ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ನಾನು ನಾನಾಗದಿದ್ದರೆ…?” ಡಾ.ತಾರಾ ಬಿ.ಎನ್.ಧಾರವಾಡ

ಕಾವ್ಯ ಸಂಗಾತಿ ಡಾ.ತಾರಾ ಬಿ.ಎನ್.ಧಾರವಾಡ “ನಾನು ನಾನಾಗದಿದ್ದರೆ…?” ನಾನು ನಾನಾಗದಿದ್ದರೆಬೆಳಗಿನ ಕಿರಣಗಳುನನ್ನ ಬಳಿ ಬಂದುಹೆಸರೇ ಇಲ್ಲದ ಆತ್ಮವನ್ನು  ಹುಡುಕುತ್ತಿರಬಹುದೇ?ಕನ್ನಡಿಯ ಮುಂದೆ ನಿಂತಾಗನನ್ನ ಕಣ್ಣುಗಳಲ್ಲಿ ನನ್ನನ್ನೇಕಾಣಲಾಗದ ದಿನ,ಆ ನೋಟವೇ ನನಗೆನಾನೇ ಅಪರಿಚಿತನಾಗಿ ಬಿಡುವೆನಾನು ನಾನಾಗದಿದ್ದರೆ, ನನ್ನ ನಗುವೂ ಸಾಲುಗಟ್ಟಿದ ಸಾಲಾಗಿಬಿಡುತ್ತದಾ?ಮನಸ್ಸು ನಿಜವಾಗಿಹರ್ಷವಾಗದಿದ್ದರೂವದನ ಮಾತ್ರಜಗತ್ತಿಗೆ ಉತ್ತರಿಸಬೇಕೆಂದುನಗು  ಮುಖವಾಡಧರಿಸಬೇಕಾಗುತ್ತಾ?ನಾನು ನಾನಾಗದಿದ್ದರೆ, ನನ್ನ ಮೌನಕ್ಕೂ ಅರ್ಥವಿಲ್ಲದೆಹೃದಯದ ಆಂತರ್ಯದಲಿಉಕ್ಕುವ ಪ್ರಶ್ನೆಗಳುಶಬ್ದವಾಗದೇ,ಕೇವಲ ಭಾರವಾಗಿಯೇಉಳಿಯುತ್ತವೆನಾನು ನಾನಾಗದಿದ್ದರೆ, ನನ್ನ ನೋವಿಗೂಅನುಮತಿ ಬೇಕಾಗುತ್ತನನ್ನ ಕಣ್ಣೀರು ಕೂಡನಾಚಿಕೆಯಿಂದಹಿಂದಿರುಗಿಬಿಡುವುದುನಾನು ನನಾಗದಿದ್ದರೆ,ನನ್ನ ಕನಸುಗಳು ಯಾರದೋ ಅಧೀನದಲಿ ಸಿಕ್ಕಿಹಾಕಿಕೊಂಡು“ಸಾಧ್ಯ” ಮತ್ತು “ಅಸಾಧ್ಯ” ಎಂಬ ಗೋಡೆಗಳ ನಡುವೆಉಸಿರುಗಟ್ಟುತ್ತವೆ.ನಾನು ನಾನಾಗದಿದ್ದರೆ, ನನ್ನೊಳಗಿನ ನಗುವನ್ನುಯಾರಿಗೂ ತೋರಿಸದಂತೆ ಕೇಳುವ ಸರಳ ಪ್ರಶ್ನೆಗಳಿಗೆನನ್ನಲ್ಲೇ ಉತ್ತರ ಇರದೇ ಹೋಗುತ್ತದಯೇ ?ಆದರೆನಾನು ನಾನಾಗಿರುವುದೇಒಂದು ಕ್ರಾಂತಿ.ನನ್ನ  ಶಕ್ತಿ ದೌರ್ಬಲ್ಯಗಳೊಂದಿಗೆ,ನನ್ನ ಭಯಗಳೊಂದಿಗೆ,ನನ್ನ ಸಂಪೂರ್ಣತೆಯೊಂದಿಗೆನಾನು ನಿಂತಿರುವುದೇನನ್ನ ಅಸ್ತಿತ್ವದ ಆಧಾರನನ್ನ ಆತ್ಮಬಲದ ಘೋಷಣೆ.ನಾನು ನಾನಾಗಿದ್ದರೆ,ನನ್ನ ಕಣ್ಣೀರಿಗೆ ಕಾರಣ ಬೇಕಾಗಿಲ್ಲ,ನಗುವಿಗೆ ಅನುಮತಿ ಬೇಕಾಗಿಲ್ಲ.ನಾನು ಬಿದ್ದರೂ,ಮತ್ತೆ ಏಳುವ ಹಕ್ಕು ನನಗಿದೆ.ನಾನು ನಾನಾಗಿರುವ ತನಕ,ನನ್ನ ಜೀವನ   ಬಯಕೆ, ಆದರ್ಶ ಉತ್ತರ ಹುಡುಕುವ ದಾರಿಯೂನನ್ನದೇ ಆಗಿರುತ್ತದೆ.ಹಾಗಾಗಿ,ನಾನು ನಾನಾಗದಿರುವ ಲೋಕಕ್ಕಿಂತನಾನು ನಾನಾಗಿರುವ  ಭಾವ ನಿಜವಾದ ಜೀವನವೇ ಸ್ವಾದ ಡಾ ತಾರಾ ಬಿ ಎನ್ ಧಾರವಾಡ

“ನಾನು ನಾನಾಗದಿದ್ದರೆ…?” ಡಾ.ತಾರಾ ಬಿ.ಎನ್.ಧಾರವಾಡ Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಹತ್ತು ಶಾಯಿರಿಗಳು”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ “ಹತ್ತು ಶಾಯಿರಿಗಳು” ೧ನಿನ್ನ ಮ್ಯಾಲ ನಾ ಬರಿಬೇಕಾದ ಸಾಲೆಲ್ಲಯಾರೋ ಕದ್ದಕೊಂಡ ಹೋಗ್ಯಾರ,ನಿಜಆದರ ನಿನ್ನ ಮ್ಯಾಲ ನಾ ಇಟ್ಟಿರೋಪ್ರೀತಿನ ಯಾರ ಕದ್ದಕೊಂಡಹೋಗ್ತಾರ ೨ಗಿಡದಾಗ ಅರಳಿದ ತಾಜಾಹೂವ ಹರಿದುನಿನ್ನ ಮುಡಿಗೆ ಅರ್ಪಿಸಬೇಕಂತಿದ್ದೆಆದರ ಅದರೊಳಗಿಂದ ದುಂಬಿಹಾರಿ ಹೋದದ್ದ ನೋಡಿಅವು ಮೀಸಲಲ್ಲ ಅಂತಹೃದಯಾನ ಹೂವ ಮಾಡಿಅರ್ಪಿಸಿ ಬಿಟ್ಟೆ. ೩ನೀ ಪ್ರೀತಿ ಮಾಡಿತಿದಿ ಇಲ್ಲ,ನನ್ನ ಮುಂದಿರೂ ಪ್ರಶ್ನೆನ ಅಲ್ಲನೀ ಒಮ್ಮೆ ಪ್ರೀತಿ ಮಾಡಿದ್ದಿ ಅನ್ನೊಉತ್ತರನ ಈ ಜನ್ಮ ಮುಗಸಾಕನನಗ ಸಾಕು ೪ಪ್ರೀತಿ ಪ್ರೇಮ ಸುಳ್ಳು ಅಂತವಾದ ಮಾಡು ಹುಚ್ಚರನ್ನಕಾಂಡ್ರಿಕ್ ನನಗ ನಗಿ ಬರ್ತದೆಮಳಿ ಬೆಳಿ ಸುಳ್ಳಂದರಜೀವನ ಹೆಂಗ ನಡಿತೈತಿ೫ದೇವಸ್ಥಾನದಾಗ ದೇವ್ರುಅದಾನ ಬಿಟ್ಟಾನ ಅದುನನಗ ಮುಖ್ಯ ಅಲ್ಲಎದಿ ಮದೇವಸ್ಥಾನದಾಗಸ್ಥಾಪಿತಾದ ನಿನ್ನ ಮೂರ್ತಿಬಿಟ್ಟರ ನನಗ ಬ್ಯಾರೆ ದೇವರ ಬೇಕಿಲ್ಲ ೬ಹಾದು ನಾನು ಹುಚ್ಚಬಹಳ ಮಂದಿ ಇವ ಹುಚ್ಚ ಅಂದರಅದು ಖರೇನ ಅಂತಿನಿಆದರ ಅವರು ತಮ್ಮ ಹುಚ್ಚ ಮರತುಮಾತಾಡೂದು ಕಂಡನಾ ಒಳಗೊಳಗ ನಗತಿನಿ ೭ದಿನಾ ಪ್ರವಚನ ಕೇಳಾಕ ಹೋದಆ ಸುಂದರಿ ಮುಖ ನೋಡಿ ನೋಡಿಅವನ ಆ ಪ್ರವಚನದಾಗಆಕಿ ಒಂದ ಪಾತ್ರ ಆದದ್ದುಹೆಂಗಂತ್ ನನಗ ತಿಳಿವಲ್ದು ೮ಜೀವನ ಅಂದರ ಇದ ಇರಬೇಕುಪ್ರೀತಿ ಮಾಡಿದವರು ಕೈ ಕೊಟ್ಟರೂಪ್ರೀತಿ ಕೈಕೊಡಂಗೊಇಲ್ಲಹಂಗಂತನ ಈ ಪ್ರೇಮ ಕವಿತಾಹುಟ್ಟಗೋತನ ಇರ‍್ತಾವಲ್ಲ ೯ಉದಯ ಆಗೋ ಆ ಸೂರ್ಯಾಗನಂದ ಒಂದ ವಿನಂತಿಬಹಳ ಸುಡು ಸುಡು ಬಿಸಲ  ಬೀರಬ್ಯಾಡನನ್ನ ಎದಿಯಾಗ ತಣ್ಣಗ ಇರುಆಕಿ ಹಸರ ನೆನಪು  ಆರಿ ಹೋದೀತು ಅಂತ ೧೦ಹರಕೊಂಡು ಹೋಗೂ ಮಳಿ ನೀರಿನ್ಯಾಗಎಲ್ಲಾ ಹರಕೊಂಡ ಹೋಗ್ತಾವಎಂಥ ವಿಸ್ಮಯ ಅಂತಿಎಂಥ ರ‍್ರನ ಮಳಿ ಅದರೂಎದಿಯಾಗಿನ ನೆನಪ ಮಾತ್ರ ಶಾಶ್ವತ ಇರ‍್ತಾವ ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಹತ್ತು ಶಾಯಿರಿಗಳು” Read Post »

