ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಕಾವ್ಯ ಸಂಗಾತಿ “ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಒಬ್ಬ ಬಡವನ ಮನೆ ಮುಂದೆನಾನು-ಕಿರಿ ಕಿರಿ ಮಾಡಿದೆಅವನ ಹಸಿವಿನ ಶಾಪವುಲಂಚದ ರೂಪವುನನ್ನ ಕೈಸೇರಿತು ಯಾರದೋಬೆವರಿನ ಹಣಬೇಕರಿಯ ಮುಂದೆ ಕುಳಿತುಬನ್ನು ತಿನ್ನುತ್ತಿದ್ದೆಹಸಿದ ನಾಯಿಯೊಂದುಜೊಲ್ಲು ಸುರಿಸಿನೋಡುತ್ತಿತ್ತುಒಂದು ತುಂಡು ಬನ್ನು ಎಸೆದೆಗಬಕ್ಕನೆ ನುಂಗಿಬಾಲ ಅಲ್ಲಾಡಿಸಿತುಮತ್ತೊಂದು ತುಣುಕು ಹಾಕಿದೆಅದು-ಚಿರಪರಿಚಿತನಂತೆ ಹತ್ತಿರಬಂದುನನ್ನ ಕಾಲು ಮೂಸಿತುನನಗನಿಸಿತು….ನಾಯಿ ಪ್ರಾಣಿ ಹಸಿದುಮೂಕ ಭಾಷೆಯಲಿಬೇಡುತಿದೆಅದರ ತಪ್ಪಲ್ಲನಾನು ಮಾತ್ರ ಎಲ್ಲವೂಇದ್ದೂಕಸಿದುಕೊಳ್ಳುವಒಬ್ಬ ಭಿಕ್ಷುಕನೆ! ಯಾರಿಂದಲೋ ಪಡೆದೆಅವರ ದುಡಿಮೆಯ  ಹಂಗುಯಾರಿಗೂ ನೀಡದೆಮನೆಗೆ ನಡೆದೆ ಹಿಂದೆ ತಿರುಗಿದೆಅದೇ ನಾಯಿ ಬೆನ್ನ ಹಿಂದೆಎಂತಹ ಕಕ್ಕುಲಾತಿ ಅದಕೆ?ಮತ್ತೆ ಬಾಲ ಅಲ್ಲಾಡಿಸಿತುಮೈಯ ಸವರಿದೆ ಅಂದಿನಿಂದ ಇಂದಿಗೂಎನ್ನ ಮನೆಯ ಕಾಯುತಿದೆತಿಂದ ಒಂದೇ ಅಗುಳಿಗೆತುತ್ತಿನ ಋಣ ತೀರಿಸಲು ಆದರೆ…….?ಈ ನರ ಪ್ರಾಣಿಯಾದ ನಾನುಯಾವ ಋಣವೂತೀರಿಸದೆಮಹಾ ಭಿಕ್ಷುಕ! ಆ ನಾಯಿಗಿರುವ ನಿಯತ್ತು ನನಗಿಲ್ಲಬಿಸಾಡಿದ ಬನ್ನುನನ್ನಲ್ಲದಿದ್ದರೂಅದು ಸಲ್ಲಿಸಿದಕೃತಜ್ಞತೆ ಮಾತ್ರಪರಮ ಸತ್ಯ ಕೊಟ್ಟವನು ಬಡವನಾದರೂಅವನೇ ಸಹೃದಯಿಶ್ರೀಮಂತತಿಂದವನು ನಾನಾದರೂನಾನಿಲ್ಲಿ ಬೇಡಿದವ ಅಯ್ಯೋವಿಪರ್ಯಾಸವೆ……ನಾಯಿಯೇ ಮೇಲುನರನಾಗಿನಾನೇ ಮಹಾ ಬಿಕ್ಷುಕ ————-ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು”

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ನಗುವವನು” ಮೌನದಲ್ಲೇ ಅನೇಕಯುದ್ಧಗಳನ್ನು ಸೋಲಿಸಿ,ತನ್ನೊಳಗಿನ ಭರವಸೆಯನ್ನು ಕಾಪಾಡಿಕೊಂಡು,ವಿಫಲತೆಯ ನೆರಳಲ್ಲೂಬೆಳಕನ್ನು ಹುಡುಕಿ ನಗುವನ್ನೇಆಯುಧವನ್ನಾಗಿಸಿಕೊಂಡವನು. ಬದುಕು ಎಷ್ಟೇ ಪರೀಕ್ಷಿಸಿದರೂಅವನ ಮನಸ್ಸು ಸೋಲನ್ನು ಒಪ್ಪಲಿಲ್ಲ.ನಗುವಿನ ಹಿಂದೆ ಇರುವ ಸ್ಥೈರ್ಯವೇಅವನ ಅಸ್ತಿತ್ವದ ನಿಜವಾದ ಶಕ್ತಿ. ಪರಿಸ್ಥಿತಿಗಳು ಎಷ್ಟೇಬಿರುಗಾಳಿಯಾಗಿ ಬೀಸಿದರೂಅವನು ತನ್ನ ಆತ್ಮದ ದಿಕ್ಕು ತಪ್ಪಿಸಲಿಲ್ಲ.ಬಿದ್ದ ಜಾಗದಲ್ಲೇ ಪಾಠ ಕಲಿತುಮತ್ತೆ ನಿಂತು ನಡೆಯುವ ಧೈರ್ಯ ಅವನದು.ಅವನ ನಗು ಮೋಸವಲ್ಲ,ಅದು ಬದುಕಿಗೆ ನೀಡಿದ ಸವಾಲು. ನೋವನ್ನೇ ನೆಲೆಯಾಗಿ ಮಾಡಿಕೊಂಡುಆಸೆಯನ್ನು ಅರಳಿಸಿದ ಕಡಲು ಅವನು.ಅಲೆಗಳು ಎಷ್ಟೇ ಅಪ್ಪಳಿಸಿದರೂಆಳದಲ್ಲಿ ಶಾಂತಿಯನ್ನು ಕಾಪಾಡುವವನು. ——— ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು” Read Post »

ಕಾವ್ಯಯಾನ

“ಸ್ನೇಹದ ಕಡಲು”  ವಿಜಯಲಕ್ಷ್ಮಿ ಹಂಗರಗಿ

ಕಾವ್ಯ ಸಂಗಾತಿ  ವಿಜಯಲಕ್ಷ್ಮಿ ಹಂಗರಗಿ ಸ್ನೇಹದ ಕಡಲು ಹಲವು ನದಿಗಳು ನಿನ್ನೊಂದಿಗೆ ಬೆರೆತಿವೆವೈವಿಧ್ಯಮಯ ಜೀವರಾಶಿ ಒಡಲೊಳಗೆ ಅಚ್ಚರಿಯಜೀವ ರಾಶಿ ಅಡಗಿದೆನೀನಲ್ಲವೇ ಸ್ನೇಹ ಕಡಲು ಒಲವಿನ ಒಡಲು // ಮನುಷ್ಯನೊಂದಿಗೆ ಅವಿನಾಭಾವ ಸಂಬಂಧನೀನಿಲ್ಲದೆ ಬದುಕಿಲ್ಲ ವೈವಿಧ್ಯಮಯ ಮೀನುಗಳುನಿನ್ನ ಉದರದಲ್ಲಿ ಅಡಗಿವೆ ನೀನೊಂದು ಅದ್ಭುತಅವಿಸ್ಮರಣೀಯತಾಣ!ಜನಮಾನಸದಲ್ಲಿಉಳಿಯುವ ಸಂಭ್ರಮದ ಕ್ಷಣ… ಬಣ್ಣ ಬಣ್ಣದ ಸುಂದರ ಮೀನುಗಳು, ಸಸ್ತನಿಚಿಕ್ಕ- ದೊಡ್ಡ , ಉದ್ದಗಲ ಬೃಹಕಾರದ ಜಲಚರಗಳುಹವಳ ಮುತ್ತುಗಳರಾಶಿ ಸುರಿದಿದೆ ಅಂಗಳದಲ್ಲಿ ಆಡಿನಲಿವ ಹೂ… ಮೊಸಳೆ ತಿಮಿಂಗಿಲಗಲಿಗಿಲ್ಲ ಭಯ!ನಿನ್ನ ಹೃದಯದಲ್ಲಿ ಆಡುವ ಅಪೂರ್ವ ಜೀವರಾಶಿಗಳು ಆಳಕ್ಕೆ ಹೋದಂತೆಲ್ಲ ಕುತೂಹಲ ಅಗೋಚರ ಜಲಚರಗಳು ಅವುಗಳ ಅಡಿಯಲ್ಲಿ ಅನೇಕ ಬಗೆಯ ಸಸ್ತನಿಗಳು ಕಣ್ಮನ ಸೆಳೆಯುವ ಅಂದಮಾನವ ಸ್ನೇಹಿ ಕಡಲು… ನಿನ್ನ ಏರಿಳಿತ ಕುಣಿತ ನೋಡಲೇಷ್ಟು ಚಂದ ಸುಂದರ ಸಂಜೆ ಸಮಯ ನಿನ್ನ ಅಬ್ಬರ ಹೇಳತಿರದು, ಹುಣ್ಣಿಮೆಯ ದಿನವಂತೂ ನಿನ್ನ ನೋಡಲು ಸಾಗರೋಪಾದಿಯಲ್ಲಿ ಬರುವರು ಜನಅನತಿ ದೂರದಿಂದ ಬರುವ ನಿನ್ನ ಅಲೆಗಳೊಂದಿಗೆ ಚೆಲ್ಲಾಟ… ಆಡುವ ಮಕ್ಕಳು ಯುವ ಪ್ರೇಮಿಗಳು ವೃದ್ಧರು ಕೈ ಕಾಲು ಬಡಿಯುತ್ತಾಬಡಿತದ ರಬಸಕ್ಕೆ ನೀರು ಮುತ್ತಿನಂತೆ ಮುತ್ತನ್ನು ಚೆಲ್ಲಿದಂತೆ ಸಾಗರಕ್ಕೆ ಬೀಳುವ ಆ ಮನೋಹರ ದೃಶ್ಯ ಕಣ್ಮನ ತುಂಬಲು ಹರುಷ …. ಸೂರ್ಯೋದಯ, ಸೂರ್ಯಾಸ್ತದಿ ಕೆಂಪು ದೀಪ ಉರಿದಂತೆ ಬಂಗಾರದ ನೇಸರ ಹರಡಿದಂತೆ ಚೆಲುವಿನ ಚಿತ್ತಾರ ನಯನ ಮನೋಹರ ನೋಟ ಪ್ರೇಮಿಗಳ ಸ್ನೇಹ ಕಡಲು ನೀನು… ಎತ್ತ ನೋಡಿದತ್ತ ನೀರೇ ನೀರು ಮುಗಿಲು ಭೂಮಿ ಕೂಡಿದಂತೆ ನೋಟ ಅಲ್ಲಲ್ಲಿ ಗಿಡಗಳಿಂದ ಆವರಿಸಿದ ದ್ವೀಪಗಳು ಹಡಗು ಬೊಟಿನಲ್ಲಿ ರಮ್ಯ ಸ್ಥಾನಗಳ ವೀಕ್ಷಿಸಲು ಪಯಣ… ಕಡಲ ತಟದಿ ಎತ್ತರದ ತೆಂಗಿನ ಮರ, ವಿಲ್ಲಾಗಳು ಸುಂದರ ಸೊಬಗುಸಾಗರ ತಟದಲ್ಲಿ ಹರಡಿರುವ ಮರಳು ಅಲ್ಲಲ್ಲಿ ಶಂಖ ಚಿಪ್ಪುಗಳ ಬಣ್ಣ ಬಣ್ಣದ ಸುಂದರ ಕಲ್ಲುಗಳ ಮಧ್ಯೆ ಬರಿಗಾಲಿನದಿ ನಡೆದಾಡುವ ಹೆಜ್ಜೆಯ ಗುರುತು ಅಬ್ಬ ಎಂಥಹ ಸುಂದರ ನೋಟ … ಮೀನುಗಾರರಿಗೆ ಅಲ್ಲಿಯ ನಿವಾಸಿಗಳಿಗೆ ನೀನು ಕೊಟ್ಟಿರುವ ಈ ಬದುಕುನೀನಿರದಿದ್ದರೆ ಅವರದು ಬವಣೆ ಊಹಿಸಲು ಅಸಾಧ್ಯ!ಜೀವನಕ್ಕೆ ಜೀವ ಕೊಟ್ಟ ನಿಧಿ ನೀನುಸ್ನೇಹದ ಕಡಲು ನೀನು… ನೀ ಮುನಿಯಲು ಸುನಾಮಿ ಸಂಕಟ ಮುಗಿಲೆತ್ತರಕ್ಕೆ ಆರ್ಭಟ ಊರಿಗೆ ಊರು ಜಲ ಸಮಾಧಿ ಅರ್ಭಟಿಸುವೆಆರ್ಭಟಿಸಿ ಹುಟ್ಟಿಸದಿರು ದ್ವೇಷ ಕಳೆದು ಸ್ನೇಹ ಪ್ರೀತಿ ನೀಡು ಸಕಲ ಜೀವಕೆ ಜೀವಾತ್ಮ ನೀನೇ ಸ್ನೇಹದ ಕಡಲು… ಬಸವಾದೀಶರಣರಂತೆ ಶಾಂತ ಸಾಗರ ಜಗದ ನೋವನ್ನುಂಡು ಪ್ರಶಾಂತ ಮೆರೆದ ಕಡಲು, ಒಡಲು ನೀಏಕ ಚಿತ್ತದಿ, ಪ್ರಸನ್ನತೆಯಿಂದ ಕೂಡಿದ ಮಡಿಲು ನಿನ್ನದುನಿನ್ನಂತೆ ನಾನಾಗುವೆ ಸ್ನೇಹದ ಕಡಲು… ————- ವಿಜಯಲಕ್ಷ್ಮಿ ಹಂಗರಗಿ

“ಸ್ನೇಹದ ಕಡಲು”  ವಿಜಯಲಕ್ಷ್ಮಿ ಹಂಗರಗಿ Read Post »

ಕಾವ್ಯಯಾನ

“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್

ಕಾವ್ಯ ಸಂಗಾತಿ “ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ ನನ್ನವನ ಸ್ವಗತ ನೀನಿಲ್ಲದೆ….. ಏಳಬೇಕು ಎಬ್ಬಿಸಲು ನೀನಿಲ್ಲಅಲಾರಾಂ ಹೊಡೆದುಕೊಳ್ಳುತ್ತದೆಈಗ ನಿನಗೆ ನಾನೇ ಗತಿ ಏಳುತ್ತೇನೆ ಅಡುಗೆ ಮನೆ ಕಡೆ ನೋಡುತ್ತೇನೆ.ಬಳೆಗಳ ಸದ್ದಿಲ್ಲದೆ ಸುಮ್ಮನಾಗುತ್ತೇನೆಪೆದ್ದನಂತೆ ಬಿಸಿ ನೀರು ಕಷಾಯ ಕಾಫಿ ಕುದಿಸುವವರಿಲ್ಲನಾನೇ ಕುದಿಯುತ್ತೇನೆ ಒಮ್ಮೊಮ್ಮೆಎದುರಾಳಿ ನೀನಿಲ್ಲದೆ ಕಸಗುಡಿಸಿ ನೀರು ಚಿಮುಕಿಸುತ್ತೇನೆತಳಿವುಂಡ ಅಂಗಳ ಅಣಕಿಸುತ್ತದೆರಂಗೋಲಿ ಎಳೆಯುವ ನೀನಿಲ್ಲದೆ ಅಡುಗೆ ಮನೆಯೊಳಗೆ ಬರುತ್ತೇನೆಏನಾದರೊಂದನ್ನು ಬೇಯಿಸಿಕೊಳ್ಳಲೇಬೇಕುಹೊರಗಡೆ ಏನನ್ನು ತಿನ್ನುವ ಹಾಗಿಲ್ಲ ಮೂರು ಗೆರೆ ದಾಟಲಾರದ ಸಂಕಟಕೈಸುಟ್ಟುಕೊಳ್ಳುವುದುಅನಿವಾರ್ಯ ನಾನು ನಳನಂತೆ ಅಲ್ಲದಿದ್ದರೂ ಒಲೆಯ ಮೇಲಿಟ್ಟ ಹಾಲು ಉಕ್ಕದಂತೆಮಾಡಲಿಟ್ಟ ಉಪ್ಪಿಟ್ಟು ತಳ ಹತ್ತದಂತೆನೋಡಿಕೊಳ್ಳಬೇಕು ಮೈ ತುಂಬಾ ಕಣ್ಣಾಗಿ ಸ್ನಾನಕ್ಕೆ ಬಿಟ್ಟುಕೊಂಡ ಬಿಸಿನೀರುತುಂಬಿ ಹೊರ ಚೆಲ್ಲುತ್ತದೆಗ್ಯಾಸ್ ವೇಸ್ಟ್ ಆಗುತ್ತೆ ಎಂದು ಮಕ್ಕಳಿಗೆ ಬಯ್ಯುವನಾನು ಈಗ ಅವಳಿಲ್ಲದೆ ನಾನೇ ಮಗುವಾಗಿದ್ದೇನೆ ಏನೊಂದು ತೋಚದು ಅವಸರದಲ್ಲಿಟಿಫಿನ್ ಬಾಕ್ಸ್ ಸಿದ್ಧಗೊಳಿಸಿಕೊಳ್ಳುವುದುದೊಡ್ಡ ಯುದ್ದದಿನವೂ ಅವಳ ಮೆನು ಮೆಸೇಜ್ನೋಡಿ ಸಾಕಾಗಿ ಬಿಟ್ಟಿದೆ ಸ್ವೀಟ್ ಅಂತೆ ಹಣ್ಣಂತೆ ಕಾಳುಗಳಂತೆಮತ್ತೆ ಮೇಲೆ ಟಿಫನ್ ಅಂತೆಅಯ್ಯೋ…. ಯಾಕಾದರೂಹೋದಳೊ ಇವಳು ಊರಿಗೆ ಏನಾದರೊಂದು  ಮರೆಯುತ್ತೇನೆಗಡಿಬಿಡಿಯಲ್ಲಿ ಪುಸ್ತಕ ಪೆನ್ನು ಡೈರಿಒಮ್ಮೊಮ್ಮೆ ಮೊಬೈಲ್ ಬೈಕ್ ಕೀ ಮತ್ತೆ ಒಳಗೆ ಬರುತ್ತೇನೆಹಿಂಬಾಗಿಲು ಮುಂಭಾಗಲುಲಾಕ್ ಮಾಡಿದ್ದೇನೊ ಇಲ್ಲವೋಎನ್ನುವ ಸಂಶಯ ಹೀಗೆ …. ಅವಳು ಹೋದಾಗಿನಿಂದದಿನಚರಿಯ ದಿಕ್ಕು ತಪ್ಪಿದೆ ————– ಡಾ. ಮೀನಾಕ್ಷಿ ಪಾಟೀಲ್

“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ Read Post »

ಪುಸ್ತಕ ಸಂಗಾತಿ

ಜಗದೀಶ ಹಾದಿಮನಿ ಅವರ ಕಥಾ ಸಂಕಲನ “ಅಬುಚಾ ..! ಅಬುಚಾ..!”ದ ಬೆನ್ನೇರಿ.

