ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ʼಸಾಗರ ಸೇರಿದ ಹರಿವುʼ


ಬದುಕು ಬೆಳೆದಂತೆಲ್ಲಾ
ಬೆಳೆಯಲಿಲ್ಲ ಬವಣೆ
ಬವಣೆಗೂ ಬೇಡವೇ ಬೆಣೆ!
ಬವಣೆಗೂ ಉಂಟು
ಬೇಲಿಗಳ ನಂಟು
ಭೋರ್ಗರೆವ ಜಲಪಾತಗಳ
ಧುಮ್ಮುಕ್ಕುವಾಟದ ನಂಟು.
ಸುತ್ತಿ ಕೊರಕಲುಗಳ ಮುಟ್ಟಿ
ಸನ್ಮಿತ್ರರ ಘಮ ಘಮದ ಅಂಟು
ಮತ್ತು
ಅಯೋಗ್ಯರ ಅಪಾತ್ರರ
ಅಮಲುಗಳ ದುರ್ಗಂಧಗಳ
ಅನ್ಯಾಯಗಳ ಅಧ್ಯಾಯಗಳ
ಕೊಳೆತ ನಾತಗಳ ನಂಟು
ಇದೀಗ
ಬವಣೆಗಳ ಶಿಖರ ಅಂತಿಮವಾಗಿ
ಕಾಯುವಿಕೆ ಪ್ರಖರವಾಗಿ
ಹರಿವ ನದಿ ವಿಶಾಲ ಸಾಗರ ಸೇರುವ ಅಂತಿಮ ಮುಕ್ತಿ.
ಒಡಲಲ್ಲಿ ಅಡಗಿಸಿ
ಹೊಳೆ ಮೀನು ಮೊಸಳೆ ಏಡಿ
ಮೇಲೆ
ಬಂದು ಸೇರಿದ ಕಡಲ ಹಕ್ಕಿಗಳೇ
ಒಡನಾಡಿ
ನೀವಿನ್ನು ಹೊರಡಿ ನನ್ನ ನಡೆ
ವಿಶಾಲ ಸಾಗರ ದೆಡೆ
ನಾನೀಗ ಸಾಗರ
ಬರುವೆನು ಆಗಾಗ
ದಡಕ್ಕಪ್ಪಳಿಸುವ ತೆರೆ!
ಅವಿರತ
ಅಘೋಷಿತ
ಅನಿಯಮಿತ
ಡಾ ಡೋ ನಾ ವೆಂಕಟೇಶ




Wow super
Thank you
ಬಹಳ ಸುಂದರ ಕವನ ……. ಡಾ. ಕೆ. ಬಿ. ಸೂರ್ಯಕುಮಾರ್
Surya thank you
Super Bhavoji
Thank you Sona
ಕವನ ತುಂಬಾ ಚೆನ್ನಾಗಿದೆ.
Thank you