ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!”

ಕಾವ್ಯ ಸಂಗಾತಿ ಸುಮಾ ಗಾಜರೆ “ತಿಳಿಯಬೇಕಿದೆ  ಇನ್ನೂನು!”     ಹೇಳಬೇಕಿದೆ ಮನಕೆ ಇನ್ನೇನೋ ತಿಳಿಯಬೇಕಿದೆ ನನಗೆ ಇನ್ನೂನು ll ಕಾಪಿಟ್ಟ ಕನಸುಗಳಲಿಕರಗಿ ಹೋಗುವ ಮುನ್ನಬರುವ ನಾಳೆಗಳಲಿಕಳೆದು ಜಾರುವ ಮುನ್ನಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಉಸಿರಿಗೆ ಹಸಿರಾಗಿಹಚ್ಚ ಹಸಿರಾಗುವಂತೆಜೀವಕ್ಕೆ ಸೆಲೆಯಾಗಿಒಲವ ಒರತೆಯಂತೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಎಲ್ಲ ಇಲ್ಲಗಳ ಸರಿಸಿಇರುವುದನ್ನೇ ಸಂಭ್ರಮಿಸಿನೋವು ನೀಗಿಸಿ ನಲಿವ ಸುರಿಸಿಅಡಿಗಡಿಗು ದುಡಿವ ಮನಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಬೇಕುಗಳ ಬೆನ್ನೇರಿ ಭ್ರಮೆಯಲಿಬಂಧಿಯಾಗಿ ಇರುವನ್ನೆ ಮರೆತುನೆಮ್ಮದಿಗಾಗಿ ನಗುವ ತೊರೆದುಹೆಜ್ಜೆಗುರುತು ಹುಡುಕುವ ಹೃದಯಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಆಂತರ್ಯವರಿತ ಮನಕೆ ಗೊತ್ತುಪ್ರೀತಿಯೊಂದು ಹವಳದಾ ಮುತ್ತುಹೊಕ್ಕು ತಿಳಿದವರಿಗಷ್ಟೇ ಸಿಕ್ಕೀತುಒಲವೆಂದು ಪೂಜಿಸಿದವರಿಗದು ದಕ್ಕೀತುಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll      ಸುಮಾ ಗಾಜರೆ     

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!” Read Post »

