ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುಣ ದೋಷ ಸಂಪಾದನೆ ಮಾಡುವನ್ನಕ್ಕ ಕಾಮದ ಒಡಲು
ಕ್ರೋಧದ ಗೊತ್ತು ಲೋಭದ ಇಕ್ಕೆ
ಮೋಹದ ಮಂದಿರ
ಮದದ ಆವರಣ ಮತ್ಸರದ ಹೊದಿಕೆ
ಆ ಭಾವವರತರಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿಯುವುದಕ್ಕೆ ಇಂಬಿಲ್ಲ

ಈ ಶರೀರ ಎನ್ನುವುದು ಒಂದು ರೀತಿಯಲ್ಲಿ ಕಾಮದ ಒಡಲು (.ಈ ಅರ್ಥ ಹೇಳಬೇಕಾದರೆ, ಅಕ್ಕಳು ಹಾಕಿದ ಮೂರು ವಚನಗಳನ್ನು ಮುರಿದ ಕೌಶಿಕನ ನಡೆಗೆ ಈ ಮಾತುಗಳು ಬಂದಿರಲು ಸಾಧ್ಯ .)
ಕಾಮ , ಕ್ರೋಧ ಲೋಭ,ಮೋಹದ ಮಂದಿರದಂತೆ ಇರುವ ಈ ತನುವಿಗೆ , ಮತ್ಸರದ ಹೊದಿಕೆ
ಹೀಗೆ ಅರಿಷಡ್ವರ್ಗಗಳ ದಾಸರಾಗಿ,ಇರುವ ಈ ದೇಹ ನಿಮ್ಮ ನ್ನು ಭಕ್ತಿಯಿಂದ ಅರಿಯುವುದಕ್ಕೆ ಅವಕಾಶವೇ ಇಲ್ಲವಾಗಿದೆ ಎನ್ನುವರು ಅಕ್ಕ.

ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟುವೆನು ಗಂಡುಗಚ್ಚೆಯ
ತಿರುಗನೇರಿಸಿ ತಿಲಕವವಿಟ್ಟು
ಕೈದುವ ಕೊಂಡು ಕಳನೇರಿದ ಬಳಿಕ
ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ

ನೀನಾಡಿದ ಆಳುತನದ ಮಾತುಗಳು ಮುಂದುವರೆಸದಿರು ಕೌಶಿಕ ಮಹಾರಾಜ.ಕಟ್ಟುವೆನು ನಾನೂ ಕೂಡಾ, ಗಂಡುಗಚ್ಚೆಯ ಕಟ್ಟಿ .ಹಣೆಗೆ ಸಿಂಧೂರ ಬೊಟ್ಟು ಇಟ್ಟುಕೊಂಡು, ಕೈಯಲ್ಲಿ ಆಯುಧ ಹಿಡಿದುಕೊಂಡು ಯುದ್ಧಕ್ಕಿಳಿಯುವೆ . ಇದಿರು ಹಳಿದರೆ ಹೋರಾಡಿ ಬಿಡುವೆ.
ತೆಗಳಬೇಡ ಎನ್ನನ್ನು.
ಮಾತಿನಿಂ ಕದನ ಮಾತಿನಿಂ ಒಲುಮೆ .ಮಾತಿನಿಂ
ಗೆಲುಮೆನುಡಿಯದಿರು.ಆಳುತನದ ಮಾತುಗಳ ನುಡಿಯಲೇತಕೆ.? ಇಳಿದು ಬಿಡುವೆ ಸಮರಕ್ಕೆ .ಒಮ್ಮೆ ಕಟ್ಟಿದ ಗಂಡು ಗಚ್ಚೆಯವ ಮತ್ತೆ ಬಿಚ್ಚಿದರೆ  ಚೆನ್ನಮಲ್ಲಿಕಾರ್ಜುನನ ಮೇಲೆ ಆಣೆ .

ಘನವ ಕಂಡೆ ಅನುವ ಕಂಡೆ
ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ ಅರಿವರಿದು ಮರಹ
ಮರೆದೆ

ಕುರುಹಿನ ಮೋಹ ಮೂರೆಗೆಡದೆ ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ನರಿದು ಸೀಮೆ ಗೆಟ್ಟೆನು

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮನ್ನು ನೆನೆಯುತ್ತಾ ನೆನೆಯುತ್ತಾ,ಪೂಜಿಸುತ್ತಾ ಪೂಜಿಸುತ್ತಾ ಆಯತ, ಸ್ವಾಯತ, ಸನ್ನಿಹಿತ ಸುಖವ ಕಂಡೆ
ನನ್ನ ಅರಿವಿನ ಗುರು ಪಾದವ ಕಂಡೆ .ಗುರು ಕೊಟ್ಟ ಕುರುವು ಲಿಂಗದ ಮೋಹ ಕಂಡೆ.ಚೆನ್ನಮಲ್ಲಿಕಾರ್ಜುನಾ ನಿಮ್ಮ ಅರಿಯಲು ಹೋಗಿ ಸೀಮೆ ಗೆಟ್ಟೆನು.