ಕಥಾಗುಚ್ಛ

“ತಪ್ಪು” ಸಣ್ಣ ಕಥೆ, ಚಂದ್ರಿಕಾ ನಾಗರಾಜ್ ಹಿರಿಯಡಕ

ಕಥಾ ಸಂಗಾತಿ ಚಂದ್ರಿಕಾ ನಾಗರಾಜ್ ಹಿರಿಯಡಕ “ತಪ್ಪು” ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಒಂದೊಂದೇ ಹನಿ ರಕ್ತ ನೆಲಕ್ಕೆ ಬೀಳುತ್ತಿತ್ತು.‌ ಒಂದು ನೊಣ ಬಂದು  ರಕ್ತವನ್ನೊಮ್ಮೆ ಮೂಸಿ ಹಾರಿತು. ಸ್ವಲ್ಪ ಸಮಯದ ಬಳಿಕ ಮತ್ತೆ ನಾಲ್ಕು ನೊಣಗಳು ರಕ್ತದ ಮೇಲೆ ಕುಳಿತು, ಹಾರಿ, ಮತ್ತೆ ಕುಳಿತು ನೆಕ್ಕುವ ಕಾರ್ಯದಲ್ಲಿ ನಿರತವಾದವು.‘ತಪ್ಪು ಮಾಡಿ ಬಿಟ್ನಾ?’ ಸುತ್ತ ಕತ್ತಲೆ ಕವಿದಂತಾಯಿತು.ಅಮ್ಮನ ಹತ್ರ ಮುದ್ದೆ, ನಾಟಿ ಕೋಳಿ ಸಾರು ಮಾಡು ಅಂದಿದ್ದೆ…ಸಂಜೆ ಬರ್ತಾ ಹೂವ ತಂದು ಬಿಡು…ಶುಕ್ರವಾರಲಾ ದೇವ್ರಿಗೆ ಹಾಕೋಕೆ  ಅಂದಿದ್ಲು…ಅದಕ್ಕೂ ಮೊದಲು ಸುಮಾ ಆಂಜನೇಯ ಗುಡಿ ಹತ್ರ ಸಿಕ್ತೀನಿ ಅಂದಿದ್ಲು…ಎಲ್ಲವೂ ಕಣ್ಣೆದುರು ಒಂದು ಕ್ಷಣ ತೇಲಿ ಹೋದವು.ಆವತ್ತೇನಾಗಿತ್ತು….ಅಮ್ಮ, ಏಳಮ್ಮ…ಮೈ ಕೈ ಸುಡ್ತಾ ಇದ್ಯಲಾ…ತಾಯಿಯ ಹಣೆ ಮುಟ್ಟಿದ ರಾಘು ಸಣ್ಣಗೆ ಕಂಪಿಸಿದ. ಭಯಗೊಂಡ. ಯಾವಾಗಲೂ ಲವಲವಿಕೆಯಿಂದ, ಮನೆ ಕೆಲಸ, ಜೊತೆ ಸಾಹುಕಾರರ ಮನೆ ಕೆಲಸ ಮಾಡಿಕೊಂಡಿದ್ದ ತಾಯಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದರೆ ಮಗನಿಗೆ ಹೇಗಾಗಬೇಡ…ಊರಿನ ಆಸ್ಪತ್ರೆಗೆ ತೋರಿಸಿದಾಗ ಹೊಟ್ಟೆಯಲ್ಲಿ ಬೆಳೆದಿರುವ ಗಡ್ಡೆ ಬಗ್ಗೆ…ಆಪರೇಷನ್ ಮಾಡಿಸಲು ನಗರದ ಆಸ್ಪತ್ರೆಯನ್ನು ಸೂಚಿಸಿದರು.ಪಕ್ಕದ ಮನೆಯರೆಲ್ಲ ಮನೆಗೆ ಬಂದು ನೂರು ಮಾತಾಡಿದರು. ಮಗನಿಗೆ ಕಷ್ಟ ಕೊಡಬಾರದೆಂದು ತಾಯಿ ಇಷ್ಟು ವರ್ಷಗಳ ಕಾಲ ಹೊಟ್ಟೆ ನೋವು ಸಹಿಸಿಕೊಂಡಿದ್ದರ ಮುಂದೆ ಲಕ್ಷಾಂತರ ಖರ್ಚು ದೊಡ್ಡದಾಗಿ ಕಾಣಲಿಲ್ಲ ರಾಘುಗೆ. ಆದ್ರೆ, ದುಡ್ಡಿಗಾಗಿ ಏನ್ ಮಾಡೋದು?ತಾನು ಕೆಲಸ ಮಾಡುತ್ತಿದ್ದ ತೋಟದ ಒಡೆಯನ ಮುಂದೆ ಹೋಗಿ ಕೈಯೊಡ್ಡಿದ.‘ಅಷ್ಟೊಂದ್ ದುಡ್ಡು ಕೊಡೋಕಾಗಲ್ಲಯ್ಯ…’ ಎಂದು ಬಿಟ್ಟಿದ್ದರು. ಸಾಲ ಕೊಡೋರು ಯಾರು ಸಿಕ್ಕಿರಲಿಲ್ಲ. ಆಗಲೇ ರಾಘು ತಪ್ಪು ಮಾಡಿದ್ದ. ಆ ಕ್ಷಣಕ್ಕೆ ಅವನಿಗೆ ಸರಿ ಕಂಡಿದ್ದು ಅದೊಂದೆ.‌ಅಂದೊಂದು ದಿನ ಧನಿಯ ಪತ್ನಿಯ ಚಿನ್ನದ ಸರ ಕದ್ದು ಬಿಟ್ಟ. ಅದ್ಯಾರಲ್ಲೋ ಅಡವಿಟ್ಟು ಹಣ ಪಡೆದು ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ಅತ್ತ ಆಪರೇಷನ್ ನಡೆಯುತ್ತಿದ್ದರೆ, ಇತ್ತ ರಾಘುವೇ ಚಿನ್ನ ಕದ್ದಿರುವುದೆಂದು ಗೊತ್ತಾಗಿ ಕೈಗೆ ಕೋಳ ಹಾಕಲಾಯಿತು. **** ಅವತ್ ನಾನು ಆ ತಪ್ಪು ಮಾಡದೇ ಹೋಗಿದ್ರೆ ಅಮ್ಮನ ಉಳಿಸಿಕೊಳ್ಳಲಾಗ್ತಿತ್ತೆ? ರಾಘು ಕಣ್ಣಿಂದ ಒಂದು ಹನಿ ಕಣ್ಣೀರು ಜಾರಿ ನೆಲಕ್ಕೆ ಬಿದ್ದಿದ್ದ ರಕ್ತದ ಹನಿಗಳ ಜೊತೆಯಾಯಿತು. ಈಗ ರಕ್ತದ ಮೇಲೆ ನೊಣಗಳು ಮಾತ್ರವಲ್ಲ ಇರುವೆಗಳ ಸಂಚಾರವೂ ಶುರುವಾಗಿತ್ತು. ಕೈ ಮೇಲೆ ಹಾರಾಡುತ್ತಿದ್ದ ನೊಣಗಳು ರಾಘುವಿಗೆ ಹಿಂಸೆ ಎನಿಸುತ್ತಿರಲಿಲ್ಲ. ಮನಸ್ಸಿನೊಳಗಿನ ಸಾವಿರ ಯೋಚನೆಗಳು ಹೊರಪ್ರಪಂಚದ ಚಲನ ವಲನಗಳ ಮೇಲೆ ನಿಗಾ ಇಡಲು ಅವಕಾಶ ಕೊಡಬಲ್ಲುದೇ…ರಾಘು ತಾಯಿ ಚೇತರಿಸಿಕೊಳ್ಳುತ್ತಿದ್ದಂತೆ ಮಗ ಜೈಲು ಸೇರಿರುವ ವಿಚಾರ ತಿಳಿಯಿತು. ತನಗಾಗಿ ಮಗ ಮಾಡಿದ ತಪ್ಪಿಗೆ ಸಂಕಟ ಪಟ್ಟ ಆಕೆ ಧನಿಯ ಮುಂದೆ ಅಂಗಾಲಾಚಿದಳು. ಆಕೆಯ ದುಃಖ ಅರಿತ ಧನಿಯ ಪತ್ನಿ ಪತಿಯಲ್ಲಿ ಹೇಳಿ ರಾಘುವನ್ನು ಸೆರೆ ಮನೆಯಿಂದ ಹೊರ ಬರುವಂತೆ ಮಾಡಿದಳು.***ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದವನಿಗೆ ಮತ್ತೆ ಕೆಲಸ ಕೊಡಲೊಪ್ಪಲಿಲ್ಲ ತೋಟದ ಯಜಮಾನ. ಕಂಗೆಟ್ಟು ಹೋದ ರಾಘುಗೆ ದಾರಿ ತೋರಿಸಿದ್ದು, ಮಣ್ಣು. ಹಿತ್ತಲಿನಲ್ಲಿದ್ದ ಪುಟ್ಟ ಜಾಗದಲ್ಲಿ ಬಸಳೆ, ಹರಿವೆ ನಲಿದವು. ತೊಂಡೆ ಕಾಯಿ ಚಪ್ಪರ ನಕ್ಕಿತು. ಬೆಂಡೆ ಕಾಯಿ, ಅಲಸಂಡೆ ಕೈ ಕುಲುಕಿದವು. ರಾಘು ಚೆಂದದ ಜೀವನ ಆರಂಭಿಸಿದ್ದ. ಮಾವನ ಮಗಳು ಸುಮಾ ಬದುಕ ಪಯಣಕೆ ಜೊತೆಯಾಗಲು‌ ಅಣಿಯಾದಳು. ಆದರೆ, ಅವರ ಕನಸುಗಳಿಗೆ ವಿಧಿ ಹರಸಲಿಲ್ಲ…***ತಾಯಿಗಾಗಿ ರಾಘು ಕದ್ದಿದ್ದ…ಆದರೆ, ಕೆಲವರು ಆತನ ಆ ತಪ್ಪನ್ನು ಕೆಣಕುತ್ತಿದ್ದರು. ಅವರಲ್ಲಿ ಮಂಜು, ಭದ್ರ ಕೂಡ ಇಬ್ಬರು.ಅಂಗಡಿಗೆ ಬಂದವರೆ ‘ಕಳ್ಳ, ಇದಕ್ಕೆಷ್ಟೋ, ಅದಕ್ಕೆಷ್ಟೋ’, ‘ಕಳ್ಳ ಎಲ್ಲಿಂದ ಕದ್ಕೊಂಡ್ ಬಂದ್ಯೋ ಸೊಪ್ಪನ್ನ’ ಎಂದು ದಿನ ನಿತ್ಯ ಹಂಗಿಸುತ್ತಿದ್ದರು. ರಾಘು ತಾಳ್ಮೆಯಿಂದಲೇ ಇದ್ದ.‌ ಆದ್ರೆ, ಅವತ್ತು ಅದೇನಾಯ್ತೋ ಬುದ್ಧಿಯ ಮೇಲೆ ಕೋಪಾಗ್ನಿ ಉರಿಯಿತು.‘ಕಳ್ಳಂಗೆ ಮದ್ವೆ ಅಂತೆ…ಹುಡ್ಗಿ ಕಳ್ಳಿನೇ ಇರ್ಬೇಕು…ಅಥವಾ…’ ಮಂಜು, ಭದ್ರನಾ ನಗು ಕೆರಳಿಸಿತು.    ಹಲ್ಲು ಕಚ್ಚಿ ನಿಂತ. ‘ಕಳ್ಳ ಯಾಕೋ ಮಾತಾಡ್ತಿಲ್ಲ’ ರಾಘುಗೆ ತಡೆಯಲಾಗಲಿಲ್ಲ. ಅಲ್ಲೇ ಇದ್ದ ಚಾಕುವನ್ನು ಹಿಡಿದ. ರಾಘುವಿನ ಅನಿರೀಕ್ಷಿತ ದಾಳಿಗೆ ಭದ್ರ, ಮಂಜು ತತ್ತರಿಸಿ ಹೋದರು. ನೆಲಕ್ಕುರುಳಿದ ಇಬ್ಬರ ಮೇಲೂ ರಾಘು ಕೈಯಲ್ಲಿದ್ದ ಚಾಕು ತನಗಿಷ್ಟ ಬಂದಹಾಗೆ ಇರಿದು ಬಿಟ್ಟಿತ್ತು.‌ ಒದ್ದಾಡಿ ಒದ್ದಾಡಿ ಇಬ್ಬರು ಉಸಿರು ಚೆಲ್ಲಿದರು.ರಾಘು ಕುಸಿದು ಕುಳಿತ…ಇಬ್ಬರ ಹೆಣಗಳ ನಡುವೆ…ಕೈಯಲ್ಲಿ ರಕ್ತ ಸಿಕ್ತ ಚಾಕು…ಎದೆಯೊಳಗೆ ಭಾರ!ದೊಡ್ಡ ತಪ್ಪು ಮಾಡ್ದೆ…ಕಳ್ಳ‌‌…ಅಲ್ಲ…ಕೊಲೆಗಾರ ಆದ್ನ…..ರಾಘು ಎದ್ದ…ಓಡಲಾರಂಭಿಸಿದ…ಅಮ್ಮ…ಸುಮಾ…ಕಣ್ಣ ಮುಂದೆ ಹಾದು ಹೋದಂತಾಯಿತು. ರಾಘು ಓಡುತ್ತಿದ್ದ. ಕೈಯಲ್ಲಿದ್ದ ಚಾಕು ಎಸೆದ. ದುಃಖದ ಸಂಕೇತವಾಗಿ ಕಣ್ಣಿಂದ ಜಾರುತ್ತಿದ್ದ  ನೀರನ್ನು ತೋಳಿನಿಂದ ಒರೆಸಿಕೊಳ್ಳುತ್ತಾ ಓಡುತ್ತಿದ್ದ. ಚಂದ್ರಿಕಾ ನಾಗರಾಜ್ ಹಿರಿಯಡಕ

“ತಪ್ಪು” ಸಣ್ಣ ಕಥೆ, ಚಂದ್ರಿಕಾ ನಾಗರಾಜ್ ಹಿರಿಯಡಕ Read Post »

ಇತರೆ

“ರಾಷ್ಟ್ರೀಯ ಕೈ ಬರಹ ದಿನಾಚರಣೆ” ಗಾಯತ್ರಿ ಸುಂಕದ

ಕೈಬರಹ ಸಂಗಾತಿ ಗಾಯತ್ರಿ ಸುಂಕದ “ರಾಷ್ಟ್ರೀಯ ಕೈ ಬರಹ ದಿನಾಚರಣೆ” ಕೈ ಬರಹದ ಚಿತ್ರ ರಂಗಮ್ಮ ಹೊದೇಕಲ್ ಕಂಪ್ಯೂಟರ್ ಬಂದಾಗಿನಿಂದ ಬಹುಶಃ ನಮಗೆ ಕೈ ಬರಹ   ಮರೆತು ಹೋಗಿದೆ. ಆದರೂ ಚಿಕ್ಕವರಿದ್ದಾಗ ಕಾಪಿ ರೈಟಿಂಗ್ ಬುಕ್ ತಂದು ಬರೆದಿದ್ದು ಇನ್ನೂ ಹಸಿರಾಗಿದೆ.ನಮ್ಮ ಕೈ ಬರಹ ನಮ್ಮ ವ್ಯಕ್ತಿತ್ವವನ್ನು ಕೂಡ ಸೂಚಿಸುತ್ತದೆ.ನೀವು. ಎಡಗಡೆಗೆ ವಾಲಿಸಿ ಬರೆದರೆ ಹತಮಾರಿಗಳು, ನಿಮ್ಮದೇ ನಡೆಯ ಬೇಕೆಂಬ ಅಹಂ ಉಳ್ಳವರು.ನೀವು ಬಲಗಡೆಗೆ ವಾಲಿಸಿ ಬರೆದರೆ ಎಲ್ಲಿ ಹೋದರೂ ಹೊಂದಿ ಕೊಳ್ಳುವ ವ್ಯಕ್ತಿತ್ವ ಉಳ್ಳವರು ಮತ್ತು ಸ್ವಭಾವತಃ ಒಳ್ಳೆಯವರು.ನೀವು ನೇರವಾಗಿ ಬರೆದರೆ ಸದಾ ಕ್ರಿಯಾಶೀಲರು ಎಂದರ್ಥ.ನೀವು ಎರಡು ಗೆರೆಗೆ ಹತ್ತಿಸಿ ಬರೆದರೆ ನೀವು ಸ್ವಭಾವತಃ   ಯಾರೊಡನೆ  ಜಾಸ್ತಿ  ಬೇರೆಯದೇ ಒಬ್ಬರೇ ಇರಲಿಕ್ಕೆ ಇಚ್ಛೆ ಪಡುವರು.ನೀವು ಎರಡು ಗೆರೆಗಳ ನಡುವೆ ಬರೆದರೆ ಹಗಲುಗನಸು ಕಾಣುವ ವ್ಯಕ್ತಿತ್ವ ಉಳ್ಳವರು.ನೀವು ತುಂಬಾ ಜಾಗ ಬಿಟ್ಟು  ಪುಟ ತುಂಬಿಸುವವರು ಇದ್ದರೆ ನೀವು ಸೋಮಾರಿ ಮತ್ತು ಟೈಮ್ ಪಾಸ್ ಮಾಡುವ ವ್ಯಕ್ತಿತ್ವ ಉಳ್ಳವರು.ನೀವು ಸ್ವಲ್ಪವೂ  ಜಾಗ ಬಿಡದೆ ಪುಟ. ತುಂಬಿಸುವವರೂ ಇದ್ದರೆ ನೀವು ಸಮಯಕ್ಕೆ ತುಂಬಾ ಮಹತ್ವ ಕೊಡುವವರು ಆಗಿರುತ್ತೀರಿ.   ತಪ್ಪಾಗಿದ್ದ ಶಬ್ದವನ್ನು ತುಂಬ ಜೋರಾಗಿ ಹೊಡೆದು ಹಾಕುವವರು ಆಗಿದ್ದರೆ, ನೀವು ಇನ್ನೊಬ್ಬರಿಗೆ  ಮುಖಕ್ಕೆ ಹೊಡೆಯುವಂತೆ ಮಾತನಾಡುವ ವ್ಯಕ್ತಿತ್ವ ಉಳ್ಳವರು ಆಗಿರುತ್ತೀರಾ.ನೀವು ದುಂಡಗೆ ಅಂದವಾಗಿ ಬರೆಯುವವರು ಆಗಿದ್ದರೆ, ನೀವು ಆಲ್ರೌಂಡರ್ ಾಗಿರುತ್ತೀರಾ. ನೀವು ಗಜಿಬಿಜಿ ಬರೆಯುವವರು ಆಗಿದ್ದರೆ, ನೀವು ಮಾನಸಿಕವಾಗಿ. ಸ್ಥಿರತೆ ಇಲ್ಲದೆ  ಚಂಚಲ ವ್ಯಕ್ತಿ ಆಗಿರುತ್ತೀರ.ನಮ್ಮ ಜೀವನದಲ್ಲಿ ಬದಲಾವಣೆಗಳು ಆದರೆ, ನಮ್ಮ ಕೈ ಬರಹದಲ್ಲಿ ಕೂಡ ಬದಲಾವಣೆ. ಆಗಿರುತ್ತದೆ.ನಮ್ಮ ಕೈ. ಬರಹ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ತುಂಬ ವೇಗವಾಗಿ ಚಿಂತಿಸಿ ಬರೆಯುವವರು ಇದ್ದರೆ, ಅವರ ಸಹಿ ರನ್ನಿಂಗ್ ಲೆಟರ್ಸ್ ಆಗಿರುತ್ತದೆ.ಎಷ್ಟೊಂದು  ಇಂಟರೆಸ್ಟಿಂಗ್ ಅಲ್ಲವೇ!ಒಂದು ಸಾರಿ ಚೆಕ್ ಮಾಡಿ ಕೊಳ್ಳಿ. ಗಾಯತ್ರಿ ಸುಂಕದ

“ರಾಷ್ಟ್ರೀಯ ಕೈ ಬರಹ ದಿನಾಚರಣೆ” ಗಾಯತ್ರಿ ಸುಂಕದ Read Post »

ಕಾವ್ಯಯಾನ

ಪ್ರೇಮ(ಲತಾ)ಕವಿತೆ ಲತಾ ಎ ಆರ್‌ ಬಾಳೆಹೊನ್ನೂರು

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು ನನ್ನವನು ಕಣ್ಣಿನಲಿ  ಇಳಿಸಿದೆ ಪ್ರೇಮಪತ್ರವ ಹೃದಯಕೆಅರಿತು ಮನ ಸೆಳೆದಿಹುದು ಬರಹಕೆಆಳದ ಮಾತು ಇಳಿಸಲಾಗದು ಕವನಕೆಬಯಸಿದೆ ಜೀವ ಬಿಡಿಸದ ಬಂಧನಕೆ ಸೆಳೆಯುತಿರುವೆ ಕನಸು ನನಸಿನಲಿನೋಡ ಬಯಸಿರುವೆ ಈ ದಿನದಲಿತಂಗಾಳಿ ಸುಳಿದಂತೆ ನಿನ್ನ ನೆನಪಿನಲಿಚಳಿಯಲ್ಲೂ ಮೈ ನಡುಗಿದೆ ಕಂಪಿಸುತಲಿ ನೀನೆ ಜೀವನದ ಸುಮಧುರ ಗೆಳೆಯಸರಿಯುತಿದೆ ಸವಿಯಾದ ಸಮಯಬರೆದು ಬಿಡು ಹೆಸರ ಸಹಿಯಕಾಪಾಡುವ ಪ್ರೇಮಿಗಳಂತೆ ಪ್ರೀತಿ ನಿಧಿಯ ನೀನೆಂದೆಂದು ನನ್ನವನು ತಿಳಿದಿರುನನ್ನೊಲವ ಪ್ರೇಮವ ತೊರೆಯದಿರುಸಪ್ತ ಸಾಗರದಾಚೆ ನನ್ನ ಕರೆಯದಿರುತಾಯಿ ನೆಲದ ಋಣವ ಮರೆಯದಿರು ಲತಾ ಎ ಆರ್ ಬಾಳೆಹೊನ್ನೂರು

ಪ್ರೇಮ(ಲತಾ)ಕವಿತೆ ಲತಾ ಎ ಆರ್‌ ಬಾಳೆಹೊನ್ನೂರು Read Post »

