ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು

ಬದುವಿನ ತುಂಬೆಲ್ಲಾ
ಹಸಿರಿನ ಸೆರಗು,
ಮುತ್ತಿನಂತೆ ಕಾಣುವ
ಇಬ್ಬನಿಯ ಮೆರಗು.
ಬಿರುಗಾಳಿ ಗುಡಿಸಿ
ಮೋಡ ಚಿಮುಕಿಸಿತು,
ಮೂಡಿ ಕಾಮನಬಿಲ್ಲು
ರಂಗೋಲಿ ಬಿಡಿಸಿತು.
ಕುಹೂ ಕುಹೂ ಕೋಗಿಲೆ
ಧ್ವನಿಗೆ ಪ್ರತಿಧ್ವನಿ,
ನನ್ನ ಅನುಕರಣೆ
ಎಂದ, ಕೂಗಿದ ಕಂದ.
ಕತ್ತಲೆ ಆವರಿಸಿ
ಹೊರಟನು ಸಮೀರ,
ಹೆದರದಿರು ನೀನು
ಬಂದೆನೆಂದ ಚಂದಿರ.
ತಿರುವು ಎಷ್ಟಿದ್ದರೂ
ತಿರುಗಿಯೂ ನೋಡದೆ,
ಮುಂದೆ ಸಾಗುವ ನದಿ
ಪಾಠ ಕಲಿಸುತಿದೆ.
ತೋಟದಿ ಅರಳಿದ
ಮಲ್ಲಿಗೆಯ ವಾಸನೆ
ಏನನ್ನೂ ನೆನಪಿಸಿ
ಮನೆಗೆ ಕಳುಸಿತು.
ವ್ಯಾಸ ಜೋಶಿ