ಹಿಡಿವೆನೆಂದಡೆ ಹಿಡಿಗೆ ಬಾರನವ್ವ
ತಡೆವೆನೆಂದೊಡೆ ಮೀರಿ ಹೋದನವ್ವ
ಒಪ್ಪಚ್ಚಿ ಅಗಲಿದೊಡೆ ಕಳವಳಗೊಂಡೆ
ಚೆನ್ನಮಲ್ಲಿಕಾರ್ಜುನನ ಕಾಣದೆ
ಆನಾರೆಂದರಿಯೆ ಕೇಳಾ ತಾಯೆ

ಅಕ್ಕಳು ಚೆನ್ನಮಲ್ಲಿಕಾರ್ಜುನನ್ನು ತನ್ನ ಮನದಲ್ಲಿ ಸ್ಮರಿಸಿಕೊಳ್ಳುತ್ತಾ .ಏ ಅವ್ವಾ ನನ್ನ ಚೆನ್ನಮಲ್ಲಿಕಾರ್ಜುನನ್ನು ಹಿಡಿಯಲು ಹೋದರೆ ನನ್ನ ಕೈಗೆ ಹಿಡಿಯಲು ಆಗುತ್ತಿಲ್ಲ .ತಡೆದು ನಿಲ್ಲಿಸೋಣ ಎಂದರೆ , ತಡೆಯನ್ನು ಮೀರಿ ಹೋದನವ್ವ.ಒಪ್ಪಿದ ಚೆನ್ನಮಲ್ಲಿಕಾರ್ಜುನನ್ನು ನಾನು ಹೇಗೆ? ಅಗಲಿ ಇರಲವ್ವ.ಕಳವಳಗೊಳ್ಳುತ್ತಿದೆ ಎನ್ನ ಮನ . ಒಂದು ಕ್ಷಣ ಅಗಲಿ ಹೋದರೆ ಸಾಕು ನನಗೆ, ತಾಳದಾಗಿದೆ ಮನ.ಎನ್ನ ಮನ ಚೆನ್ನಮಲ್ಲಿಕಾರ್ಜುನನ್ನು ಕಾಣದೇ ಕನವರಿಸುತ್ತಿದೆ .ಏಕೆ ಹೀಗೆ ಆಗುತ್ತಿದೆ ಹೇಳವ್ವ.ನಾನಾರು ಅವನಾರು ? ನನ್ನವ್ವ .

ಕಾಮಿಸಿ ಕಲ್ಪಿಸಿ ಕುಂದಿದೆನವ್ವ
ಮೋಹಿಸಿ ಮುದ್ದಿಸಿ ಮರುಳಾದೆನವ್ವ
ತೆರೆಯದೆ ತೊರೆಯದೆ ನಲಿದು ನಂಬಿದೆ ನಾನು
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನ ನೊಲ್ಲದೊಡೆ ಆನೇವೇನವ್ವ

ಕಾಮಿಸಿ ಕಲ್ಪಿಸಿಕೊಂಡ ಎನ್ನ ಮನ ಕುಂದಿ ಹೋಗುತ್ತಿದೆ ಎನ್ನವ್ವಾ . ಚೆನ್ನಮಲ್ಲಿಕಾರ್ಜುನನ್ನು ಮುದ್ದಿಸಿದೆ ,ಮೋಹಿಸಿದೆ .ಕೊನೆಗೆ ಆತನ ನೆನಪಿನಲ್ಲೇ ಮರಳು ಆಗಿ ಬಿಟ್ಟೆ ನನ್ನವ್ವಾ.ಆತನನ್ನು ತೊರೆಯಲು ಆಗುತ್ತಿಲ್ಲ .ಬಿಡಲು ಆಗುತ್ತಿಲ್ಲ.ನಂಬಿದೆ ಅಗಾಧವಾಗಿ ಆತನನ್ನೇ ನಂಬಿ ಕೌಶಿಕನನ್ನು ತೊರೆದು ಬಂದೆ .ಬಿಕ್ಕಿದೆ ಬಳಲಿದೆ,ಬಸವಳಿದೆ . ಬಲವಾಗಿ ನಂಬಿ ಬಿಟ್ಟಿದ್ದೆ ನನ್ನವ್ವಾ.ಬಿಟ್ಟಿರಲಾರದ ಎನ್ನ ಚೆನ್ನಮಲ್ಲಿಕಾರ್ಜುನನ್ನು ಹೇಗೆ? ಮರೆತು ಇರಲಿ .ಆತ ಒಲ್ಲೆ ಎಂದರೆ ನಾನೇನು ಮಾಡಲವ್ವಾ .ಎಲ್ಲಿಗೆ ಹೋಗಲಿ ಎನ್ನವ್ವಾ.


About The Author

Leave a Reply

You cannot copy content of this page

Scroll to Top