ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಗಜಲ್ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನಿನ್ನತನವ ತಿಳಿಯದೇಕೆ ಸಣ್ಣತನವ ಮೆರೆವೆ ಮನವೇಅಂತರಾಳ ಅರಿಯದೇಕೆ ಮೊಂಡುತನವ ಮೆರೆವೆ ಮನವೇ ಕಂಡದ್ದೆಲ್ಲಾ ಕಂಡಂತಿರದೆಂಬ ಸತ್ಯವೇ ತಿಳಿಯಲಿಲ್ಲ ನಿನಗೆಒಡಲಾಳದ ಒಲವನರಿಯದೇಕೆ ಹುಚ್ಚುತನವ ಮೆರೆವೆ ಮನವೇ ಜಗದ ಜಂಜಡಗಳಲೆಲ್ಲಾ ನಮ್ಮ ಮಂದಿಯ ಸಂತೆಯ ಕಂತೆಹೃದಯ ವೈಶಾಲ್ಯವನರಿಯದೇಕೆ ಸಂಕುಚಿತವ ಮೆರೆವ ಮನವೇ ಅವರಿವರೆಂಬುದೆಲ್ಲ ಬಲ್ಲವರ ಬಲದಿ ಉಳಿಯಬಹುದಿತ್ತೇ ಇಲ್ಲಿಹಸನೆದೆಯ ಹಸಿರ ಬಯಲದಲೇಕೆ ಕೆಟ್ಟತನವ ಮೆರೆವೆ ಮನವೇ ಜಾತಿ ಗೀತಿ ಮತಧರ್ಮ ಬೆನ್ನತ್ತಿ ಅವನತಿಯ ಮುಳ್ಳು ಹಾದಿಮನುಜ ಮತದಲೇಕೆ ಮೇಲು ಕೀಳು ಬಿರುಕವ ಮೆರವೆ ಮನವೇ ಅನುಮಾನ ಕುಹಕ ದುಷ್ಟ ಬುದ್ಧಿಗಳ ಥಳಿಸಲಿಲ್ಲ ದೇವನಾ ಚಾಟಿವಿಶ್ವಮಾನವೀಯತೆಯಲೇಕೆ ಕೋಮುವಾದವ ಮೆರೆವೆ ಮನವೇ ದುರಾಸೆಯ ಬೆನ್ನತ್ತಿಹ ಭ್ರಷ್ಟ ಅತ್ಯಾಚಾರಕೆ ನೊಂದಿಹಳು ಅನುಳುಮರುಕ ಮನುಕುಲದ ಧರೆಯಲೇಕೆ ಸ್ವಾರ್ಥತನವ ಮೆರೆವೆ ಮನವೇ ——– ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »









