ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಹೋಳಿಹಬ್ಬ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಹೋಳಿಹಬ್ಬ” ಬಣ್ಣಗಳ ಸಮ್ಮಿಲನಹೋಳಿ ಹಬ್ಬದ ದಿನಮಿಂದೇಳುತ ಮೈ ಮನನೆನೆಯುತ ರಾಧೆ ಶಾಮನರಂಗಿನೋಕುಳಿ ಕಾಮ ದಹನತ್ಯಜಿಸು ಅರಿಷಡ್ವರ್ಗಗಳನ್ನ. ಬಣ್ಣದ ಹಬ್ಬವಿದುಸಂಭ್ರಮದ ಹೋಳಿಯಿದುರಂಗನು ಚೆಲ್ಲುತ ನಿಂದುಸಂತಸದಿ ನಲಿಯೋಣ ಮಿಂದುಒಂದಾಗಿಸಿ ಮನಗಳ ಇಂದುಎಲ್ಲೆಲ್ಲೂ ಉಲ್ಲಾಸವೆ ತುಂಬಿಹುದು. ಕೋಟೆಯ ಬಣ್ಣವ ನೋಡಿದೆಯಾರಂಗಿನೋಕುಳಿಯ ಆಡಿದೆಯಾಶಾಮನಿರಲು ರಾಧೆ ಬಾರೆಯಾನೀನಿರಲು ಸರಿಯದು ಸಮಯಎನ್ನುತ ಸ್ನೇಹಿತರ ಬಳಿ ಸಾರೆಯಾಏಳು ಬಣ್ಣಗಳ ಮನಸಾರೆ ಬೆರೆಸೆಯಾ. ಒಲವಿನ ಬಣ್ಣ ಚೆಲುವಿನ ಬಣ್ಣನವಿರಾದ ಭಾವ ಮೈಮನದೊಳಗಿಣ್ಣ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಹೋಳಿಹಬ್ಬ” Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಬಣ್ಣಗಳ ಬೆಡಗು”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಬಣ್ಣಗಳ ಬೆಡಗು” ನಿನ್ನ ಪ್ರೀತಿಯ ಮಿನುಗು ಕೆಂಪು ಬಣ್ಣದಲಿ ಮಿಂದ ಮನ ನಂದನವಾಯಿತುನಿನ್ನ ಸ್ನೇಹದ ಜಿನುಗು ಹಳದಿ ಬಣ್ಣದಲಿ ಮಿಂದ ಜೀವ ಬಂಧನವಾಯಿತು ಮುಗಿಲ ನೀಲಿ ಬಣ್ಣ ಸೇರುವ ಕನಸುಗಳಲಿ ಮೀಯುತ ಜೀವನ ಚೆಂದವಾಯಿತುನಗುವ ಹಸಿರು ಸಾಗರದಲಿ ಬೆರೆಯುತ ಮೌನಭಾವ ಆನಂದವಾಯಿತು ಕರುಣೆಯ ಕಡಲಿನ ಕೇಸರಿಯ ಅಲೆಯಲಿ ತೇಲಿದ ಬಾಳು ಸಿರಿಗಂಧವಾಯಿತುಒಲವಿನ ಹಣತೆಯ ಶ್ವೇತ ಬೆಳಕಿನ ಹೊನಲಲಿ ಬದುಕು ಚಂದನವಾಯಿತು ಮಳೆಬಿಲ್ಲ ಬಣ್ಣಗಳ ಬಾಂದಳದಿ ನಿತ್ಯ ಸತ್ಯ ಸಾಕ್ಷಾತ್ಕಾರ ಮಂದಾನಿಲಯವಾಯಿತುದೃಷ್ಟಿ ಬೊಟ್ಟಿನಂತೆ ಕಪ್ಪು ನಮ್ಮೀರ್ವರ ಜೊತೆ ಹೆಜ್ಜೆಗಳಿಗೆ ಅಂದವಾಯಿತು ಬಣ್ಣದ ಗರಿಬಿಚ್ಚಿ ಕುಣಿವ ನವಿಲಾಗಿ ಹೋಳಿಯ ರಂಗಿಗೆ  ಕೆನ್ನೆ ಗುಲಾಬಿ ಸಿಂಧುವಾಯಿತುಕಾಮನಬಿಲ್ಲಾಗಿ ಬಾಗಿ ಬಣ್ಣ ಭುವಿಗೆ ಮುತ್ತಿಡುವ ರೀತಿ ಪ್ರೀತಿಯ ಬಿಂದುವಾಯಿತು ಶಶಿ ಚೆಲ್ಲಿದ ಬೆಳ್ಳನೆಯ ಬಿಳಿನೊರೆ ಹಾಲ ಪ್ರೇಮ ಬೆಳದಿಂಗಳಲಿ ಕಂಗಳ ಕಾಂತಿ ಮಂದವಾಯಿತುನಿನ್ನ ನೇಹ ಕರಗಳ ಕರೆಯೇ ಕರಿಕಪ್ಪು ಕತ್ತಲಲಿ ಇಂದುವಿನ ಎದೆ ಬೆಳಕ ಇಂಧನವಾಯಿತು  ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಬಣ್ಣಗಳ ಬೆಡಗು” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ-15 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಕುಟುಂಬ ಕಲಹವದು ಕುದುರೆ ಕದನದಿಂದ… ಕುಟುಂಬ ಕಲಹವದು ಕುದುರೆ ಕದನದಿಂದ… ಸೂರ್ಯನಿನ್ನೂ ಉದಯಿಸಿರಲಿಲ್ಲ. ನನ್ನೊಳಗೆ ಕದನ ಸೆಳೆತ ಉದಯಿಸಿಯಾಗಿತ್ತು. ಮಾಹಿಷ್ಮತಿಯ ಸೇನೆಗೆ ಸಾಧ್ಯವಾದಷ್ಟು ಶೀಘ್ರ ಸೋಲುಣಿಸುತ್ತೇನೆ ಎಂಬ ತವಕ ತಲೆಯೇರಿ ಕುಳಿತಿತ್ತು. ನೇಸರನ ನಸುಬೆಳಕು ಮಾಹಿಷ್ಮತಿಯ ಬುವಿನಾರಿಯನ್ನು ಸ್ಪರ್ಶಿಸುವ ಮಧುರ ಗಳಿಗೆಗೂ ಮೊದಲೇ ಕುದುರೆಯನ್ನು ಕಟ್ಟಿಹಾಕಿದ್ದ ಕಟ್ಟಾಳುಗಳನ್ನು ಕದನದಲ್ಲಿ ಕೊನೆಗಾಣಿಸುವ ರುಧಿರ ಗಳಿಗೆ ನನ್ನನ್ನಪ್ಪಿತು.ನಮ್ಮ ಚತುರಂಗ ಬಲ ಮಾಹಿಷ್ಮತಿ ಪಟ್ಟಣಕ್ಕೆ ಮುತ್ತಿಗೆ ಹಾಕಿತು. ಎರಡೂ ಪಡೆಗಳ ಮಧ್ಯೆ ಬಿಡುವಿರದ, ಎಡೆಯಿರದ ಕಾದಾಟ. ಕಂಡ ಕಂಡ ಕಡೆಯಲ್ಲೆಲ್ಲಾ ಬಾಣಗಳ ಆರ್ಭಟ. ಆನೆ ಕುದುರೆ ರಥಗಳ ಎಡೆಬಿಡದ ಓಡಾಟ. ಯಮರಾಜನಿಗದೋ ಸೈನಿಕರ ಸಾವಿನ ರಸದೂಟ.ನಾನಂತೂ ಯಾವುದಕ್ಕೂ ಅಳುಕದವನಾಗಿದ್ದೆ. ಇಂದಂತೂ ಜಯ ನಮ್ಮ ಸೈನ್ಯಕ್ಕೆ ಒದಗಲೇಬೇಕು ಎಂಬ ಹಠ ನನ್ನೊಳಗಿತ್ತು. ನನ್ನ ಈ ಬಗೆಯ ವೀರಾವೇಶ ನೀಲಧ್ವಜನ ಅರಿವಿಗೂ ಬಂದಿತ್ತು. ನನ್ನ ರಭಸವನ್ನು ತಾಳಿಕೊಳ್ಳುವ ತ್ರಾಣವದು ಅವನ ಸೇನೆಗೆ ಅದೆಲ್ಲಿತ್ತು!ಸೈನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಲೇ ಇದ್ದರು. ರಥಗಳು ಮುರಿದವು. ಗಜಶಿರಗಳು ಒಡೆದವು. ಕುದುರೆಗಳು ಧರಾಶಾಯಿಯಾದವು.