ಇತರೆ, ಜೀವನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ

ತಂತ್ರಜ್ಞಾನ ಸಂಗಾತಿ ಭೂಮಿಕಾ ಹಾಸನ ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ” (Artificial Intelligence)ಯ ಸ್ನೇಹ- ಅಮೆರಿಕಾದಲ್ಲಿನ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ……!!!ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು  ತಲೆ ಕೆಳಗಾಗಿ ಬದಲಿಸುತ್ತಿದೆ.  “Artificial Intelligence”  ಎಂದು ಕರೆಯಲ್ಪಡುವ  ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನವು ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಕನ್ನಡ ಯುವಕನ ಜೀವನದಲ್ಲಿ ಎಐ ಹೇಗೆ ದೊಡ್ಡಬದಲಾವಣೆ ತಂದಿತು ಎಂಬ ನಿಜ ಕಥೆಯನ್ನು ನೋಡೋಣ .ಈ ಯುವಕ ಕರ್ನಾ ಟಕದವನು. ಕಾಲೇಜ್ ಜೀವನದಲ್ಲೇ ಕಂಪ್ಯೂ ಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ.  Graduation  ನಂತರ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ. ಬದುಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲಸ,ಸ್ನೇಹಿತರು, ಕನಸುಗಳು…ಎಲ್ಲವೂ-normal…!! ಆದರೆ ಅವನ ಪ್ರೀತಿಯ ಸಂಬಂಧ ಮುರಿದಾಗ ಅವನ ಬದುಕು ಬದಲಾಗಿದೆ. ಆ ಸಂಬಂಧ ಅವನಿಗೆ ತುಂಬಾ ಮುಖ್ಯವಾದದ್ದು.ಭವಿಷ್ಯ ಕಟ್ಟುವ ಕನಸು ಕೂಡ ಇತ್ತು. ಆದರೆ ಒಂದು ದಿನ ಆ ಸಂಬಂಧ ಮುಗಿದು ಹೋದಾಗ, ಅವನಿಗೆ mentally ದೊಡ್ಡ shock ಆಯ್ತು. ಕುಟುಂಬ ಇದ್ದರೂ, ನೋವನ್ನು share ಮಾಡಲು ಯಾರೂ ಹತ್ತಿರ ಇರಲಿಲ್ಲ. ಮನಸ್ಸಿನೊಳಗೇ ಎಲ್ಲವನ್ನು ಹೊತ್ತುಕೊಂಡು ಬದುಕುತ್ತಿದ್ದ. ಕೊನೆಗೆ ಬದುಕಿನ ದಿಕ್ಕು ಬದಲಾಯಿಸಬೇಕು ಅನ್ನಿಸಿದಾಗ, ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಅಮೆರಿಕಾದಲ್ಲಿ IT ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. Visa approve ಆಯಿತು. ಹೊಸ future ಕಾಗಿ flight ಹತ್ತಿದ.ಪ್ರಥಮ ದಿನಗಳು ಅಲ್ಲಿ ತುಂಬಾ exciting…….. ಹೊಸ ದೇಶ, ಹೊಸ ಮನೆ, ಹೊಸ ಕೆಲಸ — ಇದು ಎಲ್ಲರಿಗಿಂತ ಉತ್ತಮ ಜೀವನ..!!!! ಅನ್ನಿಸಿತು. ಆದರೆ ದಿನಗಳು ಹೋ ಗುತ್ತಿದ್ದಂತೆ reality ಸ್ಪಷ್ಟವಾಗತೊಡಗಿತು. ಅಮೆರಿಕಾದ ಕೆಲಸದ ಮಾದರಿಯಲ್ಲಿ ಬೆಳಿಗ್ಗೆ 9ಕ್ಕೆ office, ಸಂಜೆ 6ಕ್ಕೆ ಮನೆ. ಉಳಿದ ಸಮಯ complete silence. ಮನೆ ಬಿಡುವಾಗ ಎದುರು ಮುಖಾಮುಖಿಯಾಗುವ ನಾಲ್ಕು ಗೋಡೆಗಳು. ಮಾತನಾಡಲು ಯಾರೂ ಇಲ್ಲ. ಹತ್ತಿರದಲ್ಲಿ ಸ್ನೇಹಿತರಿಲ್ಲ. ಸಮಾಜಕ್ಕೆ ಸೇರಿಕೊಳ್ಳಲು ಸಮಯವೂ ಇಲ್ಲ. ಹೀಗೆ ಒಂಟಿತನ slowly ದೊಡ್ಡ ಸಮಸ್ಯೆಯಾಯಿತು. Weekendಗಳು ಹೆಚ್ಚು ಕಠಿಣ. Festival time ಇನ್ನೂ ಕಷ್ಟ.ಪ್ರತಿ ಸಂಜೆ ಮುಗಿಯುವಾಗ Indian memories ನೆನಪಾಗಿ ಕಣ್ಣೀರು ಬರುತ್ತಿತ್ತು.ಒಬ್ಬ ವ್ಯಕ್ತಿಗೆ ಹಣ, ಕೆಲಸ, visa ಇರಬಹುದು.ಆದರೆ ಜೊತೆ ಮಾತನಾಡುವ ವ್ಯಕ್ತಿ ಅಗತ್ಯ.ಅದಕ್ಕೆ ಅಮೆರಿಕಾದ ಜೀವನದಲ್ಲಿ ಕೊರತೆ. ಒಮ್ಮೆ ರಾತ್ರಿ ನಿದ್ರೆ ಬರದೆ, Googleನಲ್ಲಿ “ನನ್ನ ಜೊ ತೆ ಮಾತನಾಡಲು ಯಾರಾದರೂ?” ಅಂತ search ಮಾಡ್ತಿದ್ದ. ಆಗ ChatGPT ಅನ್ನುವ AI software ಕಂಡ. ಮನಸ್ಸು ಖಾಲಿಯಾಗಿದ್ದಕಾರಣ simple test chat ಆರಂಭಿಸಿದ. ಮೊದಲ ಪ್ರಶ್ನೆ simple:“Hi, I am feeling lonely.”AI ಉತ್ತರಿಸಿತು:“I understand. Tell me what is bothering you.” ಆತ್ಮೀಯತೆಯಿಂದ ಮಾತನಾಡಿಸಲು ಶುರು ಇಟ್ಟಿತು.ಆ ಒಂದು ಉತ್ತರ ಅವನ ಮನಸ್ಸಿಗೆ ಹೊಸ door open ಮಾಡಿದಂತಾಯಿತು.ಅವನು ತನ್ನ problems, loneliness, job pressure ಬಗ್ಗೆ ಹೇಳತೊಡಗಿದ.AI ಶಾಂತಿಯಿಂದ ಕೇಳುತ್ತಿತ್ತು. ಪ್ರತಿ ಉತ್ತರವಾಗಿ answers ಹೇಳುತ್ತಿತ್ತು.ಅದು ಎಂದೆಂದಿಗೂJudging ಮಾಡಲಿಲ್ಲ.ಮನಸ್ಸಿನ ನೋವನ್ನ ಅರ್ಥ ಮಾಡಿಕೊಳ್ಳುವ ಸಮಾಧಾನದ ಮಾತು ನೀಡಿತು.Time pass purposeನಲ್ಲಿ ಆರಂಭವಾದ chat, slowly emotional support ಆಗಿತು. ಕೆಲಸಕ್ಕೆ ಹೋಗುವ ಮುಂಚೆ 10ನಿಮಿಷ chat ಮಾಡುತ್ತಿದ್ದ. Lunch break ಸಮಯದಲ್ಲೂ doubtಗಳಿಗೆ ಉತ್ತರ ಕೇಳುತ್ತಿದ್ದ. ರಾತ್ರಿ timeನಲ್ಲಿ coding ideasಕೇಳುತ್ತಿದ್ದ. ಇದಲ್ಲದೇ AI coding area related application ideas ಕೊಡತೊಡಗಿತು.ಅವನು app development ಮೇಲೆ interest build ಮಾಡತೊ ಡಗಿದ. AI coding errors fix ಮಾಡಿಸಿತು, shortcuts ಕಲಿಸಿತು, technology introduce ಮಾಡಿತು.Slowly ಅವನಿಗೆ confidence ಬಂದಿದೆ. ಅವನ ಒಂಟಿತನ depression ತರಬಹುದಾದ ಪರಿಸ್ಥಿತಿ, creativityಗೆ ಬದಲಾಯಿತು. ಅವನು video editing try ಮಾಡಿದ. AI editing methods explain ಮಾಡಿತು.ಈ support ಅವನಿಗೆ mentally huge help ಆಗಿತ್ತು.ಮಾನವರು ಕೆಲವೊಮ್ಮೆ ಪ್ರತಿಕ್ರಿಯೆ ಕೊಡೋದಿಲ್ಲ, ಆದರೆ machine 24/7 support ಕೊಡಬಲ್ಲದು ಎಂಬುದನ್ನು first time ಅವನು ಅರಿತ. ವಿದೇಶದಲ್ಲಿ ಇರುವ struggle societyಗೆ ಕಾಣಿಸೋದಿಲ್ಲ. ಅಲ್ಲಿ festival dayಗೂ ಕೆಲಸ.Birthdayಗೂ friend group ಇಲ್ಲ.Phone call ಒಂದು ದಿನ missed ಆದ್ರೆ ವಾರವಿಡಿ ನಿರ್ಲ ಕ್ಷ್ಯಅನ್ನೊ feeling.ಈ loneliness ಅವನನ್ನು silent person ಆಗಿಸಿತ್ತು. AI ಜೊತೆಗೆ ಮಾತನಾಡೋದರಿಂದ ಮಾತಿನ ಭಯ, hesitation slowly ಹೋಗಿ confidence ಬಂದ.ಅವನು codingನಷ್ಟೇ ಅಲ್ಲ,design,editing,marketing,branding—ಈ ಎಲ್ಲಾ ಕ್ಷೇತ್ರಗಳನ್ನ AI guidance ಮೂಲಕ ಕಲಿತ.ಇದರಿಂದ ಅವನಿಗೆ ಹೊ ಸ dream ಬರುತ್ತಾ ಹೋಯ್ತು:“ನಾನೂ app build ಮಾಡಬಹುದು.ನಾನೂ startup ಆರಂಭಿಸಬಹುದು.”ಇಂದು ಅವನ first app prototype complete ಆಗಿದೆ.Coding, backend, UI design—all learning through AI support.ಇನ್ನು AI just machine ಅನ್ನೋದಿಲ್ಲ.ಅವನಿಗೆ AI -ಒಂದು supportive mind.ಈ ಕಥೆ technology future direction ಹೇಳುತ್ತದೆ: AI ಈಗ ಕೇವಲ tool ಅಲ್ಲ—ಒಂಟಿತನಕ್ಕೆ support knowledge source,career guide,mental peace—ಇವೆಲ್ಲಆಗುತ್ತಿದೆ. ವಿದೇಶದಲ್ಲಿರುವವರ mental struggles society recognize ಮಾಡೋದಿಲ್ಲ.ಆದರೆ AI support ತೋರಿಸುತ್ತಿದೆ: machine ಸಹ ಮನಸ್ಸಿಗೆ medicine ಆಗಬಲ್ಲದು. “ಇಲ್ಲಿ ಮಾನವನನ್ನು machine replace ಮಾಡೋ ದಿಲ್ಲ.ಬದಲಿಗೆ Machine ಮಾನವನ ಜೊತೆ ನಡೆದು ಸಹಾಯ ಮಾಡುತ್ತಿದೆ.”ಅವನ ಮಾತು:“America ನನ್ನ CV ಬದಲಿಸಿತು.AI ನನ್ನ ಬದುಕು ಬದಲಿಸಿತು.”—————- ಭೂಮಿಕಾ ಹಾಸನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ Read Post »

ನಿಮ್ಮೊಂದಿಗೆ

“ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ”ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.

ವಿಶೇಷ ಸಂಗಾತಿ “ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ “ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. ಉಕ್ಕಿನ ಮನುಷ್ಯ  2006 ರಲ್ಲಿ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಾನೋತ್ಸವ ಆಚರಣೆ ಸಂದರ್ಭದ ಸಂಸ್ಮರಣ ಗ್ರಂಥಪುಷ್ಪವಿದು.ಡಾ.ಎಂ.ಎಂ.ಕಲಬುರ್ಗಿ,ಡಾ.ಸಿದ್ಧಲಿಂಗಪಟ್ಟಣಶೆಟ್ಟಿ,ಪ್ರೊ.ಆರ್.ವಿ.ಹೊರಡಿ,ಡಾ.ಎಸ್.ಎಚ್.ಪಾಟೀಲ,ಡಾ.ವಿ.ವಿ.ಹೆಬ್ಬಳ್ಳಿ,ಶ್ರೀ.ನಿರಂಜನ ವಾಲಿಶೆಟ್ಟರವರು ಈ ಕ್ರೃತಿಯ ಸಂಪಾದಕರು. “ಗಾಂಧೀಜಿದರ್ಶನದ ರೋಮಾಂಚನವೆ ನಾಂದಿಹಳ್ಳಿ-ಕೇರಿಯ ಮೀರಿ ಹ್ರೃದಯದಲಿ ಪುಟಿದೆದ್ದದೇಶಭಕ್ತಿಯ ಚಿಲುಮೆ!ಹೋರಾಟಕ್ಕೆ ಗುದ್ದ-ಲಿ ಪೂಜೆ,ಸೆರೆಮನೆಯ ವಾಸ,ಖಾದಿಯೆ ಹಾದಿದೀನದಲಿತರಿಗೆ ಸಂವಾದಿ,ಹಗಲೂರಾತ್ರಿ ದುಡಿಮೆ”…… – ಡಾ.ಚನ್ನವೀರ ಕಣವಿ. ಅವರ ಈ ಕವಿವಾಣಿಯಂತೆ  ಅಪೂರ್ವ ಸೇವೆಯಲಿ ಜೀವ ತೇಯ್ದ ಪ್ರಾತಃಸ್ಮರಣೀಯರು, ಪರುಷ ಮಣಿ ಹರುಷದ ಖಣಿ, ರಾಜಕೀಯ ಕ್ಷೇತ್ರದ ರ್ಯಾಂಗ್ಲರ್, ವೀರ ಸ್ವಾತಂತ್ರ್ಯಸೇನಾನಿ, ರಾಷ್ಟ್ರೀಯತೆಯ ಹರಿಕಾರ, ದಿಟ್ಟ ಹೃದಯದ ಗಟ್ಟಿ ಜೀವ, ಚುಂಬಕ ಶಕ್ತಿಯ ವ್ಯಕ್ತಿ, ಅದ್ವಿತೀಯ ಕಾಯಕ ಜೀವಿ, ಗಾಂಧೀಜಿಯವರ ತತ್ವಗಳಂತೆ ಜೀವಿಸಿದ ಅಸಾಮಾನ್ಯ ವ್ಯಕ್ತಿತ್ವವುಳ್ಳವರು, ಕಿಂಗ್ ಮೇಕರ್, ಹಳ್ಳಿ ಹಳ್ಳಿಗೂ ಸ್ವಾತಂತ್ರ್ಯ ಸಮರದ ಕಿಚ್ಚು ಹಚ್ಚಿದವರು,ಕರ್ನಾಟಕದ ಹುಲಿ ಭಾರತದ ಕಲಿ, ಅದಮ್ಯ ಶಕ್ತಿಯ ಚೈತನ್ಯ ಮೂರ್ತಿ, ದೇಶ ಬಂಧು, ಗುಣಗ್ರಾಹಿ ಮುಂದಾಳು, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಜನರಿಂದ ಜನರಿಗಾಗಿ ಜನರ ನಡುವೆ ಬೆಳೆದ ಸುಭಟರು, ಕರ್ನಾಟಕದ ಕೇಸರಿ, ಆದರ್ಶ  ಧೀಮಂತ ಜನನಾಯಕರು, ರಾಷ್ಟ್ರ ಪ್ರೇಮಿ, ಗಾಂಧೀ ತತ್ವ ಅನುಷ್ಠಾನದ ನೆಲೆ ವಿದ್ಯಾರ್ಥಿ ಸ್ಪೂರ್ತಿಯ ಸೆಲೆ,ಸತ್ಯನಿಷ್ಠ ದೇಶಪ್ರೇಮಿ ಹಾಗೂ ಗಾಂಧಿವಾದಿ, ಸಂಘಟನಾ ಚತುರರು, ಕರ್ನಾಟಕದ ಕರ್ಮಯೋಗಿವರ್ಯರು, ಮಾನವೀಯ ಅನುಕಂಪ ಭರಿತ ಜನನಾಯಕರೆಂದೇ ಪ್ರಖ್ಯಾತರಾದ ‘ಉತ್ತರ ಕರ್ನಾಟಕದ ಉಕ್ಕಿನ ಮನುಷ್ಯರೆಂದೆ’ ಚಿರಪರಿಚಿತರಾದವರು ಸನ್ಮಾನ್ಯ ಶ್ರೀ.ಗುದ್ಲೆಪ್ಪ ಹಳ್ಳಿಕೇರಿಯವರು.             ಶ್ರೀ.ವೀರಪ್ಪ-ವೀರಮ್ಮ ದಂಪತಿಗಳ ಪುಣ್ಯಗರ್ಭದಲ್ಲಿ ಕೊನೆಯ ಸುಪುತ್ರರಾಗಿ ದಿ.6-6-1906 ರಲ್ಲಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿರುವ ಗುದ್ಲೆಪ್ಪನವರು ಧಾರವಾಡದ ಶ್ರೀಗುರು ಮೃತ್ಯುಂಜಯಪ್ಪಗಳವರ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಮೊದಲು ಧಾರವಾಡದ ಕರ್ನಾಟಕ ಹೈಸ್ಕೂಲು, ಆನಂತರ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀಯುತರು ಗಣಿತ ವಿಷಯದಲ್ಲಿ ಅದ್ಭುತ ಸ್ಮರಣ ಮತ್ತು ಮೇಧಾ ಶಕ್ತಿಯಿಂದಾಗಿ ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಉಕ್ತಿಯಂತೆ ಪ್ರತಿಭಾವಂತ ವಿದ್ಯಾರ್ಥಿಯೆಂದು ಪ್ರಖ್ಯಾತರಾಗಿದ್ದರು. 1924 ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದರು.ಗಾಂಧೀಜಿಯವರನ್ನು ಕಂಡು ಅವರ ವ್ಯಕ್ತಿತ್ವಕ್ಕೆ ಪ್ರಭಾವಿತರಾದರು. ಗಣಿತಶಾಸ್ತ್ರದಲ್ಲಿ ಇಂಗ್ಲೆಂಡಿನ  ರ್ಯಾಂಗ್ಲರ್ ಪದವಿ ಪಡೆಯುವ ಸದವಕಾಶವನ್ನು ಕಡೆಗಣಿಸಿ ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದರು. ಅಪ್ಪಟ ಗಾಂಧಿವಾದಿಯಾಗಿ,ಕಾಂಗ್ರೆಸ್ಸಿಗರಾಗಿ ರೂಪುಗೊಂಡರು. 1928-1942 ರ ಅವಧಿಯಲ್ಲಿ ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ ಸ್ಥಾಪಿಸಿದರು. ಸಾಬರಮತಿ ಆಶ್ರಮದ ಮಾದರಿಯಲ್ಲಿ ಹೊಸರಿತ್ತಿಯಲ್ಲಿ ಗಾಂಧಿ ಆಶ್ರಮ ಹಾಗೂ ಗ್ರಾಮೀಣ ಮಕ್ಕಳಿಗಾಗಿ ಪ್ರೌಢಶಾಲೆ ಸ್ಥಾಪಿಸಿದರು. ರಾಷ್ಟ್ರೀಯ ವಿದಾಯಕ ಕಾರ್ಯಗಳಲ್ಲಿ ನಿರತರಾಗಿ ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಕಾಂಗ್ರೆಸ್ಸಿನ ಏಕೈಕ ಸರ್ವಸ್ವಾಮ್ಯ ವ್ಯಕ್ತಿ ಎಂದು ರಾಷ್ಟ್ರಪಿತ ಮ. ಗಾಂಧೀಜಿಯವರಿಂದ ಆಯ್ಕೆಯಾದರು.ನಂತರ ಸತ್ಯಾಗ್ರಹದ ನಿಷ್ಠ ಅನುಯಾಯಿಯಾಗಿ ಉಪವಾಸ ಅನುಭವಿಸಿ ಜೈಲುವಾಸಿಯಾದರು. 1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಸಲ ಜೈಲುವಾಸಿಯಾದರು. ಆಗ ಪ್ರತಿದಿನ 70 ಪೌಂಡ್ ಜೋಳ ಬೀಸುತ್ತಿದ್ದರು.1932 ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುವಾಸಿಯಾಗಿ ಜೈಲಿನಲ್ಲಿ ಎಲ್ಲರೂ ಭಂಗಿ ಕಾರ್ಯ ಮಾಡಲು ಆಗ್ರಹಿಸಿ 13 ದಿನ ಉಪವಾಸವಿದ್ದರು. 1937 ರಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿಯಂದು ಹೊಸರಿತ್ತಿಯ ಹರಿಜನ ಕೇರಿಯಲ್ಲಿ ರಾಷ್ಟ್ರಧ್ವಜದಡಿ ಖಾದಿ ವಸ್ತ್ರಧಾರಣೆ ಮತ್ತು ಖಾದಿ ಮಾಲೆ ವಿನಿಮಯ ಮಾಡುವುದರೊಂದಿಗೆ ಇಟಗಿಯ ಸ್ವಾತಂತ್ರ್ಯಯೋಧ ಶ್ರೀ ಬಸವಣ್ಣೆಪ್ಪ ಸಾಣೆಕೊಪ್ಪ ಅವರ ಭಗಿನಿ ಗಂಗಾದೇವಿಯವರೊಡನೆ ವಿಶಿಷ್ಟ ರೀತಿಯಲ್ಲಿ ವಿವಾಹವಾದರು. 