ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಮೌನ

ನಾನೋ ನೀನೊ
ನೀನೊ ನಾನೋ
ನಮ್ಮೊಳ ಒಳಒಳಗೊ
ನೋವೋ ನಲಿವೋ
ಯಾತನೆಯೋ
ನೋಂದೊ ಬೆಂದೊ
ಪುಟಿ ಪುಟಿದೆಳೋ
ಭಾವನೆಯೋ
ಏನೇನೋ ಕನಸೋ
ನನಸೋ…….
ಮುಳ್ಳುಗಳ ಮೇಲಿನ
ಅರಳಿ ನಿಂತ ಹೂ
ನಗೆಯೋ
ನಡೆದುದೇ ದಾರಿ
ನುಡಿದಿದ್ದೆ ಭಾಷೆ
ಒಂದಕ್ಕೊಂದು ಅಂಟದ
ಎಣ್ಣೆ ಸೀಗೆಕಾಯಿ ನಡೆಯೋ
ನಡೆದಿದೆ ಇದುವೋ
ಜೀವನ ಬಂಧಿಯೋ
ಕೊನೆಗೂ… ಮೌನವೋ
ಶವದ ಯಾತ್ರೆಯೋ.

———-
ಮಾಜಾನ್ ಮಸ್ಕಿ