ಅನಾಥಪ್ರಜ್ಞೆ ನೀಲಧ್ವಜನನ್ನು ಬಂದು ಅಪ್ಪಿದ್ದು ಆ ಗಳಿಗೆಯಲ್ಲಿ, ಸಹೋದರ ಸುತರನ್ನು ಕಳೆದುಕೊಂಡ ಹೀನ ಕ್ಷಣದಲ್ಲಿ. ಕುಗ್ಗಿಹೋದ ನೀಲಧ್ವಜ. ಹಿಂದಣ ಯುದ್ದದಲ್ಲಿ ಕಾಣದ ಹತಾಶೆ ಅವನೊಳಗೆ. ಯುದ್ಧವೇ ಬೇಡ ಎಂಬ ವೈರಾಗ್ಯ ಆತನಲ್ಲಿ ಮೂಡಿದಂತೆನಿಸಿತು ನನಗೆ. ಕೆಲವೊಮ್ಮೆ ಹಾಗೆಯೇ. ಬಂಧುಗಳಿರುವಾಗ, ನಮ್ಮವರೆನಿಸಿಕೊಂಡವರು ನಮ್ಮ ಜೊತೆಗೇ ಇರುವಾಗ ಅವರ ಮೌಲ್ಯ ನಮ್ಮರಿವಿಗೆ ದಕ್ಕುವುದಿಲ್ಲ. ಆದರೆ ಅವರನ್ನು ಕಳೆದುಕೊಂಡಾಗ ಇಡಿಯ ಬದುಕೇ ಪೂರ್ಣಶೂನ್ಯವಾಗಿ ನಮ್ಮನ್ನು ಆವರಿಸಿ ಕಾಡತೊಡಗುತ್ತದೆ. ಅದೇ ಬಗೆಯ ಭಾವತೀವ್ರತೆ ನೀಲಧ್ವಜನಲ್ಲಿ ಮೂಡಿಬಂತು. ಅದು ನನ್ನ ತಿಳಿವಳಿಕೆಗೆ ನಿಲುಕಿತು.ಇದ್ದಕ್ಕಿದ್ದಂತೆಯೇ ರೋಷಾತಪ್ತನಾದ ಮಾಹಿಷ್ಮತಿಯ ಅರಸ. ಮಡಿದ ತನುಜ ಅನುಜರ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಅವನಲ್ಲಿ ಮೂಡಿದ್ದಿರಬೇಕು. ಕೆರಳಿನಿಂತ. ಕಿಡಿಕಿಡಿಯಾದ. ವಿಚಿತ್ರವಾದ ಆವೇಶದಲ್ಲಿ ನನ್ನೊಡನೆ ಹೋರಾಟಕ್ಕಿಳಿದ. ನನ್ನಲ್ಲಿ ಈಗಲೂ ಕದನದ ಉಮೇದು ಅಳಿದಿರಲಿಲ್ಲ. ಬಾಣವನ್ನು ನಿರಂತರವಾಗಿ ಪ್ರಯೋಗಿಸಿದೆ. ಅದೊಂದು ಕ್ಷಣದಲ್ಲಿ ನೀಲಧ್ವಜ ಪೂರ್ಣಪ್ರಜ್ಞೆಯಿಂದ ವಿಮುಕ್ತನಾದ. ಮೂರ್ಛೆ ಹೋದ. ರಥದಲ್ಲಿಯೇ ಕುಸಿದು ಕೂತ. ಅವನ ಸಾರಥಿಗೆ ದೊರೆಯ ಸ್ಥಿತಿ ಮನದಟ್ಟಾಯಿತು. ರಥವನ್ನಲ್ಲಿಂದ ಓಡಿಸಿ ಅರಮನೆಯ ಬಳಿಗೆ ಒಯ್ದ.ರಾಜನೇ ಇಲ್ಲವಾದ ಮಾಹಿಷ್ಮತಿ ಸೇನೆಯಲ್ಲಿ ಗೊಂದಲ, ತಳಮಳ. ಒಡೆಯನಿಲ್ಲವಾದ ಸೈನಿಕರು ದೆಸೆದೆಸೆಗೆ ಓಡಿದರು. ಅವರ ಕಳವಳದ ಬೊಬ್ಬೆಯದು ನಮ್ಮ ಗೆಲುವನ್ನು ಸಾರಿಹೇಳುವ ವಿಜಯಘೋಷವಾಯಿತು. ನಾವು ಗೆದ್ದೆವು.ಅರಮನೆಯಲ್ಲಿ ಎಚ್ಚರಗೊಂಡ ನೀಲಧ್ವಜನಿಗೆ ಸೋಲಿನ ವಿಚಾರ ತಿಳಿಯಿತು. ಅವಮಾನವಾಯಿತು. ಮೊದಲೇ ಸಂಧಾನದ ಮೂಲಕ ಗೌರವಯುತವಾಗಿ ಕುದುರೆಯನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದವನು ತಾನು. ಆದರೆ ಆ ಬಳಿಕ ಕದನಕ್ಕಿಳಿದು ಉಳಿಸಿಕೊಂಡ ಮರ್ಯಾದೆಯನ್ನು ಮಣ್ಣುಪಾಲು ಮಾಡಿಕೊಂಡೆ ಎಂಬ ಅಪಮಾನಸುಳಿ ಅವನನ್ನು ಕೀಳರಿಮೆ ಕೊಳದಲ್ಲಿ ಮುಳುಗಿಸಿತು. ಅದಕ್ಕೆ ಕಾರಣಳಾದ ರಾಣಿ ಜ್ವಾಲೆಯ ಮೇಲೆ ಕೋಪ ಉಕ್ಕಿಬಂತು. “ನಿನ್ನೆಯೇ ಕುದುರೆಯನ್ನು ಪಾರ್ಥನಿಗೆ ಬಿಟ್ಟುಕೊಡುವ ನಿರ್ಣಯ ತಳೆದವನು ನಾನು. ಬಿಡಬೇಡ ಎಂಬ ತಪ್ಪು ಸಲಹೆ ಕೊಟ್ಟು ನನ್ನನ್ನು ಹಾಳುಮಾಡಿದೆಯಲ್ಲಾ! ನಿನ್ನ ಮಾತು ಕೇಳಿ ನನ್ನವರನ್ನು ಕಳೆದುಕೊಂಡೆ. ದುಷ್ಟೆ ನೀನು. ನಿಕೃಷ್ಟೆ ನೀನು. ಅತಿಕಷ್ಟ ಕೊಟ್ಟೆಯೆನಗೆ” ಎಂದು ಅವಳನ್ನು ಪರಿಪರಿಯಾಗಿ ಜರಿದ. “ನನ್ನ ಅರಮನೆಯಲ್ಲಿ ನೀನು ಇರಕೂಡದು” ಎಂದು ಆಜ್ಞಾಪಿಸಿದ.ಹೀಗೆ ಜ್ವಾಲೆಯೊಂದಿಗೆ ಜಗಳವಾಡಿ ಅವಳೊಂದಿಗಿನ ಬಂಧವನ್ನು ಮುರಿದ ನೀಲಧ್ವಜ ಬಂದದ್ದು ನನ್ನ ಬಳಿಗೆ. ನಮ್ಮ ಗೆಲುವನ್ನವನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡ. ಅಖಿಲ ವಸ್ತುಗಳನ್ನು ಸಮರ್ಪಿಸಿದ. ಅಶ್ವಮೇಧ ಯಾಗಕ್ಕಾಗಿ ಸಂಪದವನ್ನಿತ್ತ. ಬಗೆಬಗೆಯ ಧವಸಧಾನ್ಯಗಳನ್ನು ಬಂಡಿಬಂಡಿಗಳಲ್ಲಿ ತುಂಬಿಸಿ ತರಿಸಿ ಎದುರಿಗಿರಿಸಿದ. ಪಾಂಡವ ಸಾರ್ವಭೌಮತ್ವವನ್ನವನು ಸ್ವೀಕರಿಸಿದ. ಒಲವಿನಿಂದ ನನ್ನ ಬಳಿಗೆ ಬಂದು ನಮ್ಮದು ನಿಜ ಗೆಲುವು ಎನ್ನುವುದನ್ನು ಮನ್ನಿಸಿದ.ನನಗಂತೂ ಸಂತಸವಾಗಿತ್ತು. ಅಗ್ನಿಯ ಸಂಧಾನಕ್ಕೆ ಅನುಸಾರವಾಗಿ ಅವನು ಕುದುರೆಯನ್ನು ಬಿಟ್ಟು ಕಳುಹಿಸಿಕೊಟ್ಟಿದ್ದರೆ ಈ ಬಗೆಯ ಸಂಭ್ರಮ ಖಂಡಿತವಾಗಿಯೂ ನನ್ನದಾಗುತ್ತಿರಲಿಲ್ಲ. ಶಕ್ತಿಯನ್ನು ಪ್ರದರ್ಶಿಸಿ, ನೋವು ಬೇಗೆಗಳನ್ನು ದರ್ಶಿಸಿ ಪಡೆದ ಗೆಲುವಾದ್ದರಿಂದ ಇದಕ್ಕೆ ಮಹತ್ವ ಅಧಿಕ ಎನಿಸಿತು.ಆದರದಿಂದ ನೀಲಧ್ವಜನಿಗೆ ನಮಿಸಿದೆ. ಅಲ್ಲಿಂದ ಹೊರಡುತ್ತೇನೆಂದೆ. ಅವನೂ ನಮ್ಮ ಜೊತೆಗೆ ಬರುವುದಕ್ಕೆ ಸಿದ್ಧನಿದ್ದ. ಅವನನ್ನೂ ಜೊತೆಮಾಡಿಕೊಂಡು ನಾವು ಮುಂದೆ ಮುಂದೆ ಹೋದೆವು. ಹಯವದು ಚಲಿಸುತ್ತಿತ್ತು ನಮ್ಮ ಮುಂದೆ. ದಕ್ಷಿಣ ದಿಶೆಯೆಡೆಗೆ ಮುಖಮಾಡಿ ಹೊರಟಿತು ಆ ಕುದುರೆ.