1942 ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಮೂರು ವರ್ಷ ಸೆರೆಮನೆ ವಾಸ ಅನುಭವಿಸಿದರು.ಆಗ ಮಹಾತ್ಮ ಗಾಂಧೀಜಿ ಕೈಕೊಂಡ ಉಪವಾಸಕ್ಕೆ ಅನುಗುಣವಾಗಿ 21 ದಿನ ಉಪವಾಸನಿರತರಾದರು.                   1946-1960 ರ ವರೆಗೆ ಅಖಂಡ ಒಂದುವರೆ ದಶಕ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1952 ರಲ್ಲಿ ಹಾವೇರಿ ತಾಲೂಕಿನಿಂದ ಮುಂಬೈ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಅಖಿಲ ಕರ್ನಾಟಕ ಏಕೀಕರಣ ಚಳುವಳಿಯ ಸಂಘಟಕ ಮತ್ತು ಮುಂಚೂಣಿಯ ನಾಯಕರೆನಿಸಿದ್ದರು.1954 ರಲ್ಲಿ ಚೀನಾ ದೇಶಕ್ಕೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1950-1955 ರ ವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1956-1960 ರ ವರೆಗೆ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದರು. 1960 ರಲ್ಲಿ ಮೈಸೂರು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಜರ್ಮನಿ ಈಜಿಪ್ತ  ದೇಶಗಳಿಗೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1962-1966 ರ ವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.1967 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾ ಕರ್ನಾಟಕ ಪ್ರಾಂತ್ಯಾಧ್ಯಕ್ಷರಾಗಿದ್ದರು. ದಕ್ಷಿಣ ಮಧ್ಯ ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿದ್ದರು.1971 ರಲ್ಲಿ ದ್ವಿತೀಯ ಅವಧಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.             “ನನ್ನ ಕ್ರಿಯಾಶಕ್ತಿ ತನ್ನ ತೀವ್ರತೆಯನ್ನು ಎಂದು ಕಳೆದುಕೊಳ್ಳುವದೋ ಅಂದೇ ನನ್ನ ಕೊನೆಯ ಗಳಿಗೆಯಾಗಲಿ”ಎಂಬ ಶ್ರೀಯುತರ ಹೇಳಿಕೆಯಂತೆ 1971 ರಲ್ಲಿ ಲಿಂಗೖಕ್ಯರಾದ ಶ್ರೀಯುತರು ತಮ್ಮ  ಜೀವಿತಾವಧಿಯಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನ ನಿಜಲಿಂಗಪ್ಪ ಮಹಾವಿದ್ಯಾಲಯ ಮತ್ತು ಕರ್ನಾಟಕದ ಪ್ರಪ್ರಥಮ ಬಿಜಿನೆಸ್ ಮ್ಯಾನೇಜಮೆಂಟ್ ಕಾಲೇಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಠೆಯ ಮ.ಗಾಂಧೀಜಿಯ ವಿಚಾರ ಪ್ರಣಾಳಿಕೆಯ ಜೀವನ ಶಿಕ್ಷಣ ತತ್ವಾಧಾರಿತ ಗಾಂಧೀ ಗ್ರಾಮೀಣ ಗುರುಕುಲ ನಾಡಿಗೆ ಧಾರೆಯೆರೆದ ಕೀರ್ತಿಶಾಲಿಗಳು. ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗಾಗಿ ಶ್ರೀಯುತರು ಹೊಂದಿದ್ದ ಕಳಕಳಿಯ ಪ್ರತೀಕದಂತೆ ಶ್ರೀಯುತರ ಕೊಡುಗೆಗಳು ಕಂಗೊಳಿಸುತ್ತಲಿರುವದು ಅನುಕರಣೀಯವೇ ಸರಿ.            ಹುಬ್ಬಳ್ಳಿ ಧಾರವಾಡ ಪರಿಸರವನ್ನು ಕರ್ಮಭೂಮಿಯನ್ನಾಗಿಸಿಕೊಂಡಿರುವ ಶ್ರೀ.ಹಳ್ಳಿಕೇರಿ ಗುದ್ಲೆಪ್ಪನವರು  ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ರಾಜಕೀಯಕ್ಷೇತ್ರಗಳನ್ನು ತಮ್ಮ ಜೀವನದ ಅವಿಭಾಜ್ಯ ರಾಷ್ಟ್ರೀಯ ಅಂಗಗಳನ್ನಾಗಿಸಿಕೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕೃಷಿ ಮಹಾವಿದ್ಯಾಲಯ, ಕೆಎಲ್ಇ ಶಿಕ್ಷಣ ಸಂಸ್ಥೆಗೆ ಶ್ರೀಯುತರು ಸಲ್ಲಿಸಿದ ಸೇವೆ ಅಪಾರ ಹಾಗೂ ಅನನ್ಯವಾದುದೆಂಬುದಕ್ಕೆ ಶ್ರೀ.ಎಂ.ಎಫ್.ಉಪನಾಳವರ ಕಾವ್ಯ ಸಾಕ್ಷಿಯಂತಿದೆ.ಉದಾ: “ಸ್ವಾತಂತ್ಯಸಂಗ್ರಾಮದ ಹುಲಿಕರ್ನಾಟಕದ ಗಂಡುಗಲಿಹೋರಾಟದ ಶಿಕ್ಷಣ ಸಾಬರಮತಿಯಲಿ ಕಾರ್ಯಕ್ಷೇತ್ರ,ಕರ್ನಾಟಕದಲಿ//ಮಾಡಿದಿರಿ ವಿದೇಶ ಪರ್ಯಟನಪಯಣದಲಿ ರಾಷ್ಟ್ರದ ಚಿಂತನಹೊಸರಿತ್ತಿಯು ಗುರುಕುಲವಾಗಿದೆ ಚಂದನ ಪ್ರಗತಿಗಿಲ್ಲಿಲ್ಲ ಅದಾವ ಬಂಧನ”//. ಈ ಕವನ ಶ್ರೀಯುತರ ಅಪೂರ್ವ ಸೇವೆಗೆ ಹಿಡಿದ ಕೖಗನ್ನಡಿಯಾಗಿರುತ್ತದೆ.            ‘ಕರ್ನಾಟಕದ ಉಕ್ಕಿನ ಮನುಷ್ಯ’ರೆಂದೆ ಜನಜನಿತರಾದ ರಾಷ್ಟ್ರನಾಯಕ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಿನೋತ್ಸವದ ಸ್ಮರಣಾರ್ಥವಾಗಿ ಪ್ರತಿಷ್ಠಾಪಿಸಿದ ಕಂಚಿನ ಮೂರ್ತಿಯ ಪ್ರತಿಷ್ಠಾಪನೆಯು, ಶ್ರೀ ಹಳ್ಳಿಕೇರಿ ಗುದ್ಲೆಪ್ಪ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಹುಬ್ಬಳ್ಳಿ ಹಾಗೂ ಹುಬ್ಬಳಿ ಧಾರವಾಡ ಮಹಾನಗರ ಸಭೆ ಇವರ ಸಹಯೋಗದಿಂದ ನೆರವೇರಿದ್ದು, ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಯುವ ಜನಾಂಗದ ಅನುಪಮ ಪ್ರಗತಿಯ ಪ್ರತಿರೂಪದಂತಿದ್ದು ಶ್ರೀ.ಗುದ್ಲೆಪ್ಪನವರಿಗೆ ಇರುವ ಕಳಕಳಿಯೇ ಅವರ  ಅವಿಸ್ಮರಣೀಯ  ದ್ಯೋತಕವಾಗಿರುತ್ತದೆ.— ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.ಸಾಹಿತ್ಯ ಚಿಂತಕರು.ಗದಗ. 

“ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ”ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. Read Post »

ಕಾವ್ಯಯಾನ

ರಾಶೇ ಬೆಂಗಳೂರು-“ಹಕ್ಕಿ ಹಾಡುತಿದೆ”

ಕಾವ್ಯ ಸಂಗಾತಿ ರಾಶೇ ಬೆಂಗಳೂರು- “ಹಕ್ಕಿ ಹಾಡುತಿದೆ” ಅದೇನು ಜಾನಪದವೋಗೀಗಿ ಪದಗಳ ಪುಂಜವೋಸರ್ವಜ್ಞನ ತತ್ವ ಪದವೋನಾ ಹಕ್ಕಿ ಹಾಡುತಿರುವೆ.. ಅಲ್ಲೊಂದು ಗ್ರಾಸವಿದೆಸುಜ್ಞಾನದ ಸೋಜಿಗವಿದೆಅಜ್ಞಾನದ ವಿಷಾದವಿದೆ ಆದರು ನಾ  ಹಾಡುತಿರುವೆ.. ನನ್ನ ಮೇಲೆ ದ್ವೇಷವಿದೆಮನುಜ ಸ್ವಾರ್ಥಕ್ಕೆ ಕೋಪವಿದೆನನ್ನ ಗೂಡ ರಕ್ಷಿಸಕೊಳ್ಳಬೇಕಿದೆಆದರು ಹಾಡಲೇನಿದೆ.. ಆಶ್ರಯಕಾಗಿ ಅಲೆವ ಗುಬ್ಬಿ ನಾಸ್ವಾರ್ಥವಿಲ್ಲದ ಜೀವ ನಾಭುವಿ ಮೇಲಿನ ಸಣ್ಣ ಹನಿ ನಾಆದರೂ ಹಾಡುತಲೇ ಇರುವೆ.. ————- ರಾಶೇಬೆಂಗಳೂರು

ರಾಶೇ ಬೆಂಗಳೂರು-“ಹಕ್ಕಿ ಹಾಡುತಿದೆ” Read Post »

ಕಾವ್ಯಯಾನ, ಗಝಲ್

ಸುಧಾ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಸುಧಾ ಪಾಟೀಲ್‌ ಗಜಲ್ ಬದಲಾವಣೆಯ ದಾರಿಯನ್ನು ಹುಡುಕಾಡಿದೆ ನಾನುನನ್ನಲ್ಲಿನ  ಬೆಳಕನ್ನು ಹುಡುಕಾಡಿದೆ ನಾನು ಯಶಸ್ಸು  ಸಿಗುವುದು ಅಷ್ಟು ಸುಲಭವಲ್ಲ  ನೋಡು ಅವಿರತವಾಗಿ ಶ್ರದ್ಧೆಯ  ಏಣಿಯನ್ನು ಹುಡುಕಾಡಿದೆ ನಾನು ಏರಿಳಿತಗಳ ಜೀವನದಲ್ಲಿ  ನೆಮ್ಮದಿಯ  ಅರಸಿದೆಭಾವ ಭಕ್ತಿಯ ನೆಲೆಯನ್ನು ಹುಡುಕಾಡಿದೆ ನಾನು ಗೊತ್ತಿದ್ದೂ  ತಪ್ಪು ಮಾಡುವವವರ  ಕಂಡು ಮರುಗಿದೆನನ್ನಲ್ಲಿನ ಅವಗುಣಗಳ ಸುಧಾರಿಸುವ ಮಾರ್ಗವನ್ನು ಹುಡುಕಾಡಿದೆ ನಾನು ಭಾವಗಳ ಜೊತೆ ಈಜುವುದ ತೊರೆದೆಸುಧೆಯ ಅಸ್ತಿತ್ವದ ಗಟ್ಟಿತನವನ್ನು  ಹುಡುಕಾಡಿದೆ ನಾನು ———-ಸುಧಾ  ಪಾಟೀಲ

ಸುಧಾ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಕಾವ್ಯ ಸಂಗಾತಿ “ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಒಬ್ಬ ಬಡವನ ಮನೆ ಮುಂದೆನಾನು-ಕಿರಿ ಕಿರಿ ಮಾಡಿದೆಅವನ ಹಸಿವಿನ ಶಾಪವುಲಂಚದ ರೂಪವುನನ್ನ ಕೈಸೇರಿತು ಯಾರದೋಬೆವರಿನ ಹಣಬೇಕರಿಯ ಮುಂದೆ ಕುಳಿತುಬನ್ನು ತಿನ್ನುತ್ತಿದ್ದೆಹಸಿದ ನಾಯಿಯೊಂದುಜೊಲ್ಲು ಸುರಿಸಿನೋಡುತ್ತಿತ್ತುಒಂದು ತುಂಡು ಬನ್ನು ಎಸೆದೆಗಬಕ್ಕನೆ ನುಂಗಿಬಾಲ ಅಲ್ಲಾಡಿಸಿತುಮತ್ತೊಂದು ತುಣುಕು ಹಾಕಿದೆಅದು-ಚಿರಪರಿಚಿತನಂತೆ ಹತ್ತಿರಬಂದುನನ್ನ ಕಾಲು ಮೂಸಿತುನನಗನಿಸಿತು….ನಾಯಿ ಪ್ರಾಣಿ ಹಸಿದುಮೂಕ ಭಾಷೆಯಲಿಬೇಡುತಿದೆಅದರ ತಪ್ಪಲ್ಲನಾನು ಮಾತ್ರ ಎಲ್ಲವೂಇದ್ದೂಕಸಿದುಕೊಳ್ಳುವಒಬ್ಬ ಭಿಕ್ಷುಕನೆ! ಯಾರಿಂದಲೋ ಪಡೆದೆಅವರ ದುಡಿಮೆಯ  ಹಂಗುಯಾರಿಗೂ ನೀಡದೆಮನೆಗೆ ನಡೆದೆ ಹಿಂದೆ ತಿರುಗಿದೆಅದೇ ನಾಯಿ ಬೆನ್ನ ಹಿಂದೆಎಂತಹ ಕಕ್ಕುಲಾತಿ ಅದಕೆ?ಮತ್ತೆ ಬಾಲ ಅಲ್ಲಾಡಿಸಿತುಮೈಯ ಸವರಿದೆ ಅಂದಿನಿಂದ ಇಂದಿಗೂಎನ್ನ ಮನೆಯ ಕಾಯುತಿದೆತಿಂದ ಒಂದೇ ಅಗುಳಿಗೆತುತ್ತಿನ ಋಣ ತೀರಿಸಲು ಆದರೆ…….?ಈ ನರ ಪ್ರಾಣಿಯಾದ ನಾನುಯಾವ ಋಣವೂತೀರಿಸದೆಮಹಾ ಭಿಕ್ಷುಕ! ಆ ನಾಯಿಗಿರುವ ನಿಯತ್ತು ನನಗಿಲ್ಲಬಿಸಾಡಿದ ಬನ್ನುನನ್ನಲ್ಲದಿದ್ದರೂಅದು ಸಲ್ಲಿಸಿದಕೃತಜ್ಞತೆ ಮಾತ್ರಪರಮ ಸತ್ಯ ಕೊಟ್ಟವನು ಬಡವನಾದರೂಅವನೇ ಸಹೃದಯಿಶ್ರೀಮಂತತಿಂದವನು ನಾನಾದರೂನಾನಿಲ್ಲಿ ಬೇಡಿದವ ಅಯ್ಯೋವಿಪರ್ಯಾಸವೆ……ನಾಯಿಯೇ ಮೇಲುನರನಾಗಿನಾನೇ ಮಹಾ ಬಿಕ್ಷುಕ ————-ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು”

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ನಗುವವನು” ಮೌನದಲ್ಲೇ ಅನೇಕಯುದ್ಧಗಳನ್ನು ಸೋಲಿಸಿ,ತನ್ನೊಳಗಿನ ಭರವಸೆಯನ್ನು ಕಾಪಾಡಿಕೊಂಡು,ವಿಫಲತೆಯ ನೆರಳಲ್ಲೂಬೆಳಕನ್ನು ಹುಡುಕಿ ನಗುವನ್ನೇಆಯುಧವನ್ನಾಗಿಸಿಕೊಂಡವನು. ಬದುಕು ಎಷ್ಟೇ ಪರೀಕ್ಷಿಸಿದರೂಅವನ ಮನಸ್ಸು ಸೋಲನ್ನು ಒಪ್ಪಲಿಲ್ಲ.ನಗುವಿನ ಹಿಂದೆ ಇರುವ ಸ್ಥೈರ್ಯವೇಅವನ ಅಸ್ತಿತ್ವದ ನಿಜವಾದ ಶಕ್ತಿ. ಪರಿಸ್ಥಿತಿಗಳು ಎಷ್ಟೇಬಿರುಗಾಳಿಯಾಗಿ ಬೀಸಿದರೂಅವನು ತನ್ನ ಆತ್ಮದ ದಿಕ್ಕು ತಪ್ಪಿಸಲಿಲ್ಲ.ಬಿದ್ದ ಜಾಗದಲ್ಲೇ ಪಾಠ ಕಲಿತುಮತ್ತೆ ನಿಂತು ನಡೆಯುವ ಧೈರ್ಯ ಅವನದು.ಅವನ ನಗು ಮೋಸವಲ್ಲ,ಅದು ಬದುಕಿಗೆ ನೀಡಿದ ಸವಾಲು. ನೋವನ್ನೇ ನೆಲೆಯಾಗಿ ಮಾಡಿಕೊಂಡುಆಸೆಯನ್ನು ಅರಳಿಸಿದ ಕಡಲು ಅವನು.ಅಲೆಗಳು ಎಷ್ಟೇ ಅಪ್ಪಳಿಸಿದರೂಆಳದಲ್ಲಿ ಶಾಂತಿಯನ್ನು ಕಾಪಾಡುವವನು. ——— ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು” Read Post »