ಪುಸ್ತಕ ಸಂಗಾತಿ ಜಗದೀಶ ಹಾದಿಮನಿ “ಅಬುಚಾ ..! ಅಬುಚಾ..!” ಒಂದು ಅವಲೋಕನ ಶಂಕರಾನಂದ ಹೆಬ್ಬಾಳ ಅಬುಚಾ ಅಬುಚಾದ ಬೆನ್ನೇರಿ…. ಪುಸ್ತಕ : ಅಬುಚಾ ..! ಅಬುಚಾ..!ಲೇಖಕರು : ಜಗದೀಶ ಹಾದಿಮನಿಕಥಾ ಸಂಕಲನಪ್ರಕಾಶನ: ಪಂಚಮಿ ಪ್ರಕಾಶನ ನಾಡಿನ ಹೆಮ್ಮೆಯ ಕಥೆಗಾರ ಜಗದೀಶ ಹಾದಿಮನಿ ಅವರ ಅಬುಚಾ ಅಬುಚಾ ಕಥಾ ಸಂಕಲನ ಕಥಾ ಸಾಹಿತ್ಯಕ್ಕೆ ವಿಶೇಷ ಕೊಡುಗೆ. “ಮತಿದರ್ಪಣೆ ಕವಿನಾಂ ವಿಶ್ವಂ ಪ್ರತಿಫಲತಿ” ಎಂಬ ಕವಿವಾಣಿಯಂತೆ ಕವಿಯ ಮತಿಯೆಂಬ ಕನ್ನಡಿಯಲ್ಲಿ ಇಡಿ ವಿಶ್ವವೆ ಗೋಚರಿಸುತ್ತದೆ.ಅಂತಹ ಜ್ಞಾನನಿಧಿಯಾದ ಕಥೆಗಾರ ಸಹೋದರ ಜಗದೀಶ ಹಾದಿಮನಿ ಈ ನಿಟ್ಟಿನಲ್ಲಿ ಒಳ್ಳೆಯ ಹೃದ್ಯಮಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ವಾಸ್ತವಿಕತೆಯ ತಲ್ಲಣಗಳನ್ನು, ನಿತ್ಯ ನಡೆಯುವ ಘಟನೆಗಳನ್ನು ಹೃದ್ಯಮಯವಾಗಿ ಹೆಣೆದು ಓದುಗರಿಗೆ ಮುಟ್ಟಿಸುವ ಶೈಲಿ ನಿಜಕ್ಕೂ ಶ್ಲಾಘನೀಯ. ಮೊದಲನೆ ಹೆಜ್ಜೆಯಲ್ಲಿ ಅಬುಚಾ ಅಬುಚಾ….ಕಥೆಯಲ್ಲಿ ಚಿಕ್ಕ ಮಗುವಿನ ಹಠ ಸ್ವಭಾವ ಎಂತೆಂಥಾ ಸಮಸ್ಯೆಗಳನ್ನು ತಂದೊಡ್ಡಿತು ಹಾಗೂ ಇಡಿ ಊರನ್ನೆ ತಲ್ಲಣಗೊಳಿಸಿತು ಎಂಬುದನ್ನು ಸ್ವತಃ ಕಥೆಗಾರರೆ ದಾಖಲಿಸಿದ್ದಾರೆ.ಇದು ಗೋರೂರರ ಕಥೆಯೊಂದನು ನೆನಪಿಸುತ್ತದೆ‌. ಮಗುವಿನ ಹಠಕ್ಕೆ ಕಾರಣವೇನು ಎಂದು ಹುಡುಕುವಲ್ಲಿ ಇಡಿ ಮನೆ ಹಾಗೂ ಊರಿಗೆ ಊರೆ ವಿಫಲವಾಗುತ್ತದೆ. ಮಗುವಿಗೆ ಹೊಟ್ಟೆ ಹಸಿದಿರಬಹುದು ಎಂದು ವೈದ್ಯರ ಹತ್ತಿರ ಕರೆದುಕೊಂಡು ಹೋಗುವಾಗ ಮಗುವಾಗುವ ಬದಲು “ಸಿಡಿಗುಂಡನು ಎತ್ತಿಕೊಂಡು ” ಎಂದು ರೂಪಕವನ್ನು ಬಳಸುತ್ತಾರೆ ಕಾರಣ ಆ ಅತಿರೇಕದ ಅಬುಚಾದ ಹಠಕ್ಕೆ ಬೇಸತ್ತಿತ್ತು.ಕೊನೆಗೆ ಹುಡುಗಿಯ ಅಣ್ಣ ಅದರ ಸಾಂತ್ವನಕ್ಕೆ ಮುಂದಾಗುತ್ತಾನೆ, ಎಲ್ಲೈತಮ್ಮ ತೋರ್ಸು ಎಂದಾಗ ಕಾಟಾದ ಮೂಲೆಯನ್ನು ತೋರಿಸಿತು. ಕೊನೆಯಲ್ಲಿ ಕಸದ ರಾಶಿಯಲ್ಲಿ ಸಿಕ್ಕ ಚಮಚದಿಂದ ನೆಮ್ಮದಿ‌ ಸಿಗುವ ಅಬುಚಮ್ಮಳ ಕಥೆ ಓದುಗರ ಮನ ಗೆಲ್ಲುತ್ತದೆ. ಕಾವೇರಮ್ಮ ಸರಳ ಸುಂದರ ಕಥೆಯಾಗಿದ್ದು ನಿತ್ಯ ಜೀವನದಲ್ಲಿ‌ ನಡೆಯುವ ಘಟನೆಯೆ ಆಗಿದ್ದು ಕಾವೇರಮ್ಮನ ಮಗ ವೃತ್ತಿಯಿಂದ ಪೋಲಿಸ ಅಧಿಕಾರಿಯಾಗಿದ್ದಾನೆ. ಮಗನೆಂದರೆ ಮಮಕಾರ ಆ ತಾಯಿಗೆ. ಆ ಊರಿಗೆ ಅವನೊಬ್ಬನೆ ನೌಕರಸ್ಥ ಎಂಬುದನ್ನು ಕಥೆಗಾರ ಎಚ್ಚರಿಸುವ ಸಂದೇಶ ಹಳ್ಳಿಗಳಲ್ಲಿಯೂ ಕೂಡಾ ವಿದ್ಯಾವಂತರಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ.ಕಾವೇರಮ್ಮನ ಮಗನಿಗೆ ಮದುವೆಯಾಗಿ ನಂತರ ಆತ ಊರನ್ನೆ ಮರೆಯುತ್ತಾನೆ.ತಾಯಿಯು ಆಗಾಗ ಹೋಗಿ ಬರುವುದು ,ಮಗನ ಅಕ್ಕರೆಯಿಂದ ತಾಯಿ ವಂಚಿತಳಾಗಿ ಕೊನೆಗೆ ಮಗನ ಹತ್ತಿರ ಹೋಗಲೆ ಬಾರದೆಂಬ ಧೃಡನಿರ್ಧಾರಕ್ಕೆ ಬಂದರೂ ಮೊಮ್ಮಕ್ಕಳ ಬಾಂಧವ್ಯ ಆ ಕಡೆ ಎಳೆಯುತ್ತದೆ.ಅತ್ತೆಯನ್ನು ಮನೆಯ ಕೆಲಸದವಳಂತೆ ನೋಡಿಕೊಂಡ ಸೊಸೆಯು ಕೊನೆಯಲ್ಲಿ ಊರು ಸುತ್ತುವ ನೆಪದಲ್ಲಿ ಅತ್ತೆಯನ್ನು ನಂಬಿಸಿ ಧನ್ನೂರು ಹೊಳೆಯಲ್ಲಿ ತಳ್ಳಿ ಜಾರಿ ಬಿದ್ದಳೆಂದು ನಂಬಿಸುವ ಕಪಟತನವನ್ನು ಮಗುವಿನ ಮಾತಿನಲ್ಲಿ ಎತ್ತಿ ತೋರಿಸುವ ಜಾಣ್ಮೆ ಅಸಾಮಾನ್ಯ ಕಥೆಗಾರರಿಗೆ ಮಾತ್ರ ಸಾಧ್ಯವಾಗುತ್ತದೆ. ಮಾತಿನ‌ಬೆನ್ನು ಹತ್ತಿ ಕಥೆಯಲ್ಲಿ ಹೆರಿಗೆಗಾಗಿ ತವರಿನಲ್ಲಿ ರೇವತಿ ಗಂಡನಿಗಾಗಿ ಕಾಯುವ ಹಪಾಹಪಿ,ಹೊಲದ ಕೆಲಸದಲ್ಲಿ ಮಗ್ನನಾಗಿ ಕೊನೆಗೆ ಬರುತ್ತೆನೆ,ಬರುತ್ತೆನೆ ಎಂದು ದಿನ ತಳ್ಳಿ ಬರುವಾಗ ಆಕಸ್ಮಾತ ಅಪಘಾತವಾಗಿ ಸಾಯುವ ದುಃಸ್ಥಿತಿ ಎದುರಾಯಿತು. ಇತ್ತ ಅವಳಿಗೆ ಪ್ರಸವ, ಸೂಲಗಿತ್ತಿಯ ನಂಜಮ್ಮನ ನಗೆಚಾಟಿಕೆಯಲ್ಲಿ ತೇಲುತ್ತ ತನ್ನನ್ನೆ ತಾ ಮರೆತಿದ್ದಾಳೆ.