ನೀಲಧ್ವಜನಿಂದ ತಿರಸ್ಕೃತಳಾದ ಜ್ವಾಲೆಯೊಡಲಲ್ಲಿ ಅವಮಾನದ ಜ್ವಾಲೆಯೆದ್ದಿತ್ತು. ಇಷ್ಟೊಂದು ಅವಮಾನ ಮಾಡಿಸಿಕೊಂಡು ಇಲ್ಲಿರುವುದಾದರೂ ಏತಕ್ಕೆ ಎಂಬ ಭಾವ ತಳೆದ ಅವಳು ಅರಮನೆಯನ್ನು ಆ ಕ್ಷಣವೇ ತೊರೆದಳು. ಉನ್ಮುಖ ಹೆಸರಿನ ಸಹೋದರನಿದ್ದ ಅವಳಿಗೆ. ಅವನ ಮನೆಗೆ ಹೋದಳು.ಅಕ್ಕನನ್ನು ಅಕ್ಕರೆಯಿಂದ ಆದರಿಸಿದ ಉನ್ಮುಖ. ಅಕ್ಕನ ಆಕಸ್ಮಿಕ ಆಗಮನದ ಕಾರಣವೇನೆಂದು ಕೇಳಿದ. ನನ್ನೆದುರಿಗೆ ಕದನದಲ್ಲಿ ಮಕ್ಕಳನ್ನು ಕಳೆದುಕೊಂಡುದನ್ನು ತಮ್ಮನಿಗೆ ತಿಳಿಸಿದಳು. ಪತಿ ನೀಲಧ್ವಜ ಗೆಲುವಿಗೆ ಅಧಿಪತಿಯಾಗದಿರುವುದನ್ನು ನೋವಿನಿಂದ ಉಸುರಿದಳು. ತನ್ನ ಕುಟುಂಬದ ಹೀನಸ್ಥಿತಿಗೆ ಕಾರಣನಾದ ಅರ್ಜುನನ ಶಿರವನ್ನು ಕತ್ತರಿಸಿಹಾಕಬೇಕು ನೀನು ಎಂದು ಮನವಿ ಮಾಡಿಕೊಂಡಳು ತಮ್ಮನನ್ನು.ತನ್ನ ರೋಷದ ನುಡಿಗೆ ಅವನು ಸ್ಪಂದಿಸಿಯಾನು ಎಂಬ ನಿರೀಕ್ಷೆಯಿತ್ತು ಅವಳಲ್ಲಿ. ನಿರುಕಿಸಿದಳು ಜ್ವಾಲೆ ಉನ್ಮುಖನ ಮೊಗವನ್ನು “ನರನ ಶಿರವನ್ನು ನಾನು ತಂದೊಪ್ಪಿಸುವೆ ನಿನಗೆ” ಎಂಬ ಮಾತು ಅವನಿಂದ ಹೊರಹೊಮ್ಮುತ್ತದೆಂಬ ಭಾವದಲ್ಲಿ… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಸರೋವರ” ಬಾಲ್ಯದ ಬೆಳಗಿನ ಹೊತ್ತಿನಲ್ಲಿನೀಲಿ ನೀರಿನ ನಿಶ್ಶಬ್ದ,ಪ್ರಶ್ನೆಯೇ ಅರಳದ ದಿನಗಳು,ಉತ್ತರವೇ ಕೇಳದ ಕಾಲ. ಆಕಾಶ ತಬ್ಬಿದ ಸರೋವರ,ಆಟದ ಕಲ್ಲು ಬಿದ್ದರೂನಗು ತೇಲಿ ಹೋದಿತುಮಸುಕು ಮನದವರೆಗೂ ತಲುಪಲಿಲ್ಲ. ಕಾಲ ನಡೆದು ದಾರಿಯಾದಂತೆಹೆಜ್ಜೆಗಳು ಬಂತು ಹಲವು,ಕೆಲವು ನೀರು ತಂದವು,ಕೆಲವು ಮಣ್ಣು ಸುರಿದವು. ನೋವುಗಳು ಇಳಿದವುನೀರಿನ ಆಳದೊಳಗೆ,ಮಾತಿಲ್ಲದೆ ಕುಳಿತವುಸರೋವರದ ಹೃದಯದಲ್ಲಿ. ಭೇದದ ಮೊದಲ ಸ್ಪರ್ಶಅಲೆ ಎಬ್ಬಿಸಿತು,ಹೊರಗೆ ಕದಲಿಕೆ,ಒಳಗೆ ಮೌನ ಗಾಯ. ಸರೋವರ ಮಾತಾಡಲಿಲ್ಲ,ಮೌನವೇ ಅದರ ನಾಡಿ,ಧ್ವನಿಯಿಲ್ಲದ ನೋವೇನೀರಿನ ಭಾಷೆ. ಸಮಾಜ ಬಂದು ನಿಂತುಬಣ್ಣ ಮಾತ್ರ ನೋಡಿತು,ಆಳ ಕೇಳದೆ ತೀರ್ಪುನೀರಿನ ಮೇಲೆ ಬರೆದಿತು. ಬಿರುಗಾಳಿ ಬೀಸಿದರೂನೀರನ್ನೇ ತಪ್ಪೆಂದರೂ,ಮೇಲ್ಮೈ ಕದಡಿದರೂಆಳ ಮಾತ್ರ ನಿಂತಿತು. ಸಂಧ್ಯದ ಹೊತ್ತಿನಲ್ಲಿನೀರು ಕಡಿಮೆಯಾಯಿತು,ಆಳ ಹೆಚ್ಚಾಯಿತು,ಅರ್ಥಗಳು ಗಾಢವಾದವು. ಅಲೆಗಳು ಮೌನವಾಯಿತು,ಹೇಳದ ಕಥೆಗಳುನೀರಿನೊಳಗೆನೆಲೆಯಾದವು. ಆಕಾಶ ಬಿದ್ದರೆ ಹಿಡಿಯುವೆ,ಹೂ ಬಿದ್ದರೆ ಕಾಪಾಡುವೆ,ಕಲ್ಲು ಬಿದ್ದರೂನೀರಾಗಿಯೇ ಇರುವೆ. ಮೌನ ಸರೋವರಕಲ್ಲುಗಳನ್ನು ಕ್ಷಮಿಸಿದ ನೀರು,ಬಿರುಗಾಳಿಗೆ ಸಾಕ್ಷಿಯಾದ ಆಳ,ತೋರಿಸದೆ ಹೊತ್ತ ನೋವು. ಮಾತಿಲ್ಲದೆ ಉಳಿದ ಸಹನೆ,ಒಡೆಯದೆ ನಿಂತ ಶಕ್ತಿಅದೇ ಬದುಕಿನಮೌನ ಸಾರ. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸುಳ್ಳಿನ ಬಲೆ” ಸುಳ್ಳಿನ ಬಾಯಿಗೆಸಿಗಬಾರದುಯಾಕೆಂದರೆ ಸುಳ್ಳುಮೆರವಣಿಗೆಯಲ್ಲಿರಾಜಾರೋಷವಾಗಿಹೊರಡುವುದು.ಸತ್ಯದ ಬಟ್ಟೆಯುಟ್ಟುಸುಳ್ಳನ್ನು ಮೂಲೆಗೆ ಸರಿಸಿಮುನ್ನೆಯುವುದು,,,ಆದರೆಸತ್ಯ ಒಂಟಿಯಾಗಿನಿಲ್ಲುವುದು.ಸತ್ಯದ ಬೆಳಕಲ್ಲಿ ಇರಲಿನಮ್ಮ ಜೀವನ ಪಥಮೋಸದ ನೆರಳಿಗೆಮನ ಸಾಯಬಾರದು,ನಂಬಿಕೆಯ ಹೂವಿಗೆಸುಳ್ಳಿನ ಮುಳ್ಳುತಾಗಬಾರದುಸುಳ್ಳು ಸಿಹಿ ಮಾತುಹೊದಿಸಿ ಬರುವುದುಕೆಲವೊಮ್ಮೆ,ಸತ್ಯದ ಕಾಠಿಣ್ಯಕಲ್ಲಿನಂತೆ ತೋರುವುದುಕೆಲವೊಮ್ಮೆ.ಆದರೂ ಸತ್ಯವೇದೀಪವಾಗಿ ದಾರಿತೋರಿಸಬೇಕುಆದರೆಸುಳ್ಳು ಮುಖವಾಡಧರಿಸಿ ಕೇಕೆ ಹಾಕುವುದುಅಸತ್ಯದ ಅಂಧಕಾರನಮ್ಮ ಹಾದಿಕೊನೆಯಾಗಬಾರದುಸುಳ್ಳಿನ ನಗುವಿಗೆಮನವುಮರುಳಾಗಬಾರದು,ಸ್ವಾರ್ಥದ ಸುಳಿಯಲ್ಲಿಸತ್ಯ ಮುಳುಗಬಾರದು.ನಿಷ್ಕಳಂಕ ಹೃದಯದಶುದ್ಧ ಶಪಥ ಇರಲಿ,ನೀತಿಯ ನಾದವುನಿತ್ಯ ನಮ್ಮೊಳಗೆ ಹರಡಲಿ.ಸುಳ್ಳು ಕ್ಷಣಿಕ ಮೋಡ,ಸತ್ಯ ಚಿರಂತನ ಆಕಾಶ,ಅದು  ಮುಸುಕಿದ  ಮರೆಸತ್ಯವೇ ಕೊನೆಯ ಪ್ರಕಾಶ.ಆದ್ದರಿಂದ ಜೀವದಪ್ರತಿಯೊಂದು ಹೆಜ್ಜೆಸುಳ್ಳಿನ ಬಾಯಿಗೆಸಿಗದಿರಲಿ ನಮ್ಮ  ಮಾತುಸತ್ಯ ಮೇವ ಜಯತೆ.ಸುಳ್ಳು ಸರಿಯಲಿಹಿಂದೆ ಹಿಂದೆ ಹಿಂದೆ… ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು”