ಕಾವ್ಯಯಾನ

“ಸ್ನೇಹದ ಕಡಲು”  ವಿಜಯಲಕ್ಷ್ಮಿ ಹಂಗರಗಿ

ಕಾವ್ಯ ಸಂಗಾತಿ  ವಿಜಯಲಕ್ಷ್ಮಿ ಹಂಗರಗಿ ಸ್ನೇಹದ ಕಡಲು ಹಲವು ನದಿಗಳು ನಿನ್ನೊಂದಿಗೆ ಬೆರೆತಿವೆವೈವಿಧ್ಯಮಯ ಜೀವರಾಶಿ ಒಡಲೊಳಗೆ ಅಚ್ಚರಿಯಜೀವ ರಾಶಿ ಅಡಗಿದೆನೀನಲ್ಲವೇ ಸ್ನೇಹ ಕಡಲು ಒಲವಿನ ಒಡಲು // ಮನುಷ್ಯನೊಂದಿಗೆ ಅವಿನಾಭಾವ ಸಂಬಂಧನೀನಿಲ್ಲದೆ ಬದುಕಿಲ್ಲ ವೈವಿಧ್ಯಮಯ ಮೀನುಗಳುನಿನ್ನ ಉದರದಲ್ಲಿ ಅಡಗಿವೆ ನೀನೊಂದು ಅದ್ಭುತಅವಿಸ್ಮರಣೀಯತಾಣ!ಜನಮಾನಸದಲ್ಲಿಉಳಿಯುವ ಸಂಭ್ರಮದ ಕ್ಷಣ… ಬಣ್ಣ ಬಣ್ಣದ ಸುಂದರ ಮೀನುಗಳು, ಸಸ್ತನಿಚಿಕ್ಕ- ದೊಡ್ಡ , ಉದ್ದಗಲ ಬೃಹಕಾರದ ಜಲಚರಗಳುಹವಳ ಮುತ್ತುಗಳರಾಶಿ ಸುರಿದಿದೆ ಅಂಗಳದಲ್ಲಿ ಆಡಿನಲಿವ ಹೂ… ಮೊಸಳೆ ತಿಮಿಂಗಿಲಗಲಿಗಿಲ್ಲ ಭಯ!ನಿನ್ನ ಹೃದಯದಲ್ಲಿ ಆಡುವ ಅಪೂರ್ವ ಜೀವರಾಶಿಗಳು ಆಳಕ್ಕೆ ಹೋದಂತೆಲ್ಲ ಕುತೂಹಲ ಅಗೋಚರ ಜಲಚರಗಳು ಅವುಗಳ ಅಡಿಯಲ್ಲಿ ಅನೇಕ ಬಗೆಯ ಸಸ್ತನಿಗಳು ಕಣ್ಮನ ಸೆಳೆಯುವ ಅಂದಮಾನವ ಸ್ನೇಹಿ ಕಡಲು… ನಿನ್ನ ಏರಿಳಿತ ಕುಣಿತ ನೋಡಲೇಷ್ಟು ಚಂದ ಸುಂದರ ಸಂಜೆ ಸಮಯ ನಿನ್ನ ಅಬ್ಬರ ಹೇಳತಿರದು, ಹುಣ್ಣಿಮೆಯ ದಿನವಂತೂ ನಿನ್ನ ನೋಡಲು ಸಾಗರೋಪಾದಿಯಲ್ಲಿ ಬರುವರು ಜನಅನತಿ ದೂರದಿಂದ ಬರುವ ನಿನ್ನ ಅಲೆಗಳೊಂದಿಗೆ ಚೆಲ್ಲಾಟ… ಆಡುವ ಮಕ್ಕಳು ಯುವ ಪ್ರೇಮಿಗಳು ವೃದ್ಧರು ಕೈ ಕಾಲು ಬಡಿಯುತ್ತಾಬಡಿತದ ರಬಸಕ್ಕೆ ನೀರು ಮುತ್ತಿನಂತೆ ಮುತ್ತನ್ನು ಚೆಲ್ಲಿದಂತೆ ಸಾಗರಕ್ಕೆ ಬೀಳುವ ಆ ಮನೋಹರ ದೃಶ್ಯ ಕಣ್ಮನ ತುಂಬಲು ಹರುಷ …. ಸೂರ್ಯೋದಯ, ಸೂರ್ಯಾಸ್ತದಿ ಕೆಂಪು ದೀಪ ಉರಿದಂತೆ ಬಂಗಾರದ ನೇಸರ ಹರಡಿದಂತೆ ಚೆಲುವಿನ ಚಿತ್ತಾರ ನಯನ ಮನೋಹರ ನೋಟ ಪ್ರೇಮಿಗಳ ಸ್ನೇಹ ಕಡಲು ನೀನು… ಎತ್ತ ನೋಡಿದತ್ತ ನೀರೇ ನೀರು ಮುಗಿಲು ಭೂಮಿ ಕೂಡಿದಂತೆ ನೋಟ ಅಲ್ಲಲ್ಲಿ ಗಿಡಗಳಿಂದ ಆವರಿಸಿದ ದ್ವೀಪಗಳು ಹಡಗು ಬೊಟಿನಲ್ಲಿ ರಮ್ಯ ಸ್ಥಾನಗಳ ವೀಕ್ಷಿಸಲು ಪಯಣ… ಕಡಲ ತಟದಿ ಎತ್ತರದ ತೆಂಗಿನ ಮರ, ವಿಲ್ಲಾಗಳು ಸುಂದರ ಸೊಬಗುಸಾಗರ ತಟದಲ್ಲಿ ಹರಡಿರುವ ಮರಳು ಅಲ್ಲಲ್ಲಿ ಶಂಖ ಚಿಪ್ಪುಗಳ ಬಣ್ಣ ಬಣ್ಣದ ಸುಂದರ ಕಲ್ಲುಗಳ ಮಧ್ಯೆ ಬರಿಗಾಲಿನದಿ ನಡೆದಾಡುವ ಹೆಜ್ಜೆಯ ಗುರುತು ಅಬ್ಬ ಎಂಥಹ ಸುಂದರ ನೋಟ … ಮೀನುಗಾರರಿಗೆ ಅಲ್ಲಿಯ ನಿವಾಸಿಗಳಿಗೆ ನೀನು ಕೊಟ್ಟಿರುವ ಈ ಬದುಕುನೀನಿರದಿದ್ದರೆ ಅವರದು ಬವಣೆ ಊಹಿಸಲು ಅಸಾಧ್ಯ!ಜೀವನಕ್ಕೆ ಜೀವ ಕೊಟ್ಟ ನಿಧಿ ನೀನುಸ್ನೇಹದ ಕಡಲು ನೀನು… ನೀ ಮುನಿಯಲು ಸುನಾಮಿ ಸಂಕಟ ಮುಗಿಲೆತ್ತರಕ್ಕೆ ಆರ್ಭಟ ಊರಿಗೆ ಊರು ಜಲ ಸಮಾಧಿ ಅರ್ಭಟಿಸುವೆಆರ್ಭಟಿಸಿ ಹುಟ್ಟಿಸದಿರು ದ್ವೇಷ ಕಳೆದು ಸ್ನೇಹ ಪ್ರೀತಿ ನೀಡು ಸಕಲ ಜೀವಕೆ ಜೀವಾತ್ಮ ನೀನೇ ಸ್ನೇಹದ ಕಡಲು… ಬಸವಾದೀಶರಣರಂತೆ ಶಾಂತ ಸಾಗರ ಜಗದ ನೋವನ್ನುಂಡು ಪ್ರಶಾಂತ ಮೆರೆದ ಕಡಲು, ಒಡಲು ನೀಏಕ ಚಿತ್ತದಿ, ಪ್ರಸನ್ನತೆಯಿಂದ ಕೂಡಿದ ಮಡಿಲು ನಿನ್ನದುನಿನ್ನಂತೆ ನಾನಾಗುವೆ ಸ್ನೇಹದ ಕಡಲು… ————- ವಿಜಯಲಕ್ಷ್ಮಿ ಹಂಗರಗಿ

