ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ʼಮನಃಸಾಕ್ಷಿʼ


ಕೇಳದೇ ಬಂದೆ
ಹೇಳದೇ ಹೋದೆ
ಬಂದು ಹೋದ
ಗಳಿಗೆಗಳು
ಪ್ರಶ್ನೆಗಳಾದವು
ನನ್ನ ಕಂಗಳಲ್ಲಿಯ
ನಿನ್ನ ಪ್ರತಿಬಿಂಬದ
ಮನಃಸಾಕ್ಷಿಯಾಗಿ
ನೀ ಹೇಳಬೇಕಿತ್ತು
ದಿಟವಾಗಿ ನಿಂತು
ಉತ್ತರ
ಸೋತ ಮನಸ್ಸಿಗೆ
ಬೇರಾಗಬೇಕಿತ್ತು
ಭಾವನೆಗಳೊಂದಿಗೆ
ಉಯ್ಯಾಲೆ ಆಡದೆ
ಮಾಜಾನ್ ಮಸ್ಕಿ
ಮಾಜಾನ್ ಮಸ್ಕಿ