ಕಾವ್ಯ ಸಂಗಾತಿ ಮಮತಾ ಜಾನೆ “ಅಮ್ಮನ ಮಡಿಲು” ನವಮಾಸವ ಹೊರುವಳುಸಾಟಿ ಇಲ್ಲದ ಪ್ರೀತಿ ತೋರುವಳುಮಮತೆಯ ಸಾಗರದವಳುಕರುಣೆಯ ಗಣಿಯವಳು ಮೊದಲ ಗುರು ಆಗುವಳುಜೀವನ ದಾರಿ ತೋರಿಸುವಳುಧೈರ್ಯವ ತುಂಬುತ ನಡೆಸುವಳುಆತ್ಮವಿಶ್ವಾಸದಿ ಸದಾ ಸ್ಪರ್ಶಿಸುವಳು ಕಣ್ಣೀರು ಒರೆಸಿ ದುಃಖವ ಮರೆಸುವಳುಸಂತೋಷದ ಸಂಗಾತಿಯವಳುತಪ್ಪಿದರೆ ತಿದ್ದಿ ಬುದ್ಧಿ ಹೇಳುವಳುಬದುಕಿಗೆ ಅರ್ಥ ನೀಡುವಳು ಮಕ್ಕಳ ಜೀವನದ ಕನಸು ಕಟ್ಟುವಳುನನಸಾಗಲು ಪ್ರತಿ ಹೆಜ್ಜೆಗೂ ಹೋರಾಡುವಳುಸದಾ ತ್ಯಾಗದ ಮೂರ್ತಿಯವಳುತನ್ನ ಬದುಕೆ ಮುಡಿಪಾಗಿಟ್ಟವಳು ಕಷ್ಟವೋ ಸುಖವೋ ಲೆಕ್ಕಿಸದವಳುಸ್ವಾರ್ಥವ ಇಲ್ಲದ ನಿಸ್ವಾರ್ಥ ಗುಣದವಳುನಿತ್ಯ ಜೀವನದ ಶಕ್ತಿಯವಳುಹೊಗಳಲು ಪದಗಳೇ ಸಾಲದವಳು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು” Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ ” ಪ್ರೀತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ ” ಪ್ರೀತಿ” ಹೆರಿಗೆ ನೋವಮರೆತ ಅಮ್ಮನಂತೆಎದೆಗಪ್ಪಿ ಕೊಳ್ಳುತ್ತದೆ ಪ್ರೀತಿ ಮನಸಲ್ಲಿ ಹುಟ್ಟಿಕನಸಲ್ಲಿ ಸತ್ತುಮಾತನ್ನೇ ಮೌನವಾಗಿಸಿನಿದ್ದೆ ಇರದ ಕನಸುಕಾಣುವದು ಪ್ರೀತಿ.. ಭಾವನೆಗಳ ಬರಿದಾಗಿಸಿಭರವಸೆಗಳ ಹುಸಿಯಾಗಿಸಿದಿನಚರಿಯನ್ನೇಉಸಿರಾಗಿಸುವದು ಪ್ರೀತಿ…. ಗುರಿಯಿಲ್ಲದ ಪಯಣಬೆಳಕಿಲ್ಲದ ದಾರಿ.ಕಷ್ಟ.ಕಣ್ಣೀರು.ನಿಟ್ಟುಸಿರ ದಾಟಿಬಿಡುವೆನೆಂಬಹುಸಿನಂಬಿಕೆ ಪ್ರೀತಿ.. ಆಕಾಶದಿಹಾರಾಡಿಸಾಗರಗಳನೇ..ಜಾಲಾಡಿಮುತ್ತು.ರತ್ನ.ಹರಳು…ತಂದುಬಿಡುವೆನೆಂಬಮರುಳು..ಪ್ರೀತಿ ದ್ವೇಷದ ಅಗ್ಗಿಷ್ಠಿಕೆಯಲ್ಲಿಬೆಂದರೂಬೆವರದೇಸದ್ದು ಮಾಡದೇನುಗ್ಗಿ ಬರುವಾಗಎದೆಗುಂದ ದಿರುವದುಪ್ರೀತಿ ಭರವಸೆಗಳಿಗೆ ಬಣ್ಣತುಂಬಿಬಯಕೆಗಳಿಗೆಭಯವಾಗದಂತೆಉತ್ಸಾಹದ ಚಿಗುರುಚಿಮ್ಮಿಸುವದು ಪ್ರೀತಿ ತೆತ್ತು ಗಳಿಸುವದಿಲ್ಲಉತ್ತು ಬೆಳೆಸುವದು ಪ್ರೀತಿಮೂಡಣ ದಿಕ್ಕಿನಮೂಡುಗಾಳಿಯಲ್ಲ ಪ್ರೀತಿ ಕಪಟ ಪ್ರೇಮದ ಉಳಿ ಎಟಿಗೆಶಿಲೆಯಾದರೂಮನದಲ್ಲೆ ನಗುವದು ಪ್ರೀತಿ ರೆಕ್ಕೆ ಮುರಿದಹಕ್ಕಿಯಂತಾದರೂ..ಮುರಿದ ವೀಣೆಗೆಒಲವಿನ ಸ್ವರವಕಲಿಸುವದುಪ್ರೀತಿ ಗಡಿಗಳೆಲ್ಲೇ ಮೀರಿಅಡಿಯಿಡುವಪ್ರೀತಿಯ ದಾರಿಗೆ ಸುಂಕವಿಲ್ಲಸ್ವಾಭಿಮಾನದ ಬಿಂಕವಿಲ್ಲ ಬಲ್ಲವರು ಎಂಬುವರುಕಣ್ಣಿಲ್ಲ ಪ್ರೀತಿಗೆಅಂತರಂಗದ ಬೆಳಕಿರುವದುಸುಳ್ಳಲ್ಲ ಪ್ರೀತಿಗೆ ಬೊಗಸೆಯೊಡ್ಡಿ ಕಾಯುವದುಸಾವಿನ ತನಕಮಸಣದಲ್ಲೂಜೊತೆ ಯಾಗಿರುವದು ಪ್ರೀತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ ಕವಿತೆ ” ಪ್ರೀತಿ” Read Post »

ಕಥಾಗುಚ್ಛ

ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ”

ಕಥಾ ಸಂಗಾತಿ ಶ್ರೀದೇವಿ ಮ ಗುಮ್ಮಗೋಳ “ಬದುಕು ಇಬ್ಬದಿ” ಅಂದು ರಜನಿ ಮಕ್ಕಳಿಗೆ ಕ್ಲಾಸಿನಲ್ಲಿ ಸಮಾಜಶಾಸ್ತ್ರದ ಕುಟುಂಬದ ಕುರಿತು ಪಾಠ ಮಾಡುತ್ತಿದ್ದಳು. ಸಮಾಜದಲ್ಲಿ ಕುಟುಂಬ ಅಂದರೆ ಏನು ಕುಟುಂಬದ ಪ್ರಕಾರಗಳಾವವು, ಮಹತ್ವ  ಏನು ಎನ್ನುವದನ್ನು ಮಕ್ಕಳಿಗೆ ವಿವರಿಸಿ ಹೇಳುತ್ತಿದ್ದಳು. “ನೋಡಿ ಒಂದು ಕುಟುಂಬ ಸಮಾಜದ ಸಂಸ್ಥೆ. ಕುಟುಂಬದ ಸಂತೊಷ ನೆಮ್ಮದಿ ಮತ್ತು ಸ್ಥಿರತೆ ಆ ಕುಟುಂದಲ್ಲಿರುವ ಪ್ರತಿಯೊಬ್ಬರ ನಡುವಿನ ಪ್ರೀತಿ, ಸಹಕಾರ, ಹೊಂದಾಣಿಕೆ, ಸಹಬಾಳ್ವೆಯ ಮೇಲೆ ನಿಂತಿದೆ. ನಾನು ಹೆಚ್ಚು ನೀನು ಕಡಿಮೆ ಎನ್ನುವ ಮನೊಭಾವ ಇರುವ ಕುಟುಂಬ ನೆಮ್ಮದಿಯಾಗಿ ಇರಲಾರದು. ಕುಟುಂಬದ ಪ್ರತಿ ಸದಸ್ಯ ಆ ಕುಟುಂಬದ ಗೋಡೆ ಇದ್ದ ಹಾಗೆ. ಪ್ರತಿಯೊಬ್ಬರ ಮದ್ಯೆ ಸಹಾನುಭೂತಿ, ಪ್ರೀತಿ, ಕಾಳಜಿಯ ಸಿಮೆಂಟು