್ ಅವರ ಕವಿತೆ “ಸಾರ್ಥಕ ಬದುಕು” Read Post »

ಇತರೆ

“ಕರುಣೆ ತೋರಿಸಿ” ವಿಶೇಷ ಲೇಖನ ವಾಣಿ ಶಿವಕುಮಾರ್

ಜೀವ ಸಂಗಾತಿ ವಾಣಿ ಶಿವಕುಮಾರ್ “ಕರುಣೆ ತೋರಿಸಿ” ಮೂಕ ಪ್ರಾಣಿಗಳೆಂದ ಮಾತ್ರಕ್ಕೆ ದಯವಿಟ್ಟು ನಮ್ಮನ್ನು ಕೀಳಾಗಿ ಕಾಣಬೇಡಿ ನಾವೂ ಸಹ ನಿಮ್ಮಂತೆಯೇ ಉಸಿರಾಡುತ್ತೇವೆ. ನಾಯಿ,ಹಸು,ಕುರಿ, ಕೋಳಿ,ಮೇಕೆ ಹೆಸರುಗಳಿಂದ ನಮ್ಮನ್ನು ಗುರುತಿಸುತ್ತೀರಾ.  ಬೇಸಿಗೆಕಾಲ ಶುರುವಾಗಿದೆ ನಿಮಗೆ ಹೇಗೆ ನೀರಿನ ಅಗತ್ಯವಿದೆಯೋ, ಅದೇ ರೀತಿ ನಮಗೂ ಸಹ ಅಗತ್ಯವಿರುತ್ತದೆ. ದಯವಿಟ್ಟು ನಿಮ್ಮ ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಅಥವಾ ಅಗಲವಾದ ಪಾತ್ರೆಯಲ್ಲಿ ನಮಗಾಗಿಯೇ ಅಂತ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿ ಕರುಣೆಯನ್ನು ತೋರಿಸಿ.  ಗೇಟಿನ ಮುಂದೆ ಬಂದರೆ ಸಾಕು ನಮ್ಮನ್ನು ಓಡಿಸುತ್ತೀರಾ ಯಾವ ಕಾರಣಕ್ಕಾಗಿ ಬಂದಿದೀವಿ ಅಂತ ಸ್ವಲ್ಪ ಮಟ್ಟಿಗಾದರೂ ಯೋಚಿಸಿ ಕೆಲವರ ಮನೆಯ ಮುಂದೆ ನಮಗಾಗಿ ಅಂತ ಸದಾ ನೀರಿನ ವ್ಯವಸ್ಥೆಯನ್ನು ಮಾಡಿರುತ್ತಾರೆ ಇನ್ನೂ ಕೆಲವರು ನೀರನ್ನು ಕುಡಿಯಲು ಕೊಡುವ ಬದಲು ಆ ನೀರನ್ನೇ ನಮ್ಮ ಮೇಲೆ ಎರಚಿ ನಮ್ಮನ್ನು ಓಡಿಸುತ್ತಾರೆ.  ನಿಮ್ಮಂತೆಯೇ ನಾವೂ ಸಹ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದರೆ ಬಿರು ಬಿಸಿಲಿನಲ್ಲಿ ಬೀದಿಬೀದಿ ಅಲೆದಾಡುವ ಪ್ರಸಂಗ ಬರುತ್ತಿರಲಿಲ್ಲ. ಮನೆಯಲ್ಲಿ ಹಳಸಿದ ಅನ್ನ,ಒಣಗಿರುವ ರೊಟ್ಟಿ, ಕೊಳೆತ ಹಣ್ಣು ತರಕಾರಿಗಳನ್ನು ಒಂದು ಕವರಿನಲ್ಲಿ ಹಾಕಿ ಬೀದಿ ಬದಿಯಲ್ಲಿ ಎಸೆಯುತ್ತೀರ  ಹಸಿವೆಯನ್ನು ತಾಳಲಾರದೆ ಕವರಿನಲ್ಲಿರುವ ಆಹಾರವನ್ನು ತಿನ್ನುವುದರ ಜೊತೆಗೆ ಹಾನಿಕಾರಕ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರಿ ಗಂಭೀರ ಖಾಯಿಲೆಯಿಂದ ಬಳಲಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ.  ಪ್ಲಾಸ್ಟಿಕ್ ಕವರಿನಲ್ಲಿ ಆಹಾರ ಪದಾರ್ಥಗಳನ್ನು ಗಂಟು ಕಟ್ಟಿ ಎಸೆಯುವ ಬದಲು ಯಾವುದಾದರೊಂದು ಕಲ್ಲಿನ ಮೇಲೆ ಅಥವಾ ಒಂದು ಎಲೆಯ ಮೇಲೆ ನಮಗಾಗಿ ಅಂತ ಮೀಸಲಿಟ್ಟಿರುವ ಆಹಾರವನ್ನು ಇಟ್ಟರೆ ಪ್ಲಾಸ್ಟಿಕ್ ಬಳಕೆ ಕಮ್ಮಿಯಾಗುವುದರ ಜೊತೆಗೆ ನಮ್ಮ ಜೀವವೂ ಸಹ ಉಳಿಯುತ್ತದೆ. ಬಾನಾಡಿಯಲ್ಲಿ ಸ್ವಚ್ಛಂದವಾಗಿ ಹಾರಾಡುವ ನಮ್ಮ ಗೆಳೆಯ ಗೆಳತಿಯರಿಗಾಗಿ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅವರಿಗೂ ಸಹ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ. ದಯವಿಟ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ನಮ್ಮನ್ನು ಉಳಿಸಿ. ವಾಣಿ ಶಿವಕುಮಾರ್

