ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ

ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ
ಸೂರ್ಯಕಾಂತದ ಅಗ್ನಿಯನು ಯಾರು ಭೇದಿಸಬಲ್ಲರು ?
ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ
ನೀವೆನ್ನಳಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದಿರೆದೆನು
ಈ ಸೃಷ್ಟಿಯು ಭಗವಂತನ ಪ್ರೇರಣೆ.ಭಗವಂತನ ಅನುಗ್ರಹದಿಂದ ಎಲ್ಲವೂ ನಡೆಯುವುದು ಎನ್ನುವ ನಂಬಿಕೆ ಎಲ್ಲರಲ್ಲಿ .
ಕೆಲವೊಂದು ವೈಜ್ಞಾನಿಕವಾಗಿ ಯೋಚಿಸಿದರೆ . ಇನ್ನೂ ಕೆಲವೊಂದನ್ನು ಅಧ್ಯಾತ್ಮಿಕ ಹಿನ್ನೆಲೆಯಲ್ಲಿ ನೋಡಬಹುದಾಗಿದೆ .
ಈ ಸೃಷ್ಟಿಯ ಪರಮಾತ್ಮನ ಲೀಲೆಯಿಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡದು.ಹಾಗೆ ಕೆಲವೊಂದನ್ನು ರಹಸ್ಯವಾಗಿ ವಸ್ತುಗಳಲ್ಲಿ ಗೌಪ್ಯವಾಗಿರಿಸಿದ ಪರಮಾತ್ಮನ ಸೃಷ್ಟಿ ಅನನ್ನವಾದುದು .
ತಾರ್ಕಿಕ ಚಿಂತನೆಯ ಅನುಭಾವದ ಹಿನ್ನೆಲೆಯಲ್ಲಿ ಯೋಚಿಸಿದಾಗ ಎಲ್ಲವೂ ಆತನ ಲೀಲೆಯೇ .
ಭಗವಂತನ ಮಾಯೆಯೇ .
ಜಗತ್ತಿನ ಚರಾಚರ ಜೀವ ಸೃಷ್ಟಿಯ ವಸ್ತು ನೆಲೆ ಅಮುರ್ತತೆಯೇ ಸರಿ .
ಎಲ್ಲಾ ವಸ್ತುಗಳ ಮಾಯಾ ಪುರುಷ ಭಗವಂತನ ಅನುಪಾಲನೆ . ಭಗವಂತನ ಲೀಲಾ ಜಾಲವೇ ಸರಿ .
ಇಲ್ಲಿ ತೋರಿಕೆಯ ಭಕ್ತಿಯಿಂದ ಎನು ಪ್ರಯೋಜನ . ಆಂತರಿಕ ಅನುಭಾವಾತ್ಮಕ ನುಡಿ ವಚನಗಳ ಸತ್ಯಾ ಸತ್ಯತೆಯ ಒಳ ಹೂರಣ ಭಾವ ನೆಲೆಯನ್ನು ಅಕ್ಕನ ಈ ಒಂದು ವಚನದಲ್ಲಿ ಕಾಣಬಹುದಾಗಿದೆ .
ಕಾಣುವ ಕಂಗಳಿಗೂ ಗೌಪ್ಯವಾಗಿರುವ ಹಾಲಿನಲ್ಲಿರುವ ತುಪ್ಪ . ಸೂರ್ಯನೊಳಗಿರುವ ಶಾಖವನ್ನು ವ್ಯಕ್ತಿಯ ಕಂಗಳಿಗೆ ಗೌಪ್ಯವಾದುದು . ಹಾಗೆ ನನ್ನ ಚೆನ್ನಮಲ್ಲಿಕಾರ್ಜುನನ ನೆಲೆ ಎನ್ನುವರು ಅಕ್ಕ . ಅಕ್ಕನವರ ಭಾವ ತಿವ್ರತೆ ಮನ ಕಲಕಿ ಶಾಂತ ನಿರಾಳತೆಯ ವಿರಕ್ತ ಭಾವವನ್ನು ತಾಳುವ ಪರಿ .ಅಕ್ಕನ ವರಿಗೆ ಅಲ್ಲದೇ ಮತ್ತಾರಿಗೂ ಸಾಧ್ಯವಿಲ್ಲ
ಅಕ್ಕನವರ ವಚನಗಳ ಅನುವಾದ ನುಡಿ ಸವಾಲು ಅಕ್ಕನವರಿಗೆ ಅಲ್ಲದೇ ಬೇರೆ ಯವರ ವಚನಗಳಲ್ಲಿ ನಾವು ಕಾಣಲಾರೆವು .ಕಂಡರೂ ಕೂಡಾ ಅದು ಅಕ್ಕನವರು ಚೆನ್ನಮಲ್ಲಿಕಾರ್ಜುನನನ ಮೇಲೆ ಇಟ್ಟಿರುವ ಭಕ್ತಿ ಭಾವ ಕ್ಕೆ ಸಮಾನವಾಗಿ ನಿಲ್ಲಲಾರದು .