ಗಟ್ಟಿಯಾಗಿದ್ದಾಗ ಕುಟುಂಬದ ಗೊಡೆಗಳ ಮದ್ಯೆ ಬಿರುಕು ಬೀಳಲಾರದು.” ಎಂದು ಹೇಳುತ್ತಿದ್ದಂತೆ ಒಳಗಡೆ ಬಂದ ಪ್ಯೂನ್ “ಮೆಡಮ್ ನಿಮ್ಮನ್ನು ಯಾರೊ ಬೇಟಿ ಆಗಲು ಬಂದಿದ್ದಾರೆ” ಎಂದು ಹೇಳಿ ಹೊರಟ. ರಜನಿ ಯಾರಿರಬಹುದು? ನನಗೆ ಈಗ ನನ್ನಮ್ಮನ ಕಡೆಯ ಸಂಬಂಧಿಕರಾದ ಇಬ್ಬರೂ ಮಾವಂದಿರು ಒಬ್ಬ ತಂಗಿಯನ್ನು ಬಿಟ್ಟರೆ ಯಾರೂ ಸಂಬಂಧಿಕರಿಲ್ಲ. ಅವರೆಲ್ಲಾ ಸೀದ ಮನೆಗೆ ಬರುತ್ತಿದ್ದರು. ನನ್ನ ಕಾಲೇಜ ಕಡೆ ಬರುವಂತದೇನಿದೆ. ಅದು ಅಲ್ಲದೇ ಈ ಊರಿಗೆ ಬಂದು ಕೇವಲ ಒಂದು ವರ್ಷವಾಯಿತು ಕರಾವಳಿ‌ ತೀರದ   ಈ ಊರಲ್ಲಿ ನನಗಿನ್ನೂ ಅತೀಯಾಗಿ ಪರಿಚಿತರು ಯಾರು ಇಲ್ಲ. ಅಂದ ಮೇಲೆ ಮಕ್ಕಳ ಪಾಲಕರು ಯಾರಾದರೂ ಬಂದಿರುವರಾ? ಎಂದು ಹೀಗೆ ಮನದಲ್ಲೆ ಗೇಣಿಕೆ ಹಾಕುತ ರಜನಿ ಕ್ಲಾಸ್ ರೂಮಿನಿಂದ ಹೋರಗೆ ಬಂದಳು. ರಜನಿ ಕಾರವಾರದ ಪಿ.ಯು. ಕಾಲೇಜ ಒಂದಕ್ಕೆ ಉಪನ್ಯಾಸಕಳಾಗಿ ನೇಮಕಗೊಂಡಿದ್ದಳು. ದೂರದಲ್ಲಿ ಪ್ರಶಾಂತ ಅವಳಿಗಾಗಿ ಕಾಯುತ ನಿಂತಿದ್ದ. ಅವನನ್ನು ನೋಡಿ ರಜನಿಯ ಎದೆ ಒಮ್ಮೆಲೆ ಜಲ್ಲೆಂದಿತು. ಏಕೆ ಇವನು ಇಲ್ಲಿ ಬಂದಿದ್ದಾನೆ.  ಅವನ ಬದುಕಿನಿಂದ ದೂರಾಗಿ ಎರಡು ವರ್ಷದ ಮೇಲಾಯಿತು. ತನ್ನ ಅವನ ಋಣ ತೀರಿದ ಮೇಲೆ ಮತ್ಯಾವ ಋಣಕ್ಕಾಗಿ, ಘನ ಕಾರ್ಯಕ್ಕೆ ತನಗೆ ಬೇಟಿಯಾಗಿತ್ತಿದ್ದಾನೆಂದು ರಜನಿಗೆ ತಿಳಿಯದಾಯಿತು. ರಜನಿಯನ್ನು ನೋಡಿದ ಪ್ರಶಾಂತ ಅವಳಡೆಗೆ ಬಂದು “ರಜನಿ ನನಗೆ ಗೊತ್ತು ನನ್ನನ್ನು ನೀನು ಇಲ್ಲಿ ನೋಡಿ ನಿನಗೆ ಬೇಸರವಾಗಿರಬಹುದು. ಯಾಕಪ್ಪ ಇವನು ಇಲ್ಲಿ ಬಂದ ಎಂದುಕೊಳ್ಳುತಿರಬಹುದು. ನಿನ್ನ ಜೊತೆ ಸ್ವಲ್ಪ ಮಾತನಾಡುವದಿತ್ತು ಮಾತನಾಡಬಹುದಾ?” ಎಂದಾಗ ರಜನಿಗೆ ಏನು ಹೇಳಬೇಕು ತಿಳಿಯದಾಯಿತು. ರಜನಿಯ ಮನಸ್ಸು ಬೆಣ್ಣೆಯಂತದ್ದು.  ನಾನು ಅವನಂತೆ ವರ್ತಿಸಿದರೆ ಅವನಿಗೂ ನನಗೂ ಏನು ವ್ಯತ್ಯಾಸ ಎಂದುಕೊಂಡು “ಆಯಿತು ಈಗ ನನಗೆ ಕ್ಲಾಸ್ ಇದೆ. ನಾಲ್ಕು ಗಂಟೆಗೆ ಕಾಲೇಜ ಬಿಡುತ್ತದೆ. ಆಗ ಮಾತನಾಡೋನ” ಅಂದಳು. ಆಗ ಪ್ರಶಾಂತ “ಹಾಗಾದರೆ ಅಲ್ಲಿಯವರೆಗೆ ಇಲ್ಲಿ ನನಗೆ ಸ್ವಲ್ಪ ಕೆಲಸವಿದೆ. ನಾಲ್ಕು ಗಂಟೆಗೆ ನೀನು ಬೀಚ್ ಹತ್ತಿರ ಬಾ” ಎಂದು ಹೇಳಿದವನೆ ಹೊರಟು ಬಿಟ್ಟನು. ಪ್ರಶಾಂತನ ಬದುಕಿನಿಂದ ಹೊರ ಬಂದು ಈಗ ತಾನೆ ತಣ್ಣಗೆ ಉಸಿರಾಡುತ್ತಿರುವ ರಜನಿಗೆ ಮತ್ತೆ ಬೆಂಕಿಯ ಸಹವಾಸ ತನಗೇಕೆ ಬೇಕಿತ್ತು ಸುಮ್ಮನೆ ನಾನು ಬರುವದಿಲ್ಲವೆಂದು ಹೇಳಿಬಿಡಬಾರದಿತ್ತೆ ಎಂದು ಮತ್ತೊಮ್ಮೆ ಮನ ಹೋಯ್ದಾಡಿತು. ಆದದ್ದಾಗಲಿ ನಮ್ಮಿಬ್ಬರ ಮದ್ಯೆ ಈಗ ಯಾವ ಸಂಬಂಧವು ಉಳಿದಿಲ್ಲ ನೋಡೊಣ ಏತಕ್ಕೆ ಬಂದಿರುವನು ಎಂದು ತಿಳಿದ ಮೇಲೆ ಯೋಚಿಸಿದರಾಯಿತು ಎಂದುಕೊಂಡಳು. ಅದೇಕೊ ಪ್ರಶಾಂತನಿಂದಾಗಿ ಕ್ಲಾಸಿಗೆ ಬಂದರು ಅವಳಿಗೆ ಪಾಠ ಮಾಡುವ ಮೂಡೆ ಬರಲಿಲ್ಲ. ಅಷ್ಟಕ್ಕೆ ಪಾಠ ನಿಲ್ಲಿಸಿ ಸ್ವಲ್ಪ ಕೆಲಸವಿದೆ ನಾಳೆ ಪಾಠ ಮುಂದುವರೆಸುವೆ ಎಂದು ಹೇಳಿ ಸ್ಟಾಪ್ ರೂಮ್ ಗೆ ಬಂದು ತನ್ನ ಚೇರ ಮೇಲೆ ಕುಳಿತಳು. ಕಿಟಕಿಯ ಆಚೆ ತೂರಿಬರುತ್ತಿದ್ದ ಗಾಳಿ ಹಿತ ನೀಡಿತಾದರೂ ಮನದಾಳದ ಕಹಿ ನೆನಪುಗಳು ಕಣ್ಮುಂದೆ ಹಾದು ಹೋದವು. ******* ರಜನಿ ಮಾಸ್ಟರ ಡಿಗ್ರಿ ಓದಿ ಮುಂದೆ ಪಿ. ಎಚ್. ಡಿ ಮಾಡುತ್ತಿದ್ದಳು. ಅವಳಿಗೆ ತಾನು ಮುಂದೆ ಲೆಕ್ಚರ್ ಆಗಬೇಕೆಂಬ ಮಹದಾಸೆ ಇತ್ತು. ಆದರೆ ಪಿ.ಎಚ್.ಡಿ ಮುಗಿಯುತ್ತಲೇ ಅವರ ತಂದೆ ಅವಳಿಗೆ ಗಂಡು ನೋಡಿ ಮದುವೆ ಮಾಡಲು ತಯಾರಿ ನಡೆಸಿದರು. ಅವಳಿಗೆ ಇಷ್ಟವಿಲ್ಲದಿದ್ದರೂ ತನ್ನ ಹಿಂದೆ ಇರುವ ಇನ್ನೊಬ್ಬ ತಂಗಿಗಾಗಿ ತಾನು ಮದುವೆಯಾಗಲೇಬೇಕೆಂಬ ಅಪ್ಪನ ಒತ್ತಾಯಕ್ಕೆ ಕಟ್ಟು ಬಿದ್ದು ಒಪ್ಪಿಕೊಂಡಳು. ಒಬ್ಬ ಸುಂದರನಾದ ಪ್ರಶಾಂತ ಎನ್ನುವ ಹುಡಗನೊಂದಿಗೆ ಅವಳ ಮದುವೆಯಾಯಿತು. ಅವನು ಸರಕಾರಿಯಲ್ಲಿ ಗುಮಾಸ್ತನಾಗಿದ್ದ. ಮದುವೆಯ ಬಗ್ಗೆ, ಗಂಡ ಸಂಸಾರದ ಬಗ್ಗೆ ನೂರಾರು ಕನಸು ಕಂಡಿದ್ದ ರಜನಿಗೆ ಕನಸುಗಳು ಬರೀ ಕನಸಾಗಿಯೇ ಉಳಿದವು. ಮದುವೆಯಾದ ಹೊಸತರಲ್ಲಿ ರಾಮನಂತೆ ಕಂಡ ಗಂಡ ಅವಳ ಬಾಳಿನ ರಾವಣನಾದ. ರಜನಿಗೆ ಸ್ವಾತಂತ್ರ್ಯವೇ ಇರಲಿಲ್ಲ. ಮನೆಯಲ್ಲಿ ಗುಲಾಮಳಂತೆ ಕಾಣುತ್ತಿದ್ದ. ಅತ್ತೆ ಮಾವರ ಸೇವೆ ಮಾಡಿ ಗಂಡನಿಗೆ ಬೇಕಾದ ಅಚ್ಚುಕಟ್ಟಾದ ಅಡುಗೆ ಮಾಡಿದರೂ ಒಂದು ದಿನವೂ ಅವಳನ್ನ ನೀನು ನಮಗಾಗಿ ದುಡಿಯುತ್ತಿದ್ದಿಯಾ ಎಂದು ಹೇಳಲಿಲ್ಲ. ರಜನಿಯ ಅತ್ತೆ ಮಾವ ಗಂಡ ಎಲ್ಲರೂ ಸ್ವಾರ್ಥಿಗಳೆ. ತಮಗೆ ಏನೆಲ್ಲಾ ಬೇಕು ಎಲ್ಲವನ್ನು ಮಶಿನ್ ನಂತೆ ರಜನಿಯಿಂದ ಮಾಡಿಸಿಕೊಳ್ಳುತ್ತಿದ್ದರೂ. ಆದರೆ ಒಂದು ದಿನವೂ ನೀನು ನಮ್ಮಂತೆಯೇ ಮನುಷ್ಯಳು ನಿನಗೂ ಸ್ವಲ್ಪ ವಿಶ್ರಾಂತಿ ಬೇಕು ಎಂದು ಒಂದು ದಿನವೂ ಅತ್ತೆಯಾಗಲಿ, ಮಾವನಾಗಲಿ ಕಡೆಗೆ ಗಂಡನಾಗಲಿ ಹೇಳುತ್ತಿರಲಿಲ್ಲ. ಪ್ರಶಾಂತ ಅವಳನ್ನು ಹೊರಗಡೆ ಸಿನಿಮಾ, ಹೊಟೆಲು, ಪಾರ್ಕು ಅಂತ ಒಂದು ದಿನವೂ ಸುತ್ತಾಡಿಸಿಕೊಂಡು ಬರುತ್ತಿರಲಿಲ್ಲ. ಅವಳಿಗೂ ಒಂದು ಬದುಕಿದೆ. ಅವಳಿಗೂ ಆಸೆ ಆಕಾಂಕ್ಷೆಗಳಿವೆ ಎಂದು ಒಂದು ದಿನವೂ ಯೊಚಿಸಲಿಲ್ಲ. ಹೀಗೆಯೇ ಸಾಗಿರುವಾಗ ಒಮ್ಮೆ ರಜನಿಯ ಮಾವ ಕರುಳು ಬೇನೆಯಿಂದ ಕಾಯಿಲೆ ಬಿದ್ದ. ಮಾವನಿಗೆ ಹೊತ್ತು ಹೊತ್ತಿಗೆ ಸರಿಯಾಗಿ ಬಿಸಿ ಬಿಸಿ ಅಡುಗೆ ಮಾಡಿ ಬಡಿಸುತ್ತಿದ್ದಳು.  ಅತ್ತೆ ಮಾಡಿಟ್ಟದ್ದನ್ನು ಗಂಡನಿಗೆ ಒಂದು ದಿನವೂ ಬಡಿಸದೇ ಎಲ್ಲವನ್ನು ಸೊಸೆಯ ಮೇಲೆ ಹಾಕಿ ಮನೆ ಮನೆ ತಿರುಗುತ್ತಿದ್ದಳು. ಅವಳ ಸೇವೆಯಿಂದ ಮಾವ ಗುಣಮುಖನಾದ. ಅದನ್ನು ಒಂದು ದಿನವೂ ಹೇಳದೇ ಎಲ್ಲರ ಮುಂದೆ ತಾನೇ ಪತಿವೃತೆಯಂತೆ ಗಂಡನ ಸೇವೆ ಮಾಡಿದಂತೆ ಮಾತಿನಲ್ಲಿ ಮನೆ ಕಟ್ಟೆ ಎಲ್ಲರನ್ನೂ ನಂಬಿಸುತ್ತಿದ್ದಳು. ಗಂಡನೂ ಕೂಡಾ ನಿನ್ನಂದಲೇ ಅಪ್ಪ ಗುಣಮುಖನಾದ ಅದರಲ್ಲಿ ನಿನ್ನ ಪಾತ್ರ ದೊಡ್ಡದು ಎಂದು ಒಂದೂ ದಿನವೂ ಹೇಳಲಿಲ್ಲ.  ಜೊತೆಗೆ ಅತ್ತೆ ಎಷ್ಟೆ ಮಾಡಿದರು ಏನಾದರೊಂದು‌ ಖ್ಯಾತೆ ತೆಗೆದು ಮಗನ ಮುಂದೆ ಸೊಸೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಗಂಡ ಹೆಂಡಿರ ಮದ್ಯೆ ಜಗಳ ತಂದಿಡುತ್ತಿದ್ದಳು. ಅನೇಕ ಬಾರಿ ರಜನಿಯ ಮೇಲೆ ಕೈಯನ್ನು ಮಾಡಿದ್ದ. ಹೀಗರಲೂ ಒಮ್ಮೆ ರಜನಿಯ ತಂದೆಗೆ ಸಿರಿಯಸ್ಸಾಗಿ ಆಸ್ಪತ್ರೆಗೆ ದಾಖಲಿಸಿದರು. ರಜನಿಯ ತಂದೆಗೆ ಹೃದಯಘಾತವಾಗಿತ್ತು. ತನ್ನ ತಂದೆಯ ಸೇವೆಯನ್ನು ಮಾಡಿಸಿಕೊಂಡ ಪ್ರಶಾಂತ ತನ್ನ ತಂದೆಯಂತೆ ಅವಳಿಗೂ ಅವಳ ತಂದೆ ಇದ್ದಾರೆ ಗಂಡಮಕ್ಕಳಾರು ಇಲ್ಲ ಹೆಂಡತಿಯನ್ನು ಇಂತಹ ಸಮಯದಲ್ಲಿ ಮಗಳನ್ನು ತವರು ಮನೆಗೆ ಕಳಿಸಿ ಅವಳ ತಂದೆಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ದೊಡ್ಡ ಮನಸ್ಸು ಪ್ರಶಾಂತನಲ್ಲಿರಲಿಲ್ಲ. ಸಂಕುಚಿತ ಮನೋಭಾವನೆಯ ಪ್ರಶಾಂತ ರಜನಿಯನ್ನು ತವರು ಮನೆಗೆ ತಂದೆಯನ್ನು ನೋಡಲು ಕಳಿಸಲೇ ಇಲ್ಲ. “ಇದಾರಲ್ಲ ನಿನ್ನ ತಂಗಿ ತಾಯಿ ನೋಡಿಕೊಳ್ಳುತ್ತಾರೆ” ಎಂದು ಉಡಾಪೆ ಉತ್ತರಕೊಟ್ಟು ರಜನಿಯ ಮನಸ್ಸಿಗೆ ಗಾಯ ಮಾಡಿದ. ಕರಳು ತಂದೆಯನ್ನು ಕಾಣಲು ಹಾತೊರೆಯುತ್ತಿತ್ತು. ಗಂಡನ ವರ್ತನೆ ರಜನಿಯ ಮನಸ್ಸಿನ ಮೇಲೆ ದೊಡ್ಡದೊಂದು ಕಂದಕವನ್ನೆ ಕೊರೆಯಿತು. ತಂದೆಯನ್ನು ನೋಡಲು ಗಂಡ ಕಳಿಸಲೇ ಇಲ್ಲ. ರಜನಿಯ ಅಪ್ಪ ತೀರಿಕೊಂಡ.ಮಾವನ ಸೇವೆಯನ್ನು ಮಾಡಿದ ರಜನಿಯನ್ನು ಸ್ವತಃ ಅವಳ ತಂದೆ ಅನಾರೊಗ್ಯ ಬಳಲಿದಾಗ ಆಗಲಿ ಕಡೆಗೆ ಸತ್ತಾಗ ಅಪ್ಪನ ಮುಖವನ್ನು ನೋಡಲು ಕಳಿಸದೆ ಮೆರೆದ ಗಂಡನ ಅಮಾನವಿಯತೆ ರಜನಿಯ ಮನಸ್ಸಿಗೆ ಮತ್ತೊಂದು ಆಘಾತ ನೀಡಿತು. ಏನೆನೊ ಕನಸುಗಳನ್ನು ಕಟ್ಟಿಕೊಂಡು ಅವಳ ಬದುಕು ಒಂದಾದ ಮೇಲೊಂದರಂತೆ ಗಂಡ, ಗಂಡನ ಮನೆಯ ಅತ್ತೆ ಮಾವರ ವರ್ತನೆಯಿಂದ ದುಃಖದ ಅಲೆಗಳ ಹೊಡೆತ ಸಂಸಾರದ ಬಗ್ಗೆ ಗಂಡನಿಂದ ಒಂದೊಂದೆ ಹೆಜ್ಜೆ ದೂರ ಸರೆಯುವಂತೆ ಮಾಡಿತು. ಇದರ ಜೊತೆಗೆ ಮತ್ತೊಂದು ಆಘಾತ ಅವಳನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಅವಳಿಗೆ ಆ ಒಂದು ಘಟನೆಯಿಂದ ಪ್ರೀತಿ, ವಿಶ್ಚಾಸದ ಬಗ್ಗೆ ಇದ್ದ ನಂಬಿಕೆಯನ್ನೆ ಕೊನೆಗಾನುವಂತೆ ಮಾಡಿತು. ಒಂದು ದಿನ ರೂಮಿನಲ್ಲಿ ಗಂಡ ಬಹಳ ಹೊತ್ತು ಒಂದು ಹೆಣ್ಣಿನ ಜೊತೆ ಮಾತನಾಡುವದನ್ನು ಕೇಳಿಸಿಕೊಂಡಳು. ಆ ಮಾತಿನಲ್ಲಿ ಯಾವುದೊ ಅನೈತಿಕ ಸಂಬಂಧದ ವಾಸನೆ ಹೊಡೆಯಿತು. ರಜನಿ ಗಂಡನನನ್ನು ವಿಚಾರಿಸಿದಾಗ ಮೊದಲೆಲ್ಲಾ ಅಂತಹದೇನಿಲ್ಲ ಎನ್ನುತ ನಡೆದ. ಇಬ್ಬರ ಮದ್ಯೆ ಈ ವಿಷಯಕ್ಕೆ ಆಗಾಗ ಜಗಳ ಶುರುವಾಯಿತು. ಒಂದು ದಿನ ಪ್ರಶಾಂತ “ಹೌದು ನನಗೆ ಅವಳಿಗೂ ಸಂಬಂಧವಿದೆ. ಅವಳು ನನ್ನ ಆಫಿಸಿನಲ್ಲಿ ಕೆಲಸ ಮಾಡುತ್ತಾಳೆ. ಗಂಡ ಕುಡುಕ. ನನ್ನ ಮದುವೆಗೂ ಮುಂಚೆ ಅವಳು ಗಂಡನನ್ನು ಬಿಟ್ಟು ನಿನ್ನನ್ನು ಗಾಡವಾಗಿ ಪ್ರೀತಿಸುತ್ತೇನೆ ಎಂದು ನನ್ನ ದುಂಬಾಲು ಬಿದ್ದಳು. ಅವಳ ಪ್ರೀತಿಗೆ ಕರಗಿದೆ. ನಮ್ಮಿಬ್ಬರ ಮದ್ಯೆ ದೈಹಿಕ ಸಂಬಂಧವಿದೆ. ನಾನು ಅವಳನ್ನು ಮದುವೆಯಾಗಬೆಕೆಂದೆ. ಮನೆಯಲ್ಲಿ ಮನೆಯ ಮರ್ಯಾದೆಗೊಸ್ಕರ ಬೇರೆ ಹೆಣ್ಣನ್ನು ಮದುವೆಯಾಗು ಎಂದು ಗಂಟು ಬಿದ್ದರು. ಅದಕ್ಕಾಗಿ ನಿನ್ನ ಮದುವೆಯಾದೆ. ಈಗೇನು… ನಿನಗೆ ಬೇಕಾದರೆ ಇರು ಬೇಡವಾದರೆ ಹೋಗು…” ಎಂದು ಎಷ್ಟು ಸಲೀಸಾಗಿ ಹೇಳಿ ಬಿಟ್ಟ. ಮದುವೆ,  ದಾಂಪತ್ಯ ಬಂಧನ, ಕುಟುಂಬದ ಬಗ್ಗೆ ಇವನೀಗೇನಾದರೂ ಅರಿವಿದೆಯಾ? ಇವನಿಗೆ ಸಮಾಜಿಕ ಬದ್ದತೆ ಇದೆಯಾ?. ಕುಟುಂಬದ ಬಗ್ಗೆ ಸಂಸಾರದ ಬಗ್ಗೆ ಕಾಳಜಿ ಕಳಿಕಳಿ ಇದ್ದರೆ ತನ್ನ ಅನೈತಿಕ ಸಂಬಂಧವನ್ನು ಈ ರೀತಿ ಮುಂದುವರೆಸುತ್ತಿದ್ದಿಲ್ಲಾ.  ಪ್ರಶಾಂತನ ದೃಷ್ಟಿಯಲ್ಲಿ ರಜನಿ ಕೇವಲ ತನಗಾಗಿ ಮಕ್ಕಳನ್ನು ಹೆರಲು ಬಂದ, ತಂದೆ ತಾಯಿಯ ಮತ್ತು ತನ್ನ ಚಾಕರಿಯನ್ನು ಮಾಡಲು ಬಂದ ಒಂದು ಯಂತ್ರವಾಗಿದ್ದಳೇ ಹೊರತು. ಒಂದು ಜೀವವಾಗಲಿ ಅವಳಿಗೂ ಭಾವನೆಗಳು ಆಸೆ ಆಕಾಂಕ್ಷೆಗಳಿವೆ. ಅವಳಿಗೂ ಒಂದು ಬದುಕಿದೆ ಎಂದು ತಿಳಿಯಲೇ ಇಲ್ಲ . ಹೆಣ್ಣಿನ ಮನಸ್ಸು ನಂಬಿಕೊಂಡು ಬಂದವನ ನಿಷ್ಕಲ್ಮಷವಾದ ಪ್ರೀತಿ ಆಸರೆ, ಕಾಳಜಿ, ಕನಿಕರಕ್ಕೆ ಜೀವ ಹಾತೊರೆಯುವದು ಎಂದು ಪ್ರಶಾಂತನಿಗೆ ಅನಿಸಲೇ ಇಲ್ಲ.  ಅವಳ ಮತ್ತು ತನ್ನ ಸುಃಖ ದುಃಖಗಳನ್ನು ಇಬ್ಬರೂ ಸಮನಾಗ ಹಂಚಿಕೊಂಡು ಸಂತೋಷದಿಂದ ಜೀವನ ನಡೆಸಬೇಕು ಎಂದು ಅವನು ಬಯಸಲೇ ಇಲ್ಲವೆಂಬಂತೆ ಕಾಣುತ್ತಿತ್ತು. ಗಂಡನನಿಂದ ಬೇರೆಯಾಗಬೇಕೆಂದಳು.   ಅಷ್ಟರಲ್ಲಿ ರಜನಿಯು ಮೂರು ತಿಂಗಳ ಗರ್ಬಿಣಿಯಾದಳು.  ತನಗಲ್ಲವಾದರೂ ಇನ್ನ ಮೇಲೆ ಹುಟ್ಟುವ ಮಗುವಿಗಾದರೂ, ಭವಿಷ್ಯದಲ್ಲಿ ತನ್ನೊಡಲೊಳಗೆ ಚಿಗುರೆಡುಯುತ್ತಿದ್ದ ಹೊಸ ಜೀವದಲ್ಲಿ ಹೊಸ ಕನಸುಗಳನ್ನು, ಆಸೆಗಳನ್ನು ಹೊತ್ತು  ಗಂಡನ ಗಂಡನ‌ಮನೆಯವರ ನೋವನ್ನು ಬದುಕಿದರಾಯಿತೆಂದು ನಿರ್ದಾರ ಮಾಡಿದಳು.  ಒಮ್ಮೆ ರಜನಿಯ ಅತ್ತೆ ಬಿದ್ದು ಕಾಲಿಗೆ ಪೆಟ್ಟಾಯಿತು ಅದನ್ನೆ ನೆವ ಮಾಡಿಕೊಂಡು ಮಲಗಿಕೊಂಡೆ ಎಲ್ಲ ಸೇವೆಯನ್ನು ಸೊಸೆ ಕಡೆ ಮಾಡಿಸಿಕೊಳ್ಳತೊಡಗಿದಳು. ತಿಂಗಳು ತುಂಬುತ್ತಿದ್ದ ಸೊಸೆಗೆ ಹೊಟ್ಟೆಯಲ್ಲಿ ಒಂದು ಕೂಸಿದೆ ಅವಳಿಗೆ ಆಯಾಸವಾಗುತ್ತದೆ ಅವಳಿಗೂ ವಿಶ್ರಾಂತಿ ಬೇಕು ಎಂದು ಯೊಚಿಸಿದ ಸ್ವಾರ್ಥಿ ಮತ್ತು ಕಟುಕ ಹೆಣ್ಣಾಗಿದ್ದಳು. ಎಲ್ಲರೂ ಎರಡು ಹೊತ್ತು ಉಂಡರೆ ಇವಳು ಕೂತಲ್ಲೆ ನಾಲ್ಕೈದು ಬಾರಿ ಸೊಸೆ ಕಡೆಯಿಂದ ನೀಡಿಸಿಕೊಂಡು ಉಂಡರು ಮಗನ ಮುಂದೆ ನನಗೆ ಸರಿಯಾಗಿ ‌ನೀಡುತ್ತಿಲ್ಲ ಎಂದು ಸೊಸೆಯ ಬಗ್ಗೆ ಮಗನ ಮುಂದೆ ಅಪಾದನೆ ಹೊರೆಸಿದಳು. ಹೊಡೆತಗಳ ಮೇಲೆ ಹೊಡೆತಗಳನ್ನು ತಿಂದು ಮಾನಸಿಕವಾಗಿ ಜರ್ಜಿತಳಾಗಿ ರೊಸಿ ಹೋಗಿದ್ದ ರಜನಿ ಅತ್ತೆಯನ್ನು ತರಾಟೆಗೆ ತೆಗೆದುಕೊಂಡಳು. ಆಗ ಪ್ರಶಾಂತ ಅವಳು

ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ” Read Post »

ಇತರೆ, ರಂಗಭೂಮಿ

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ.