“ಕರುಣೆ ತೋರಿಸಿ” ವಿಶೇಷ ಲೇಖನ ವಾಣಿ ಶಿವಕುಮಾರ್ Read Post »

ಕಾವ್ಯಯಾನ

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಅತಿಯಾದ ನಂಬಿಕೆಗೆ *ದ್ರೋಹವಾಗಿದೆ* ಸಖ ನನ್ನವರಿಂದ ನನಗೀಗ *ಮೋಸವಾಗಿದೆ* ಸಖ ಅತಿಯಾದರೆ ಅಮೃತವು ವಿಷವಾಗುವುದಲ್ಲವೇಬಣ್ಣದ ಮಾತುಗಳಿಗೆ ಬೆಲೆ *ಹೆಚ್ಚಾಗಿದೆ* ಸಖ ಕಣ್ಣೀರ ಹನಿಗಳು ಜಾರುತಿವೆ ಪ್ರತಿದಿನ ನೊಂದುಪ್ರಖರ ಸೂರ್ಯಂಗೀಗ ಗ್ರಹಣ *ಹಿಡಿದಿದೆ* ಸಖ  ಬೆನ್ನಿಗೆ ಚೂರಿ ಹಾಕುವವರೇ ಕಾಣುತಿಹರು ಇಲ್ಲಿನಂಬಿಕೆಯ ಗೋಪುರವು *ಕುಸಿಯುತಿದೆ* ಸಖ  ಈ ರೇಖೂ ಎದೆಗುಂದದೆ ಮುಂದೆ  ಸಾಗುತಿಹಳುನಮ್ರ ನಡೆಯ ಅಗ್ನಿ ಪರೀಕ್ಷೆ *ನಡೆಯುತ್ತಿದೆ* ಸಖ ಡಾ.ರೇಖಾ ಉದಯ 