ಅನುವಾದ

ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ “ಒಂದು ಆಧುನಿಕ ದೇವಾಲಯದ ಕಥೆ” ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು ಅಕ್ಟೋಬರ್ 2, 2009. ರಾತ್ರಿ ಹನ್ನೊಂದುಗಂಟೆ. ರಿಟೈರ್ಡ್  ಚೀಫ್ ಇಂಜಿನಿಯಾರ್  ಗೋವಿಂದರೆಡ್ಡಿ, ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಟಿವಿ ಮುಂದೆ ಕುಳಿತು ಪ್ರವಾಹದ ಭೀಕರ ದೃಶ್ಯಗಳನ್ನು ನೋಡುತ್ತಿದ್ದಾರೆ. ಕೃಷ್ಣಾನದಿಗೆ ಬಂದಿರುವ ಪ್ರವಾಹದ ನೀರು ಯಾರ ಮಾತನ್ನೂ ಕೇಳದ ಹಠಮಾರಿ ಮಗುವಿನಂತೆ, ಸಿಟ್ಟಿಗೆದ್ದ ಯುವಕನ ಅಗ್ರಹದಂತೆ ತುಂಬಿ ಉಕ್ಕುತ್ತಾ, ಹೊಮ್ಮಿ ಬರುತ್ತಾ ನೀರಿನ ಮಟ್ಟವನ್ನು ಹೆಚ್ಚಿಸುತ್ತಿದೆ. ಆಗಲೇ ಟಿವಿಯಲ್ಲಿ ಹೇಳುತ್ತಿದ್ದರು – “ಶ್ರೀಶೈಲಂ ಡ್ಯಾಮ್   ಎತ್ತರ 884 ಅಡಿ. ಈಗ ನೀರಿನ ಮಟ್ಟ 880 ಅಡಿಗೆ ತಲುಪಿದೆ. ಇಡೀ ಹನ್ನೆರಡು ಗೇಟ್‌ಗಳನ್ನು ಎತ್ತಿದ ನಂತರವೂ ಪ್ರವಾಹದ ವೇಗ ಕಡಿಮೆಯಾಗಲಿಲ್ಲ. ಇನ್  ಫ್ಲೋ , ಅವುಟ್ ಫ್ಲೋ ಗಿಂತಲೂ ತುಂಬಾ ಜಾಸ್ತಿ ಇದ್ದುದರಿಂದ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸಂಪೂರ್ಣ ವಾಗಿ ಡ್ಯಾಮ್  ನೀರಿನ ಹರಿವಿನಲ್ಲಿ ಮುಳುಗಿಹೋಗ ಬಹುದೆಂದು, ಒಟ್ಟು ನೀರಿನ ಪ್ರವಾಹ ಡ್ಯಾಮ್ ತುಂಬಿ ಅದರ ಮೆಲಿಂದ  ಹರಿಯುವ ಸಾಧ್ಯತೆ ಇರುವುದೆಂದು ನಿಪುಣರ ವರ್ಗ  ಹೇಳುತ್ತಿತ್ತು. ಎಲ್ಲಾ ಗೇಟುಗಳನ್ನು ಎತ್ತಿದ ಸರ್ಕಾರಿ ಅಧಿಕಾರಿಗಳೂ ಏನೂ ಮಾಡಲಾಗದೇ ದೇವರಮೇಲೆ ಭಾರಹಾಕಿ, ಅವನೇ ಕಾಪಾಡಬೇಕೆಂದು ಹೇಳಿದರು’’ ಟಿವಿಯಲ್ಲಿ ಚರ್ಚೆನಡೆಯುತ್ತಿದೆ. “ಮೇಲಿಂದ ಬರುತ್ತಿರುವ ಪ್ರವಾಹವನ್ನು ಅಂದಾಜು ಹಾಕಿ ಮೊದಲೇ ಏಕೆ ಗೇಟ್‌ಗಳನ್ನು ತೆರೆಯಲಿಲ್ಲ”  ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. “ಇಷ್ಟೊಂದು ಪ್ರವಾಹ ಬರುತ್ತದೆಂದು  ಊಹಿಸಲಿಲ್ಲವೆಂದು,  ಜಲಾಶಯ ಭರ್ತಿಯಾದರೆ ನಾಲೆಗಳ ಮೂಲಕ ಹೊಲಗಳಿಗೆ ನೀರುಣಿಸ ಬಹುದು ಎಂದುನಿಲ್ಲಿಸಸಿದರೆಂದು” ಸರ್ಕಾರದ ಅನುಕೂಲರು ವಾದಿಸುತ್ತಿದ್ದಾರೆ. “ಇದು ಉದ್ದೇಶ ಪೂರ್ವಕವಾಗಿ ಮಾಡಿರುವುದೆಂದು, ಮಾನವ ತಪ್ಪಿದವೆಂದು” ಆಕ್ಷೇಪಣಗಳು. “ಸೀಮೆಗೆ ನೀರು ಕೂಡಿಡುವುದು ಹೇಗೆ ಸ್ವಾರ್ಥವಾಗುತ್ತದೆ ”   ಬೇಸಾಯಕ್ಕೆ ಬೇಕಾದ  ನೀರಿನ ಸಾಧನಾ ಸಮಿತಿ ಅವರ ಸಮರ್ಥನೆಗಳು , ಒಬ್ಬರಿಮೇಲೆ ಇನ್ನೊಬ್ಬರು, ಆರೋಪ –ಪ್ರತ್ಯಾರೋಪಗಳನ್ನು ಮುಂದುವರಿಯುಸುತ್ತಿದ್ದಾರೆ .    ಗೋವಿಂದರೆಡ್ಡಿ ಹಾಗೆ ನೋಡುತ್ತಾ ನೋಡುತ್ತಾ ನಲವತ್ತು ವರ್ಷ ಹಿಂದಕ್ಕೆ ಹೋದ. ಆಗಲೇ ಅನಂತಪೂರ್  ಇಂಜಿನಿಯರಿಂಗ್  ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿಕೊಂಡು ಪಬ್ಲಿಕ್ ಸರ್ವೀಸ್ ಕಮಿಷನ್   ಎಕ್ಸಾಮ್ ಬರೆದಮೇಲೆ   ಜೂನಿಯರ್ ಇಂಜನೀರಿಂಗ್ ಯಾಗಿ ಜಾಬ್ ಸಿಕ್ಕಿತು. ಮೊದಲೇನೆಯ ಪೋಸ್ಟಿಂಗ್ ಶ್ರೀಶೈಲಮ್  ಪ್ರಾಜೆಕ್ಟ್. ಶಿವರಾಮಿರೆಡ್ಡಿ ಅವರು  ಎಗ್ಜಿಕ್ಯುಟಿವ್ ಇಂಜನೀರ್ ಯಾಗಿ , ಸುಬ್ರಹ್ಮಣ್ಯಂ  ಸೂಪೆರಿಂಡೆಂಟ್ ಇಂಜನೀರ್ ಯಾಗಿ ಇದ್ದರು.  ಪ್ರಾಜೆಕ್ಟ್ ಕೆಲಸಗಲೆಲ್ಲಾ  ಕನ್ಸ್ಟ್ರಕ್ಷನ್  ಕಾರ್ಪೊರೇಷನ್  ಲಿಮಿಟೆಡ್ ಮೂಲಕ ನಡೆಯುತ್ತಿದ್ದವು. ಶಿವರಮಿರೆಡ್ಡಿ  ಅವರು ತನಗಿಂತಲೂ ಹದಿನೈದು ವರ್ಷ ದೊಡ್ಡವರು. ಆಗ ತನಗೆ ಇಪ್ಪತ್ತೈದುವರ್ಷ. ಯಾವ ಅನುಭವ ಜ್ಞಾನವೂ ಇಲ್ಲ. ಎಲ್ಲವೂ ಪುಸ್ತಕ ಜ್ಞಾನ. ಶಿವರಾಮಿರೆಡ್ಡಿ ಅವರಿಗೆ ತಾಳ್ಮೆಜಾಸ್ತಿ. ತನ್ನನ್ನು ಚೆನ್ನಾಗಿ ಗೈಡ್ ಮಾಡುತ್ತಿದ್ದರವರು. ಎಲ್ಲರನ್ನೂ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.  