ಕಾವ್ಯ ಸಂಗಾತಿ
ವ್ಯಾಸ ಜೋಶಿ ಅವರ
ತನಗಗಳು

ಸಂತೋಷದಿಂದಿರಲು
ಬಹಳ ಖರ್ಚೇನಿಲ್ಲ,
ಸಂತೋಷದಾಡಂಬರ-
-ತೋರಲು, ದುಂದು ವೆಚ್ಚ.
ಹಳಸಿದ ಅನ್ನವು
ಕೆಟ್ಟ ನೆನಪುಗಳು,
ಕಿತ್ತು ಬೀಸಾಕದಿರೆ
ತನು ಮನಕೆ ಹಾನಿ.
ಆಡಂಬರದ ಸುಖ
ಅರೆಸುವದ ಬಿಟ್ಟು,
ವರ್ತಮಾನವೇ ಸೌಖ್ಯ
ಎಂದರಿತವ ಶ್ರೇಷ್ಠ.

ದೇಹ, ಮನಸ್ಸುಗಳೇ
ಕೇಳವು ನಮ್ಮ ಮಾತನ್ನು,
ಪರರು ಕೇಳಿಯಾರೆ?
ಸುಮ್ಮನಿರು ನೀನಿನ್ನು.
ಕೈಲಾಗದ ಕೆಲಸ
ಎನ್ನುವದಾಗುದಿಲ್ಲ,
ಮಾಡೋ ಮನಸಿದ್ದರೆ
ಮುಗಿಯುವುದು ಎಲ್ಲ.
ಭಾರಿ ಸಂತೋಷದಲ್ಲೂ
ಕಣ್ಣಲ್ಲಿ ಹನಿ ನೀರು
ಬೇಸರ ಮನಸಲ್ಲೂ
ಸುಮ್ಮನೆ ಕಿರುನಗೆ.
ವ್ಯಾಸ ಜೋಶಿ





ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹನಿಗವನಗಳು
ಚೆನ್ನಾಗಿದೆ