ಡಾ.ರೇಖಾ ಉದಯ ಅವರ ಗಜಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರುಮಾಲಿಕೆ “ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು “ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ” ಭವ್ಯ ಭಾರತದ ಇತಿಹಾಸವು ತೆರೆದಿಟ್ಟ ಅಪ್ಪಟ ರಾಷ್ಟ್ರ ಪ್ರೇಮಿ ಸೇನಾನಿ ಹೈದ್ರಾಬಾದ ಕರ್ನಾಟಕದ ಹುಲಿ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ.  ಮಹದೇವಪ್ಪ ರಾಂಪುರೆ (1920-1973) ಒಬ್ಬ ಭಾರತೀಯ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಘದ (H.K.E. Society) ಸ್ಥಾಪಕರು, ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್ ಅನ್ನು 1963ರಲ್ಲಿ ಸ್ಥಾಪಿಸಿ, ಆ ಭಾಗದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ; ಅವರು ಮೈಸೂರು ವಿಧಾನ ಪರಿಷತ್ ಉಪಾಧ್ಯಕ್ಷರಾಗಿ, ಕಲಬುರಗಿ ಲೋಕಸಭಾ ಸದಸ್ಯರಾಗಿ ಮೂರು ಭಾರಿ ಸೇವೆ ಸಲ್ಲಿಸಿದ್ದಾರೆ.  ಸಂಕ್ಷಿಪ್ತ ಜೀವನ ಚರಿತ್ರೆ: ಜನನ ಮತ್ತು ಆರಂಭಿಕ ಜೀವನ: ಮಹದೇವಪ್ಪ ರಾಂಪುರೆ ಅವರು 1920ರಲ್ಲಿ ಜನಿಸಿದರು.ತಾಯಿ ಗುರುದೇವಿ ತಂದೆ ಯಶವಂತಪ್ಪ ರಾಂಪುರೆ  ಮಹದೇವಪ್ಪ ರಾಮಪುರೆ ಅವರು  6 ಜನ ಅಣ್ಣ – ತಮ್ಮಂದಿರು ಹಾಗೂ ಒಬ್ಬಳೆ  ಒಬ್ಬಳು ತಂಗಿ. ಆರಂಭಿಕ ಶಿಕ್ಷಣವನ್ನು ಸೊಲ್ಲಾಪುರದಲ್ಲಿ ಮುಗಿಸಿದರು. ಇವರ ಅಜ್ಜನವರು ಸುಮಾರು ನಾಲ್ಕು ನೂರು ಎಕರೆ ಭೂಮಿಯನ್ನು ಹೊಂದಿದ್ದರು. ಮೂಲತಃ ಸೋಲಾಪುರ ಜಿಲ್ಲೆಯ ಕುಂಬಾರಿ ಗ್ರಾಮದಲ್ಲಿ ಒಂದು ಅಡತಿ ಅಂಗಡಿ ಕೃಷಿ ವ್ಯಾಪಾರ ಮಾಡಿಕೊಂಡಂತಹ ಶ್ರೀಮಂತ ಮನೆತನವಾಗಿತ್ತು. ಶ್ರೀ ಮಹದೇವಪ್ಪ ರಾಮಪುರೆ ಅವರು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಾತಂತ್ರ್ಯ ಹೋರಾಟದೊಳಗೆ ಧುಮುಕಿದರು. ಮಹಾರಾಷ್ಟ್ರದಲ್ಲಿ ಇವರ ಮೇಲೆ ಬ್ರಿಟಿಷ್ ಸರ್ಕಾರ ವಾರಂಟ್ ಜಾರಿ ಮಾಡಿದ ಮೇಲೆ ಸಂಘರ್ಷವನ್ನು ಮುನ್ನಡೆದ ಬೇಕೆಂಬ ಯೋಚನೆ ಹಂಬಲದಿಂದ ಕಲಬುರ್ಗಿಗೆ ಬಂದರು . ತಮ್ಮ 26 ನೆಯ ವಯಸ್ಸಿನಲ್ಲಿ ಹೈದ್ರಾಬಾದ ಸರಕಾರದ ಎಂ ಎಲ್ ಸಿ ಆಗಿ ಆಯ್ಕೆಯಾದರು ಮುಂದೆ ಕರ್ನಾಟಕ ಏಕೀಕರಣವಾದ ಮೇಲೆ  ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಉಪಸಭಾಪತಿಯಾಗಿ ಆಯ್ಕೆಯಾದರು. ರಾಜಕೀಯ ಜೀವನ: ಶ್ರೀ ಮಹದೇವಪ್ಪ ರಾಂಪುರೆ ಅವರು ಮೂಲತಃ ಸಮಾಜವಾದಿ ಎಡಪಂಥೀಯ ವೈಚಾರಿಕ ನೆಲೆಯಲ್ಲಿ ಬೆಳೆದವರು. ಡಾ ಎಂ ಎನ್ ರಾಯ್ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಕರ್ನಾಟಕದ ನವ ನಿರ್ಮಾಪಕ  ಶ್ರೀ ಎಸ್ ನಿಜಲಿಂಗಪ್ಪನವರ ಬಲಗೈ ಬಂಟನಾಗಿ ಕಾರ್ಯ ಮಾಡಿದವರು. ಶ್ರೀ ಚಂದ್ರಶೇಖರ ಪಾಟೀಲ ಶ್ರೀ ವೀರೇಂದ್ರ ಪಾಟೀಲ ಮುಂತಾದ ಯುವ ನಾಯಕರ ಜೊತೆಗೂಡಿ ಹೈದ್ರಾಬಾದ ಕರ್ನಾಟಕದ ಸಮಗ್ರ ಏಳ್ಗೆಗೆ ಕನಸು ಕಂಡವರಲ್ಲಿ ಪ್ರಮುಖರು  ಹಾಗೂ ರಜಾಕಾರ ಹಾವಳಿ ಎದುರಿಸಿದ ಸೇನಾನಿಯಾಗಿದ್ದರು. ಇವರು ಶ್ರೀಮತಿ ತಾರಾದೇವಿ ಅವರನ್ನು ವಿವಾಹವಾದರು.