ಲೇಖನ ಸಂಗಾತಿ
ಕೆಲಸ ಯಾವುದೇ ಇರಲಿ ಅದನ್ನು ಗೌರವಿಸೋಣ.
ಭೀಮಾ ಕುರ್ಲಗೇರಿ

ಪ್ರತಿಯೊಬ್ಬರು ಯಾವುದಾದರೊಂದು ಕೆಲಸವನ್ನು ಕೈಗೊಳ್ಳಬೇಕು.ಕಾಯಕ ಯಾವುದೇ ಇರಲಿ ಅದು ತೋರಲಿಕ್ಕೆ ಎಷ್ಟೇ ಕೀಳು ಕೆಲಸವಾದರೂ ಅದನ್ನು ಈಶ ಸೇವೆ ,ಮಾನವ ಸೇವೆಯ ದೃಷ್ಟಿಯಿಂದ ಕಾಯಕವೆಲ್ಲವೂ ಪವಿತ್ರವಾದುದೆ ಎಂಬ ಭಾವನೆಯಿಂದ ಪ್ರತಿಯೊಂದು ಕೆಲಸದಲ್ಲಿ ಸಂಕೋಚ , ಕೀಳರಿಮೆ ಇಲ್ಲದೆ, ಮನಸ್ಸಿನ ಸಬಲತೆ, ದುರ್ಬಲತೆ ಗಳನ್ನು ಅರ್ಥ ಮಾಡಿಕೊಂಡು ಪ್ರಾಮಾಣಿಕತೆಯಿಂದ ನಾವು ಕೆಲಸವನ್ನು ಮಾಡಬೇಕು. ಹಾಗೆಯೇ ಪ್ರತಿಯೊಂದು ಕೆಲಸಕ್ಕೂ ಸಹ ಅದರದ್ದೇ ಆದ ಪ್ರಮುಖ್ಯತೆ ಇರುತ್ತದೆ, ನಾವು ಅದನ್ನು ಅರಿತುಕೊಂಡು ನಿರ್ವಹಿಸಿ ಅದಕ್ಕೆ ತಕ್ಕ ಗೌರವವನ್ನು ನೀಡಬೇಕು.
ಬಲಗೈಯಲ್ಲಿ ಮಾಡಿದ್ದು ಎಡಗೈಗೂ ಕೂಡ ಗೊತ್ತಾಗದ ರೀತಿ ಕಾರ್ಯವನ್ನು ಮಾಡಬೇಕು ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರೂ ಯಶಸ್ಸನ್ನು ಹೊಂದುತ್ತೇನೆ ಎಂಬ ನಂಬಿಕೆಯನ್ನು ಇಟ್ಟು ಕೊಂಡಿರಬೇಕು
ಸಮಾಜದಲ್ಲಿ ಈಯುವುದು,ಇರಿಯುವುದು,ಶರ ಣಗೆ ಕಾಯುವುದು ಈ ಮೂರು ಮೌಲ್ಯಗಳ ಹಾಗೂ ಪ್ರಚುರ ಪಡಿಸುವುದರ ಮೂಲಕ ಸಮಾಜದಲ್ಲಿ ಜನರ ನಡುವೆ ನಮ್ಮ ಬೆಳವಣಿಗೆಯನ್ನು ಕಾಣಬೇಕು.
*ಅಗ್ನಿಯ ಶಕ್ತಿ ಎಷ್ಟೆಂದರೆ ನೀರನ್ನು ಸುಟ್ಟು ತನ್ನಂತೆ ಮಾಡಿಕೊಳ್ಳಬಲ್ಲದು* ಹಾಗೆ ನಾವು ಕೂಡ ನಮ್ಮಲ್ಲಿಯ ದರಿದ್ರ ಕೆಟ್ಟ ಅವಗುಣಗಳನ್ನು ಸುಟ್ಟು ಬೂದಿ ಮಾಡಿ ನಮ್ಮಲ್ಲಿಯ ಅಡಗಿರುವ ಶಕ್ತಿಯನ್ನು ಬಳಸಿಕೊಂಡು ದುಡಕದೇ ಧೈರ್ಯವೇ ಸಾಧನ ಬಂದಿದ್ದು ಬರಲೆಂದು ಮಾಡಬೇಕಿದೆ ಸಾಹಸ.