ರಂಗ ಸಂಗಾತಿ ಗೊರೂರು ಅನಂತರಾಜು “ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೊನ್ನೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು. ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಶ್ರೀ ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ  ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ  ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ  ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.  ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ  ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು  ನೋಡಬಯಸುತ್ತದೆ.   ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ  ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು  ೧೯೫೧ರಲ್ಲಿ  ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು  ಅಘಾತಕಾರಿ.  ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.    ಸ್ವಾತಂತ್ರ್ಯ  ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ  ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ.  ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ  ದೃಶ್ಯ ಯಾಕೋ  ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು. ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ  ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ  ಬಾಬಾಸಾಹೇಬರ ಪಾತ್ರವನ್ನು ಅಜಿತ್‌ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು. ಅಶೋಕ್‌ಗೌಡ ಅವರು ಸುಧಾಮ, ಅರುಣ್‌ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು,  ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್‌ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್‌ಕರ್ ಪಾತ್ರ ಹಾಗೂ ಸಚಿನ್‌ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು. ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ  ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು.  ಅನಿತಾ ಕಾರ್ಯಪ್ಪರವರು ನಾಟಕದ  ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್  ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.  ಗೊರೂರು ಅನಂತರಾಜು

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ. Read Post »

ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ”

ಕಾವ್ಯಸಂಗಾತಿ ಡಾ ಡೋ ನಾ ವೆಂಕಟೇಶ “ಪ್ರೀತಿ-ಚಿಟ್ಟೆ” ಯಾರೂ ಪ್ರೀತಿಸಲಾಗದಷ್ಟುಪ್ರೀತಿಸಿದೆ ನಿನ್ನಪ್ರೀತಿ ಮೇಲ್ಪಂಕ್ತಿಯಾದೆ ಪ್ರೀತಿಗೆ ನೀಸವಿಗೂಡಾದೆಜೇನಾದೆ! ಗೆಳೆಯ ಗುಂಪುಗಳು ಮುತ್ತಿಡುವ ಮುನ್ನ ನಿನ್ನ  ಚಿನ್ನ ,ನೀ ರಾಣಿ ಜೇನಾದೆಪದ ತಲಗಳಿಂದಗುಯ್ ಗುಡುವ ಗಾನವಾದೆ ಹೃದಯಕ್ಕೆ ಹಾಡಾದೆಹಾರಾಡುವ ಹರಿಣಿಯಾದೆಬಣ್ಣದ ಪಾತರಗಿತ್ತಿಯೂ ನೀನಾದೆ ಕಡೆಗೆ. ಕಂಬಳಿ ಹುಳಗಳಿಂದ ಬಂದಿದ್ದ ಮರೆತೆನೀ ಹುಟ್ಟಿದ ಹಾದಿ ಮರೆತೆ ಮೆರೆದಾಡಿದೆ ಪ್ರೀತಿ ನೀಬಟರ್ ಫ್ಲೈ ಆದೆ ಮುಟ್ಟಿದವರಿಗೆಅಂಟಿಕೊಂಡೆ,ಶಾಖಕ್ಕೆ ಕರಗಿ ಹೋದೆ ನೀ!ಪ್ರೀತಿ ಹೀಗೆನೀ ಅಲ್ಪಾವಧಿಯ ಚಿಟ್ಟೆಯಾದೆಸ್ಪರ್ಶಿದರೆ ಬಣ್ಣದಿಂದ          ಧರಾಶಾಯಿಯಾದೆ ಪ್ರೀತಿನೀ ಹೀಗೂ ಹಾಗೂ  ಮರೆತೆಅಮರಳಾದೆ! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ” Read Post »

You cannot copy content of this page

Scroll to Top