ಗಂಡ ಅವಸರದಲ್ಲಿ ಬರುವಾಗ ಇಹಲೋಕ ತ್ಯೆಜಿಸಿದ್ದು ಆಕಗೆ ಗೊತ್ತಿಲ್ಲದೆ ಹೋದದ್ದು ಎಂತಹ ವಿಪರ್ಯಾಸ. ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತ್ತಿದ್ದವು ಕಥೆ ಪ್ರೇಮದ ಪರಿಯನ್ನು ಬಿಚ್ಚಿಡುತ್ತದೆ. ಕಥೆಯಲ್ಲಿ ನಾಯಕಿ ಐಎಎಸ್ ಅಧಿಕಾರಿ ನಾಯಕ ಅರೆಹುಚ್ಚ, ಹೈಸ್ಕೂಲ ಟೀಚರ ಆದಾಗಿನಿಂದ ಆಕೆಯನ್ನು ಮನಸಾರೆ ಪ್ರೀತಿಸಿ ಕೊನೆಗೆ ಕೈಗೆ ಸಿಗದೆ ಆಕೆ ಬೇರೊಬ್ಬನನ್ನು ಇಷ್ಟಪಟ್ಟು ಮದುವೆಯಾಗಿ ಕೊನೆಗೆ ಇತನೆ ಅವಳನ್ನು ಹುಡುಕಿಕೊಂಡು‌ ಮಾತನಾಡಿಸಿ ಹೋಗುವ ಸ್ಥಿತಿ ಓದುಗರಿಗೆ ಕಂಬನಿ ಉಕ್ಕಿಸುತ್ತದೆ. ಅಲ್ಲಿಂದ ಏನು ಕೊಟ್ಟರೂ ಬೇಡವೆನ್ನುವ ಆತ ಹಾಗೆ ನಿರ್ಗಮಿಸುತ್ತಾನೆ.ಹೊರಗಡೆ ದಾರಿಯಲ್ಲಿ ಗಿಡದ ಹತ್ತಿರ ಕುಳಿತಾಗ ಪೋಲಿಸರ ಈತನ ಬಳಿಗೆ ಬಂದು ಇನ್ನೊಬ್ಬ ಎಲ್ಲಿ…? ಎಂಬ ಪ್ರಶ್ನೆ ಕೇಳಿ ಶೂಟ್ ಮಾಡುವ ದೃಶ್ಯ ಎದೆ ಝಲ್ಲೆನಿಸುತ್ತದೆ.ಆಗಲೂ ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತಿದ್ದವೆಂಬ ಅಸಹನೀಯ ದನಿಯಲ್ಲಿಅಮಾಯಕನ ಮನಸಿನ ನುಡಿಗಳನ್ನು ವರ್ಣಿಸುವ ಪರಿ ಅದ್ಬುತ. ಭೂಮಿ ಇದೊಂದು ಮಹಿಳಾಪರ ಕಥೆಯಾಗಿದ್ದು ಗಂಡು ಸಂತಾನಕ್ಕಾಗಿ ಸಿದ್ದಮ್ಮ ಮತ್ತು ಗಿರೆಪ್ಪ ಹುಟ್ಟಿದ ಹೆಣ್ಣು ಮಕ್ಕಳನೆಲ್ಲ ಒಂದೊಂದಾಗಿ ಕರುಣೆಯಿಲ್ಲದೆ ಕೊಲ್ಲುವುದು ಒಂದು ಪ್ರವೃತ್ತಿಯಂತೆ, ಮೊದಮೊದಲು ನಿಧಿ ಹುಡುಕುವ ನೆಪದಲ್ಲಿ ಮಗಳನ್ನು ಕರೆದೊಯ್ವ ತಂದೆ ಕೊನೆಗೆ ತೋಡಿದ ಗುಂಡಿಯಲ್ಲಿ‌ ಮಗಳನ್ನೆ ಮುಚ್ಚುವ ಕ್ರೂರವೃತ್ತಿಗೆ ಇಳಿವಲ್ಲಿಓದುಗನಿಗೆ ಛೇ…ಹೀಗಾಗಬಾರದಿತ್ತು? ಎನ್ನುವ ಭಾವ ಮೂಡುತ್ತದೆ. ಗಂಡು ಮಗುವಿಗಾಗಿ ಈ ಸಮಾಜ ಏನೆಲ್ಲ ಮಾಡಿಸುತ್ತದೆ ಎನ್ನುವುದನ್ನು ಸುಂದರ ಕಥೆಯ ಮೂಲಕ ಹೆಣೆದು ಕೊಟ್ಟಿದ್ದಾರೆ. ನಿಮ್ಮೊಳಗಿನ ಕಥೆಯಲ್ಲಿ ಮೋಹನ ಎಂಬ ಕಥಾಕಾರರ ಅಭಿಮಾನಿಯಾಗಿದ್ದ ರೂಪಾ ಹುಡುಕಿ ಹೊರಡುವ ಕಥೆ ಮುಂದೆ ಸಂಭಾಷಣೆಗಿಳಿದು ತನ್ನ ಸಾಹಿತ್ಯ ಜೀವನದ ಬಿಚ್ಚುತ್ತ ಕೊನೆಗೆ ಅವಳನ್ನು ಕೈಸವರುವ ಜಾಯಮಾನಕ್ಕಿಳಿವ ಸಂಗತಿ ಎದುರಾಗುತ್ತದೆ. ರೂಪಾ ” ನಾನಂತ ಹೆಣ್ಣಲ್ಲ ” ಎನ್ನುತ್ತ ಹೊರಡುತ್ತಾಳೆ.  ನೀನಿನ್ನು ನನ್ನ ಮರೆತಿಲ್ಲ ಎನ್ನುವಲ್ಲಿ ರೂಪಾಳಿಗೆ ನನ್ನ ಮಗನ ಹಾಗೂ ಮನೆಯ ಹೆಸರು ಮೋಹನ ಎಂದಿಟ್ಟಿರುವೆ ನಿನ್ನೊಳಗಿನ ಕಾಮುಕನನ್ನು ನಾ ಮರೆಯಲು ಅಸಾಧ್ಯವೆಂದು,ಹೇಳುವ ಕಥೆಗಾರರು ಒಂಟಿಯಾಗಿ ಸಿಕ್ಕ ಸಮಯದಲ್ಲಿ ಮನಸು ಕೈಜಾರಬಾರದೆನ್ನುವ ಸಂದೇಶ ಕೊನೆಯಲ್ಲಿ ಕೊಟ್ಟಿದ್ದಾರೆ. ಸೇಡು ಕಥೆಯಲ್ಲಿ ಸಿದ್ದವ್ವ ಮತ್ತು ಬೈರನ ಸುಂದರ ಸಂಸಾರದಲ್ಲಿ ಬೈರನನ್ನು ತೊರೆದು ಎಮ್ಮಿಯನ್ನು  ಸಾಕಿ ಹಾಲು‌,ಮೊಸರು, ತುಪ್ಪ ಮಾರಿ ಗಟ್ಟಿಗಿತ್ತಿಯಂತೆ ಬದುಕಿದ ಸಿದ್ದವ್ವಳನ್ನು ಬಲಾತ್ಕಾರ ಮಾಡಿದ ಸಂಗಪ್ಪಗೌಡನನ್ನು ಕುಡಗೋಲಿಂದ ಕೊಚ್ಚಿ ಕೊಲ್ಲುವ ಪ್ರಸಂಗವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ, ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಚಿತ್ರಣವನ್ನು ಸೇಡು ಕಥೆಯಲ್ಲಿ ಬಿತ್ತರಿಸಿದ್ದಾರೆ. ಜೀವನ್ಮುಕ್ತಿ ಕಥೆಯಲ್ಲಿ ಪ್ರೀತಿಯನ್ನು‌ನಂಬಿ ಹೊರಟವಳಿಗೆ ಸಿಕ್ಕಿದ್ದು ವೇಶ್ಯೆಯಂಬ ಪಟ್ಟ ಅಲ್ಲಿಂದ ಹೊರಗೆ ಬರಲು ಮಾಡಿದ ಪ್ರಯತ್ನ ಕೊನೆಗೆ ಹರಿಚಂದನಯೆಂಬ ವ್ಯೆಕ್ತಿಯಿಂದ ಹೊರಬಂದು ತಾನಿದ್ದ ಸ್ಥಳಕ್ಕೆ ಹೋದಾಗ ಆಕೆ ಪಡುವ ವ್ಯಥೆ, ಒಳಗಿನ ಹೇಳತೀರದ ಸಂಕಟ , ಕರುಳು ಹಿಚುಕುತ್ತವೆ ಸ್ವತಃ ತಮ್ಮನಾದವನೆ ಅವಳ ನೇಣು ಹಾಕುವ ಸಂದರ್ಬವೆದುರಾಗಿ ಕೊನೆಗೆ ಜೀವ ಕಳೆದುಕೊಳ್ಳುವ ಕ್ಷಣದಲ್ಲಿ ಮತ್ತೆ ಜೀವ ಚಿಗುರಿತು ಅದು ಕೇವಲ ಕ್ಷಣಿಕ ಅಷ್ಟೆಯೆಂಬ ನಿದರ್ಶನದೊಂದಿಗೆ ಮನೆಬಿಟ್ಟು ಹೋದವಳ ದುರಂತ ಕಥೆಯನ್ನು ಜೀವನ್ಮುಕ್ತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಉಯಿಲು ಕಥೆಯು ಇದಕ್ಕೆ ಹೊರತಾಗಿಲ್ಲ ಹಣ ,ಆಸ್ತಿ, ಸಂಪತ್ತು ಎಲ್ಲರನ್ನೂ ಏನು ಬೇಕಾದರೂ ಮಾಡಿಸುವ ಜಗತ್ತು. ಶಿವಶಂಕರಗೌಡರ ಕಾಲದಿಂದಲೂ ತಿಮ್ಮಣ್ಣ ಆಳಾಗಿ ದುಡಿಯುತ್ತಿದ್ದವನು, ಅವನ ಹೆಸರಿಗೆ ಎಂಟು‌ನೂರು ಕೋಟಿ ಆಸ್ತಿ ಉಯಿಲು ಬರೆದದ್ದು ಗೌಡರ ಮಗನಿಗೆ ಒಳಗೊಳಗೆ ಖೇದವಿತ್ತು, ಇದಕ್ಕಾಗಿ ತಿಮ್ಮಣ್ಣ ಅದರ ಮೇಲೆ ಎಳ್ಳಷ್ಟು ಆಸೆಯಿರದೆ ಅವನಿಗೆ ಒಪ್ಪಿಸಿ, ನಮ್ಮ ಕುಟುಂಬವನ್ನೆ ನಾಶಮಾಡಿದ ಈ ಆಸ್ತಿ ನಮಗೆ ಬೇಡವೆಂದು ಮರಳಿ ನೀಡುವ ನಾವು ಹೀಗೆ ಇರುತ್ತೇವೆ ಎನ್ನುವ ಉದಾರತನ ಎತ್ತಿ ತೋರುತ್ತಾನೆ. ಬದುಕು ಕಥೆಯಲ್ಲಿ ದಿನನಿತ್ಯ ಸೂಜಿ,ಪಿನ್ನು ,ಡಬ್ಬಣ ಮಾರುವವರ ಕಥೆಯನ್ನು ತುತ್ತು ಅನ್ನಕ್ಕಾಗಿ, ಪುಡಿಗಾಸಿಗಾಗಿ ಪರದಾಡುವ ಸ್ಥಿತಿ ಅವರ ನೋವು ನಲಿವುಗಳನ್ನು ಬಿಚ್ಚಿಡುತ್ತಾರೆ. ಕೊನೆಗೆ ಅವರ ಹದಿನಾರು ವರ್ಷದ ಮಗನ ಕಿಡ್ನಿ ಆಪರೇಶನಗೆ ಹಣ ಹೊಂದಿಸಲಾಗದೆ ಕಳೆದುಕೊಳ್ಳುವ ಹೃದಯ ಹಿಂಡುವ ಚಿತ್ರಣ ಎದುರಾಗುವ ಸನ್ನಿವೇಶ ಕಣ್ಣಲ್ಲಿ ನೀರು ತುಂಬಿಸುತ್ತದೆ. ಹತ್ತಿಪ್ಪತ್ತು ದುಡಿವವರಿಗೆ ದೊಡ್ಡ ರೋಗ ಬಂದರೆ ಏನಾಗುತ್ತದೆನ್ನುವ  ವಾಸ್ತವತೆಯಲ್ಲಿ ಕವಿ ಕಥೆ ಹೆಣೆದಿದ್ದಾರೆ. ವಿಧಿ ಕಥೆಯಲ್ಲಿ ಹೊಯ್ಸಳೇಶ್ವರನ ಚರ್ಮ ಸುಲಿಯುವ ಘಟನೆ ಸುಲ್ತಾನನ ಕರಾಳ ಮುಖವನ್ನು ಓದುಗನಿಗೆ ಬಿಚ್ಚಿಡುತ್ತದೆ. ಪರಸ್ಪರ ಸಂಧಾನ ಮಾಡಿಕೊಂಡು ಕೊನೆಗೆ ದೊಪ್ಪನೆ ಎರಗಿ ಹೊಯ್ಸಳರ  ಸೈನ್ಯವನ್ನೆ ದಿಕ್ಕಾಪಾಲು ಮಾಡುವ ಸಂಚು ಬಲ್ಲಾಳನಿಗೆ ಗೊತ್ತಾಗದೆ ಕೊನೆಗೆ ಸುಲ್ತಾನನ ಕ್ರೌರ್ಯವೆ ವಿಜೃಂಭಿಸುತ್ತದೆ. ಬಹುಶಃ ಇದು ವಿಧಿಲಿಖಿತ ಎನ್ನುವಷ್ಟರ ಮಟ್ಟಿಗೆ ಕವಿ ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ. ಒಟ್ಟಿನಲ್ಲಿ ಅಬುಜಾ ಅಬುಜಾ ಕಥೆ ಓದುಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಇಲ್ಲಿನ, ಸಿದ್ದಮ್ಮ, ಕೌಶಲ್ಯಬಾಯಿ, ತಿಮ್ಮಣ್ಣ,ದೇವಪ್ಪ, ಗಿರೆಪ್ಪ,ಧರಣೀಶ, ಹರಿಚಂದನ್ ಇವರೆಲ್ಲ ಜೀವಂತ ಪಾತ್ರಗಳಾಗಿ ಕಣ್ಮುಂದೆ ನಿತ್ಯವೂ ಓಡಾಡುವಂತೆ ಭಾಸವಾಗುತ್ತದೆ. ಈ ಕಥಾಸಂಕಲನ ನಾಡಿನ ಇನ್ನಷ್ಟು ಓದುಗರ ಮನಗೆಲ್ಲಲಿ ಎಂದು ಆಶಿಸುತ್ತೇನೆ… ಶಂಕರಾನಂದ ಹೆಬ್ಬಾಳ