ಹಾಲು ಮೊಸರು, ತುಪ್ಪ ಎಲ್ಲವೂ ಪರಮಾತ್ಮನ ಸೃಷ್ಟಿಯ ಲೀಲೆ
ಇಂಥಹ ಸೃಷ್ಟಿಯ ಜಗದ ತುಂಬೆಲ್ಲ ಆ ಪರಮಾತ್ಮನು ವ್ಯಾಪಿಸಿಕೊಂಡಿರುವ ಸತ್ಯವನ್ನು ಯಾರಿಗೂ ಮಿತ್ಯವಾಗಿಸಲು ಸಾಧ್ಯ ವಿಲ್ಲ .
ಹಾಲು ತುಪ್ಪವ ನುಂಗಿ ಬೆರಾಗಬಲ್ಲುದೆ
ಸೂರ್ಯಕಾಂತದ ಅಗ್ನಿಯನು ಯಾರು ಭೇದಿಸಲಾರರು .
ಹಾಲಿನಿಂದ ತುಪ್ಪವನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ಪರಮಾತ್ಮ ಸ್ವರೂಪಿ ಚೆನ್ನ ಮಲ್ಲಿಕಾರ್ಜುನನನ್ನು ಅಗಲಿಸಲು ಸಾಧ್ಯವಿಲ್ಲ .
ಹಾಲನ್ನು ಕಾಯಿಸಿ ಹೆಪ್ಪ ಹಾಕಿ ಮೊಸರು ಮಾಡಿ ಮಜ್ಜಿಗೆ ಕಡಿದು ಬೆಣ್ಣೆ ಯು ತೆಗೆದು ತುಪ್ಪ ಮಾಡುವ ಪ್ರಕ್ರಿಯೆ ಇದು .ಸರ್ವ ವ್ಯಾಪಕವಾಗಿರುವ ಪರಮಾತ್ಮನ ಸೃಷ್ಟಿಯ ನೆಲೆ ..
ಇಂಥಹ ಪರಮಾತ್ಮನ ಸೃಷ್ಟಿಯಲ್ಲಿ ಅನೇಕರು ಹಾಲಿನಂತಹ ಮನಸಿಗೆ ಮಜ್ಜಿಗೆಯ ಹುಳಿ ಹಿಂಡಿದರೂ ಸಹ ಆ ಹಾಲನ್ನು ಮೊಸರನ್ನಾಗಿ ಮಾಡಿ, ತುಪ್ಪವನ್ನು ಒಪ್ಪವಾಗಿ ಕಾಯಿಸುವ ಜಾಣ್ಮೆ ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕಾದ ಜಾಣ್ಮೆಯ ಸಂಕೇತ .
ಒಟ್ಟಿನಲ್ಲಿ ಕೆಡಿಸುವ ಜನರಿಗಿಂತ ಪರಮಾತ್ಮನ ಮೇಲೆ ಭಕ್ತಿ ಇರುವ ಜನರಿಗೆ ಭಗವಂತನನು ಬೇಗ ಒಲಿದು ಬರುವನು .
