ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ

ಕಾಮನ ತಲೆಯ ಕೊರೆದು
,ಕಾಲನ ಕಣ್ಣ ಕಳೆದು,
ಸೋಮ ಸೂರ್ಯರ ಹುರಿದು ಹುಡಿಮಾಡಿ ತಿಂಬವಳಿಂಗೆ ನಾಮವನಿಡಬಲ್ಲವರಾರು ಹೇಳಿರೆ ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ ಯಮನ ಕೂಡುವ ಮರುತನಂತೆ ನೋಡಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
೧೨ ನೇ ಶತಮಾನದ ಅಕ್ಕಮಹಾದೇವಿ ಈ ಜಗತ್ತು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಗಳಿಂದ ತುಂಬಿ ತುಳುಕುವ ಈ ಜಗದಲ್ಲಿ ಅಕ್ಕಳು ಕಾಮವನ್ನು ಗೆದ್ದು ನಡೆದಳು ಬಯಲು ಬಯಲನೇ ನುಂಗಿ ಬಯಲಲ್ಲಿ ಬಯಲಾಗಿ ಹೋದ ಅಕ್ಕಳು ದಿಟ್ಟೆ ಧೀರೆಯಾಗಿ ಕಾಮವನ್ನು ಗೆದ್ದು ನಡೆದಳು ಬೀಗಲಿಲ್ಲ ಬೀಳಲಿಲ್ಲ.ಬಲ್ಲಿದರೊಳಗೆ ಬೆಲ್ಲವಾಗಿ ಬಯಲು ಸೀಮೆಯನು ಹೊಕ್ಕವಳು.
ಕಾಮಾಂಧರ ಬಿರು ನುಡಿಗಳನ್ನು ಮನದ ಕಾಮನೆಯ ಕಂಗಳಲ್ಲಿ ಸುಟ್ಟು ನಡೆದಳು .
ಈ ಸಿಟ್ಟು ಹೊಟ್ಟೆಗಳಿಗಿರುವ ಸೇಡಿನ ಸಿಟ್ಟಲ್ಲ .ಹುಸಿ ನಗೆ ಬೀರುತ್ತಾ ಹಸನಾದ ಬಾಳಿಗೆ ಹೊಸ ದಿಕ್ಕು ಕಾಣುತ್ತ ನಡೆದಳು .ಬೆಟ್ಟ ಗುಡ್ಡವ ಹತ್ತಿ ಕಲ್ಲು ಮುಳ್ಳುಗಳನ್ನು ತುಳಿಯುತ್ತಾ ನಡೆದಳು .
ಸ್ವಾಭಿಮಾನದ ಬದುಕು.ಕಾಮಾಂಧರ ಟೀಕೆಗಳನ್ನು
ದಿಟ್ಟವಾಗಿ ಎದುರಿಸಿ ನಡೆಯುವ ಅಕ್ಕನ ದೈರ್ಯಕೆ ನನ್ನದೊಂದು ದೊಡ್ಡ ಸಲಾಂ.
ಅಕ್ಕಮಹಾದೇವಿಯ ದಿಟ್ಟತನ ವರ್ಣಿಸಲು ಅಸಾಧ್ಯ. ಅಕ್ಕ ನ ವಚನಗಳಲ್ಲಿ ಬರುವ
ಸ್ವಾಭಿಮಾನ ಕೇವಲ ಸ್ತ್ರೀಪರ ಆಶಯದ್ದಾಗಿರದೆ, ಪುರುಷರಿಗೂ ಅನ್ವಹಿಸುವುದಾಗಿದೆ .
ಸ್ವಾಭಿಮಾನದ ನುಡಿ ಒಬ್ಬ ಮಹಿಳೆಯ ಬದುಕಿನ ಅನುಭವದ ಮೂಲಕ ಬರುವುದರಿಂದ ಅದು ಇನ್ನು ಹೆಚ್ಚು ಮುಖ್ಯವೆನಿಸುತ್ತದೆ. ನಾಮವನಿಡಬಲ್ಲರಾರು ಹೇಳಿರೆ? ಎಂದು ಕೇಳುವ ಪ್ರಶ್ನೆಯಲ್ಲಿ ನಿಜವಾದ ಸ್ವಾಭಿಮಾನ ಅಡಗಿದೆ.