ಇವರಿಗೆ. 5  ಜನ ಗಂಡುಮಕ್ಕಳು  3 ಜನ ಹೆಣ್ಣುಮಕ್ಕಳು  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ನಂತರ ರಾಜಕೀಯ ಪ್ರವೇಶಿಸಿದರು. ಮೈಸೂರು ವಿಧಾನ ಪರಿಷತ್ ಉಪಾಧ್ಯಕ್ಷರಾಗಿ (1956-1957) ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ (1957-1970) ಸೇವೆ ಸಲ್ಲಿಸಿದರು. ಶ್ರೀ ಎಸ್ ನಿಜಲಿಂಗಪ್ಪನವರ ಮೊರಾರ್ಜಿ ದೇಸಾಯಿ ಡಾ ಎಂ.ಎನ್ ರಾಯ್ ಡಾ ನೀಲಂ ಸಂಜೀವ ರೆಡ್ಡಿ ಮುಂತಾದವರ ಜೊತೆಗೆ ರಾಜಕೀಯ ಒಡನಾಟವನ್ನು ಹೊಂದಿದ್ದರು. ತೀವ್ರಗಾಮಿ ಸತ್ಯ ಸಮತೆ ಶಾಂತಿ ಪ್ರೀತಿ ಮಂತ್ರ ಜಪಿಸಿದ ರಾಜಕೀಯ ಮುತ್ಸದ್ಧಿ. ಇವರ ಲೋಕ ಸಭೆಯಲ್ಲಿ ಮಾತನಾಡುವ ವೈಖರಿ ಕಂಡು ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣ ಅವರು ಶ್ರೀ ಮಹದೇವಪ್ಪ ರಾಮಪುರೆ ಅವರನ್ನು ಶ್ರೇಷ್ಠ ಸಂಸತ್ತ ಪಟು ಎಂದು ಬಣ್ಣಿಸಿದ್ದಾರೆ. ಶಿಕ್ಷಣಕ್ಕೆ ಕೊಡುಗೆ: ಡಾ ಡಿ ಸಿ ಪಾವಟೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಣದ ಬೆಳವಣಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇದರ ಫಲವಾಗಿ 1963ರಲ್ಲಿ ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ  ವೈದ್ಯಕೀಯ  ಮಹಾವಿದ್ಯಾಲಯವನ್ನು ಸ್ಥಾಪಿಸಿದರು.  ಪ್ರಮುಖ ಕೊಡುಗೆಗಳು: H.K.E. ಸೊಸೈಟಿ: ಇದರ ಸಂಸ್ಥಾಪಕರು .ಇದಕ್ಕೂ ಮುಂಚೆ ದೊಡ್ಡಪ್ಪ ಅಪ್ಪ ಅವರ ಶ್ರೀ ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನೂರಾರು  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. M.R. ಮೆಡಿಕಲ್ ಕಾಲೇಜ್: ಭಾರತದ  ಖಾಸಗಿ ವೈದ್ಯಕೀಯ ಕಾಲೇಜಾಗಿ, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಮಾನ್ಯತೆ ಪಡೆದು, ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುತ್ತಿದೆ. ದೂರದೃಷ್ಟಿ ಈ ಭಾಗದ ಜನರ ಕಲ್ಯಾಣಕ್ಕಾಗಿ ಶಿಕ್ಷಣ ಮತ್ತು ಆರೋಗ್ಯದ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು.  ವಂಶಪರಂಪರೆ: ಅವರ ದೂರದೃಷ್ಟಿ ಮತ್ತು ಶ್ರಮದಿಂದ ಸ್ಥಾಪಿಸಲಾದ ಸಂಸ್ಥೆಗಳು ಇಂದಿಗೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಇವರ ಮೂರು ಜನ ಗಂಡು ಮಕ್ಕಳು ವೈದ್ಯರಾಗಿ ರಾಷ್ಟ್ರ ಅಂತರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಸಲ್ಲಿಸಿದ್ದಾರೆ. ಇಂತಹ ಒಬ್ಬ ಸೃಜನಶೀಲ ವೈಚಾರಿಕ ಚಿಂತಕ ಶಿಕ್ಷಣ ಪ್ರೇಮಿ ಅಪ್ಪಟ ದೇಶ ಭಕ್ತ 1973 ರಲ್ಲಿ ತಮ್ಮ 53 ನೆಯ  ವಯಸ್ಸಿನಲ್ಲಿ ಬಯಲಾದರು. ಇಂತಹ ದಿವ್ಯ ಜ್ಯೋತಿ ಇಂದಿಗೂ ಬೆಳಗುತ್ತಿದೆ ನಮ್ಮೆಲ್ಲರ ಮಧ್ಯೆ.  __________________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರುಮಾಲಿಕೆ “ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top