ಭಕ್ತಿಯಿಂದ ನಡೆದುಕೊಳ್ಳುವ ಭಕ್ತನು ಹಾಲು ಆದರೆ ಅದೇ ಹಾಲಿನಲ್ಲಿರುವ ಭಗವತ್ ಸ್ವರೂಪ ಪರಮಾತ್ಮ ತುಪ್ಪವಾಗಿ ಕಂಡು ಬರುವನು .
ಇಡೀ ಹಾಲಿನ ತುಂಬಾ ವ್ಯಾಪಿಸಿಕೊಂಡಿರುವ ತುಪ್ಪ ದಂತೆ. ಭಗವಂತನು ಇಡೀ ಜಗದ ತುಂಬಾ ವ್ಯಾಪಿಸಿಕೊಂಡಿರುವ ಚೈತನ್ಯ ಸ್ವರೂಪಿಯಾಗಿರುವುದನ್ನು ಅಕ್ಕನ ಈ ವಚನದಲ್ಲಿ ಕಾಣಬಹುದಾಗಿದೆ .
ಹೇಗೆ ಸೂರ್ಯನ ಶಾಖವನ್ನು ಸೂರ್ಯನಿಂದ ಬೇರ್ಪಡಿಸಲು ಸಾಧ್ಯವಿಲ್ಲವೋ ,ಹಾಗೇ ಪರಮಾತ್ಮನು ಸರ್ವವ್ಯಾಪಕನಾಗಿರುವನು . ಸೂರ್ಯನಿಂದಲೇ ಚರಾಚರ ಜೀವ ರಾಶಿಗಳ ಬದುಕೂ ಕೂಡಾ .ಆ ಸೂರ್ಯನ ಬೆಳಕಿನಿಂದಲೇ .ಈ ಸೃಷ್ಟಿಯ ಉಗಮ ಹಾಗೂ ಬದೂಕು ಕೂಡಾ . ಹಾಗೆ ಅಕ್ಕಳಿಗೆ ಆ ಭಗವಂತನೇ ಬೆಳಗು ಮತ್ತು ಬೆಳಕೂ ಆಗಿರುವನು .
ಅಪಾರ ಮಹೀಮ ಚೆನ್ನಮಲ್ಲಿಕಾರ್ಜುನಾ ನೀವೆನ್ನಳಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದಿರೆದೆನು
ಇಂಥಹ ಸೃಷ್ಟಿಯ ಜಗದಲ್ಲಿರುವ ನಿರಾಕಾರ ಅಗಮ್ಯ ಚೇತನ ಸ್ವರೂಪ ಪರಮಾತ್ಮನ ವಾಸಸ್ಥಳವೇ ಎನ್ನ ಕರಸ್ಥಲಕ್ಕೆ ಬಂದು ಚುಳುಕಾಗಿ ನಿಂತ ಪರಿ ಅಗಮ್ಯ ಅಗೋಚರವಾದುದು .
ಎನ್ನ ಭಾವ ಹೃದಯಯದ ತುಂಬೆಲ್ಲ ವ್ಯಾಪಿಸಿಕೊಂಡಿರುವ ಆಂತರಿಕ ಹಾಗೂ ಬಾಹ್ಯ ತೀವ್ರತೆ ಹತ್ತಿರಕ್ಕೆ ನಿಂತ ನೆಲೆಯಂತಾಗಿದೆ.
ಹೇಗೆ ಹಾಲಿನಲ್ಲಿರುವ ತುಪ್ಪವನ್ನು ಬೇರ್ಪಡಿಸಲು ಸಾಧ್ಯವಿಲ್ಲವೋ . ಹೇಗೆ ಸೂರ್ಯನಿಂದ ಶಾಖವನ್ನು ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ನನ್ನ ಹೃದಯ ಭಾವದ ತುಂಬೆಲ್ಲ ವ್ಯಾಪಿಸಿಕೊಂಡಿರುವ ಈ ಚೆನ್ನಮಲ್ಲಿಕಾರ್ಜುನನನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವರು ಅಕ್ಕ.

ಡಾ ಸಾವಿತ್ರಿ ಕಮಲಾಪೂರ