ಅಕ್ಕಮಹಾದೇವಿಯು ಬದುಕನ್ನು ಪ್ರೀತಿಸಿ ನಡೆದವಳು ಇಹದ ಪತಿಯನ್ನು ತೊರೆದು ಅಂತರಂಗದೊಳಗಿನ ಚೆನ್ನಮಲ್ಲಿಕಾರ್ಜುನನಿಗೆ ಒಲಿದವಳು.ತನ್ನ ಎಲ್ಲಾ ಆಸೆ ಆಮಿಷಗಳಿಗೆ ಕಾರಣವಾದ ಶರೀರದ ಹಂಗು ಕಳಚಿ ಕಲ್ಯಾಣದತ್ತ ಸಾಗುವ ಪಯಣದಲ್ಲಿ ತಾಗಿರಬೇಕು ಜನರ ಕಣ್ಣಾಲಿಗೆಗೆ ಬಲಿ ಆಗಿದ್ದೀರಬೇಕು.ಜನರು ಆಡಿಕೊಂಡಿದ್ದೀರಬೇಕು. ಅಕ್ಕ ತನ್ನ ಕಿವಿಗಪ್ಪಳಿಸಿದ ಮಾತುಗಳಿಗೆ ಪ್ರತಿಕ್ರಿಯೆ ತೋರದೇ ಬರುವ ಅಕ್ಕನ ಒಳಗಿರುವ ಸಹಜ ಸಿಟ್ಟು ಎದ್ದು ಕಾಣುತ್ತದೆ. ಆದರೆ ಆ ಸಿಟ್ಟು ಸೇಡಾಗದೆ, ಸಿದ್ಧಾಂತವಾಗಿ ಅರಳುತ್ತದೆ. ಇದು ಶರಣೆಯರಲ್ಲಿರುವ ಸ್ವಾಭಿಮಾನದ ವೈಶಿಷ್ಟ್ಯತೆ. ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಘೋಷಿಸಿಕೊಳ್ಳುವುದರ ಮೂಲಕವೇ ಕಾಮನ ತಲೆ ಕೊರೆದು, ಕಾಲನ ಕಣ್ಣು ಕಳೆದು ಇಹವನ್ನು ಗೆಲ್ಲುವ ಪರಿಯ ಸ್ವಾಭಿಮಾನದ ಬದುಕಿನ ನಿಟ್ಟುಸಿರು ಕಂಡು ಬಂದಿದೆ.
ಅಕ್ಕಮಹಾದೇವಿ ಬಳಸುವ ಪ್ರತಿಮೆಗಳು, ರೂಪಕಗಳು ಓದುಗರಿಗೆ ಅಚ್ಚರಿ ಉಂಟು ಮಾಡುತ್ತವೆ. ಆಕ್ಕ ದಿಟ್ಟತನಕ್ಕೆ , ಅಕ್ಕನವರಲ್ಲಿ ಕಾಣುವ ಬದುಕಿನ ಪಯಣಕ್ಕೆ ಸರಿಸಾಟಿಯಾಗಿ ನಿಲ್ಲು ವ ಧೈರ್ಯ ಯಾರಿಗೂ ಬರದು.ಅಕ್ಕಳಿಗೆ ಅಕ್ಕಳೇ ಸಾಟಿ..
ಅಕ್ಕನವರ ಈ ವಚನದಲ್ಲಿ ಕಾಣುವ ಸಾತ್ವಿಕ ಸಿಟ್ಟಿನ ಸಹಜ ಬದುಕಿನ ಅನುಭಾವ ಜೀರ್ಣಿಸಿಕೊಳ್ಳಲೇ ಬೇಕು . ಅಕ್ಕನ ವಚನಗಳು ಕೇವಲ ೧೨ ನೇ ಶತಮಾನದ ಕಾಲಕಷ್ಟೇ ಪೂರಕವಾಗಿರದೇ ಪ್ರಸ್ತುತ ಕಾಲಕ್ಕೂ ಅನ್ವಹಿಸುವ ವಚನಗಳಾಗಿವೆ .
ಬದುಕಿನ ಸತ್ಯ ಅರಿಯದೇ ಸಾಗುವ ಅನುಭಾವದ ಬಿರು ನುಡಿಗಳ ವಚನಗಳು .ಜಗದ ಕಣ್ಣನ್ನು ತೆರೆಯಿಸುವ ಹಿತನುಡಿಗಳು
———————————————————————————————–
ಡಾ ಸಾವಿತ್ರಿ ಕಮಲಾಪೂರ