ಆಗಲೇ ಅಲ್ಲಿರುವ ಎಲ್ಲಾ ಇಂಜಿನಿಯರ್ಗಳಲ್ಲಿ ತಾನೇ ಕಿರಿಯವನು. ಅನೇಕರು ಡಿಪ್ಲೊಮಾ ಮೂಲಕ ಸೇರಿ, ಪ್ರಮೋಷನ್ ಮೇಲೆ ಆ ಮಟ್ಟಕ್ಕೆ  ಬಂದರು.   ಶಿವರಾಮಿರೆಡ್ಡಿ ಅವರು ನಾಗಾರ್ಜುನ ಸಾಗರ್   ಪ್ರಾಜೆಕ್ಟ್ ನಲ್ಲಿ ಕೆಲಸಮಾಡಿದ ಅನುಭವದಿಂದ  ಇಲ್ಲಿಗೆ ಬಂದಿದ್ದರು. ಪ್ರಾಜೆಕ್ಟ್ ಕೆಲಸಗಳೆಲ್ಲಾ ಎಸ್‌ಸಿ ಅವರ ಅಧೀನಯಲ್ಲಿ  ನಡೆಯುತ್ತಿದ್ದವು. ಸಂದರ್ಭಗಳನ್ನು ತಮಗೆ  ಅನುಕೂಲವಾಗಿ ಪರಿವರ್ತಿಸುವಲ್ಲಿ  ಎಸ್ ಇ ಅವರು ಬಹಳ ಪ್ರವೀಣರು. ಒಳ್ಳೆಯ ಚಾಕಚಕ್ಯತೆಯ ವ್ಯಕ್ತಿ. ಆಗ ಸಿ ಇ ಹೈದರಾಬಾದ್‌ನಲ್ಲಿ ಇರುತ್ತಿದ್ದರು.  ಹಲವು ಸಂದರ್ಭಗಳಲ್ಲಿ ಸುಬ್ರಹ್ಮಣ್ಯಂ ಅವರಜೊತೆ ಹೋಗಿ ಸಿ.ಇ. ಅವರನ್ನು  ಭೇಟಿಯಾದರು. ಒಮ್ಮೆ  ಡ್ಯಾಮ್ ಕೆಲಸಗಳಲ್ಲಿ  ಕಲ್ಲುಗಳನ್ನು ಹೊತ್ತುಕೊಂಡು ಹೋಗುವ ಕಾರ್ಮಿಕನು  ಕಾಲುಜಾರಿ ಕೆಳಗೆ ಬಿದ್ದಿದ್ದಾನೆ. ಆಗ ಸಪೋರ್ಟ್ ಯಾವುದೂ ಇಲ್ಲದರಿಂದ ಹಾಗೆ ಜಾರುತ್ತಾ ಬಹಳ ಅಳಕ್ಕೆ  ಬಿದ್ದು ಬಿಟ್ಟನು. ಪೆಟ್ಟುಗಳು ಬಲವಾಗಿ ತಾಕಿದವು. ರಕ್ತ ಸೋರುತ್ತಿದೆ.. ಮನುಷ್ಯನಿಗೆ ಪ್ರಜ್ಞೆಯೂ ಇಲ್ಲ. ತಕ್ಷಣ ಅಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಸಿ ಪ್ರಾಜೆಕ್ಟ್ ಆಸ್ಪತ್ರೆಗೆ ಕರೆದೊಯ್ದರು. ಚೇತರಿಸಿಕೊಳ್ಳಲು ಹಲವು ದಿನಗಳು ಬೇಕೆಂದು ಹೇಳಿದರು. ಎಲ್ಲಾ ಕೆಲಸಗಾರರು ಜಮಾಯಿಸಿ ಕೆಲಸ ಮಾಡುವುದು ನಿಲ್ಲಿಸಿದರು. ಕೆಲಸ ನಿಂತುಹೋಯಿತು. ದೊಡ್ಡ ಜಗಳವೇ ನಡೆಯಿತು. ಕೆಲಸ  ಸ್ಥಗಿತಗೊಂಡಿತು. ಮೇಸ್ತ್ರಿಗಳು ಕೈಬಿಟ್ಟರು. ಯೂನಿಯನ್  ಮುಖಂಡರು ಎಸ್‌.ಸಿ. ಅವರನ್ನು ಭೇಟಿಮಾಡಿದರು. ಅವರು ಅವರನ್ನು ಸಮಾಧಾನಪಡಿಸಿ ಯಾವುದಾದರೂ ಕಾಂಪೆನ್ ಸೇಷನ್  ಕೊಡುತ್ತೇವಿ ಎಂದು ಒಪ್ಪಿಸಿದರು. ಆದರೆ ಇದು ಈ ಒಂದು ಸಲಕ್ಕೆ ನಿಂತುಹೋಗದು. ಇಷ್ಟು  ಪ್ರಾಜೆಕ್ಟ್ ಯಲ್ಲಿ  ಈ ರೀತಿಯ  ವಿಷಯಗಳು ನಡೆಯುತ್ತಲೇ ಇರುತ್ತವೆ.  ನಾಗಾರ್ಜುನ ಸಾಗರದಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಹಾಗಾಗಬಾರದೆಂದು ಕೊಂಡರೆ  ಅಪಾಯಕಾರಿಯ ಕೆಲಸಗಳು ಯಂತ್ರಗಳ ಸಹಾಯದಿಂದ ಮಾಡಿಸಬೇಕು.  ಯಂತ್ರಗಳನ್ನು  ಹೆಚ್ಚಾಗಿ  ಬಳಸಬೇಕು. ಇದೆ ವಿಷಯವನ್ನು ಕುರಿತು ಸಿ .ಇ. ಅವರೊಂದಿಗೆ ಚರ್ಚಿಸಿದರೆ, ‘‘ನಿಜವೇ ಆದರೂ , ಈ ಪ್ರಾಜೆಕ್ಟ್  ಮೂಲಕ ಜನರಿಗೆ ಒಂದಿಷ್ಟು ಜೀವನೋಪಾಧಿ ಸಿಗುತ್ತದಲ್ಲ. ಯಂತ್ರಗಳ ಬಳಕೆ ಯಾದರೆ  ಜನರ  ಉಪಾಧಿಗೆ ಧಕ್ಕೆ ಬೀಳುತ್ತದೆಂದು , ಅದಕ್ಕಾಗಿಯೇ ಸರ್ಕಾರು ಈ ಪ್ರತಿಪಾದನೆಗೆ ಅಂಗೀಕರಿಸುವುದಿಲ್ಲ ಎಂದು ಹೇಳುತ್ತಾ ಸಮಯಕ್ಕಾಗಿ ಕಾಯೋಣ” ಎಂದು ಸೂಚಿಸಿದರು. ಒಂದು ರಿವ್ಯೂ  ಮೀಟಿಂಗ್ ನಲ್ಲಿ ಮಂತ್ರಿ ಅವರು ಪ್ರಾಜೆಕ್ಟ್  ಕೆಲಸವನ್ನು ಪರಿಶೀಲಿಸಿ ಕೆಲಸ /ಕಾಮಗಾರಿ ವಿಳಂಬವಾಗುತ್ತಿದೆ  ಎಂದು ದೂರಿದರು. ರಾಜ್ಯದಲ್ಲಿ ವಿದ್ಯುತ್ತಿನ ಕೊರತೆ  ತೀವ್ರವಾಗಿದೆ ಎಂದು, ನಾವು ಇನ್ನೂ ಡ್ಯಾಮ್ ನಿರ್ಮಿಸುವ   ಕೆಲಸದಲ್ಲೇ ಇದ್ದೇವೆಂದು,  ವಿದ್ಯುತ್ ಯಾವಾಗಾ ಉತ್ಪಾದನೆ  ಮಾಡುತ್ತೇವೆ ಎಂದು ಸಿಟ್ಟಗೆದ್ದರು.  