ಜಗದೀಶ ಹಾದಿಮನಿ ಅವರ ಕಥಾ ಸಂಕಲನ “ಅಬುಚಾ ..! ಅಬುಚಾ..!”ದ ಬೆನ್ನೇರಿ. Read Post »

ಕಾವ್ಯಯಾನ

ಗೀತಾ ಆರ್‌ ಅವರ ಕವಿತೆ “ನಿನ್ನ ನಯನ”.

ಕಾವ್ಯ ಸಂಗಾತಿ ಗೀತಾ ಆರ್‌ ಅವರ ಕವಿತೆ “ನಿನ್ನ ನಯನ” ಸಂಭಾಷಣೆ ಸಮ್ಮಿಲನ ನಿನ್ನ ಆನಯನಗಳಲ್ಲಿ…ಆಡದೇ ಉಳಿದಿರುವ ಮಾತುಸಾವಿರಾರು….ನಿರ್ಮಿಸಿರುವೆ ಮನದೊಳಗೊಂದುವೇದಿಕೆ ನಿನಗಾಗಿ…ನಾನಂದು ಅಗಲಿಕೆ ನೋವಿನಲ್ಲೂಅರಸುತ್ತಿದೆ ನಿನ್ನ ಇರುವಿಕೆ…ಮಾಸಾದಿದ್ದ ನಿನ್ನ ನೆನಪುಗಳೆಲ್ಲಾಮರೀಚಿಕೆಯಾಯಿತು….ಎಲೆ ಮರೆಯ ಕಾಯಿಯಂತೆ ಅದುಕಾಣದಾಯಿತು…ನಾನೆಲ್ಲೋ ನೀನೆಲ್ಲೋ ಬದುಕಿನಬಾಳಾಪಯಣದಲೀ….ನೀನ್ಯಾರೋ ನಾನ್ಯಾರೋ ಊರದಾರಿಯಲ್ಲಿ….ವರುಷ ಉರುಳಿತು ಮಾಸ ಕಳೆಯಿತುತಡೆವರಾರು ಕಾಲಾವ…. ————   ಗೀತಾ ಆರ್.

ಗೀತಾ ಆರ್‌ ಅವರ ಕವಿತೆ “ನಿನ್ನ ನಯನ”. Read Post »

ಕಾವ್ಯಯಾನ

ನೀನೆಂದರೆಪ್ರೀತಿ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ ನೀನೆಂದರೆಪ್ರೀತಿ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ನೀನೆಂದರೆ ಪ್ರೀತಿ ಬವಣೆ ಕಳೆದ ಭರವಸೆ ರೀತಿಭಾವ ತವರ ಪ್ರೇಮನಿನ್ನೊಲುಮೆ ಸ್ನೇಹನೆಲದ ಮರೆಯ ಹೇಮನಿನ್ನ ಗುಣ ಮನಸಿರಿ ಸಗ್ಗದ ತಾಣಸುಳಿವ ಗಾಳಿಯನಡುವೆ ಅರಳುಮಲ್ಲಿಗೆ ಹೂವುನಿನ್ನ ಪ್ರೇಮದಲಿಮರೆವೆ ನೋವುನೀನೆಂದರೆ ಪ್ರೀತಿ________________________ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ನೀನೆಂದರೆಪ್ರೀತಿ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ

“ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು

ಸತ್ಯ ಸಂಗಾತಿ “ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು . ಅದೊಂದು ಕಾಲವಿತ್ತು ಡಾಕ್ಟರ್ ಎಂಬ ಪದಕ್ಕೆ ಅದರದೇ ಆದ ಘನತೆ ಗಾಂಭೀರ್ಯವಿತ್ತು. ಎಂ ಬಿ ಬಿ ಎಸ್ ಮಾಡಿದ ಮಹನೀಯರಿಗೆ ಕೊಡುವ ಗೌರವ ಪದವಿಯಾಗಿತ್ತು. ಅದೊಂದು ಹೆಮ್ಮೆಯ ಪ್ರತೀಕ ವಾಗಿತ್ತು. ಹಾಗೆಯೇ ಎಲ್ಲಾ ಕ್ಷೇತ್ರ ದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದವರಿಗೆ ನೀಡುವ ಗೌರವ ಡಾಕ್ಟರೇಟ್ ಅಮೋಘವಾದದ್ದು. ಪಿ ಹೆಚ್. ಡಿ ಮಾಡಿ ಸಾಧನೆ ತೋರಿಗೌರವ ಡಾಕ್ಟರೇಟ್ ಪಡೆದವರಿಗೆ ಅದರದೇ ಆದ ಸ್ಥಾನ ಮಾನವಿತ್ತು. ಗೌರವ ಸ್ಥಾನ ವಿತ್ತು ಹೀಗೆ ಡಾಕ್ಟರೇಟ್ ಪಡೆದವರಿಗೆ ಹೃದಯದ ವಂದನೆಗಳು.       ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಾಗೂ ವೇದಿಕೆಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಅಕ್ಷಮ್ಯ ಅಪರಾಧವಾಗಿದೆ. ಏಕೆಂದರೆ ಗೌರವ ಡಾಕ್ಟರೇಟ್ ಮಾರಾಟಕ್ಕಿದೆ. ದುಡ್ಡಿಗಾಗಿ ಮಾರಾಟ ಹಾಗೂ ಹೆಸರಿನ ಮುಂದೆ ಡಾ. ಎಂದು ಹಾಕಿಸಿಕೊಳ್ಳುವ ಹುಚ್ಚು ಕೆಲವರ ತಲೆಗೇರಿದೆ 10.000.12000.ಕ್ಕೆ ಗೌರವ ಡಾಕ್ಟರೇಟ್ ಪಡೆಯುವ ಅಚ್ಚುಕಟ್ಟಾದ ಷಡ್ಯಂತ್ರ ನಡೆದು ಮಾರಾಟವಾಗುತ್ತಿದೆ. ಹೂವು ಮಾರುವವರು ಹಣ್ಣು ಮಾರುವವರು ಕಡಲೆ ಕಾಯಿ ಮಾರುವವರು ಇವರೆಲ್ಲ ಹಣ ನೀಡಿ ಡಾಕ್ಟರೇಟ್ ಪಡೆಯಲು ಹಲವು ವೇದಿಕೆಗಳು ತಯಾರಾಗಿವೆ ಸಾಧನೆ ಇಲ್ಲದವರೆಲ್ಲ ವೇದಿಕೆ ಅಲಂಕರಿಸುತ್ತಿದ್ದಾರೆ ಹಣದಾಹದಲ್ಲಿ ಅನರ್ಹರಿಗೆ ಈ ರೀತಿಯ ಸನ್ಮಾನ ಅವಶ್ಯಕತೆ ಇದೆಯೇ? ಕೊಡುವವರಿಗೆ ಹಣದ ದಾಹ ತೆಗೆದುಕೊಳ್ಳುವವರಿಗೆ ಮರ್ಯಾದೆ ಇಲ್ಲ. ಮೂರು ಬಿಟ್ಟವರು ಊರಿಗೆ ದೊಡ್ಡವರು ಗಾದೆ ಮಾತು ಸುಳ್ಳಲ್ಲ. ಈ ರೀತಿಯ ನಾಚಿಕೆಗೇಡಿನ ಸನ್ಮಾನ ಅವಶ್ಯಕತೆ ಇದೆಯೇ? ಕೇವಲ ಒಂದು 50,100 ಕವನವಿರುವ ಕವನ ಸಂಕಲನ ಬಿಡುಗಡೆ ಮಾಡಿ ಹಲವಾರು ಜನರಿಗೆ ಬಕೆಟ್ ಹಿಡಿದು ಸನ್ಮಾನ. ಡಾಕ್ಟರೇಟ್ ಪಡೆಯುವ ಕೀಳು ಮನಸ್ಸಿನ ಸ್ವಾಭಿಮಾನವಿಲ್ಲದ ಆತ್ಮಸಾಕ್ಷಿ ವಿರೋಧಿಗಳಿಗೆ ಧಿಕ್ಕಾರವಿರಲಿ. ಹೆಸರಿನ ಮುಂದೆ ಡಾ. ಬರೆಸಿಕೊಳ್ಳುವ ಹುಚ್ಚು ತೊಲಗಲಿ. ಜನ ಮರುಳೋ ಜಾತ್ರೆ ಮರುಳೋ ತಿಳಿಯುತ್ತಿಲ್ಲ. ನಿಜವಾದ ಡಾಕ್ಟರ್ ಯಾರು ಎಂದು ಕಂಡು ಹಿಡಿಯುವುದೇ ಕಷ್ಟಕರವಾಗಿದೆ. ಮುಂದೊಂದು ದಿನ ಮೆಡಿಕಲ್ ನಲ್ಲಿ ಜ್ವರ ತಲೆನೋವಿನ ಮಾತ್ರೆ ಖರೀದಿಸಿ ಡಾ. ಎಂಬ ಬೋರ್ಡ್ ಹಾಕಿಕೊಂಡು ಕ್ಲಿನಿಕ್ ತೆರೆದುಕೊಳ್ಳುವರೇನೋ ತಿಳಿದಿಲ್ಲ ಹುಚ್ಚರ ಸಂತೇಲಿ ಡಾ ಪಡೆದವನೇ ಮಹನೀಯ ಆಗಬಾರದು. ಡಾಕ್ಟರೇಟ್ ಪಡೆಯಲು ಅದರದೇ ಆದ ಅರ್ಹತೆ ಇರುವವರಿಗೆ ನೀಡಬೇಕು. ಈ ರೀತಿಯ ಅನ್ಯಾಯದ ವಿರುದ್ಧ ಸಂಭಂದ ಪಟ್ಟವರು ಗಮನಹರಿಸಲಿ ಲತಾ ಎ ಆರ್ ಬಾಳೆಹೊನ್ನೂರು

“ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು Read Post »

You cannot copy content of this page

Scroll to Top