ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೊಡ್ಡ ಮನೆಯ ಕಾವಲು ಕೆಲಸ,
ಗುಡಿಸಿ ಹಲವು ವರುಷಗಳ ಕಸ.
ಗೇಟಿನ ಬಳಿ ಪುಟ್ಟ ನಿವಾಸ,
ಇರದಷ್ಟು ಬಂಗಲೆಯ ಸಹವಾಸ.

ರಾತ್ರಿ ಗೇಟಿಗೆ ತಪ್ಪದು ಬೀಗ,
ಸಂತಸ ವೇತನ ಕೈಸೇರಿದಾಗ.
ಮಡದಿ-ಮಕ್ಕಳು ಬಲು ದೂರ,
ಸಂಸಾರ ಹೊರಲಾರದ ಭಾರ.

ಆ ದಿನ ಮನವು ಕರೆಯಲಿ ಮಗ್ನ,
ಬೀಗ ಜಡಿಯದ ಆ ಗೇಟು ನಗ್ನ.
ಅರುಹಿದಳು ಮಡದಿ ಕೂಸ ಸುದ್ದಿ,
ಅನಾರೋಗ್ಯದಿ ಕುಗ್ಗಿಹಳು ಬುದ್ಧಿ.

ಯಾರು ನುಗ್ಗಿದರು ಕಾಣೆನು ನಾನು?
ಕಳುವಾದ ಚಮಚ ಚಿನ್ನದ್ದೇನು?
ಕ್ಷಮಿಸಿದೇ ಶಿಕ್ಷಿಸಿದರೆ ನನ್ನ ಪಾಡೇನು?
ಒಂದೇ ತಪ್ಪಿಗೆ ನಾ ಬೇಡವಾದೆನೇನು?


About The Author

1 thought on “ನಿರಂಜನ ಕೆ ನಾಯಕ ಅವರ ಕವಿತೆʼಒಂದೇ ತಪ್ಪಿಗೆʼ”

Leave a Reply

You cannot copy content of this page

Scroll to Top