“ಸ್ನೇಹದ ಕಡಲು”  ವಿಜಯಲಕ್ಷ್ಮಿ ಹಂಗರಗಿ Read Post »

ಕಾವ್ಯಯಾನ

“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್

ಕಾವ್ಯ ಸಂಗಾತಿ “ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ ನನ್ನವನ ಸ್ವಗತ ನೀನಿಲ್ಲದೆ….. ಏಳಬೇಕು ಎಬ್ಬಿಸಲು ನೀನಿಲ್ಲಅಲಾರಾಂ ಹೊಡೆದುಕೊಳ್ಳುತ್ತದೆಈಗ ನಿನಗೆ ನಾನೇ ಗತಿ ಏಳುತ್ತೇನೆ ಅಡುಗೆ ಮನೆ ಕಡೆ ನೋಡುತ್ತೇನೆ.ಬಳೆಗಳ ಸದ್ದಿಲ್ಲದೆ ಸುಮ್ಮನಾಗುತ್ತೇನೆಪೆದ್ದನಂತೆ ಬಿಸಿ ನೀರು ಕಷಾಯ ಕಾಫಿ ಕುದಿಸುವವರಿಲ್ಲನಾನೇ ಕುದಿಯುತ್ತೇನೆ ಒಮ್ಮೊಮ್ಮೆಎದುರಾಳಿ ನೀನಿಲ್ಲದೆ ಕಸಗುಡಿಸಿ ನೀರು ಚಿಮುಕಿಸುತ್ತೇನೆತಳಿವುಂಡ ಅಂಗಳ ಅಣಕಿಸುತ್ತದೆರಂಗೋಲಿ ಎಳೆಯುವ ನೀನಿಲ್ಲದೆ ಅಡುಗೆ ಮನೆಯೊಳಗೆ ಬರುತ್ತೇನೆಏನಾದರೊಂದನ್ನು ಬೇಯಿಸಿಕೊಳ್ಳಲೇಬೇಕುಹೊರಗಡೆ ಏನನ್ನು ತಿನ್ನುವ ಹಾಗಿಲ್ಲ ಮೂರು ಗೆರೆ ದಾಟಲಾರದ ಸಂಕಟಕೈಸುಟ್ಟುಕೊಳ್ಳುವುದುಅನಿವಾರ್ಯ ನಾನು ನಳನಂತೆ ಅಲ್ಲದಿದ್ದರೂ ಒಲೆಯ ಮೇಲಿಟ್ಟ ಹಾಲು ಉಕ್ಕದಂತೆಮಾಡಲಿಟ್ಟ ಉಪ್ಪಿಟ್ಟು ತಳ ಹತ್ತದಂತೆನೋಡಿಕೊಳ್ಳಬೇಕು ಮೈ ತುಂಬಾ ಕಣ್ಣಾಗಿ ಸ್ನಾನಕ್ಕೆ ಬಿಟ್ಟುಕೊಂಡ ಬಿಸಿನೀರುತುಂಬಿ ಹೊರ ಚೆಲ್ಲುತ್ತದೆಗ್ಯಾಸ್ ವೇಸ್ಟ್ ಆಗುತ್ತೆ ಎಂದು ಮಕ್ಕಳಿಗೆ ಬಯ್ಯುವನಾನು ಈಗ ಅವಳಿಲ್ಲದೆ ನಾನೇ ಮಗುವಾಗಿದ್ದೇನೆ ಏನೊಂದು ತೋಚದು ಅವಸರದಲ್ಲಿಟಿಫಿನ್ ಬಾಕ್ಸ್ ಸಿದ್ಧಗೊಳಿಸಿಕೊಳ್ಳುವುದುದೊಡ್ಡ ಯುದ್ದದಿನವೂ ಅವಳ ಮೆನು ಮೆಸೇಜ್ನೋಡಿ ಸಾಕಾಗಿ ಬಿಟ್ಟಿದೆ ಸ್ವೀಟ್ ಅಂತೆ ಹಣ್ಣಂತೆ ಕಾಳುಗಳಂತೆಮತ್ತೆ ಮೇಲೆ ಟಿಫನ್ ಅಂತೆಅಯ್ಯೋ…. ಯಾಕಾದರೂಹೋದಳೊ ಇವಳು ಊರಿಗೆ ಏನಾದರೊಂದು  ಮರೆಯುತ್ತೇನೆಗಡಿಬಿಡಿಯಲ್ಲಿ ಪುಸ್ತಕ ಪೆನ್ನು ಡೈರಿಒಮ್ಮೊಮ್ಮೆ ಮೊಬೈಲ್ ಬೈಕ್ ಕೀ ಮತ್ತೆ ಒಳಗೆ ಬರುತ್ತೇನೆಹಿಂಬಾಗಿಲು ಮುಂಭಾಗಲುಲಾಕ್ ಮಾಡಿದ್ದೇನೊ ಇಲ್ಲವೋಎನ್ನುವ ಸಂಶಯ ಹೀಗೆ …. ಅವಳು ಹೋದಾಗಿನಿಂದದಿನಚರಿಯ ದಿಕ್ಕು ತಪ್ಪಿದೆ ————– ಡಾ. ಮೀನಾಕ್ಷಿ ಪಾಟೀಲ್

“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ Read Post »

You cannot copy content of this page

Scroll to Top