ಯಾವ ವ್ಯಕ್ತಿಯು ದುರಾಚಾರಗಳನ್ನು ನೀಗಿಕೊಂಡು ಅಜ್ಞಾನದ ಬಂಧನದಿಂದ ಬಿಡಿಸಿಕೊಂಡು ಅಹಂಕಾರವನ್ನು ಮುರಿದು ಮುನ್ನುಗ್ಗುತ್ತಾನೋ ಅವನೇ ಜೀವನದ ಗುರಿಯನ್ನು ಮುಟ್ಟಬಲ್ಲನು. ನಮ್ಮಗಿಂತಲೂ ಸಣ್ಣವರೇ ಆಗಲಿ ,ದೊಡ್ಡವರೇ ಇರಲಿ ಅವರ ಮಾತಿಗೆ ಗೌರವ ಕೊಡಬೇಕು .ಮತ್ತು ಅದನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಬೇಕು .
ಕೆಲವು ಸಂದರ್ಭದಲ್ಲಿ ಒಂಟಿಯಾಗಿ ನಡೆಯುವ ಪ್ರಸಂಗವು ಬರಬಹುದು ದೃಢ ಮನಸ್ಸಿನಿಂದ ಮುಂದೆ ಸಾಗಬೇಕು. ಬಂದ ಕಷ್ಟಗಳನ್ನೆಲ್ಲಾ ಬದಿಗೆ ಹೊತ್ತಿ, ನಿಂದನೆ ಮಾತುಗಳಿಗೆ ಕಿವಿಯನ್ನು ಕೊಡದೆ ,ಧೈರ್ಯವಾಗಿ ಮುನ್ನಡೆಯಬೇಕು ಹಾಗೆಯೇ ಪಾಪವನ್ನು ತೊಳೆಯುವ ಸಾಧನವಾಗಿ ನಾವು ಹೊರಹೊಮ್ಮಬೇಕು.
ಪುರಾತನ ಕಾಲದಲ್ಲಿ ಶರಣರು ” *ಕಾಯಕವೇ ಕೈಲಾಸ”* ವೆಂದು ಸಾರಿದರು .ಎಲ್ಲರೂ ಕಾಯಕವನ್ನು ಮಾಡಲೇಬೇಕು.ಇದರಲ್ಲಿ ಮೇಲು – ಕೀಳು ಇರುವುದಿಲ್ಲ.
*” ಕಾಯಕದಲ್ಲಿ ನಿರತನಾದರೆ, ಗುರುದರುಶನವಾದರೂ ಮರೆಯಬೇಕು ,ಲಿಂಗ ಪೂಜೆಯಾದರೂ ಮರೆಯಬೇಕು,ಜಂಗಮ ಮುಂದಿದ್ದರೂ ಹಂಗು ಹರಿಯಬೇಕು* ಎಂಬ ಆಯ್ದಕ್ಕಿ ಮಾರಯ್ಯ ನವರು ವಚನದಲ್ಲಿ ಕಾಯಕದ ಮಹತ್ವವನ್ನು ಎತ್ತಿ ಹೇಳಿದ್ದಾರೆ.
“ಬದುಕು ಬಂದಂತೆ ಸ್ವೀಕರಿಸಿ ಮುನ್ನಡೆಯುವ ಮನೋಭಾವನೆ ಬೆಳೆಸಿಕೊಂಡು ದುಶ್ಚಟಗಳಿಗೆ ಬಲಿಯಾಗದೆ ನಮ್ಮೆಲ್ಲರ ಸುಂದರವಾದ ಜೀವನವನ್ನು ಕಟ್ಟಿಕೊಳ್ಳೋಣ.
ಭೀಮಾ ಕುರ್ಲಗೇರಿ




