ಕಾವ್ಯ ಸಂಗಾತಿ
ಪ್ರಮೋದ ಜೋಶಿ
“ನಾ…ನೀ”


ಕಾಣದ ದೈವವ ನಂಬುತ ನಾ
ನಿನ್ನೇ ಮುಚ್ಚಿದೆ ಹೊದಿಕೆ ಹೊದಿಸಿ
ನಿನ್ನ ತತ್ವ ದೈವತ್ವ ಅರಿಯದೆ
ಮೆರೆದೆ ನನಗೆ ನಾನೆ ಜಗದಿ
ನೀ ನನ್ನೊಳಗಿನ ನಾ ನೀನು
ಇರುವೆ ಜೊತೆಗೆ ಜೀವಗಂಟ
ಧೇಯಧ್ಹಾದಿಯ ಮಾರ್ಗಕೆ
ದೀಪವಾಗುವೆ ದಾರಿಗುಂಟ
ನಾ ಎಂದರೆ ನೀ ಬೈಯುವೆ
ನೈಜ ತತ್ವವ ಅರಿಸುವೆ
ಧಿಕ್ಕರಿಸಿ ನಡೆದರೂ ನಾ ಮುಂದೆ
ತಪ್ಪಿನ ಶಿಕ್ಷೆಗೆ ಕಾಯುವೆ
ಅರಿಸಿ ಕಲಿಸಿ ನಡೆಸಿ ಮೆರೆಸಿ
ನನ್ನ ತನವ ಉಳಿಸುವೆ
ಮಾನಾಪಮಾನ ಸುಖಃ ದುಃಖದೊಳಗೂ
ಕಾಯುತ ಸದಾ ಹಿಂದಿರುವೆ
ನೀನಿದ್ದರೆ ನಾ ನಾನಿದ್ದರೆ ನೀ
ಈ ಜಡದ ದೇಹಕೆ ಚಾಲಕ
ಅರಿಯಬೇಕು ಇದನು ಮೊದಲು
ಇದುವೇ ಜಗದ ತಾರ್ಕಿಕ
ಸತ್ಯವೆಂದೂ ಸಾಯುವದಿಲ್ಲಾ ಸತ್ತರೂ ನಾ
ಉಳಿಸಿಬಿಡುವೆ ನೀ ಇರದಿದ್ದರೂ ನಾ
ನೀ ಸತ್ಯ ನಾ ಮಿಥ್ಯ ಇದೊಂದೆ ಸತ್ಯ
ಕ್ಷಣ ಕ್ಷಣಿಸುವದಂತೂ ನಿತ್ಯ ಪ್ರತಿನಿತ್ಯ
ನೀ ಇದ್ದರೆ ನಾನಿಲ್ಲಾ ನಾ ಇದ್ದರೆ ನೀನಿಲ್ಲಾ
ತತ್ವ ಸಾರಿದವರೆಷ್ಟೊ
ಮರತೇ ಬಾಳುತಿಹೆವು ಜಗದಿ
ಬಯಸಿ ಬಯಸಿ ಅಷ್ಟೂ
ಪ್ರಮೋದ ಜೋಶಿ




“ನಾ–ನೀ” ಎಂಬ ಕಲ್ಪನೆಯ ಮೂಲಕ ಅಹಂಕಾರ, ಆತ್ಮಜ್ಞಾನ ಮತ್ತು ಸತ್ಯದ ಹುಡುಕಾಟ ಸುಂದರವಾಗಿ ಮೂಡಿಬಂದಿದೆ.
ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಆಳವಿದ್ದು ಓದುಗನನ್ನು ಆತ್ಮಾವಲೋಕನಕ್ಕೆ ಕರೆದುಕೊಳ್ಳುತ್ತದೆ.
ತತ್ವಚಿಂತನೆ ಮತ್ತು ಜೀವನದ ವಾಸ್ತವಿಕತೆಯನ್ನು ಒಂದೇ ದಾರಿಯಲ್ಲಿ ಕೊಂಡೊಯ್ದಿರುವುದು ಕವಿತೆಯ ಶಕ್ತಿ.
ಒಟ್ಟಾರೆ ಇದು ಮನಸ್ಸಿನಲ್ಲಿ ದೀರ್ಘಕಾಲ ಪ್ರತಿಧ್ವನಿಸುವ, ಚಿಂತನೆಗೆ ಪ್ರೇರೇಪಿಸುವ ಉತ್ತಮ ಕೃತಿ.