ಆಗ       ಎಸ್ . ಇ. ಅವರು ಆ ಅವಕಾಶವನ್ನು  ಸದುಪಯೋಗಪಡಿಸಿಕೊಂಡರು – ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸೋಣ ಎಂದು,  ಮತ್ತು ಜನರು ಹೊತ್ತುಕೊಂಡು ಹೋಗುವ ಅಗತ್ಯವಿಲ್ಲದೆ ರೋಪ್‌ ವೇ ಮೂಲಕ ಕೆಲವು  ಟನ್‌ಗಳಷ್ಟು  ಮೆಟೀರಿಯಲ್  ಎಲ್ಲಿಗೆ ಬೇಕಾದರೆ ಅಲ್ಲಿಗೆ ತೆಗೆದುಕೊಂಡು ಹೊಗ ಬಹುದೆಂದು ಅದರಿಂದ ಕೆಲಸಗಳನ್ನು ಬೇಗೆ ಬೇಗೆ ಮಾಡಬಹುದೆಂದು ಮಂತ್ರಿ ಅವರನ್ನು ಸಮಾಧಾನ ಮಾಡಿದರು.  ಕೂಡಲೇ ಮಂತ್ರಿ ಅವರು ಆದೇಶ ಹೊರಡಿಸಿದರು. ಅವರು ಯೋಚಿಸಿದಂತೆಯೇ, ಸಮಯಾನು ಕೂಲವಾಗಿ  ತನ್ನ ಆಲೋಚನೆಯನ್ನು ಸಮಯಕ್ಕೆ ಪೂರೈಸಿದನು.  ಅದರಿಂದ ಬಹುತೇಕ ಯಂತ್ರಗಳ ಸಹಾಯದಿಂದ ರೋಪ್ ವೇ ಬಳಸಿದ್ದರಿಂದ ನಿರ್ಮಾಣ ಹಂತದಲ್ಲಿಯೇ ಈ ಯೋಜನೆಯಲ್ಲಿ ಕನಿಷ್ಠ ಪ್ರಾಣಹಾನಿ ಸಂಭವಿಸಿದೆ. ಇಂತಹ ನಿರ್ಧಾರಗಳನ್ನು  ಸಮಯಸ್ಪೂರ್ತಿ ಯಿಂದ ತೆಗೆದುಕೊಳ್ಳುವಲ್ಲಿ ಅವರು ದಿಟ್ಟರು. “ನೀವು ಇನ್ನೂ ಏಕೆ ಮಲಗಲಿಲ್ಲ? ಒಂದು ಗಂಟೆ ಮೀರಿದೆ? ನಾವೇನು ಮಾಡಬಲ್ಲೆವು? ಹೀಗೆ ಬೆಳಗಾವ ವರೆಗೆ ಕೂತಿದ್ದರೂ  ಉಪಯೋಗವೇನು? ನಿದ್ದೆ ಕಾದದ್ದುದರಿಂದ ಉಯೋಗವೇನು? ಏನಾದರೂ ಮಾಡಬೇಕಾದರೆ, ನಾವಿಲ್ಲಿ, ಅವರು ಅಲ್ಲಿ ” ಎನ್ನುತ್ತಾ ಮಾಧವಿ ಪಡಶಾಲೆಗೆ ಬಂದಳು. ಅಲ್ಲಿ ಸೇರಿದ ಎರಡುವರ್ಷಗಳ ನಂತರ ಮಾಧವಿ  ತನ್ನ ಬದುಕನ್ನು ಪ್ರವೇಶಿಸಿದಳು. ಕರ್ನೂಲ್  ಟೌನ್ ನಲ್ಲಿ ಹುಟ್ಟಿ ಬೆಳೆದಳು ಅವಳು. ಎಲ್ಲಿಯೋ ನಲ್ಲಮಲ ಗುಡ್ಡಗಳಲ್ಲಿ, ಒಂದು ಚಿಕ್ಕ ಊರಲ್ಲಿ  ಇರುವುದಕ್ಕೆ ಅವಳು ಇಷ್ಟಪಡಲಿಲ್ಲ. ಆದರೆ ಅನಿವಾರ್ಯದ  ಪರಿಸ್ಥಿತಿಯಲ್ಲಿ ಕಾಲನೀಗೆ ಬಂದ ಅವಳು ಅವಳು ಅಲ್ಲಿನ  ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಂಡಳು. ಆನಂತರ ಮೂವರು ಮಕ್ಕಳು ಅಲ್ಲೇ ಪ್ರಾಜೆಕ್ಟ್  ಹೈಸ್ಕೂಲಿನಲ್ಲಿ ಓದಿದರು. ಇಪ್ಪತ್ತುವರ್ಷಗಳ ಸುದೀರ್ಘ ಅವಧಿಯ ನಂತರ ಅನಂಪೂರ್ ಗೆ ಟ್ರಾನ್ಸಫರ್  ಆಯಿತು. “ಯಾವುದೂ ಶಾಶ್ವತವಲ್ಲ, ಅಲ್ಲವೇ.. ಯಾಕಿಷ್ಟು ವ್ಯಾಮೋಹ ಆ ಡ್ಯಾಮ್ ಅಂದರೆ? ” ಎಂದು ನಿರ್ಲಿಪ್ತ ಭಾವದಿಂದ ಕೇಳಿದಳು. ಅವಳನ್ನು  ತಡೆಯಲಿಲ್ಲ, ವಾದಿಸಲಿಲ್ಲ.  ಏನನ್ನೂ ಮಾತನಾಡದೇ ಕೂತಿದ್ದರಿಂದ  ಅವಳಿಗೆ ಬೇಸರವಾಗಿ ಮತ್ತೆ ಬೆಡ್ರೂಮಿಗೆ ಹೋದಳು. ನನಗೆ  ಇದ್ದಕ್ಕಿದ್ದಂತೆ  ಅಬ್ದುಲ್  ಬಷೀರ್‌ ಗೆ  ಫೋನ್ ಮಾಡಬೇಕೆಂದು ಅನಿಸಿತು. ಅವನು ಸದ್ಯಕ್ಕೆ ಚೀಫ್. ಇಂಜಿನಿಯರ್ ಆಗಿ ಇದ್ದಾನೆ. ಫೋನ್ ಮಾಡಿದ. “ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿ ಇದೆ ಎಂದು,  ಬೆಳಗಾದರೇ ಹೊರೆತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು, ಸದ್ಯಕ್ಕೆ ನಮ್ಮ ಕೈಯಲ್ಲಿ ಏನೂಇಲ್ಲವೆಂದು, ತನಗೆ ಹತ್ತುನಿಮಿಷಕ್ಕೊಮ್ಮೆ ಸಿ.ಎಂ. ಕಚೇರಿಯಿಂದ ಕರೆಗಳು ಬರುತ್ತಿವೆ ಎಂದು, ಇವಲ್ಲದೆ  ಮಾಧ್ಯಮಗಳು  ತನ್ನನ್ನು ಉಸಿರುಗಟ್ಟಿಸುತ್ತಿವೆ ಎಂದು, ನಾಳೆ , ಇಲ್ಲದಿದ್ದರೆ ನಾಡೆದ್ದೋ  ಮತ್ತೆ ಬಿಡುವು  ಮಾಡಿಕೊಂಡು ಫೋನ್ ಮಾಡುತ್ತೇನೆ” ಎಂದು  ಗೌರವ ಪೂರ್ವಕವಾಗಿ ಹೇಳಿ ಫೋನ್ ಕಟ್ ಮಾಡಿದ. “ಇನ್ನು ಸ್ವಲ್ಪ ಹೊತ್ತಿನಲ್ಲಿ  ಡ್ಯಾಮ್ ಪೂರ್ತಿಯಾಗಿ ಮುಳುಗಲಿದೆ. ಮತ್ತು ಈ ಕಾಂಕ್ರೀ ಟ್ ಕಲ್ಲಿನ ಕಟ್ಟಡ, ಈ ಆಧುನಿಕ ದೇವಾಲಯವು  ಎಷ್ಟರ ಮಟ್ಟಕ್ಕೆ   ಪ್ರಕೃತಿಯ ದಾಳಿಯನ್ನು ತಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ನೀರನ್ನು ಸಂಗ್ರಹಿಸಿ, ನೀರಿನ  ದಾರಿಯನ್ನು  ಬದಿಲಿಸಿ  ಮನುಷ್ಯ ಮಾಡಿತ್ತಿರುವ  ಈ ಅಪುರೂಪದ  ಪ್ರಯೋಗಗಳು ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿದಂತೆ  ಅಥವಾ ಪ್ರಕೃತಿಯನ್ನು   ಮನುಷ್ಯನು ಆಕ್ರಮಿಸಿದಂತೆಯೇ? … ಈ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ.   ಟಿವಿಯಲ್ಲಿ  ಯಾಂಕರ್  ಸುಮ್ಮನೆ ಬಡಬಡಾಯಿಸುತ್ತಿದ್ದಾನೆ .ಅವನಿಗೆ ಡ್ಯಾಮ್ ನಿಲ್ಲಬೇಕೆಂದು ಇದೆಯೋ ಅಥವಾ ಕೊಚ್ಚಿಕೊಂಡು ಹೋಗಬೇಕೆಂದಿದಿಯೋ, ಇಲ್ಲವೋ  ಅರ್ಥವಾಗುತ್ತಿಲ್ಲ.  ಕರೆಕ್ಟ್.  ರಿಪೋರ್ಟರ್ಸ್ ಗೆ ಆ ಡ್ಯಾಮ್ ಕೊಚ್ಚಿಕೊಂಡು ಹೋದರೂ ಸುದ್ದಿ, ನಿಂತರೂ ದೊಡ್ಡ ಸುದ್ದಿಯೇ . ಆದರೆ ಅವನಿಗೆ ತಿಳಿಯದ  ವಿಷಯ  ಆ ಡ್ಯಾಮ್  ಬಾಲಾರಿಷ್ಟದಿಂದ  ಆಲ್ರೆಡೀ  ಕೆಲವು ಸಲ ಕೊಚ್ಚಿಕೊಂಡು ಹೋಗಿದೆ ಎಂದು, ಈ ವಿಷಯವನ್ನು ಶಿವರಾಮಿರೆಡ್ಡಿ ಯವರೇ ಹೇಳಿದ್ದಾರೆ “. “ಅರವತ್ತಾರೋ, ಅರವತ್ತೇಳೋ, ನೆನಪಿಲ್ಲ,  ನವೆಂಬಾರ್ ನಲ್ಲಿ  ಕೆಲಸ ಶುರುಮಾಡಿ ಏಪ್ರಿಯಲ್ ವರೆಗೂ   ಮುಂದುವರೆಸೋಣ ಅಂದುಕೊಂಡೆವು. ನಾವು ದೊಡ್ಡ  ಸಂಖ್ಯಯಲ್ಲಿ  ಕೂಲೀಗಳನ್ನು, ಕಂಟ್ರಾಕ್ಟರ್ ಗಳನ್ನು ನಿಯೋಜಿಸಿದ್ದೇವೆ. ಈಗಾಗಲೇ ಕಾಫ ರ್ ಡ್ಯಾಮ್  ನಿರ್ಮಾಣ ಪೂರ್ಣಗೊಂಡಿದ್ದು, ನೀರನ್ನು ಹರಿಸುವ ಬಲಕಾಲುವೆ ನಿರ್ಮಾಣವೂ ಮುಗಿಸಿದ್ದರಿಂದ ಮಳೆ ಕಾಲವೆಲ್ಲಾ  ಸುರಿಯುವ ಮಳೆಯ ನೀರನ್ನೆಲ್ಲ ಬೇರೆಡೆಗೆ ತಿರುಗಿಸಿ  ಬೇಸಿನ್ ಖಾಳೀ ಮಾಡಿದೆವು. ಅಗೆಯುವ ಕೆಲಸ ನಡೆಯುತ್ತದೆ.  ಮರಳಿನ ಅಭಾವದಿಂದ ಸ್ವಲ್ಪ ತಡವಾದರೂ  ಬುನಾದಿ ಅಗೆದ ಮೇಲೆ  ಸುಮಾರು ನೂರು ಅಡಿಗಳ ವರೆಗೆ ಕಲ್ಲುಗಳನ್ನುಹಾಕಿ  ಕಟ್ಟೆಯನ್ನು ನಿರ್ಮಿಸಿದರು.   ಅದೇ ಉತ್ಸಾಹದಿಂದ , ಮತ್ತೆ ಮಳೆ ಬೀಳುವ ಮೊದಲೇ ನಾಲ್ಕು ನೂರು ಅಡಿಗಳು ನಿರ್ಮಾಣ ಮಾಡಬಹುದು.  ಸರಿಯಾಗಿ ಆಗಲೇ ಮಹಾ ಮುನಿಗಳ ಯಜ್ಞ-ಯಾಗಗಳನ್ನು  ವಿನಾಶ ಮಾಡಲು  ರಾಕ್ಷಸರು ಮಡಿಕೆಗಳಿಂದ  ನೀರನ್ನು ಹಾಕಿದಂತೆ…ದೊಡ್ಡ ಪ್ರಮಾಣದಲ್ಲಿ ..ರಭಸವಾಗಿ ಹರಿಯುವ ಪ್ರವಾಹ..ಎಲ್ಲೋ  ಬೇರೆ ಎಲ್ಲೋ  ಸುರಿಯುವ ಮಳೆಯಿಂದ  ಮುರಿದಿದ್ದ  ಕೆರೆಗಳು,  ಹರಿಯುವ ಹಳ್ಳಗಳು, ಆಶಿಸದ, ಊಹಿಸದ  ಎಡೆಬಿಡದಮಳೆ….ಆಗಾಗ ಅನ್ನಿಸುತ್ತದೆ – ಮಳೆ ಎಂದೂ ಹರ್ಷವನ್ನು ಕೊಡುತ್ತದೆಂದು ಹೇಳಲಾಗುವುದಿಲ್ಲ ಎಂದು. ಏನಾಗಿದೆ, ಎರಡೇ ಎರಡು ದಿನಗಳಲ್ಲಿ ನೂರು ಅಡಿಗಳ ಕಟ್ಟೆ ಬೇಸ್ ಮಟ್ಟಕ್ಕೆ  ಕುಸಿದುಕೊಂಡಿದೆ.  ಈಗಾಗಲೇ ಒಂದು ಸಲ ಎಲಿಮೆಂಟರಿ   ದಶಯಲ್ಲಿ ಹೀಗಾಯಿತು. ಅಶಗಳು ನಿರಾಶೆ ಯಾಗಿವೆ. ಅಂತ್ಯವಿಲ್ಲದ ಶ್ರಮ ವ್ಯರ್ಥವಾಯಿತು. ಆಗ ತಿಳಿಯಿತು – ಅಲ್ಲಿದ್ದ ಕಲ್ಲಿನ ಸ್ವರೂಪ. ಅದು ಮೇಲೆಕ್ಕೆ ಗಟ್ಟಿಯಾಗಿ ಕಾಣುತ್ತದೆ  ಆದರೆ, ಒಳ ಭಾಗ ದಲ್ಲಿ ಸ್ವಲ್ಪ ಟೊಳ್ಳಾಗಿದೆ. ಸೀಮೆಸುಣ್ಣದ ಶೇಕಡಾ ಹೆಚ್ಚು ಇರುತ್ತದೆ. ಇದನ್ನು ತಿಳಿದುಕೊಂಡನಂತರ, ಸಂಪೂರ್ಣ ಕಲ್ಲಿನ ನಿರ್ಮಾಣವು  ಒಳ್ಳೆಯದಲ್ಲ ಎಂದು,  ಎಂದಾದರೂ ಅಪಾಯಾಕಾರಿಯೇ ಎಂದು ಗ್ರಹಿಸಿ, ತಕ್ಷಣವೇ ಕಾಂಕ್ರೀಟ್  ನಿರ್ಮಾಣನಕ್ಕೆ ಬದಲಿಸಿದರು.   ಆಗಿನ ಅಧಿಕಾರಿಗಳಿಗೆ ಎಷ್ಟು ಮೇಲ್ವಿಚಾರ ಇರುತ್ತದೋ ಅಷ್ಟು ಜವಾಬ್ದಾರಿಯೂ ಇರುತ್ತಿತ್ತು. ಎಪ್ಪತ್ತರ  ದಶಕಗಳ ಕೊನೆಗೆ ಬರುವ ಸಮಯಕ್ಕೆ, ಕೆಲಸಗಳನ್ನು ವೇಗಗೊಳಿಸಬೇಕಾಗಿತ್ತು. ಬೆಳಗ್ಗೆ ಆರು ಅಥವಾ ಏಳು ಗಂಟಕ್ಕೆ ಶುರುವಾದ ಕೆಲಸಗಳು ಸಂಜೆಯ ಹೊತ್ತಿಗೆ ಮುಗಿಯುತ್ತಿದ್ದವು.  ಆಗಾಗಲೇ

ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು Read Post »

ಕಾವ್ಯಯಾನ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ”

ಕಾವ್ಯ ಸಂಗಾತಿ ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” ಒಮ್ಮೆ ಎಳ್ಳು ಒಮ್ಮೆ ಬೆಲ್ಲಬದುಕಿದು ನೋವು ನಲಿವುಗಳ ಸಂಕ್ರಮಣ ಇಲ್ಲಿ ಬೇಲಿ ಅಲ್ಲಿ ಹಾದಿಬದುಕಿದು ಪಥ ಬದಲಿಸುವ ರಥಸಪ್ತಮಿ ನಿನ್ನೆ ಶಿಶಿರ ಎಂದು ವಸಂತಬದುಕಿದು ಹಲವು ಋತುಗಳಲ್ಲಿ ಪರಿಭ್ರಮಣ ಮುಳುಗುವ ಸೂರ್ಯ ಹೊತ್ತುವ ದೀಪಬದುಕಿದು ಕತ್ತಲೆ ಬೆಳಕಿನ ನಡುವಿನ ಆವರ್ತನ ಅಲ್ಪ ಸುಖ ಸಾಕಷ್ಟು ಕಷ್ಟಬದುಕಿದು ಸಮ್ಮಿಶ್ರ ನಗರ ಸಂಕಲನ   ಸಾಸಿವೆಯಷ್ಟು ನಗು ಸಾಗರದಷ್ಟು ಅಳು ಬದುಕಿದು ಪ್ರತಿಪಕ್ಷ  ಹೊಂದಾಣಿಕೆಯ ಹೂರಣ ಆ ಕಣಿವೆ ಈ ಬೆಟ್ಟಬದುಕಿದು ದಿನನಿತ್ಯ  ಇಳಿದೇರುವ ಚಾರಣ ಒಮ್ಮೆ ಜನನ ಒಮ್ಮೆ ಮರಣಬದುಕಿದು ವಿಧಿ ವಿಲಾಸದ ಸಂಕೀರ್ತನ ದಾಕ್ಷಾಯಣಿ ಶಂಕರ ಹುಣಶ್ಯಾಳ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” Read Post »

ಪುಸ್ತಕ ಸಂಗಾತಿ

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ.

ಪುಸ್ತಕ ಸಂಗಾತಿ ಮಧು ಮಾಲತಿ. ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” “ದೇಶ ಸುತ್ತು ಕೋಶ ಓದು”” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ˌಹಿರಿಯರು ˌ ಸಾಹಿತಿಗಳು ˌಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ . ಇಲ್ಲಿ ಮೂಡಿ ಬಂದಿರುವ ಅನೇಕ  ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ. ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ. ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ˌ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ .ಶ್ರೀಯುತರು ಮುಂದುವರೆಯುತ್ತಾ ಮೂಗೂರು ತ್ರಿಪುರ ಸುಂದರಿ  ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ . ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ . “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ  ಮುಕ್ತಿ ಎನ್ನುತ್ತಾರೆ.ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ .ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ  ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ  ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ. ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ. ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು  ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.  ತೇರು ಹರಿದಾವೋ ತಾನಕ್ಕೆ ನಿಂತಾವೋ ತಾರೋ ಚನ್ನಯ್ಯ ಜವನವಾ ತಾರೋ ಚೆನ್ನಯ್ಯ ಜವನವಾ ಬಾಳೆಹಣ್ಣುಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ ಎನ್ನುತ್ತಾ ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ  ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ .ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ. ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ  ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯಸ್ವಾಮಿ ನಿನ್ನ ಮದುವೆ ಶನಿವಾರಎಂದು ಹಾಡಿ ಹೊಗಳುತ್ತಾರೆ.  ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣದುಂಡು ಮಲ್ಲಿಗೆ ಮಕರಂದಬೇಟ್ಗಾರರಂಗನೇರ್ಯಾನೆ  ಹೊಸ ತೇರು  ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ  ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ  ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ .ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ  ಗೊರೂರು ಅನಂತರಾಜುರವರ ಈ ಕೃತಿ  ಸಾರಸ್ಪತಲೋಕ  ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.  ಮಧುಮಾಲತಿ ರುದ್ರೇಶ್

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ. Read Post »

You cannot copy content of this page

Scroll to Top